September 2025

ಏಳೇ ದಿನದಲ್ಲಿ ಸಮೀಕ್ಷೆ ಮುಗಿಸಿದ ಟೀಚರ್| ಜಿಲ್ಲಾಧಿಕಾರಿಯಿಂದ ಪ್ರಶಂಸೆ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ. 22ರಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಮಗೆ ವಹಿಸಿದ ಮನೆಗಳನ್ನು ಕೇವಲ 7 ದಿನದಲ್ಲಿ ಚನ್ನಪಟ್ಟಣ ತಾಲ್ಲೂಕಿನ ಅಂಬಾಡಹಳ್ಳಿಯು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ (ಯುಜಿಎಚ್‌ಪಿಎಸ್) ಸಹ ಶಿಕ್ಷಕಿ ಶಾಂತಮ್ಮ ಪೂರ್ಣಗೊಳಿಸಿದ್ದಾರೆ. ಶಿಕ್ಷಕಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು, ಶಾಂತಮ್ಮ ಅವರನ್ನು ಸೋಮವಾರ ತಮ್ಮ ಕಚೇರಿಗೆ ಕರೆದು ವೈಯಕ್ತಿಕವಾಗಿ ₹1,001 ನಗದು ಬಹುಮಾನ ಹಾಗೂ […]

ಏಳೇ ದಿನದಲ್ಲಿ ಸಮೀಕ್ಷೆ ಮುಗಿಸಿದ ಟೀಚರ್| ಜಿಲ್ಲಾಧಿಕಾರಿಯಿಂದ ಪ್ರಶಂಸೆ Read More »

ದಕ್ಷಿಣ ಕನ್ನಡ : ನವರಾತ್ರಿ ಮೆರವಣಿಗೆ ದಿನಗಳಂದು ಮದ್ಯದಂಗಡಿ ಬಂದ್ ಗೆ ಆದೇಶ

ಸಮಗ್ರ ನ್ಯೂಸ್: ದ.ಕ ಜಿಲ್ಲಾದ್ಯಂತ ನವರಾತ್ರಿ ಹಬ್ಬವನ್ನು ಆಚರಿಸಲಿದ್ದು, ಈ ಹಬ್ಬದ ಸಮಯದಲ್ಲಿ ಜಿಲ್ಲೆಯಲ್ಲಿ ಶಾರದಾ ಮೂರ್ತಿಯ ವಿಗ್ರಹಗಳನ್ನು ತಯಾರಿಸಿದ ಸ್ಥಳಗಳಿಂದ ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪನೆ ಮಾಡಿ ಭಜನೆ, ಆರ್ಕೆಸ್ಟ್ರಾ, ವಾದ್ಯಗೋಷ್ಟಿ, ಧಾರ್ಮಿಕ ಮತ್ತು ಸಾಂಸ್ಕಂತಿಕ ಕಾರ್ಯಕ್ರಮಗಳು ನಡೆಯಲಿದೆ. ನಂತರ ನಿಗದಿತ ದಿನದಂದು ಶಾರದಾ ಮೂರ್ತಿಯ ವಿಸರ್ಜನಾ ಮೆರವಣಿಗೆಯು ಪ್ರತಿಷ್ಠಾಪನಾ ಸ್ಥಳದಿಂದ ಭವ್ಯ ಮೆರವಣಿಗೆಯಲ್ಲಿ ಟ್ಯಾಬ್ಲೋ, ಚೆಂಡೆ, ಮುಂತಾದ ಸ್ತಬ್ಧ ಚಿತ್ರಗಳೊಂದಿಗೆ ಸಾಗಿ ನಂತರ ಬಾವಿ, ಕೆರೆ, ನದಿಗಳಲ್ಲಿ ವಿಸರ್ಜನೆ ನಡೆಸಲಿರುತ್ತಾರೆ ಹಾಗೂ ಕಾರ್ಯಕ್ರಮದಲ್ಲಿ ಸಾವಿರಾರು

ದಕ್ಷಿಣ ಕನ್ನಡ : ನವರಾತ್ರಿ ಮೆರವಣಿಗೆ ದಿನಗಳಂದು ಮದ್ಯದಂಗಡಿ ಬಂದ್ ಗೆ ಆದೇಶ Read More »

ಧರ್ಮಸ್ಥಳ: ಎಸ್ಐಟಿಯಿಂದ ಗ್ರಾ.ಪಂ ಮಾಜಿ ಅಧ್ಯಕ್ಷರುಗಳ ವಿಚಾರಣೆ

ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧಗಳು ನಡೆದಿವೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಸೋಮವಾರ ಗ್ರಾಮ ಪಂಚಾಯಿತಿ ನಾಲ್ವರು ಮಾಜಿ ಅಧ್ಯಕ್ಷರನ್ನು ವಿಚಾರಣೆಗೆ ಒಳಪಡಿಸಿತು. ಎಸ್‌ಐಟಿ ನೀಡಿದ್ದ ನೋಟಿಸ್‌ನಂತೆ ಧರ್ಮಸ್ಥಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೇಶವ ಗೌಡ, ಪ್ರಭಾಕರ ಪೂಜಾರಿ, ಗೀತಾ,ಚಂದನ್ ಕಾಮತ್ ಅವರು ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ಇವರುಗಳು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಸಹಜ ಸಾವು ಪ್ರಕರಣದಲ್ಲಿ ಶವ ಹೂತಿರುವ ಸಂಬಂಧ ಬಿಲ್ ಪಾವತಿಯಾಗಿದ್ದು, ಈ ಬಗ್ಗೆ ಮಾಹಿತಿ ನೀಡಿದ್ದಾರೆ

ಧರ್ಮಸ್ಥಳ: ಎಸ್ಐಟಿಯಿಂದ ಗ್ರಾ.ಪಂ ಮಾಜಿ ಅಧ್ಯಕ್ಷರುಗಳ ವಿಚಾರಣೆ Read More »

ಖ್ಯಾತ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಇನ್ನಿಲ್ಲ

ಸಮಗ್ರ ನ್ಯೂಸ್: ಕನ್ನಡ ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆಯ ಲೋಕದಲ್ಲಿ ವಿಶಿಷ್ಟ ಹೆಸರು ಪಡೆದ ಕಲಾವಿದ ಯಶವಂತ ಸರದೇಶಪಾಂಡೆ ಇನ್ನು ನೆನಪು ಮಾತ್ರ. ಹಾಸ್ಯನಟ, ನಿರ್ದೇಶಕ, ನಾಟಕಕಾರ, ರಚನೆಕಾರ, ಸಂಭಾಷಣಾಕಾರರಾಗಿ ತಮ್ಮ ಕಲೆಯ ಮೂಲಕ ಲಕ್ಷಾಂತರ ಜನರ ಮನ ಗೆದ್ದಿದ್ದ ಯಶವಂತ ಸರದೇಶಪಾಂಡೆ ಅಲ್ಪಕಾಲದ ಅನಾರೋಗ್ಯದಿಂದ ಅಗಲಿದ್ದಾರೆ. ಇವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ಇವರ ಪತ್ನಿ ಮಾಲತಿ ಕೂಡ ಖ್ಯಾತ ಕಿರುತೆರೆ ನಟಿಯಾಗಿದ್ದಾರೆ. ಕನ್ನಡದ ರಿಯಾಲಿಟಿ ಶೋ ಜೋಡಿ ನಂ.1ನಲ್ಲಿ ಭಾಗವಹಿಸಿದ್ದರು. ಪತ್ನಿ ನಟಿ ಮಾಲತಿ,

ಖ್ಯಾತ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಇನ್ನಿಲ್ಲ Read More »

ಏಷ್ಯಾಕಪ್ ಗೆದ್ದ ಟೀಂ ಇಂಡಿಯಾಗೆ ವಿಶಿಷ್ಟ ಶೈಲಿಯಲ್ಲಿ ಶುಭಹಾರೈಸಿದ ಪ್ರಧಾನಿ ಮೋದಿ

ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ 2025 ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್​​ಗಳಿಂದ ಮಣಿಸಿದ ಟೀಂ ಇಂಡಿಯಾ ದಾಖಲೆಯ 9ನೇ ಬಾರಿಗೆ ಏಷ್ಯಾಕಪ್ ಟ್ರೋಫಿಯನ್ನು ಎತ್ತಿಹಿಡಿದಿದೆ. ಅತ್ತ ದುಬೈನಲ್ಲಿಟೀಂ ಇಂಡಿಯಾ, ಪಾಕಿಸ್ತಾನವನ್ನು ಮಣಿಸುತ್ತಿದ್ದಂತೆ, ಇತ್ತ ಭಾರತದ ಪ್ರಧಾನಿ ನರೇಂದ್ರ ಮೋದಿ, ಟೀಂ ಇಂಡಿಯಾಕ್ಕೆ ತಮ್ಮದೇ ಶೈಲಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ನಡೆಯುತ್ತಿರುವ ಗಡಿ ಉದ್ವಿಗ್ನತೆಯ ನಡುವೆ ನಡೆದ ಈ ಏಷ್ಯಾಕಪ್ ಸಾಕಷ್ಟು ವಿವಾದಗಳನ್ನು ಎದುರಿಸಿತು. ಆದಾಗ್ಯೂ, ಎಲ್ಲಾ ವಿವಾದಗಳು ಮತ್ತು ಬಹಿಷ್ಕಾರದ

ಏಷ್ಯಾಕಪ್ ಗೆದ್ದ ಟೀಂ ಇಂಡಿಯಾಗೆ ವಿಶಿಷ್ಟ ಶೈಲಿಯಲ್ಲಿ ಶುಭಹಾರೈಸಿದ ಪ್ರಧಾನಿ ಮೋದಿ Read More »

ಪಾಕಿಸ್ತಾನ ಬಗ್ಗುಬಡಿದು ಏಷ್ಯಾಕಪ್ ಗೆದ್ದ ಟೀಂ‌‌ ಇಂಡಿಯಾ| ಟ್ರೋಫಿ ಪಡೆಯದೇ ಸಂಭ್ರಮಿಸಿದ ಭಾರತ

ಸಮಗ್ರ ನ್ಯೂಸ್: ಏಷ್ಯಾಕಪ್ ಫೈನಲ್​ನಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಈ ಚಾಂಪಿಯನ್ ಪಟ್ಟದ ಹೊರತಾಗಿಯೂ ಭಾರತ ತಂಡ ಏಷ್ಯಾಕಪ್ ಟ್ರೋಫಿ ಸ್ವೀಕರಿಸಿಲ್ಲ ಎಂಬುದು ವಿಶೇಷ. ಅಂದರೆ ಈ ಬಾರಿ ಏಷ್ಯಾಕಪ್ ಟ್ರೋಫಿ ಇಲ್ಲದೆ ಟೀಮ್ ಇಂಡಿಯಾ ಸಂಭ್ರಮಿಸಿದೆ.‌ ಇದಕ್ಕೆ ಮುಖ್ಯ ಕಾರಣ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಪಾಕಿಸ್ತಾನದವರಾಗಿರುವುದು. ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ಮುಖ್ಯಸ್ಥ ಮೊಹ್ಸಿನ್ ನಖ್ವಿ ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ. ಅಷ್ಟೇ ಅಲ್ಲದೆ ಪಾಕಿಸ್ತಾನ ಸರ್ಕಾರದ

ಪಾಕಿಸ್ತಾನ ಬಗ್ಗುಬಡಿದು ಏಷ್ಯಾಕಪ್ ಗೆದ್ದ ಟೀಂ‌‌ ಇಂಡಿಯಾ| ಟ್ರೋಫಿ ಪಡೆಯದೇ ಸಂಭ್ರಮಿಸಿದ ಭಾರತ Read More »

ದ್ವಾದಶ ರಾಶಿಗಳ ವಾರ‌ಭವಿಷ್ಯ| ಸೆ.29ರಿಂದ ಅ. 5ರವರೆಗಿನ ಗೋಚಾರಫಲ

ಸಮಗ್ರ ನ್ಯೂಸ್: ಸೆಪ್ಟೆಂಬರ್ ತಿಂಗಳ ಈ ವಾರವು ಗ್ರಹಗಳ ಸ್ಥಾನ ಬದಲಾವಣೆಯಿಂದ 12 ರಾಶಿಗಳ ಸಾಪ್ತಾಹಿಕ ಭವಿಷ್ಯ ಹೇಗಿರಲಿದೆ? ಯಾವ ರಾಶಿಗೆ ಶುಭ? ಯಾವ ರಾಶಿಗೆ ಅದೃಷ್ಟಶಾಲಿಯಾಗಿರಲಿದೆ? ಯಾವ ರಾಶಿಗೆ ದುರಾದೃಷ್ಟ ಎದುರಾಗಲಿದೆ? ಎಲ್ಲಾ 12 ರಾಶಿಗಳ ಈ ವಾರದ ರಾಶಿ ಭವಿಷ್ಯ ಹೇಗಿರಲಿದೆ? ನೋಡೋಣ ಬನ್ನಿ… ಮೇಷ ರಾಶಿ:ಮೇಷ ರಾಶಿಯವರಿಗೆ ಈ ವಾರವು ಬಹಳ ಅನುಕೂಲಗಳ ತರಲಿದೆ. ನಿಮ್ಮ ಮೇಲೆ ಇದ್ದಕ್ಕಿದ್ದಂತೆ ಹೆಚ್ಚಿನ ಜವಾಬ್ದಾರಿಗಳು ಬೀಳಬಹುದು. ಉದ್ಯೋಗದಲ್ಲಿರುವವರು ಈ ಸಮಯದಲ್ಲಿ ಅತ್ಯಂತ ಜಾಗರೂಕರಾಗಿರಬೇಕು. ಯಾರನ್ನಾದರೂ ಕುರುಡಾಗಿ

ದ್ವಾದಶ ರಾಶಿಗಳ ವಾರ‌ಭವಿಷ್ಯ| ಸೆ.29ರಿಂದ ಅ. 5ರವರೆಗಿನ ಗೋಚಾರಫಲ Read More »

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ| ಕರಾವಳಿಯಲ್ಲಿ ಚುರುಕುಗೊಂಡ ಮಳೆರಾಯ| ಅ.4ರವರೆಗೂ ಮಳೆ ಮುಂದುವರಿಯುವ ಸಾಧ್ಯತೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಇಳಿಮುಖವಾಗಿದ್ದ ಮಳೆ ಶನಿವಾರ ಬಿರುಸುಗೊಂಡಿದೆ. ಗ್ರಾಮೀಣ ಭಾಗಗಳಲ್ಲಿ ವೇಗವಾದ ಗಾಳಿ ಸಹಿತ ಮಳೆಯಾದ ಪರಿಣಾಮ ಮರಗಳು ಉರುಳಿ ಬಿದ್ದಿವೆ. ಕೃಷಿಗೂ ಹಾನಿ ಸಂಭವಿಸಿದೆ. ಸುಳ್ಯ ತಾಲೂಕಿನ ಗ್ರಾಮಾಂತರದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಹಲವಾರು ಕಡೆಗಳಲ್ಲಿ ನವರಾತ್ರಿಗೆ ಆಯೋಜನೆಗೊಂಡ ಕಾರ್ಯಕ್ರಮಗಳಿಗೆ ಅಡಚಣೆ ಉಂಟಾಯಿತು. ಕರ್ನಾಟಕ ಕರಾವಳಿಯಲ್ಲಿ ಭಾನುವಾರ ಗಂಟೆಗೆ 50-60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ| ಕರಾವಳಿಯಲ್ಲಿ ಚುರುಕುಗೊಂಡ ಮಳೆರಾಯ| ಅ.4ರವರೆಗೂ ಮಳೆ ಮುಂದುವರಿಯುವ ಸಾಧ್ಯತೆ Read More »

ಟಿ.20ನಲ್ಲಿ ಕ್ರಿಕೆಟ್ ದಿಗ್ಗಜರಿಗೆ ಸೋಲುಣಿಸಿದ ನೇಪಾಳ| ಐತಿಹಾಸಿಕ ದಾಖಲೆ ಬರೆದ ಕ್ರಿಕೆಟ್ ಶಿಶು

ಸಮಗ್ರ ನ್ಯೂಸ್: ಟಿ20 ಕ್ರಿಕೆಟ್​ನಲ್ಲಿ ನೇಪಾಳ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಎರಡು ಬಾರಿಯ ಟಿ20 ಚಾಂಪಿಯನ್ ವೆಸ್ಟ್ ಇಂಡೀಸ್ ತಂಡಕ್ಕೆ ಸೋಲುಣಿಸುವ ಮೂಲಕ ನೇಪಾಳ ತಂಡವು ಐಸಿಸಿ ಪೂರ್ಣ ಸದಸ್ಯ ರಾಷ್ಟ್ರದ ಚೊಚ್ಚಲ ಗೆಲುವು ದಾಖಲಿಸಿದಂತಾಗಿದೆ. ನೇಪಾಳ ತಂಡವು ಈವರೆಗೆ ಟೆಸ್ಟ್ ಆಡುವ ದೇಶದ ವಿರುದ್ಧ ಒಂದೇ ಒಂದು ಟಿ20 ಪಂದ್ಯ ಗೆದ್ದಿರಲಿಲ್ಲ. ಇದೀಗ ವಿಂಡೀಸ್ ಪಡೆಯನ್ನು ಮಕಾಡೆ ಮಲಗಿಸಿ ಐತಿಹಾಸಿಕ ಸಾಧನೆ ಮಾಡಿದೆ. ಯುಎಇನ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್

ಟಿ.20ನಲ್ಲಿ ಕ್ರಿಕೆಟ್ ದಿಗ್ಗಜರಿಗೆ ಸೋಲುಣಿಸಿದ ನೇಪಾಳ| ಐತಿಹಾಸಿಕ ದಾಖಲೆ ಬರೆದ ಕ್ರಿಕೆಟ್ ಶಿಶು Read More »

ತಮಿಳುನಾಡಿನ‌ ಕರೂರ್ ನಲ್ಲಿ ಕಾಲ್ತುಳಿತ ಪ್ರಕರಣ| ಸಾವಿನ ಸಂಖ್ಯೆ 38ಕ್ಕೆ ಏರಿಕೆ| ಕಣ್ಣೀರು ಹಾಕಿದ ವಿಜಯ್ ದಳಪತಿ| ಪ್ರಧಾನಿ, ರಾಷ್ಟ್ರಪತಿ ಸೇರಿ ಹಲವರ ಸಂತಾಪ

ಸಮಗ್ರ ನ್ಯೂಸ್: ತಮಿಳು ನಟ ಹಾಗೂ ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್‌ ತಮಿಳುನಾಡಿನ ಕರೂರಿನಲ್ಲಿ ಶನಿವಾರ ಕೈಗೊಂಡ ರ‍್ಯಾಲಿ ವೇಳೆ ಉಂಟಾದ ಕಾಲ್ತುಳಿತದಲ್ಲಿ 38 ಮಂದಿ ಮೃತಪಟ್ಟಿದ್ದಾರೆ. ಅಸ್ವಸ್ಥಗೊಂಡ 50 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯ್‌, “ನನ್ನ ಹೃದಯವೇ ಒಡೆದು ಹೋಗಿದೆ. ಸಹಿಸಲಾಗದ, ಪದಗಳಲ್ಲಿ ಹೇಳಲು ಸಾಧ್ಯವಾಗದ ವೇದನೆ ಮತ್ತು ದುಃಖದಲ್ಲಿ ನಾನು ಮುಳುಗಿದ್ದೇನೆ,” ಎಂದು ಎಂದು ಹೇಳಿದ್ದಾರೆ. ಕರೂರಿನಲ್ಲಿ ಸಂಭವಿಸಿದ ದುರಂತದ ಕುರಿತು ತೀವ್ರ ಆಘಾತ

ತಮಿಳುನಾಡಿನ‌ ಕರೂರ್ ನಲ್ಲಿ ಕಾಲ್ತುಳಿತ ಪ್ರಕರಣ| ಸಾವಿನ ಸಂಖ್ಯೆ 38ಕ್ಕೆ ಏರಿಕೆ| ಕಣ್ಣೀರು ಹಾಕಿದ ವಿಜಯ್ ದಳಪತಿ| ಪ್ರಧಾನಿ, ರಾಷ್ಟ್ರಪತಿ ಸೇರಿ ಹಲವರ ಸಂತಾಪ Read More »