Ad Widget .

ನಡುರಸ್ತೆಯಲ್ಲೇ ಧಗಧಗನೇ ಉರಿದು ಹೋದ ಬಿಎಂಟಿಸಿ ಬಸ್

ಸಮಗ್ರ ನ್ಯೂಸ್: ಬೆಂಗಳೂರಿನ ಎಂ.ಜಿ ರೋಡ್​ನ ಅನಿಲ್​ ಕುಂಬ್ಳೆ ಸರ್ಕಲ್​ ಬಳಿ 144ಈ ಮಾರ್ಗದ ಬಿಎಂಟಿಸಿ ಬಸ್​ವೊಂದು ದಿಢೀರ್​ ಅಗ್ನಿಗೆ ಆಹುತಿಯಾಗಿದೆ. ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಎಲ್ಲಾ ಪ್ರಯಾಣಿಕರನ್ನು ಬಸ್​ನಿಂದ ಕೆಳಗಿಳಿಸಿದ ಚಾಲಕ ಮತ್ತು ನಿರ್ವಾಹಕ, ತಕ್ಷಣವೇ ಸ್ಥಳದಿಂದ ದೂರ ಓಡಿದ್ದಾರೆ.

Ad Widget . Ad Widget .

ಕ್ಷಣಮಾತ್ರದಲ್ಲಿ ಬಸ್​ ಧಗಧಗನೆ ಹೊತ್ತಿ ಉರಿದ ದೃಶ್ಯ ಸ್ಥಳೀಯರ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Ad Widget . Ad Widget .

Leave a Comment

Your email address will not be published. Required fields are marked *