ಸುಳ್ಯ: ನದಿಗೆ ಸ್ನಾನಕ್ಕೆ ತೆರಳಿದ್ದಾತ ನೀರುಪಾಲು| ಮೃತದೇಹ ಪತ್ತೆ

ಸಮಗ್ರ ನ್ಯೂಸ್: ಸುಳ್ಯ ನಗರದ ಹೊರವಲಯದ ಭಸ್ಮಡ್ಕ ಪಯಸ್ವಿನಿ ನದಿಗೆ ಸ್ನಾನಕ್ಕೆ ಹೋಗಿ ನೀರು ಪಾಲದ ಯುವಕನ ಮೃತದೇಹ ಪತ್ತೆಯಾಗಿದೆ.

Ad Widget ... ..

ಉಪ್ಪಳ ನಿವಾಸಿ ಸಮೀರ್ ಮೃತಪಟ್ಟಿದ್ದು, ಸುಳ್ಯದ ಕುರುಂಜಿಬಾಗ್‌ನಲ್ಲಿರುವ ವಿಶನ್ ಆಪ್ಟಿಕಲ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸುಳ್ಯದಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದರು.

Ad Widget

ಇಂದು(ಡಿ.31) ರಜೆ ಇದ್ದ ಹಿನ್ನಲೆಯಲ್ಲಿ ಬಟ್ಟೆ ಒಗೆಯಲು ಮತ್ತು ಸ್ನಾನಕ್ಕೆಂದು ನದಿಗೆ ಬಂದ ಮೂವರು ಯುವಕರು ನೀರಿಗೆ ಇಳಿದಿದ್ದರು ಅದರಲ್ಲಿ ಒಬ್ಬ ಕಣ್ಮರೆಯಾಗಿದ್ದು ಮುಳುಗಿದ್ದಾನೆನ್ನಲಾಗಿದೆ.

ಸುಳ್ಯ ಆರಕ್ಷಕ ಠಾಣೆ, ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ನಡೆಸಿ ಮೃತ ದೇಹವನ್ನು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *