October 2024

ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಯಮುನಾ ಶ್ರೀನಿಧಿ

ಸಮಗ್ರ ನ್ಯೂಸ್: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಪ್ರಾರಂಭವಾಗಿ ಒಂದು ವಾರ ಕಳೆಯಿತು. ವಿವಿಧ ಟಾಸ್ಕ್ನಲ್ಲಿ ಗುದ್ದಾಡಿ ಎಲಿಮಿನೇಷನ್ನಿಂದ ಬಚಾವ್ ಆಗಲು ಎಲ್ಲರೂ ಪ್ರಯತ್ನಿಸಿದ್ದರು. ಜಗದೀಶ್, ಯಮುನಾ ಶ್ರೀನಿಧಿ, ಹಂಸಾ, ಭವ್ಯಾ, ಗೌತಮಿ, ಚೈತ್ರಾ ಕುಂದಾಪುರ, ಶಿಶಿರ್, ಮಾನಸಾ ಮತ್ತು ಮೋಕ್ಷಿತಾ ಅವರು ಈ ವಾರ ನಾಮಿನೇಟ್ ಆಗಿದ್ದರು. ಆದರೆ ಅಂತಿಮವಾಗಿ ಯಮುನಾ ಶ್ರೀನಿಧಿ ಅವರು ಎಲಿಮಿನೇಟ್ ಆಗಿದ್ದಾರೆ. ಇದು ಅವರಿಗೆ ಮಾತ್ರವಲ್ಲದೆ ಎಲ್ಲರಿಗೂ ಶಾಕ್ ಎಂದೆ ಹೇಳಬಹುದು. ಅವರು ಮೊದಲ ವಾರ ಹೆಚ್ಚು ಆ್ಯಕ್ಟೀವ್ […]

ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಯಮುನಾ ಶ್ರೀನಿಧಿ Read More »

ಮಂಗಳೂರು: ಇನ್ನೂ ಪತ್ತೆಯಾಗದ ಮಮ್ತಾಜ್ ಅಲಿ| ಫಲ್ಗುಣಿ ನದಿಯಲ್ಲಿ ತೀವ್ರ ಶೋಧ

ಸಮಗ್ರ ನ್ಯೂಸ್: ಮುಸ್ಲಿಂ ಮುಖಂಡ, ಇಲ್ಲಿನ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಬಿ.ಎಂ.ಮುಮ್ತಾಜ್ ಅಲಿ (52) ಅವರು ಭಾನುವಾರ ಮುಂಜಾನೆಯಿಂದ ನಾಪತ್ತೆಯಾಗಿದ್ದಾರೆ. ಅವರ ಬಿಎಂಡಬ್ಲ್ಯು ಕಾರು ನಗರದ ಹೊರವಲಯದ ಕೂಳೂರು ಸೇತುವೆಯಲ್ಲಿ ಪತ್ತೆಯಾಗಿದೆ. ಅವರಿಗಾಗಿ ಬೆಳಿಗ್ಗೆ 7 ಗಂಟೆಯಿಂದ ಕೂಳೂರು ಬಳಿ ಫಲ್ಗುಣಿ ನದಿಯಲ್ಲಿ ಶೋಧಕಾರ್ಯ ನಡೆದಿದ್ದು, ಇನ್ನೂ ಅವರ ಸುಳಿವು ಸಿಕ್ಕಿಲ್ಲ. ರಾಜ್ಯ ವಿಪತ್ತು ನಿರ್ವಹಣಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಕರಾವಳಿ ರಕ್ಷಣಾ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತಂಡಗಳು ಆರೇಳು ದೋಣಿಗಳಲ್ಲಿ

ಮಂಗಳೂರು: ಇನ್ನೂ ಪತ್ತೆಯಾಗದ ಮಮ್ತಾಜ್ ಅಲಿ| ಫಲ್ಗುಣಿ ನದಿಯಲ್ಲಿ ತೀವ್ರ ಶೋಧ Read More »

ಪ್ರವಾಸಕ್ಕೆ ತೆರಳಿದ್ದಾಗ ಸಮುದ್ರದಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಸಮಗ್ರ ನ್ಯೂಸ್: ಸಮುದ್ರದಲ್ಲಿ ಮುಳುಗಿ ಬೆಂಗಳೂರು ಮೂಲದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲ ತೀರದಲ್ಲಿ ನಡೆದಿದೆ. ಬೆಂಗಳೂರಿನ ವಿದ್ಯಾಸೌಧ ಪಿ.ಯು ಕಾಲೇಜು ವಿದ್ಯಾರ್ಥಿ ಗೌತಮ್ (17) ಮೃತ ರ್ದುದೈವಿ. ಇನ್ನೋರ್ವ ವಿದ್ಯಾರ್ಥಿ ಧನುಶ್ .ಡಿ. ಯನ್ನು ರಕ್ಷಣೆ ಮಾಡಲಾಗಿದೆ. ವಿದ್ಯಾ ಸೌಧ ಕಾಲೇಜಿನ 220 ವಿದ್ಯಾರ್ಥಿಗಳು ಪ್ರವಾಸಕ್ಕೆ ಆಗಮಿಸಿದ್ದರು. ಈ ವೇಳೆ ಇಬ್ಬರು ವಿದ್ಯಾರ್ಥಿಗಳು ಸಮುದ್ರದ ಆಳದಲ್ಲಿ ಈಜಲು ತೆರಳಿದ್ದರು. ಅಲೆಗಳ ವೇಗಕ್ಕೆ ಇಬ್ಬರು ನೀರಿನಲ್ಲಿ ಮುಳಿಗಿದ್ದು, 

ಪ್ರವಾಸಕ್ಕೆ ತೆರಳಿದ್ದಾಗ ಸಮುದ್ರದಲ್ಲಿ ಮುಳುಗಿ ವಿದ್ಯಾರ್ಥಿ ಸಾವು Read More »

ಸರ್ಕಾರ ಬಿದ್ರೆ ಬೀಳಲಿ ಜಾತಿಗಣತಿ ವರದಿ ಜಾರಿ ಮಾಡಲೇಬೇಕು: ಕಾಂಗ್ರೆಸ್ MLC ಬಿ.ಕೆ ಹರಿಪ್ರಸಾದ್ ಸ್ಫೋಟಕ ಹೇಳಿಕೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಜಾತಿ ಜನಗಣತಿ ವರದಿ ಜಾರಿ ಜಟಾಪಟಿ ಇದೀಗ ಪ್ರಾರಂಭವಾದಂತೆ ಕಾಣುತ್ತಿದೆ. ಹೌದು ಸರ್ಕಾರ ಬಿದ್ದರೆ ಬೀಳಲಿ. ಕರ್ನಾಟಕದಲ್ಲಿ ಜಾತಿಗಣತಿ ಜಾರಿ ಮಾಡಲೇಬೇಕು ಎಂದು ಕಾಂಗ್ರೆಸ್ ಎಂಎಲ್ಸಿ ಬಿ.ಕೆ ಹರಿಪ್ರಸಾದ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಜಾತಿಗಣತಿ ಜಾರಿ ವಿಚಾರ ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಇದೆ. ಆದರೆ ಜಾತಿಗಣತಿ ಜಾರಿಗೆ ಸರ್ಕಾರ ಯಾಕೆ ಯೋಚನೆ ಮಾಡುತ್ತಿದೆ? ಮೀನಾಮೇಷ ಎಣಿಸದೆ ಮೊದಲು ಜಾತಿಗಣತಿ ಜಾರಿ ಮಾಡಲಿ ಎಂದು ಆಗ್ರಹಿಸಿದರು. ಇಷ್ಟೇ ಅಲ್ಲದೆ ಜಾತಿಗಣತಿ ಜಾರಿಯಿಂದ ಎಲ್ಲ ಸಮುದಾಯಗಳಿಗೆ ಅನುಕೂಲ

ಸರ್ಕಾರ ಬಿದ್ರೆ ಬೀಳಲಿ ಜಾತಿಗಣತಿ ವರದಿ ಜಾರಿ ಮಾಡಲೇಬೇಕು: ಕಾಂಗ್ರೆಸ್ MLC ಬಿ.ಕೆ ಹರಿಪ್ರಸಾದ್ ಸ್ಫೋಟಕ ಹೇಳಿಕೆ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಇದು ಅಕ್ಟೋಬರ್ ತಿಂಗಳ ಎರಡನೇ ವಾರ. 06 ರಿಂದ 12 ರವರೆಗೆ ಇರಲಿದೆ. ಶುಕ್ರನು ಈ ವಾರದಲ್ಲಿ ಸ್ವಕ್ಷೇತ್ರ ಹಾಗೂ ಬುಧನು ಶುಕ್ರನ ಜೊತೆ ಯೋಗವನ್ನು ಪಡೆಯುವ ಕಾರಣ ಒಳ್ಳೆಯ ಯೋಗವಿದೆ. ಇದೇ ಸಂದರ್ಭದಲ್ಲಿ ನವರಾತ್ರವೂ ಬಂದಿರುವ ಕಾರಣ ಮಹಾಕಾಳಿ, ಮಹಾಲಕ್ಷ್ಮಿ, ‌ಮಹಾಸರಸ್ವತಿಯರನ್ನೂ ಶ್ರದ್ಧಾ ಭಕ್ತಿಯಿಂದ ಆರಾಧಿಸಿದರೆ ಚಿಂತಿತ ಕಾಮನೆಯನ್ನು ಪೂರೈಸುತ್ತಾರೆ. ಒಳ್ಳೆಯ ಮನಸ್ಸಿನಿಂದ ಒಳ್ಳೆಯದನ್ನು ಕೇಳಿಕೊಂಡು, ಒಳ್ಳೆಯ ರೀತಿಯಿಂದ‌ ಬಾಳಿರಿ. ಮೇಷ ರಾಶಿ : ಮೊದಲ ರಾಶಿಯವರಿಗೆ ಬುಧನ ಸಂಚಾರದಿಂದ ಬಂಧುಗಳ ನಡುವೆ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಹೃದಯಾಘಾತದಿಂದ ತೆಲುಗು ನಟ ರಾಜೇಂದ್ರ ಪ್ರಸಾದ್ ಪುತ್ರಿ ಗಾಯಿತ್ರಿ ನಿಧನ

ಸಮಗ್ರ ನ್ಯೂಸ್: ಟಾಲಿವುಡ್ ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರ ಪುತ್ರಿ ಗಾಯತ್ರಿ (38) ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಗಾಯಿತ್ರಿ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಹೈದರಾಬಾದ್ ನ AIG ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಹೃದಯಾಘಾತದಿಂದ ತೆಲುಗು ನಟ ರಾಜೇಂದ್ರ ಪ್ರಸಾದ್ ಪುತ್ರಿ ಗಾಯಿತ್ರಿ ನಿಧನ Read More »

ಕಾರು-ಬೈಕ್ ಡಿಕ್ಕಿ;ಬೈಕ್ ಸವಾರ ಸಾವು

ಸಮಗ್ರ ನ್ಯೂಸ್: ಕಾರು-ಬೈಕ್ ನಡುವೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟ ಘಟನೆ ಅ.05 ರಂದು ಕಡಬದಲ್ಲಿ ನಡೆದಿದೆ. ಮೃತರನ್ನು‌ ಕಡಬ ಹಳೇಸ್ಟೇಷನ್ ನಿವಾಸಿ ಹಸೈನಾರ್ ಎಂದು ಗುರುತಿಸಲಾಗಿದೆ. ಹಸೈನಾರ್ ತನ್ನ ಮನೆಯಿಂದ ಕಡಬ ಕಡೆಗೆ ಬರುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರೊಂದು ಢಿಕ್ಕಿ ಹೊಡೆದ ದುರ್ಘಟನೆ ಸಂಭವಿಸಿದೆ. ಅಪಘಾತದ ದೃಶ್ಯ ಸ್ಥಳೀಯ ಇಂಡಸ್ಟ್ರೀಸ್ ಒಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ

ಕಾರು-ಬೈಕ್ ಡಿಕ್ಕಿ;ಬೈಕ್ ಸವಾರ ಸಾವು Read More »

ಕಾಮನ್‌ವೆಲ್ತ್‌ ಗೇಮ್ಸ್‌/ ನೂತನ ದಾಖಲೆ ನಿರ್ಮಿಸಿದ ದಿಶಾ ಮೋಹನ್‌

ಸಮಗ್ರ ನ್ಯೂಸ್‌: ದಕ್ಷಿಣ ಆಫ್ರಿಕಾದ ಜೋಹಾನ್ಸ್‌ ಬರ್ಗ್‌ಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಬೆಂಗಳೂರು ಮೂಲದ ದಿಶಾ ಮೋಹನ್ ಹೊಸ ದಾಖಲೆಯನ್ನು ಬರೆದಿದ್ದಾರೆ. ಎಕ್ಸಿಪ್ಟ್ ಸಬ್ ಜೂನಿಯರ್ 57 ಕೆಜಿ, ಸಬ್ ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ 78 ಕೆಜಿ ತೂಕದ ಬೆಂಚ್ ಪ್ರೆಸ್‌ನಲ್ಲಿ ಯಶಸ್ವಿಯಾಗಿ ಎತ್ತುವುದರ ಮೂಲಕ ನೂತನ ದಾಖಲೆಯನ್ನು ಮಾಡಿದ್ದಾರೆ. ದಿಶಾ ಮೋಹನ್ ಅವರು ಬೆಂಗಳೂರಿನ ಬಾಲರ್ಕ ಫಿಟ್ನಸ್ ಸೆಂಟರ್, ಜೆ.ಪಿ ನಗರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರು ತರಬೇತುದಾರ ವಿಶ್ವನಾಥ ಭಾಸ್ಕರ್ ಅವರಿಂದ ತರಬೇತಿ

ಕಾಮನ್‌ವೆಲ್ತ್‌ ಗೇಮ್ಸ್‌/ ನೂತನ ದಾಖಲೆ ನಿರ್ಮಿಸಿದ ದಿಶಾ ಮೋಹನ್‌ Read More »

SSLC; ಮಧ್ಯ ವಾರ್ಷಿಕ ಪರೀಕ್ಷಾ ಫಲಿತಾಂಶ ಅ. 25 ಕ್ಕೆ

ಸಮಗ್ರ ನ್ಯೂಸ್: ಹತ್ತನೇ ತರಗತಿಯ ಮಧ್ಯ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಅ. 25ರಂದು ಪ್ರಕಟಿಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೂಚನೆ ನೀಡಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಪ್ರಕಟಿಸುವ ಬಗ್ಗೆ ಈ ಮೊದಲು ಚಿಂತನೆ ನಡೆಸಲಾಗಿತ್ತು.ಆದರೆ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ದಸರಾ ರಜೆಯ ಅವಧಿಯಲ್ಲಿ ಮೌಲ್ಯಮಾಪನ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ರಜಾ ಅವಧಿ ಮುಕ್ತಾಯಗೊಂಡ ಬಳಿಕ ನಡೆಸುವಂತೆ ಮಂಡಳಿ ಸೂಚಿಸಿದೆ.

SSLC; ಮಧ್ಯ ವಾರ್ಷಿಕ ಪರೀಕ್ಷಾ ಫಲಿತಾಂಶ ಅ. 25 ಕ್ಕೆ Read More »

ಸಿಲಿಕಾನ್‌ ಸಿಟಿಯಲ್ಲಿ ದರ ಏರಿಕೆಯ ಬಿಸಿ/ ಸದ್ಯದಲ್ಲೇ ಏರಲಿದೆ ಮೆಟ್ರೋ ದರ

ಸಮಗ್ರ ನ್ಯೂಸ್‌: ಬೆಂಗಳೂರು ನಗರದಲ್ಲಿ ದರ ಏರಿಕೆಯ ಬಿಸಿ ಹೆಚ್ಚುತ್ತಿದ್ದು, ಇದೀಗ ನಮ್ಮ ಮೆಟ್ರೋ ರೈಲು ದರ ಏರಿಕೆ ಬಗ್ಗೆ ಪ್ರಸ್ತಾಪ ಮಾಡಿದೆ. ಹಲವಾರು ಬಾರಿ ಮೆಟ್ರೋ ದರ ಏರಿಕೆ ಬಗ್ಗೆ, ಬಿಎಂಆರ್‌ಸಿಎಲ್ ಪ್ರಸ್ತಾಪಿಸಿದ್ದು, ಶೀಘ್ರದಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆಯಾಗುವ ಸಾಧ್ಯತೆಯಿದೆ. ಮೆಟ್ರೋ ದರ ನಿಗದಿ ಸಮಿತಿಯನ್ನು ರಚಿಸಿದ್ದು 15% ರಿಂದ 20% ರಷ್ಟು ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಈ ಕುರಿತು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌಹಾನ್

ಸಿಲಿಕಾನ್‌ ಸಿಟಿಯಲ್ಲಿ ದರ ಏರಿಕೆಯ ಬಿಸಿ/ ಸದ್ಯದಲ್ಲೇ ಏರಲಿದೆ ಮೆಟ್ರೋ ದರ Read More »