ಕಡಬ: ಹಿಂದೂ ಯುವತಿಯನ್ನು ರೂಂಗೆ ಕರೆದ ಮುಸ್ಲಿಂ ಯುವಕ | ಹಿಂಜಾವೇ ಕಾರ್ಯಕರ್ತರಿಗೆ ಹೆದರಿ ಪರಾರಿ

ಸಮಗ್ರ ನ್ಯೂಸ್: ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನ ಜತೆ ರೂಂನಲ್ಲಿದ್ದಾಗ ಹಿಂಜಾವೇ ಕಾರ್ಯರ್ತರು ಬರುತ್ತಿದ್ದಂತೆ ಪರಾರಿಯಾದ ಘಟನೆ ಅಲಂಕಾರು ಸಮೀಪದ ಕೊಂತೂರು ಪೆರಾಬೆ ಗ್ರಾಮದ ಕೋಚಕಟ್ಟೆಯಲ್ಲಿ ನ.27 ರ ಭಾನುವಾರ ಸಂಜೆ ನಡೆದಿದೆ.

Ad Widget ... ..

ಯುವತಿ ಮಂಜೇಶ್ವರ ಮೂಲದವಳಾಗಿದ್ದು, ಮುಡಿಪು ಮೂಲದ ಮುಸ್ಲಿಂ ಯುವಕನ ಸಂಪರ್ಕದಲ್ಲಿದ್ದು, ಪ್ರಸ್ತುತ ಆತ ಕೆಲಸದ ನಿಮಿತ್ತ ಕೊಂತೂರು ಪೆರಾಬೆ ಕ್ರಾಮದ ಕೋಚಕಟ್ಟೆಯಲ್ಲಿ ಬಾಡಿಗೆ ಕೊಠಡಿಯಲ್ಲಿದ್ದು, ಅಲ್ಲಿಗೆ ಯುವತಿಯನ್ನು ಬರುವಂತೆ ಹೇಳಿದ್ದ.

Ad Widget

ಈ ಬಗ್ಗೆ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಯುವಕನ ರೂಮ್ ಮಾಡಿಕೊಂಡಿದ್ದ ಸ್ಥಳಕ್ಕೆ ಧಾವಿಸಿದ್ದರು. ಅವರು ಬರುತ್ತಿದ್ದಂತೆ ಯುವಕನು ಯುವತಿಯನ್ನು ಹಿಂಬಾಗಿನ ಮೂಲಕ ಹೊರಗೆ ಕಳುಹಿಸಿ ಆತನೂ ಅಲ್ಲಿಂದ ಕಾಲ್ಕಿತ್ತಿದ್ದಾನೆ .

ಜಾಗರಣ ವೇದಿಕೆಯ ಕಾರ್ಯಕರ್ತರು ಯುವತಿಯ ಬಗ್ಗೆ ವಿಚಾರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಕಡಬ ಪೊಲೀಸರು ಯುವತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಪೋಷಕರಿಗೆ ಒಪ್ಪಿಸಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಕೊಠಡಿಯಲ್ಲಿ ಇಬ್ಬರು ಮುಸ್ಲಿಂ ಯುವಕರಿದ್ದು, ಈ ಬಾಲಕಿಯನ್ನು ಕೊಠಡಿಗೆ ಕರೆತಂದ ಯುವಕನ ಹೆಸರು ಸವಾದ್ ಎಂದು ತಿಳಿಸಿದ್ದಾರೆ. ಕಾರ್ಯಕರ್ತರು ಬಂದಾಗ ಇಬ್ಬರೂ ಯುವಕರು ಕೊಠಡಿಯಿಂದ ಪರಾರಿಯಾಗಿದ್ದಾರೆ.

ಕಡಬ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *