ಸುಳ್ಯ: ಮಹಿಳೆಯ ಕುತ್ತಿಗೆಗೆ‌ ಕಡಿದು ಹಲ್ಲೆ; ಆರೋಪಿ ಪರಾರಿ

ಸಮಗ್ರ ನ್ಯೂಸ್: ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಯುವಕನೋರ್ವ ಮಹಿಳೆಗೆ ಕತ್ತಿಯಿಂದ ಕಡಿದ ಘಟನೆ ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದಲ್ಲಿ ನಡೆದಿದೆ. ಸೆ. 9 ರಂದು ಸಂಜೆ ಈ ಘಟನೆ ನಡೆದಿದ್ದು ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಘಟನೆ ಯುವಕನ ಮೇಲೆ ಪ್ರಕರಣ ದಾಖಲಾಗಿದೆ. ಸದ್ಯ ಯುವಕ ತಲೆ ಮರೆಸಿಕೊಂಡಿದ್ದು ಪೊಲೀಸರು ಶೋಧಕಾರ್ಯ ಕೈಗೊಂಡಿದ್ದಾರೆ.

Ad Widget ... ..

ಸುಳ್ಯ ತಾಲೂಕು ತೊಡಿಕಾನ ಕಲ್ಲಂಬಳದ ಹರಿಣಾಕ್ಷಿ ಎಂಬ ಮಹಿಳೆ ತೊಡಿಕಾನ ಶಾಲೆಯಲ್ಲಿ ಬಿಸಿಯೂಟದ ಸಿಬ್ಬಂದಿಯಾಗಿದ್ದು , ಕೆಲಸ ಮನೆಗೆ ಬರುತ್ತಿದ್ದಾಗ ಕಲ್ಲಂಬಳ ಬಸ್ ನಿಲ್ದಾಣದ ಬಳಿ ಕಾದು ಕುಳಿತಿದ್ದ ಸುರೇಂದ್ರ ಎಂಬ ಯುವಕ ಏಕಾಏಕಿ ಕತ್ತಿಯಿಂದ ಕಡಿದಿದ್ದಾನೆ. ಯುವಕ ಹಾಗೂ ಮಹಿಳೆಯ ವಿಚಾರವಾಗಿ ವರ್ಷದ ಹಿಂದೆ ಎರಡೂ ಕಡೆಯವರ ಮಧ್ಯೆ ಹೊಡೆದಾಟ ನಡೆದಿದ್ದು ಅದೇ ವಿಚಾರದಲ್ಲಿ ಈಗ ಘಟನೆ ನಡೆದಿದೆ ಎನ್ನಲಾಗಿದೆ.

Ad Widget

ಮಹಿಳೆಯ ಕತ್ತಿನ ಭಾಗಕ್ಕೆ ಕತ್ತಿ ಬೀಸಿದಾಗ ಆಕೆ ಕೈ ಅಡ್ಡಹಿಡಿದಿದ್ದು ಎರಡೂ ಕೈಗಳಿಗೆ ಕತ್ತಿಯೇಟು ಬಿದ್ದಿದೆ. ಸೊಂಟದ ಭಾಗಕ್ಕೂ ಕತ್ತಿಯಿಂದ ಕಡಿದಿದ್ದಾನೆ. ಮಹಿಳೆಗೆ ಯುವಕ ಕತ್ತಿಯಿಂದ ಕಡಿಯುವ ವೇಳೆ ಆಕೆ ರಸ್ತೆಯಲ್ಲಿ ಓಡತೊಡಗಿದ್ದು ಈ ವೇಳೆ ಯುವಕನ ತಂದೆಯೂ ಮಹಿಳೆಯ ಮುಂದೆ ಕತ್ತಿ ಹಿಡಿದು ಬಂದಿದ್ದು ಆಗ ಮಹಿಳೆ ಅಲ್ಲೇ ಪಕ್ಕದ ಮನೆಗೆ ಓಡಿ ಜಗುಲಿಯಲ್ಲಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.

ಕೂಡಲೇ ಮಹಿಳೆಯ ಮನೆಯವರು ಹಾಗೂ ಸ್ಥಳೀಯರು ಬಂದು ಆಕೆಯನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳೀಯರು ಸ್ಥಳಕ್ಕೆ ಬರುತ್ತಿದ್ದಂತೆ ಯುವಕ ತನ್ನ ಬೈಕ್ ಹತ್ತಿ ಪರಾರಿಯಾಗಿದ್ದಾನೆ. ಯುವಕ ಹಾಗೂ ಆತನ ತಂದೆಯ ಮೇಲೆ ಮಹಿಳೆ ದೂರು ನೀಡಿದ್ದು ಇಬ್ಬರೂ ತಲೆಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ. ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Comment

Your email address will not be published. Required fields are marked *