ಮಂಗಳೂರು: ಕುಡಿದು ಹೆಂಡತಿಯನ್ನೇ ಕಡಿದ| ಹೆದರಿ ಓಡಿದ ಮಗ

ಸಮಗ್ರ ನ್ಯೂಸ್: ಕುಡಿದ ಮತ್ತಿನಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಮಾಡಿದ ಘಟನೆ ಮಂಗಳೂರಿನ ಬಜಪೆ ಠಾಣಾ ವ್ಯಾಪ್ತಿಯ ಎಕ್ಕಾರಿನಲ್ಲಿ ನಡೆದಿದೆ.

Ad Widget ... ..

ಮೃತ ಮಹಿಳೆಯನ್ನು ಎಕ್ಕಾರು ಪಲ್ಲದ ಕೋಡಿ ನಿವಾಸಿ ಸರಿತಾ ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಕುಡಿದ ಮತ್ತಿನಲ್ಲಿ ಪತಿ ದುರ್ಗೇಶ್ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

Ad Widget

ದುರ್ಗೆಶ್ ಕುಡಿತದ ಚಟ ಹೊಂದಿದ್ದು, ಪ್ರತೀದಿನ ಪತ್ನಿ ಸರಿತಾಳಿಗೆ ಕಿರುಕುಳ ಕೊಡುತ್ತಿದ್ದ. ಈ ಹಿಂದೆ ಹಲವು ಬಾರಿ ದುರ್ಗೇಶ್ ಪತ್ನಿಗೆ ಹಲ್ಲೆ ನಡೆಸಿದ್ದು, ಗಾಯಗೊಂಡ ಪತ್ನಿ ಒಂದೆರಡು ಬಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು. ನಿನ್ನೆ ರಾತ್ರಿ ಪತಿ -ಪತ್ನಿ ನಡುವೆ ಜಗಳವಾಗಿದ್ದು, ಈ ವೇಳೆ ಪತ್ನಿ ಸರಿತಾಳ ಮೇಲೆ ದುರ್ಗೇಶ್ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾನೆ.

ಇದೆಲ್ಲವನ್ನು ಕಂಡು ದಂಪತಿಯ ಹನ್ನೊಂದು ವರ್ಷದ ಮಗ ಹೆದರಿ ಓಡಿಹೋಗಿದ್ದಾನೆ. ಇತ್ತ ತೀವ್ರ ರಕ್ತಸ್ರಾವವಾಗಿ ಸರಿತಾ ಸಾವನ್ನಪ್ಪಿದ್ದಾರೆ. ಬಜ್ಪೆ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *