ಸಂಬಂಧಿಕರ ಮನೆಗೆಂದು ಹೊರಟ ಯುವತಿ ನಾಪತ್ತೆ

ಸಮಗ್ರ ನ್ಯೂಸ್: ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರೈತಗಲ್ಲಿಯಲ್ಲಿ ನಡೆದಿದೆ.

Ad Widget ... ..

ಮೂಲತಃ ಬೆಂಗಳೂರಿನ ಆನೇಕಲ್ ತಾಲೂಕಿನ ಜಿಗಣಿ ಗ್ರಾಮದ ನಿವಾಸಿ ಜ್ಯೋತಿ ಹಿಕ್ಕಡಿ(20) ನಾಪತ್ತೆಯಾದ ಯುವತಿ ಎಂದು ತಿಳಿದು ಬಂದಿದೆ.

Ad Widget

ವಿಜಯಪುರ ಜಿಲ್ಲೆಯ ಮಾದಾಪಟ್ಟಣದಲ್ಲಿ ಜ್ಯೋತಿ ಅವರ ತಂದೆ ಶ್ರೀಶೈಲ ಹಿಕ್ಕಡಿ ವಾಸವಾಗಿದ್ದರು. ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಬೆಳಗಾವಿ‌ ನಗರದ ರೈತ ಗಲ್ಲಿಯಲ್ಲಿ ತಮ್ಮ ಸಂಬಂಧಿಕರ‌ ಮನೆಗೆ ಬಂದಿದ್ದ ಯುವತಿ, ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಯುವತಿ ತಂದೆ ಹೇಳಿದ್ದಾರೆ. ಈ ಸಂಬಂಧ ಶಾಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Comment

Your email address will not be published. Required fields are marked *