Editor

ನಾಳೆ‌(ಮಾ.22) ಕರ್ನಾಟಕ ಬಂದ್| ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಬೃಹತ್‌ ಬಂದ್‌ಗೆ ಕರೆ ನೀಡಲಾಗಿದೆ. ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ, ರಾಜ್ಯದ ಹಲವು ಭಾಗಗಳಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಂದ್‌ನ ಮುಖ್ಯ ಉದ್ದೇಶ ಮಹಾರಾಷ್ಟ್ರದ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆದ ದೌರ್ಜನ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವುದಾಗಿದೆ. ಹಾಗೂ ಕರ್ನಾಟಕ ಗಡಿಭಾಗದ ಜನರ ಹಕ್ಕುಗಳನ್ನು ಕಾಪಾಡಲು ಸರ್ಕಾರದ ಗಮನ ಸೆಳೆಯುವುದಾಗಿದೆ. ನಾಳೆ ಬೆಳಗ್ಗೆ 6 ಗಂಟೆಗೆ ಶುರುವಾಗುಬ ಬಂದ್, ಸಂಜೆ 6 ಗಂಟೆಯವರೆಗೂ ಇರಲಿದೆ. ಈ ಬಂದ್‌ನಲ್ಲಿ ಕನ್ನಡ ಪರ ಸಂಘಟನೆಗಳು, […]

ನಾಳೆ‌(ಮಾ.22) ಕರ್ನಾಟಕ ಬಂದ್| ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ Read More »

ವಿಧಾನ ಸಭೆಯಲ್ಲಿ ‌ಗೌರವಕ್ಕೆ ಧಕ್ಕೆ| ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ‌ ಸ್ಪೀಕರ್ ಆದೇಶ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭೆಯಲ್ಲಿ ಗದ್ದಲ ಕೋಲಾಹಲಕ್ಕೆ ಕಾರಣವಾಗಿ ಸದನದ ಗೌರವಕ್ಕೆ ಧಕ್ಕೆ ತಂದಂತ ಬಿಜೆಪಿಯ 18 ಶಾಸಕರನ್ನು ಸದನದಿಂದ ಅಮಾತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ ಆದೇಶಿಸಿದ್ದಾರೆ. ಇಂದು ಮಧ್ಯಾಹ್ನದ ಭೋಜನ ವಿರಾಮದ ನಂತ್ರ ಕಲಾಪ ಆರಂಭಗೊಳ್ಳುತ್ತಿದ್ದಂತೆ ಮುಸ್ಲೀಂ ಮೀಸಲಾತಿ ಮಸೂದೆ ಸೇರಿದಂತೆವಿವಿಧ ಮಸೂದೆ ವಿರೋಧಿಸಿ ಬಿಜೆಪಿಯ ಶಾಸಕರು ಪ್ರತಿಭಟನೆ, ಗದ್ದಲ ಕೋಲಾಹಲವನ್ನು ಉಂಟು ಮಾಡಿದರು. ಈ ಹಿನ್ನಲೆಯಲ್ಲಿ ಬಿಜೆಪಿಯ 18 ಶಾಸಕರನ್ನು ಸ್ಪೀಕರ್ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಬಿಜೆಪಿಯ ದೊಡ್ಡಮಗೌಡ ಪಾಟೀಲ್, ಅಶ್ವತ್ಥನಾರಾಯಣ, ಭರತ್ ಶೆಟ್ಟಿ, ಉಮಾನಾಥ

ವಿಧಾನ ಸಭೆಯಲ್ಲಿ ‌ಗೌರವಕ್ಕೆ ಧಕ್ಕೆ| ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ‌ ಸ್ಪೀಕರ್ ಆದೇಶ Read More »

ಹನಿಟ್ರ್ಯಾಪ್ ಕುರಿತು ವಿಪಕ್ಷ ನಾಯಕ ಅಶೋಕ್ ಸೈಲೆಂಟ್ ಮೋಡ್| ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಶಾಸಕ ಸುನಿಲ್ ಕುಮಾರ್

ಸಮಗ್ರ ನ್ಯೂಸ್: ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಪ್ರಕರಣದ ವಿಚಾರ ನಡೆಯುವಾಗ, ಈ ವಿಷಯವು ಗಂಭೀರ ಚರ್ಚೆಗೆ ಕಾರಣವಾಯಿತು. ಈ ಚರ್ಚೆಯು ರಾಜ್ಯದ ರಾಜಕೀಯ ವಾತಾವರಣವನ್ನು ತೀವ್ರವಾಗಿ ಪ್ರಭಾವಿತಗೊಳಿಸಿದೆ. ಸರ್ಕಾರದ ವಿರುದ್ಧ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಗಂಭೀರ ಆರೋಪಗಳನ್ನು ಮಾಡಿದರು. ಹನಿಟ್ರ್ಯಾಪ್ ಕುರಿತ ಚರ್ಚೆಯ ಮಧ್ಯೆ, ಬಿಜೆಪಿ ಪಾಳಯದಲ್ಲಿಯೇ ಗಲಾಟೆ ಉಂಟಾಗಿದೆ ಎಂಬುದು ಗಮನಾರ್ಹ ಸಂಗತಿ. ವಿರೋಧ ಪಕ್ಷದ ನಾಯಕ ಆರ್​. ಅಶೋಕ್ (R Ashoka) ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹನಿಟ್ರ್ಯಾಪ್ ಕುರಿತು ವಿಪಕ್ಷ ನಾಯಕ ಅಶೋಕ್ ಸೈಲೆಂಟ್ ಮೋಡ್| ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಶಾಸಕ ಸುನಿಲ್ ಕುಮಾರ್ Read More »

ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಅಧಿಕ ಮುಂಗಾರು ಮಳೆ ಸಾಧ್ಯತೆ| ಹವಾಮಾನ ಇಲಾಖೆಯಿಂದ ಮಾಹಿತಿ ಪಡೆದ ಸಚಿವ ಕೃಷ್ಣ ಬೈರೇಗೌಡ

ಸಮಗ್ರ ನ್ಯೂಸ್: ಪ್ರಸ್ತುತ ವರ್ಷದ ಮಾನ್ಸೂನ್ನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಜೂನ್- ಸೆಪ್ಟೆಂಬರ್ ಅವಧಿಯಲ್ಲಿ ಮಾನ್ಸೂನ್ ಚುರುಕಾಗಲಿದೆ. ಏಪ್ರಿಲ್-ಮೇ ತಿಂಗಳಲ್ಲೂ ಉತ್ತಮ ಮಳೆ ನಿರೀಕ್ಷೆಯಿದೆ. ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ 2025ನೇ ಸಾಲಿನ ಹವಾಮಾನ ಪರಿಸ್ಥಿತಿ ಕುರಿತು ಗುರುವಾರ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು. ಈ ವೇಳೆ ಸಚಿವರಿಗೆ ಮಾಹಿತಿ ನೀಡಿದ ಅಧಿಕಾರಿಗಳು, “ಪ್ರಸ್ತುತ ವರ್ಷ ಪೂರ್ವ ಮುಂಗಾರಿನಲ್ಲಿ ಉತ್ತರ ಕರ್ನಾಟಕ ಸೇರಿದಂತೆ

ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಅಧಿಕ ಮುಂಗಾರು ಮಳೆ ಸಾಧ್ಯತೆ| ಹವಾಮಾನ ಇಲಾಖೆಯಿಂದ ಮಾಹಿತಿ ಪಡೆದ ಸಚಿವ ಕೃಷ್ಣ ಬೈರೇಗೌಡ Read More »

ರಾಜ್ಯ ಸಚಿವರೊಬ್ಬರ ಮೇಲೆ ಎರಡು ಬಾರಿ‌ ಹನಿಟ್ರ್ಯಾಪ್| ಸ್ಪೋಟಕ ಹೇಳಿಕೆ ನೀಡಿದ ಸತೀಶ ಜಾರಕಿಹೋಳಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ರಾಜಕಾರಣಿಗಳ ಮೇಲೆ ಹನಿಟ್ರ್ಯಾಪ್ ಆರೋಪ ಕೇಳಿ ಬರುತ್ತಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಇದೀಗ ಲೋಕೋಪಯೋಗಿ ಇಲಾಖೆಯ ಸಚಿವರಾದಂತಹ ಸತೀಶ್ ಜಾರಕಿಹೊಳಿಯವರು ಸಚಿವರೊಬ್ಬರ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಆಗಿದೆ ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸಚಿವ ಸತೀಶ ಜಾರಕಿಹೊಳಿ ಸ್ಪೋಟಕವಾದ ಹೇಳಿಕೆ ನೀಡಿದ್ದು, ಸಚಿವರ ಮೇಲೆ ಎರಡು ಸಲ ಹನಿಟ್ರ್ಯಾಪ್ ಆಗಿದೆ. ಸಚಿವರಿಗೆ ಹನಿಟ್ರ್ಯಾಪ್ ಆಗಿರುವುದು ನಿಜ. ಈ ಒಂದು ಹನಿಟ್ರ್ಯಾಪ್ ನಲ್ಲಿ ನಮ್ಮವರು ಅಷ್ಟೇ ಅಲ್ಲದೆ ಬೇರೆ ಪಕ್ಷದ ನಾಯಕರು

ರಾಜ್ಯ ಸಚಿವರೊಬ್ಬರ ಮೇಲೆ ಎರಡು ಬಾರಿ‌ ಹನಿಟ್ರ್ಯಾಪ್| ಸ್ಪೋಟಕ ಹೇಳಿಕೆ ನೀಡಿದ ಸತೀಶ ಜಾರಕಿಹೋಳಿ Read More »

ಮಂಗಳೂರು: ಪಿಜಿ ಗೆ ರೇಟಿಂಗ್ ಕಡಿಮೆ ಕೊಟ್ಟಿದ್ದಕ್ಕೆ ವಿದ್ಯಾರ್ಥಿ ಮೇಲೆ‌‌ ಹಲ್ಲೆಗೈದ ಮಾಲೀಕ

ಸಮಗ್ರ ನ್ಯೂಸ್: ಬಾಯ್ಸ್ ಪಿಜಿ ಸ್ವಚ್ಛತೆ ಇಲ್ಲದೇ, ಊಟ-ತಿಂಡಿ ವ್ಯವಸ್ಥೆ ಸರಿಯಿಲ್ಲದೇ ಅವ್ಯವಸ್ಥೆಯ ಆಗರವಾಗಿದ್ದರೂ ಗೂಗಲ್ ರೇಟಿಂಗ್ ನಲ್ಲಿ ಹೆಚ್ಚಿನ ಸ್ಟಾರ್ ನೀಡಿ ಒಳ್ಳೆಯ ಕಮೆಂಟ್ ಹಾಕುವಂತೆ ಪಿಜಿ ಮಾಲೀಕ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿಯಲ್ಲಿ ನಡೆದಿದೆ. ವಿಕಾಸ್ (19) ಹಲ್ಲೆಗೊಳಗಾದ ವಿದ್ಯಾರ್ಥಿ. ಕಲಬುರಗಿ ಮೂಲದ ವಿಕಾಸ್ ಕಳೆದ 6 ತಿಂಗಳಿದ ಕದ್ರಿ ಬಾಯ್ಸ್ ಪಿಜಿಯಲ್ಲಿ ವಾಸವಾಗಿದ್ದ. ಪಿಜಿಯಲ್ಲಿ ಊಟ-ತಿಂಡಿ ವ್ಯವಸ್ಥೆ ಸರಿಯಿಲ್ಲವಂತೆ, ಸ್ವಚ್ಛತೆ ಬಗ್ಗೆ ಕೇಳಲೇಬೇಡಿ. ಇನ್ನು ಶೌಚಾಲಯ,

ಮಂಗಳೂರು: ಪಿಜಿ ಗೆ ರೇಟಿಂಗ್ ಕಡಿಮೆ ಕೊಟ್ಟಿದ್ದಕ್ಕೆ ವಿದ್ಯಾರ್ಥಿ ಮೇಲೆ‌‌ ಹಲ್ಲೆಗೈದ ಮಾಲೀಕ Read More »

ರಾಜ್ಯದ ಸಿಎಂ, ಮಂತ್ರಿಗಳು ಹಾಗೂ ಶಾಸಕರ ವೇತನ ಹೆಚ್ಚಳಕ್ಕೆ ‌ಗ್ರೀನ್ ಸಿಗ್ನಲ್| ಶೇ.100ರಷ್ಟು ಹೆಚ್ಚಿಸಿ ತಿದ್ದುಪಡಿ!!

ಸಮಗ್ರ ನ್ಯೂಸ್: ರಾಜ್ಯದ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರ ವೇತನ ಹಾಗೂ ದಿನ ಭತ್ಯೆ ಹೆಚ್ಚಳವಾಗಿದ್ದು, ಇದಕ್ಕೆ ಸಂಬಂಧಿಸಿದ ‘ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ-2025’ ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿದೆ. ರಾಜ್ಯಪಾಲರು ಅನುಮೋದನೆ ನೀಡಿದ ಕೂಡಲೇ ವಿಧಾನಸಭೆಯಲ್ಲಿ ಈ ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ. ಸದನದಲ್ಲಿ ವಿಧೇಯಕ ಮಂಡನೆಗಿಂತ ಮುಂಚೆ ರಾಜ್ಯಪಾಲರ ಅನುಮತಿ ಅಗತ್ಯವಿರುವುದರಿಂದ, ಈ ಸಂಬಂಧ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಈಗ ರಾಜ್ಯಪಾಲರ ಅನುಮೋದನೆ ಪಡೆಯಲು ಸಾಧ್ಯವಾಗಿರುವ ಕಾರಣ, ವಿಧಾನಸಭೆಯಲ್ಲಿ

ರಾಜ್ಯದ ಸಿಎಂ, ಮಂತ್ರಿಗಳು ಹಾಗೂ ಶಾಸಕರ ವೇತನ ಹೆಚ್ಚಳಕ್ಕೆ ‌ಗ್ರೀನ್ ಸಿಗ್ನಲ್| ಶೇ.100ರಷ್ಟು ಹೆಚ್ಚಿಸಿ ತಿದ್ದುಪಡಿ!! Read More »

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ| ಮತ್ತೊಂದು ವಿಡಿಯೋ ಹರಿಬಿಟ್ಟ ‘ಧೂತ’| ವೈರಲ್ ಆಗ್ತಿದೆ ಸಾಕ್ಷಿನಾಶ!

ಸಮಗ್ರ ನ್ಯೂಸ್: 13 ವರ್ಷಗಳಿಂದ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೆಷ್ಟೋ ಹೋರಾಟಗಳು ನಡೆದು ಹೋಗಿವೆ. ಈಗಲೂ ಆ ಹೋರಾಟ ಮುಂದುವರೆದಿದೆ. ಕೆಲವೇ ದಿನಗಳ ಹಿಂದಷ್ಟೇ ಕನ್ನಡದ ಯೂಟ್ಯೂಬರ್ ಸಮೀರ್ ಎಂಡಿ ಇದೇ ಸೌಜನ್ಯ ಪ್ರಕರಣದ ಬಗ್ಗೆ ವಿಡಿಯೋ ಮಾಡಿದ್ದರು. ಅದು, ರಾತ್ರಿ ಕಳೆದು ಬೆಳಕಾಗುವುದರೊಳಗೆ ವೈರಲ್ ಆಗಿತ್ತು. ಮಿಲಿಯನ್ ಲೆಕ್ಕದಲ್ಲಿ ವೀವ್ಸ್ ಪಡೆದುಕೊಂಡು ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಸೌಜನ್ಯ ಕೇಸ್ ಬಗ್ಗೆ ಸಮೀರ್ ಎಂಡಿ ಮಾಡಿದ ಮೊದಲ ವಿಡಿಯೋ ಸಂಚಲನವನ್ನೇನೋ ಸೃಷ್ಟಿಸಿತ್ತು. ಜೊತೆ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ| ಮತ್ತೊಂದು ವಿಡಿಯೋ ಹರಿಬಿಟ್ಟ ‘ಧೂತ’| ವೈರಲ್ ಆಗ್ತಿದೆ ಸಾಕ್ಷಿನಾಶ! Read More »

ರಾಜ್ಯದ ಜನತೆಗೆ ಮತ್ತೆ ಕರೆಂಟ್ ಶಾಕ್| ಯೂನಿಟ್ ದರದಲ್ಲಿ ಮತ್ತೆ 36ಪೈಸೆ ಏರಿಕೆ ಮಾಡಿದ KERC

ಸಮಗ್ರ ನ್ಯೂಸ್: ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಬರೆಯ ಗಾಯ ಇನ್ನೂ ಹಸಿಯಾಗಿರುವಾಗಲೇ ಮತ್ತೊಂದು ಬರೆ ಬಿದ್ದಿದೆ. ಪ್ರತಿ ಯೂನಿಟ್​ಗೆ 36 ಪೈಸೆ ವಿದ್ಯುತ್​ ದರ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಇಂದು (ಮಾರ್ಚ್​ 20) ಆದೇಶ ಹೊರಡಿಸಿದೆ. ವಿದ್ಯುತ್ ಪ್ರಸರಣ ಮತ್ತು ಎಸ್ಕಾಂ ಸಿಬ್ಬಂದಿ ಪಿಂಚಣಿ ಗ್ರ್ಯಾಚುಟಿ ಹಣವನ್ನು ಗ್ರಾಹಕರಿಂದ ವಸೂಲಿಗೆ ಮುಂದಾಗಿರುವ ಕೆಇಆರ್​ಸಿ, ವಿದ್ಯುತ್ ದರ 36 ಪೈಸೆ ಹೆಚ್ಚಿಸಿದೆ. ಏಪ್ರಿಲ್ 1ರಿಂದಲೇ ಕೆಇಆರ್​ಸಿ ಹೊಸ ದರ ಜಾರಿಗೆ ಬರಲಿದೆ. ಈಗಾಗಲೇ

ರಾಜ್ಯದ ಜನತೆಗೆ ಮತ್ತೆ ಕರೆಂಟ್ ಶಾಕ್| ಯೂನಿಟ್ ದರದಲ್ಲಿ ಮತ್ತೆ 36ಪೈಸೆ ಏರಿಕೆ ಮಾಡಿದ KERC Read More »

ನಾಳೆಯಿಂದ ರಾಜ್ಯಾದ್ಯಂತ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭ| ವ್ಯವಸ್ಥಿತ ಪರೀಕ್ಷೆ ನಡೆಸಲು ಸಕಲ ಸಿದ್ಧತೆ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಮಾರ್ಚ್ 21 ರ ನಾಳೆಯಿಂದ ಆರಂಭವಾಗಲಿದ್ದು, ಪರೀಕ್ಷೆ ನಡೆಸಲು ಮಂಡಳಿ ಈಗಾಗಲೇ ಸಕಲ ಸಿದ್ದತೆ ಮಾಡಿಕೊಂಡಿದೆ. 2024-25ನೇ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ-1 ಮಾ. 21ರಿಂದ ಎ. 4ರ ವರೆಗೆ ನಡೆಯಲಿದ್ದು 8,96.447 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಎಸೆಸೆಲ್ಸಿ ಪರೀಕ್ಷೆಗಳಿಗೆ ಬಿಗಿ ಭದ್ರತೆ ವ್ಯವಸ್ಥೆಗೊಳಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಇರಲಿದ್ದು ಜಿಲ್ಲಾಧಿಕಾರಿಗಳು ವೀಕ್ಷಣೆ ಮಾಡಲಿದ್ದಾರೆ. ಪರೀಕ್ಷಾ ಸಮಯದಲ್ಲಿ ಕೇಂದ್ರಗಳ ಸುತ್ತ 200 ಮೀ.

ನಾಳೆಯಿಂದ ರಾಜ್ಯಾದ್ಯಂತ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭ| ವ್ಯವಸ್ಥಿತ ಪರೀಕ್ಷೆ ನಡೆಸಲು ಸಕಲ ಸಿದ್ಧತೆ Read More »