ಪುತ್ತೂರು: 1 ಲಕ್ಷ ಮೌಲ್ಯದ ಅಡಿಕೆ ಕಳವು

ಸಮಗ್ರ ನ್ಯೂಸ್: ಮನೆಯೊಳಗೆ ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ₹1ಲಕ್ಷ ಮೌಲ್ಯದ ಅಡಿಕೆ ಮತ್ತು ₹10ಸಾವಿರ ನಗದು ಹಣ ಕಳವಾದ ಘಟನೆ ಪುತ್ತೂರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದಲ್ಲಿ ನಡೆದಿದೆ.

Ad Widget ... ..

ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಸಮೀಪದ ನೆಕ್ಕರೆ ಡಿವೈನ್ ಮರ್ಸಿ ಮನೆಯ ಕಾರ್ಮಿನ್‌ ಮಿರಾಂದ ಅವರ ಮನೆಯಿಂದ ಅಡಿಕೆ ಕಳವಾಗಿದೆ.ಈ ಬಗ್ಗೆ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

Ad Widget

‘ಪತಿ ಸುನಿಲ್ ಮಿರಾಂದ ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ತಾಯಿ ಅವರು ಅವರ ಮನೆಯಲ್ಲಿ ಅಡಿಕೆ ಒಣಗಿಸಲು ಜಾಗ ಇಲ್ಲದೆ ಇರುವುದರಿಂದ ನಮ್ಮ ಮನೆಯ ಅಂಗಳದಲ್ಲಿ ಅಡಿಕೆ ಒಣಗಿಸಿ, ಅಡಿಕೆಯನ್ನು ಸುಲಿದು ತೂಕ ಮಾಡಿ ಇಟ್ಟಿದ್ದರು. ಸುಲಿದ 276 ಕೆ.ಜಿ ಅಡಿಕೆಯನ್ನು 6 ಗೋಣಿಗಳಲ್ಲಿ ತುಂಬಿಸಿ ಮನೆಯ ಎದುರಿನ ಹಾಲ್‌ನಲ್ಲಿ ಇಡಲಾಗಿತ್ತು. ಈ ಅಡಿಕೆ ಮತ್ತು ಕೆಲಸಗಾರರಿಗೆ ನೀಡಲೆಂದು ಮನೆಯ ಬೆಡ್ ರೂಮಿನ ಕಪಾಟಿನಲ್ಲಿಟ್ಟಿದ್ದ ₹10 ಸಾವಿರ ಹಣ ಕಳವಾಗಿದೆ’ ಎಂದು ಕಾರ್ಮಿನ್‌ ಮಿರಾಂದ ದೂರಿನಲ್ಲಿ ತಿಳಿಸಿದ್ದಾರೆ.

ಪುತ್ರಿಯ ಅನಾರೋಗ್ಯದಿಂದ ಆ.24ರಂದು ಸಂಜೆ ಮನೆಯ ಹಿಂದಿನ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿ, ಮುಂದಿನ ಬಾಗಿಲಿಗೆ ಬೀಗ ಹಾಕಿ ರೋಟರಿಪುರದಲ್ಲಿರುವ ತಾಯಿ ಮನೆಗೆ ಹೋಗಿದ್ದೆ. ಈ ನಡುವೆ ಕಳವು ಆಗಿದೆ ಎಂದು ತಿಳಿಸಿದ್ದಾರೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *