ಸಮಗ್ರ ನ್ಯೂಸ್: ಭಾರತದ ಶುಭಾಂಶು ಶುಕ್ಲಾ ಸಹಿತ ನಾಲ್ವರು ಗಗನಯಾತ್ರಿಗಳುಳ್ಳ ತಂಡದ ಐತಿಹಾಸಿಕ ಆಕ್ಸಿಯಂ-4 ಬಾಹ್ಯಾಕಾಶ ಯಾನ ಬುಧವಾರ ಮಧ್ಯಾಹ್ನ ಆರಂಭವಾಗಿದೆ.
ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನ ಮಧ್ಯಾಹ್ನ 12:01 ಗಂಟೆಗೆ ಸ್ಪೇಸ್‌ಎಕ್ಸ್‌ನ ಫಾಲ್ಕನ್ 9
ರಾಕೆಟ್ ನಭಕ್ಕೆ ಚಿಮ್ಮಿದೆ.
28 ಗಂಟೆಗಳ ಪ್ರಯಾಣದ ನಂತರ ಶುಭಾಂಶು ಅಂತಾರಾಷ್ಟ್ರೀಯ ಬಾಹ್ಯಾಕಾಶದಲ್ಲಿ 14 ದಿನಗಳ ಕಾಲ ತಂಗಲಿದೆ. ಈ ಅವಧಿಯಲ್ಲಿ ವಿವಿಧ ಪ್ರಯೋಗಗಳನ್ನು ಗಗನಯಾತ್ರಿಗಳು ಕೈಗೊಳ್ಳಲಿದ್ದಾರೆ.
ಮೇ 29ರಂದೇ ನಡೆಯಬೇಕಿದ್ದ ಈ ಗಗನಯಾನ ಯೋಜನೆಯು ಈಗಾಗಲೇ 5 ಬಾರಿ ಮುಂದೂಡಿಕೆಯಾಗಿತ್ತು.







