ಮಂಗಳೂರು: ಮದುವೆಯಾದ ಹದಿನೈದು ದಿನದಲ್ಲಿ ನವವಿವಾಹಿತೆ ಆತ್ಮಹತ್ಯೆ

ಸಮಗ್ರ ನ್ಯೂಸ್: ಮದುವೆಯಾದ ಹದಿನೈದು ದಿನದಲ್ಲೇ ನವವಿವಾಹಿತೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೈದ ಘಟನೆ ಮಂಗಳೂರಿನ ಕೊಣಾಜೆಯಲ್ಲಿ ನಡೆದಿದೆ.

Ad Widget ... ..

ಅಂಬ್ಲಮೊಗರು ಗ್ರಾಮದ ಕೋಟ್ರಗುತ್ತುವಿನ ರಶ್ಮಿ ವಿಶ್ವಕರ್ಮ(24) ಎಂಬಾಕೆ ಆತ್ಮಹತ್ಯೆಗೈದ ಯುವತಿ. ಈಕೆ ಗಂಜಿಮಠ ಮೂಲದ ದುಬಾಯಿಯಲ್ಲಿ ಇಂಜಿನಿಯರ್ ಆಗಿರುವ ಸಂದೀಪ್ ಎಂಬಾತನ ಜೊತೆ ಆರು ತಿಂಗಳ ಹಿಂದೆ ನಿಶ್ಚಿತಾರ್ಥ ನಡೆದಿದ್ದು, ಕಳೆದ ಆಗಸ್ಡ್ 21 ರಂದು ವಿವಾಹ ನೆರವೇರಿತ್ತು.

Ad Widget

ಆದರೆ ಸೆ.3 ರಂದು ರಶ್ಮಿಯ ಅಕ್ಕನ ಮನೆಯಲ್ಲಿ ಔತನ ಕೂಟ ಏರ್ಪಡಿಸಲಾಗಿದ್ದು, ಅದೇ ದಿನ ರಶ್ಮಿ ಇಲಿಪಾಷಣ ಸೇವಿಸಿದ್ದಳು ಎನ್ನಲಾಗಿದೆ. ಬಳಿಕ ಆಕೆಯನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾಳೆ.

ಈ ಬಗ್ಗೆ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *