Ad Widget .

ಮಂಗಳೂರು: ಮಳಲಿ ಮಸೀದಿ ವಿವಾದ| ಆಡಳಿತ ಮಂಡಳಿಯ ಅರ್ಜಿ ವಜಾಗೊಳಿಸಿದ ಕೋರ್ಟ್

ಸಮಗ್ರ ನ್ಯೂಸ್: ಮಂಗಳೂರಿನ ಮಳಲಿಪೇಟೆ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಇಂದು ವಜಾ ಗೊಳಿಸಿದೆ.

Ad Widget . Ad Widget .

ಮಳಲಿ ಮಸೀದಿ ಪ್ರಕರಣದಲ್ಲಿ ಮಸೀದಿಯು ವಕ್ಫ್ ಆಸ್ತಿಯಾಗಿರುವ ಕಾರಣ‌ ಈ ಪ್ರಕರಣದ ವಿಚಾರಣೆಗೆ ವಕ್ಫ್ ಸಂಬಂಧಿತ ಕೋರ್ಟ್ ಗಳು ಇರುವುದರಿಂದ ಈ ಪ್ರಕರಣವನ್ನು ವಿಚಾರಣೆ‌ ನಡೆಸಲು ಸಿವಿಲ್ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ.

Ad Widget . Ad Widget .

ಹಾಗಾಗಿ ಮಸೀದಿ ವಿರುದ್ಧ ದಾಖಲಾಗಿರುವ ಅರ್ಜಿಯನ್ನು ವಜಾ ಗೊಳಿಸುವಂತೆ ಮಳಲಿಪೇಟೆ ಮಸೀದಿಯ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ವಜಾಗೊಳಿಸಿ ತೀರ್ಪು ನೀಡಿದೆ.

ಈ ಸಂಬಂಧ ಮಸೀದಿಯ ಎದುರು ಕಕ್ಷಿದಾರರಾದ ಧನಂಜಯ ಮತ್ತು ಐವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಪ್ರಕರಣಕ್ಕೆ ಸಂಬಂಧಿತ ವಿಚಾರಣೆಯನ್ನು ಮುಂದುವರಿಸಿದೆ.

Leave a Comment

Your email address will not be published. Required fields are marked *