ಮೈಸೂರು: ಕುಡಿದು ಮತ್ತಿನಲ್ಲೇ ನೇಣಿಗೆ ಶರಣಾದ ಯುವಕ

ಸಮಗ್ರ ನ್ಯೂಸ್: ಕುಡಿತದ ಚಟಕ್ಕೆ ದಾಸನಾಗಿ ಗಲಾಟೆ ಮಾಡುತ್ತಿದ್ದ ಅಣ್ಣನಿಗೆ ತಮ್ಮ ಬುದ್ದಿವಾದ ಹೇಳಿದ ಪರಿಣಾಮ ಅಣ್ಣ ನೇಣಿಗೆ ಶರಣಾದ ಘಟನೆ ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ನಡೆದಿದೆ.

Ad Widget ... ..

ದರ್ಶನ್(21) ಮೃತ ದುರ್ದೈವಿ.ಎರಡು ದಿನಗಳ ಹಿಂದೆ ಭರ್ಜರಿಯಾಗಿ ಬರ್ತ್ ಡೇ ಪಾರ್ಟಿ ಮಾಡಿಕೊಂಡ ದರ್ಶನ್ ಕುಡಿದ ಮತ್ತಿನಲ್ಲೇ ನೇಣಿಗೆ ಶರಣಾಗಿದ್ದಾನೆ. ಫ್ಲೆಕ್ಸ್ ಹಾಗೂ ಬ್ಯಾನರ್ ಕೆಲಸ ಮಾಡುತ್ತಿದ್ದ ದರ್ಶನ್ ಕುಡಿತದ ಚಟಕ್ಕೆ ದಾಸನಾಗಿದ್ದ. ಕುಡಿದು ಬಂದು ನೆರೆಹೊರೆಯವರಿಗೆ ತೊಂದರೆಯಾಗುವಂತೆ ನಡೆದುಕೊಳ್ಳುತ್ತಿದ್ದ. ಕುಡಿತದ ಚಟ ಬಿಡುವಂತೆ ತಮ್ಮ ಬುದ್ದಿವಾದ ಹೇಳಿದ್ದಾನೆ. ಎರಡು ದಿನಗಳ ಹಿಂದೆ ಬರ್ತ್ ಡೇ ಗಾಗಿ ಶುರುವಿಟ್ಟ ಕುಡಿತ ನಿಲ್ಲಿಸಿಲ್ಲ. ಈ ಹಿನ್ನಲೆ ತಮ್ಮ ಹಾಗೂ ಪೋಷಕರು ಬೈದು ಬುದ್ದಿವಾದ ಹೇಳಿದ್ದಾರೆ.

Ad Widget

ಇದರಿಂದ ಬೇಸರಗೊಂಡ ದರ್ಶನ್ ಕುಡಿದ ಮತ್ತಿನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಭಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *