ಸಮಗ್ರ ನ್ಯೂಸ್: ಧರ್ಮಸ್ಥಳ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನ ಕಾರ್ಯಾಚರಣೆಯಲ್ಲಿ ಅವಶೇಷಗಳು ಪತ್ತೆಯಾಗಿವೆ ಎಂಬ ಮಾಹಿತಿಗಳು ಲಭಿಸಿವೆ.
ಇಂದು ಆರನೇ ಗುರುತಿನ ಪಾಯಿಂಟ್ ನಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಅದರಲ್ಲಿ ಹೂಳಲಾದ ಶವಗಳ ಅಸ್ಥಿಪಂಜರ ಸಿಕ್ಕಿದೆ ಎಂಬ ಮಾಹಿತಿಗಳು ಉನ್ನತ ಮೂಲಗಳಿಂದ ಲಭಿಸಿವೆ.
ಹಲವಾರು ಮೃತದೇಹ ಹೂತು ಹಾಕಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುತು ಮಾಡಿದ 6 ನೇ ಜಾಗದಲ್ಲಿ ಜುಲೈ 31 ರಂದು 12:45 ಗಂಟೆಗೆ ಕಳೇಬರಗಳು ಪತ್ತೆಯಾಗಿದೆ ಎಂದು ಎಸ್.ಐ.ಟಿ ಮೂಲಗಳು ತಿಳಿಸಿದೆ.
ಈ ಹಿಂದಿನ ಪಾಯಿಂಟ್ ಗಳಲ್ಲಿಯೂ ಕೆಲ ಸಾಕ್ಷಿಗಳು ದೊರೆತಿರುವುದಾಗಿ ಕೆಲವು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿತ್ತು. ಅಲ್ಲದೇ ಈ ಕುರಿತಂತೆ ಸುಜಾತಾ ಭಟ್ ಪರ ವಕೀಲರು ಮೊದಲ ಪಾಯಿಂಟ್ ನಲ್ಲಿ ಎಟಿಎಂ, ಐಡಿ ಕಾರ್ಡ್, ರವಿಕೆ ಮೊದಲಾದ ವಸ್ತುಗಳು ಸಿಕ್ಕಿವೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದರು. ಇದೀಗ ಶವದ ಅವಶೇಷಗಳು ಪತ್ತೆಯಾಗಿರುವುದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.






