Editor

ಒಲಿಂಪಿಕ್ ನಲ್ಲಿ ಇತಿಹಾಸ ಸೃಷ್ಟಿಸಿದ ‘ಸಾಜನ್’, ಬಟರ್ ಫ್ಲೈನಲ್ಲಿ ಅರ್ಹತೆ ಪಡೆದ ಮೊದಲ ಭಾರತೀಯ

ಹೊಸದಿಲ್ಲಿ: ಇಟಲಿಯ ರೋಮ್‌ನ ಸೆಟ್ಟೆ ಕೊಲ್ಲಿ ಟ್ರೋಫಿಯಲ್ಲಿ ಶನಿವಾರ ನಡೆದ ಪುರುಷರ 200 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಸಾಜನ್ ಪ್ರಕಾಶ್ 1:56:38 ಸೆಕೆಂಡುಗಳಲ್ಲಿ ಗುರಿ ತಲುಪಿ ಒಲಿಂಪಿಕ್ಸ್ ಅರ್ಹತಾ ಸಮಯವನ್ನು ಮೀರಿದ ಮೊದಲ ಭಾರತೀಯ ಈಜುಗಾರ ಎನಿಸಿಕೊಳ್ಳುವುದರೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ. 2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 27 ವರ್ಷದ ಪ್ರಕಾಶ್ ಟೋಕಿಯೋ ಕ್ರೀಡಾಕೂಟದಲ್ಲಿ ನಿಗದಿಪಡಿಸಿರುವ ‘ಎ’ ಮಾನದಂಡವನ್ನು (1: 56.48 ಸೆಕೆಂಡು) ಮೀರಿ ನಿಂತರು. ಕೇರಳದ ಈಜುಗಾರ 200 ಮೀಟರ್ ಬಟರ್ ಫ್ಲೈ ಸ್ಪರ್ಧೆಯಲ್ಲಿ […]

ಒಲಿಂಪಿಕ್ ನಲ್ಲಿ ಇತಿಹಾಸ ಸೃಷ್ಟಿಸಿದ ‘ಸಾಜನ್’, ಬಟರ್ ಫ್ಲೈನಲ್ಲಿ ಅರ್ಹತೆ ಪಡೆದ ಮೊದಲ ಭಾರತೀಯ Read More »

30 ವರ್ಷದ ಹಿಂದೆ ಮುಳುಗಡೆಯಾಗಿದ್ದ ಹಡಗಿನ ಅವಶೇಷ ಪತ್ತೆ

ಕಾರವಾರ: ಅಂದಾಜು ಮೂವತ್ತು ವರ್ಷಗಳ ಹಿಂದೆ ಕಾರವಾರದ ಸಮುದ್ರ ಭಾಗದಲ್ಲಿ ಮುಳುಗಡೆಯಾಗಿದ್ದ ಸಿಂಗಾಪುರ ದೇಶದ ಚೆರಿಮಾಜು ಎಂಬ ಹೆಸರಿನ ಸರಕು ಸಾಗಾಣಿಕೆ ಹಡಗಿನ ಅವಶೇಷಗಳು ಇಂದು ಕಾರವಾರ ಕಡಲತೀರದಲ್ಲಿ ಪತ್ತೆಯಾಗಿದೆ. 1981 ರಲ್ಲಿ ಸಿಂಗಾಪುರದಿಂದ ಕಾರವಾರದ ಬಂದರಿಗೆ ಬಂದಿದ್ದ ಈ ಹಡಗು 14.418 ಟನ್ ಡಾಂಬರ್ ಅನ್ನು ಹೊತ್ತು ತಂದಿತ್ತು. ಈ ವೇಳೆ ಕಡಲಬ್ಬರಕ್ಕೆ ಸಿಲುಕಿದ್ದ ಈ ಹಡಗು ಇಲ್ಲಿಯೇ ಸಂಪೂರ್ಣ ಸಮುದ್ರದಾಳಕ್ಕೆ ಸೇರಿ ಹೋಗಿತ್ತು. ಈ ವೇಳೆ ಹಡಗಿನಲ್ಲಿದ್ದ 30 ನಾವಿಕರನ್ನು ರಕ್ಷಣೆ ಮಾಡಲಾಗಿತ್ತು. ಹುದುಗಿ

30 ವರ್ಷದ ಹಿಂದೆ ಮುಳುಗಡೆಯಾಗಿದ್ದ ಹಡಗಿನ ಅವಶೇಷ ಪತ್ತೆ Read More »

ಕರಾವಳಿಗರೇ ಎಚ್ಚರ… ‘ದುಶ್ಮನ್ ಬಗಲ್ ಮೆ’,ಹೆಚ್ಚುತ್ತಿವೆ ‘ಡೆಲ್ಟಾ’ ಪ್ಲಸ್ ಕೇಸ್‌

ಮಂಗಳೂರು: ಕೇರಳದ ಕರಾವಳಿ ಭಾಗಗಳಲ್ಲಿ ಕೊರೊನಾ ಡೆಲ್ಟಾ ಪ್ಲಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನೆರೆಯ ದಕ್ಷಿಣಕನ್ನಡ ಜಿಲ್ಲೆಗೂ ಭೀತಿ ಹೆಚ್ಚಾಗಿದೆ. ಕೇರಳದಿಂದ ಪ್ರತಿನಿತ್ಯ ಸಾವಿರಾರು ಮಂದಿ ದಕ್ಷಿಣ ಕನ್ನಡ ಜಿಲ್ಲೆಗೆ ವ್ಯಾಪಾರ, ಉದ್ಯೋಗಕ್ಕಾಗಿ ಬಂದು ಹೋಗುತ್ತಾರೆ. ಹೀಗಾಗಿ ಜಿಲ್ಲೆಯ ಜನತೆಗೆ ಭೀತಿ ಹೆಚ್ಚಾಗಿದ್ದು, ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ವಾರದ ವೀಕೆಂಡ್ ಕರ್ಪ್ಯೂ ಜಾರಿ ಇದ್ದ ಕಾರಣ ಗಡಿ ಭಾಗದಲ್ಲಿ ಹೆಚ್ಚಿನ ವಾಹನ ಓಡಾಟ ಇರಲಿಲ್ಲ. ಆದರೂ ಯಾವೊಂದು ತಪಾಸಣೆಯೂ

ಕರಾವಳಿಗರೇ ಎಚ್ಚರ… ‘ದುಶ್ಮನ್ ಬಗಲ್ ಮೆ’,ಹೆಚ್ಚುತ್ತಿವೆ ‘ಡೆಲ್ಟಾ’ ಪ್ಲಸ್ ಕೇಸ್‌ Read More »

ಲಸಿಕೆ ಹಾಕಿಸಿಕೊಳ್ಳದವರಲ್ಲಿ ‘ಡೆಲ್ಟಾ’ದ ಹಾವಳಿ ವೇಗ ಪಡೆದುಕೊಳ್ತಿದೆ – ವಿಶ್ವ ಆರೋಗ್ಯ ಸಂಸ್ಥೆ ಕಳವಳ

ನವದೆಹಲಿ: ಕೋವಿಡ್-19ರ ಡೆಲ್ಟಾ ರೂಪಾಂತರವು ಇಲ್ಲಿಯವರೆಗೆ ಗುರುತಿಸಲಾದ ರೂಪಾಂತರಗಳಲ್ಲಿ ‘ಅತ್ಯಂತ ಟ್ರಾನ್ಸ್ ಮಿಸಿಬಲ್’ ಆಗಿದೆ ಮತ್ತು ಲಸಿಕೆ ಹಾಕದ ಜನರಲ್ಲಿ ವೇಗವಾಗಿ ಹರಡುತ್ತಿದೆ ಎಂದು ಡಬ್ಲ್ಯೂಹೆಚ್‌ಒ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಘೆಬ್ರೆಯೆಸಸ್ ಎಚ್ಚರಿಸಿದ್ದಾರೆ. ಜಿನೀವಾದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಬ್ಲ್ಯೂಹೆಚ್‌ಒ ಮಹಾ ನಿರ್ದೇಶಕ ಘೆಬ್ರೆಯೆಸಸ್ , ‘ಪ್ರಸ್ತುತ ಜಾಗತಿಕವಾಗಿ ಡೆಲ್ಟಾ ರೂಪಾಂತರದ ಬಗ್ಗೆ ಸಾಕಷ್ಟು ಕಾಳಜಿ ಇದೆ ಅನ್ನೋದು ನನಗೆ ತಿಳಿದಿದೆ. ಆದ್ರೆ, ಡಬ್ಲ್ಯೂಹೆಚ್‌ಒ ಕೂಡ ಅದರ ಬಗ್ಗೆ ಕಾಳಜಿ ವಹಿಸಿದೆ’ ಎಂದರು. ‘ಡೆಲ್ಟಾ ಇಲ್ಲಿಯವರೆಗೆ ಗುರುತಿಸಲಾದ

ಲಸಿಕೆ ಹಾಕಿಸಿಕೊಳ್ಳದವರಲ್ಲಿ ‘ಡೆಲ್ಟಾ’ದ ಹಾವಳಿ ವೇಗ ಪಡೆದುಕೊಳ್ತಿದೆ – ವಿಶ್ವ ಆರೋಗ್ಯ ಸಂಸ್ಥೆ ಕಳವಳ Read More »

ಹೊಸ ಸ್ಮಾರ್ಟ್ಫೋನ್ ರಿಲಯನ್ಸ್, ಗೂಗಲ್‌ನ ಸಹಭಾಗಿತ್ವದಿಂದ ಮಾರುಕಟ್ಟೆಗೆ ಬರಲಿದೆ | ಈ ಬಗ್ಗೆ ತಿಳಿದುಕೊಳ್ಳಿ

ದೆಹಲಿ: ರಿಲಯನ್ಸ್ ಜಿಯೋ ಗೂಗಲ್ ಜೊತೆಗೂಡಿ ಜಿಯೋಫೋನ್ ಒಂದನ್ನು ಮಾರುಕಟ್ಟೆಗೆ ತರಲು ಯೋಜನೆ ಹಾಕಿಕೊಂಡಿದೆ. 4ಜಿ ಸಾಮರ್ಥ್ಯದ ಆ್ಯಡ್ರಾಂಯ್ಡ್ ಫೋನ್‌ನ್ನು ಕೈಗೆಟುಕುವ ದರದಲ್ಲಿ ನೀಡಲು ಯೋಜಿಸಿಕೊಂಡಿದೆ. ಜಿಯೋಫೋನ್ ನೆಕ್ಸ್ಟ್ ಎಂಬ ಮಾದರಿಯ ಈ ಮೊಬೈಲ್ ಫೋನ್‌ನ್ನು ರಿಲಯನ್ಸ್ ಇಂಡಸ್ಟ್ರೀಸ್‌ನ ೪೪ನೇ ವಾರ್ಷಿಕ ಜನರಲ್ ಮೀಟಿಂಗ್‌ನಲ್ಲಿ ಗುರುವಾರ ಮುಕೇಶ್ ಅಂಬಾನಿ ಘೋಷಿಸಿದ್ದಾರೆ. ಈ ಹೊಸ ಸ್ಮಾರ್ಟ್ಫೋನ್ ರಿಲಯನ್ಸ್ ಜಿಯೋ ಹಾಗೂ ಗೂಗಲ್‌ನ ಸಹಭಾಗಿತ್ವದಿಂದ ಮಾರುಕಟ್ಟೆಗೆ ಬರಲಿದ್ದು ಕಳೆದ ವರ್ಷವೇ ಮುಕೇಶ್ ಅಂಬಾನಿ ಮತ್ತು ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ

ಹೊಸ ಸ್ಮಾರ್ಟ್ಫೋನ್ ರಿಲಯನ್ಸ್, ಗೂಗಲ್‌ನ ಸಹಭಾಗಿತ್ವದಿಂದ ಮಾರುಕಟ್ಟೆಗೆ ಬರಲಿದೆ | ಈ ಬಗ್ಗೆ ತಿಳಿದುಕೊಳ್ಳಿ Read More »

ಗಂಡ-ಹೆಂಡತಿ ಜಗಳವಾಡಿ ಸ್ವಂತ ಮಗುವನ್ನೇ ಕೊಂದರು…! ಹಾಸನದಲ್ಲಿ ನಡೆಯಿತು ಅಮಾನವೀಯ ಘಟನೆ

ಹಾಸನ: ಗಂಡ ಹೆಂಡತಿ ಜಗಳವಾಡಿ ಕೊನೆಗೆ ತಮ್ಮ ಸ್ವಂತ ಮಗುವನ್ನೇ ಹತ್ಯೆ ಮಾಡಿದ ಹೃದಯ ವಿದ್ರಾವಕ ಘಟನೆ ಹಾಸನದಲ್ಲಿ ನಡೆದಿದೆ. ಮಗುವನ್ನು ಕೊಂದ ತಂದೆ ತಾಯಿ ಬಳಿಕ ಶವವನ್ನು ಕಾಫಿ ತೋಟದಲ್ಲಿ ಹೂತು ಹಾಕಿದ್ದಾರೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಾಡ್ಲೂರುಕೊಪ್ಪಲು ಗ್ರಾಮದಲ್ಲಿ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಸ್ಸಾಂನಿಂದ ಕೆಲಸಕ್ಕೆಂದು ಹಾಸನಕ್ಕೆ ಬಂದಿದ್ದ ಕುಟುಂಬವೊಂದು ಇಲ್ಲೇ ಸಂಸಾರ ಸಮೇತವಾಗಿ ವಾಸವಾಗಿತ್ತು. ಅವರ ಒಂದೂವರೆ ವರ್ಷದ ಮಗು ಸಫೀಕ್ ಉಲ್ಲಾ ಇಸ್ಲಾಂನನ್ನು ಕೊಂದಿರುವ ಪೋಷಕರು

ಗಂಡ-ಹೆಂಡತಿ ಜಗಳವಾಡಿ ಸ್ವಂತ ಮಗುವನ್ನೇ ಕೊಂದರು…! ಹಾಸನದಲ್ಲಿ ನಡೆಯಿತು ಅಮಾನವೀಯ ಘಟನೆ Read More »

ಕೋಲಾರ ಬೀದರ್’ನಲ್ಲಿ ಎನ್ ಸಿಬಿ ದಾಳಿ | ನಗದು ಸಹಿತ ಬರೋಬ್ಬರಿ 98 ಕೆಜಿ ಡ್ರಗ್ಸ್ ಜಪ್ತಿ

ಬೆಂಗಳೂರು: ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕ (ಎನ್‌ಸಿಬಿ) ಅಧಿಕಾರಿಗಳು, ಕೋಲಾರ ಹಾಗೂ ಬೀದರ್‌ನಲ್ಲಿ ಪ್ರತ್ಯೇಕ ದಾಳಿ ನಡೆಸಿ ಬರೋಬ್ಬರಿ 91 ಕೆಜಿ ಮಾದಕ ದ್ರವ್ಯ ಮತ್ತು 62 ಲಕ್ಷ ರೂ ನಗದು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧಾರದಲ್ಲಿ ಎನ್ ಸಿ ಬಿ ಆಂಧ್ರ ಮೂಲದ ಎನ್ ವಿ ರೆಡ್ಡಿ ಎಂಬಾತನಿಗೆ ಸೇರಿದ ಕೋಲಾರ ಕೈಗಾರಿಕಾ ಪ್ರದೇಶದಲ್ಲಿದ್ದ ಅಕ್ರಮ ಕಾರ್ಖಾನೆ, ಬೀದರ್ನಲ್ಲಿದ್ದ ಕಾರ್ಖಾನೆ ಹಾಗೂ ಆತನ ಮನೆ ಮೇಲೆ ಎನ್‌ಸಿಬಿ ದಾಳಿ‌ ನಡೆಸಿದೆ. ಸ್ಥಳದಲ್ಲಿ ನಿಷೇದಿತ ಆಲ್ಪಾಜೋಲಮ್ ಪೌಡರ್

ಕೋಲಾರ ಬೀದರ್’ನಲ್ಲಿ ಎನ್ ಸಿಬಿ ದಾಳಿ | ನಗದು ಸಹಿತ ಬರೋಬ್ಬರಿ 98 ಕೆಜಿ ಡ್ರಗ್ಸ್ ಜಪ್ತಿ Read More »

ಮತ್ತೆ ಅಬ್ಬರಿಸಲಿದ್ದಾನೆ ವರುಣ; ಮುಂದಿನ 3 ದಿನ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ.

ಬೆಂಗಳೂರು : ಮುಂಗಾರು ಆಗಮನದ ಬಳಿಕ ಬಿರುಸಾಗಿದ್ದ ಮಳೆ, ರಾಜ್ಯದಲ್ಲಿ ಕಳೆದೊಂದು ವಾರದಿಂದ ಕೊಂಚ ಕಡಿಮೆಯಾಗಿದೆ. ಆದರೆ, ಇಂದಿನಿಂದ ಮತ್ತೆ ಮಳೆಯ ಆರ್ಭಟ ಶುರುವಾಗಲಿದ್ದು, 3 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಇಂದು ವ್ಯಾಪಕ ಮಳೆಯಾಗಲಿದ್ದು, ಜೂನ್ 27ರಿಂದ ರಾಜ್ಯಾದ್ಯಂತ ಬಹುತೇಕ ಪ್ರದೇಶಗಳಲ್ಲಿ ವರುಣನ ಆರ್ಭಟ ಹೆಚ್ಚಲಿದೆ. ಜೂನ್ 30ರವರೆಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ

ಮತ್ತೆ ಅಬ್ಬರಿಸಲಿದ್ದಾನೆ ವರುಣ; ಮುಂದಿನ 3 ದಿನ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ. Read More »

ಬಂಟ್ವಾಳ | ಶ್ರೀ ಗಂಧ ಮರ ಕಡಿದು ಮಾರಾಟ ಯತ್ನ |ಉಡ ಹಿಡಿದು ಪಾರ್ಟಿ ಮಾಡಲೆತ್ನಿಸಿದಾಗ ಅರಣ್ಯ ಇಲಾಖೆ ಮಿಂಚಿನ ದಾಳಿ

ಬಂಟ್ವಾಳ : ತಾಲೂಕಿನ ವೀರಕಂಬ ರಕ್ಷಿತಾರಣ್ಯ ದಿಂದ ಲಕ್ಷಾಂತರ ರೂ ಮೌಲ್ಯದ ಗಂಧದ ಮರಗಳನ್ನು ಕಡಿದು, ಮಾರಾಟ ಮಾಡಲು ಯತ್ನಿಸಿದ ವೇಳೆ ಬಂಟ್ವಾಳ ವಲಯ ಆರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳ ಬಂಧಿಸಿದ್ದಾರೆ. ಪಾತೂರು ನಿವಾಸಿ ಇಬ್ರಾಹಿಂ ಹಾಗೂ ಇರಾ ಗ್ರಾಮದ ಮೊಯಿದ್ದೀನ್ ಬಂಧಿತ ಆರೋಪಿಗಳು. ಕಾರ್ಯಚರಣೆ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಲಾಗಿದೆ. ಸಿದ್ದೀಕ್ ಹಾಗೂ ಸಿದ್ದೀಕ್ ಯಾನೆ ಕೊರಂಗು ಸಿದ್ದೀಕ್ ತಲೆಮರೆಸಿಕೊಂಡ ಆರೋಪಿಗಳು. ಆರೋಪಿಗಳು ಅಂದಾಜು ಮೂರು ಲಕ್ಷ

ಬಂಟ್ವಾಳ | ಶ್ರೀ ಗಂಧ ಮರ ಕಡಿದು ಮಾರಾಟ ಯತ್ನ |ಉಡ ಹಿಡಿದು ಪಾರ್ಟಿ ಮಾಡಲೆತ್ನಿಸಿದಾಗ ಅರಣ್ಯ ಇಲಾಖೆ ಮಿಂಚಿನ ದಾಳಿ Read More »

ಬೆಂಗಳೂರು : ಸಲಿಂಗಕಾಮಕ್ಕೆ ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸುತಿದ್ದ ಮುಖ್ಯ ಶಿಕ್ಷಕ ಬಂಧನ

ನೆಲಮಂಗಲ: ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಮುಖ್ಯ ಶಿಕ್ಷಕನೊಬ್ಬ ವಿದ್ಯಾರ್ಥಿಯ ಜೊತೆ ವಿಕೃತಿ ಮೆರೆದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದ ಘಟನೆ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ನಡೆದಿದೆ. ಮುಖ್ಯ ಶಿಕ್ಷಕ ಎಸ್.ರಂಗನಾಥ್ ಬಂಧಿತ ಆರೋಪಿ. ಈತ ಸಲಿಂಗಕಾಮಕ್ಕೆ ವಿದ್ಯಾರ್ಥಿ ಬಟ್ಟೆ ಬಿಚ್ಚಿಸುತ್ತಿದ್ದ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಬಗ್ಗೆ ವಸತಿ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಶಿಕ್ಷಕ ರಂಗನಾಥ್, ಒತ್ತಾಯದ ಸಲಿಂಗಕಾಮ ಐಪಿಸಿ 377

ಬೆಂಗಳೂರು : ಸಲಿಂಗಕಾಮಕ್ಕೆ ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸುತಿದ್ದ ಮುಖ್ಯ ಶಿಕ್ಷಕ ಬಂಧನ Read More »