ಸುಳ್ಯ: ಪರವಾನಿಗೆ ಇಲ್ಲದೆ ನಾಡ ಕೋವಿ ಹೊಂದಿದ್ದ ಆರೋಪಿಗೆ ಜೈಲು

ಸಮಗ್ರ ನ್ಯೂಸ್:ಪರವಾನಿಗೆ ಇಲ್ಲದೆ ನಾಡಕೋವಿಗೆ ಹೊಂದಿದ್ದ ಪ್ರಕರಣದ ಆರೋಪಿಗೆ ಸುಳ್ಯ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

Ad Widget ... ..

2013 ರಲ್ಲಿ ಕಣ್ಣೂರು ಜಿಲ್ಲೆಯ ಎಂ.ಕೆ ಅಜಿತ್‌ ಅವರು ಆಲೆಟ್ಟಿ ಗ್ರಾಮದ ಬಟ್ಟಂಗಾಯ ಎಂಬಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಇರುವ ಮನೆಗೆ ಪರವಾನಿಗೆ ಇಲ್ಲದ ನಾಡ ಕೋವಿ, ಗನ್‌ ಪೌಡರ್‌ ಹಾಗೂ 2 ಕಬ್ಬಿಣದ ಕಡ್ಡಿಗಳನ್ನು ತಂದಿದ್ದರು.

Ad Widget

ಈ ವಿಚಾರ ಪೋಲೀಸರಿಗೆ ತಿಳಿದು ಆರೋಪಿಯಾ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಸುಳ್ಯ ನ್ಯಾಯಾಲಯದಲ್ಲಿ ನಡೆದಿದ್ದು, ಅಪರಾಧ ಸಾಬೀತಾಗಿದೆ.ಸುಳ್ಯದ ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಮೋಹನ್‌ ಬಾಬು ಅವರು ಅಪರಾಧಿಗೆ 2 ವರ್ಷಗಳ ಸರಳ ಜೈಲು ಶಿಕ್ಷೆ ವಿಧಿಸಿ ಆದೇಶ ಮಾಡಿದ್ದಾರೆ.

ಸರಕಾರದ ಪರವಾಗಿ ಸುಳ್ಯದ ಸಹಾಯಕ ಸರಕಾರಿ ಅಭಿಯೋಜಕರು ವಾದ ನಡೆಸಿದ್ದರು.

Leave a Comment

Your email address will not be published. Required fields are marked *