Ad Widget .

ಬೆಂಗಳೂರು: ಕಾಲೇಜು ಯುವತಿಯರಿಗೆ ಮರ್ಮಾಂಗ ತೋರಿ ವಿಕೃತಿ ಮೆರೆದಾತನ ಅರೆಸ್ಟ್ ‌ಮಾಡಿದ ಪೊಲೀಸರು

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಕಾಲೇಜು ಯುವತಿಯರಿಗೆ ಮರ್ಮಾಂಗ ತೋರಿಸಿ ವಿಕೃತಿ ಮೆರೆದಿದ್ದ ಯುವಕನನ್ನು ಬೆಂಗಳೂರಿನ ವಿವಿಪುರಂ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Ad Widget . Ad Widget .

ಅಯೂಬ್ ಉರ್ ರೆಹಮಾನ್(48) ಬಂಧಿತ ವಿಕೃತ ಕಾಮಿ. ನಗರದ ವಿವಿ ಪುರಂನಲ್ಲಿರುವ ಖಾಸಗಿ ಕಾಲೇಜೊಂದರ ಬಳಿ ಜು. 8ರಂದು ನಿಂತಿದ್ದ ಯುವತಿಯಿರಿಗೆ ತನ್ನ ಮರ್ಮಂಗವನ್ನು ತೋರಿಸಿದ್ದ ಕಾಮುಕ ವ್ಯಕ್ತಿಯೊಬ್ಬ ಪ್ಯಾಂಟ್ ಜಿಪ್ ತೆಗೆದು ಮರ್ಮಾಂಗ ತೋರಿಸಿ ಪರಾರಿಯಾಗಿದ್ದ. ಆತನನ್ನು ಇದೀಗ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Ad Widget . Ad Widget .

ದ್ವಿಚಕ್ರ ವಾಹನದಲ್ಲಿ ಬರುವ ಕಾಮುಕ ಉರ್ ರೆಹಮಾನ್, ವಿ.ವಿ. ಪುರಂ ರಸ್ತೆಯಲ್ಲಿ ಓಡಾಡುವ ವಿದ್ಯಾರ್ಥಿನಿಯರಿಗೆ ತನ್ನ ಖಾಸಗಿ ಅಂಗ ಪ್ರದರ್ಶಿಸಿ ಕಿರುಕುಳ ನೀಡುತ್ತಿದ್ದ. ಯುವತಿಯರು ಹೆಚ್ಚಾಗಿರುವ ಕಾಲೇಜು ಟಾರ್ಗೆಟ್ ಮಾಡಿ ಆ ರಸ್ತೆಗೆ ಇಳಿಯುವ ಕಾಮುಕ, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಯುವತಿಯರಿರುವ ಕಡೆ ಬೈಕ್ ನಿಲ್ಲಿಸಿ ಮರ್ಮಾಂಗ ತೋರಿಸಿ ಎಸ್ಕೇಪ್ ಆಗುತ್ತಿದ್ದ.

Leave a Comment

Your email address will not be published. Required fields are marked *