March 2024

ಫೆಬ್ರವರಿಯಲ್ಲಿ 168337 ಕೋಟಿ ರು.ನಷ್ಟು ಜಿಎಸ್‍ಟಿ ಸಂಗ್ರಹ

ಸಮಗ್ರ ನ್ಯೂಸ್: 2024ರ ಫೆಬ್ರವರಿ ತಿಂಗಳಲ್ಲಿ 168337 ಕೋಟಿ ರು.ನಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವಾಗಿದೆ ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಇದು 2023ರ ಫೆಬ್ರವರಿಗೆ ಹೋಲಿಸಿದರೆ ಶೇ.12.5ರಷ್ಟು ಹೆಚ್ಚು. ದೇಶೀಯ ವಹಿವಾಟಿನಲ್ಲಿ ಕಂಡುಬಂದ ಏರಿಕೆ ಒಟ್ಟಾರೆ ಜಿಎಸ್‍ಟಿ ಸಂಗ್ರಹ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಈ ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ (2023 ಏಪ್ರಿಲ್- 2024 ಫೆಬ್ರವರಿ) ಅವಧಿಯಲ್ಲಿ ಒಟ್ಟಾರೆ 18.40 ಲಕ್ಷ ಕೋಟಿ ರು.ನಷ್ಟು ಜಿಎಸ್‍ಟಿ ಸಂಗ್ರಹವಾದಂತೆ ಆಗಿದೆ. […]

ಫೆಬ್ರವರಿಯಲ್ಲಿ 168337 ಕೋಟಿ ರು.ನಷ್ಟು ಜಿಎಸ್‍ಟಿ ಸಂಗ್ರಹ Read More »

ಮೂರು ಕಂಪನಿಗಳಿಂದ ರಕ್ಷಣಾ ಉಪಕರಣಗಳ ಖರೀದಿಗೆ ಒಪ್ಪಂದ

ಸಮಗ್ರ ನ್ಯೂಸ್: ರಕ್ಷಣಾ ಸಚಿವಾಲಯವು, ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಹೆಚ್‍ಎಎಲ್) ಸೇರಿದಂತೆ ದೇಶದ ಪ್ರಮುಖ ಮೂರು ಕಂಪನಿಗಳಿಂದ ರಕ್ಷಣಾ ಉಪಕರಣಗಳ ಖರೀದಿಗೆ 39,125 ಕೋಟಿ ರು. ಮೌಲ್ಯದ ಐದು ಒಪ್ಪಂದಗಳನ್ನು ಮಾಡಿಕೊಂಡಿದೆ. ಪ್ರಮುಖವಾಗಿ ಹೆಚ್‍ಎಎಲ್‍ನಿಂದ ಮಿಗ್-29 ವಿಮಾನಗಳಿಗೆ ಎಂಜಿನ್‍ಗಳನ್ನು ಪೂರೈಸಲು ಒಪ್ಪಂದ ಮಾಡಿಕೊಂಡಿದೆ. ಹಾಗೆಯೇ ಲಾರ್ಸೆನ್ ಅಂಡ್ ಟರ್ಬೋ ಕಂಪನಿಯ ಜೊತೆಗೆ ಸಿಐಡಬ್ಲ್ಯೂಎಸ್ ಶಸ್ತ್ರಾಸ್ತ್ರ ಮತ್ತು ಸುಸಜ್ಜಿತ ರಾಡಾರ್ ಪೂರೈಸುವ ಎರಡು ಒಪ್ಪಂದಕ್ಕೆ ಅಂಕಿತ ಹಾಕಿದೆ. ಇದರ ಜೊತೆಗೆ ಬ್ರಹ್ಮೋಸ್ ಏರೋಸ್ಪೇಸ್ ಕಂಪನಿಯ ಜೊತೆಗೆ ಬ್ರಹ್ಮೋಸ್ ಕ್ಷಿಪಣಿಗಳನ್ನು

ಮೂರು ಕಂಪನಿಗಳಿಂದ ರಕ್ಷಣಾ ಉಪಕರಣಗಳ ಖರೀದಿಗೆ ಒಪ್ಪಂದ Read More »

ಮಹಿಳಾ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿ/ ಬಿಸಿಸಿಐ ಘೋಷಣೆ

ಸಮಗ್ರ ನ್ಯೂಸ್: ದೇಶಿಯ ಮಹಿಳಾ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿ ಆಯೋಜಿಸುವುದಾಗಿ ಬಿಸಿಸಿಐ ಶುಕ್ರವಾರ ಘೋಷಿಸಿದೆ. ಆರು ವರ್ಷಗಳ ಬಳಿಕ ಈ ಟೂರ್ನಿ ಆಯೋಜಿಸಲಾಗುತ್ತಿದ್ದು, ಮಾ.28ರಿಂದ ಪುಣೆಯಲ್ಲಿ ಹಿರಿಯರ ಅಂತರ್ ವಲಯ ಟೂರ್ನಿ ಆರಂಭವಾಗಲಿದೆ. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಆತಿಥ್ಯ ವಹಿಸಲಿದೆ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಕೇಂದ್ರ ಹಾಗೂ ಈಶಾನ್ಯ ವಲಯ ಸೇರಿ ಒಟ್ಟು 6 ತಂಡಗಳು ಭಾಗಿಯಾಗಲಿದ್ದು, ಪ್ರತಿ ತಂಡ 5 ಪಂದ್ಯಗಳನ್ನಾಡಲಿದ್ದು, ಈ ಬಾರಿ ಪಂದ್ಯ 3 ದಿನಗಳದ್ದಾಗಿರಲಿದೆ. 2018ರ ಅವೃತ್ತಿಯಲ್ಲಿ ಪಂದ್ಯ

ಮಹಿಳಾ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿ/ ಬಿಸಿಸಿಐ ಘೋಷಣೆ Read More »

ವಿಟ್ಲ: ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ಶಾಖೆ ದರೋಡೆ ಪ್ರಕರಣ| ನಾಲ್ವರು ವಶಕ್ಕೆ, ಉಳಿದವರಿಗೆ ಬಲೆ ಬೀಸಿದ ಖಾಕಿ ಪಡೆ

ಸಮಗ್ರ ನ್ಯೂಸ್ : ಬಂಟ್ವಾಳ ತಾಲೂಕಿನ ವಿಟ್ಲ‌ ಅಡ್ಯನಡ್ಕದ ಕರ್ನಾಟಕ ಬ್ಯಾಂಕ್ ಶಾಖೆಗೆ ನುಗ್ಗಿದ ದರೋಡೆಕೋರರು ಚಿನ್ನ ಹಾಗೂ ನಗದು ದೋಚಿದ ಪ್ರಕರಣ ಸಂಬಂಧಿಸಿದಂತೆ ಮಂಗಳೂರು ನಗರ ಸಿಸಿಬಿ ಪೊಲೀಸರು ಮತ್ತು ದ.ಕ.ಜಿಲ್ಲಾ ವಿಶೇಷ ಕ್ರೈಂ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ನಾಲ್ಕು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಉಳಿದ ಆರೋಪಿಗಳಿಗಾಗಿ ಬಲೆ ಬಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಅಡ್ಯನಡ್ಕದ ಕರ್ಣಾಟಕ ಬ್ಯಾಂಕ್ ನಲ್ಲಿ ಫೆ.7 ರಂದು ಕಟ್ಟಡದ ಹಿಂಬದಿಯ ಕಿಟಕಿ ಒಡೆದು

ವಿಟ್ಲ: ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ಶಾಖೆ ದರೋಡೆ ಪ್ರಕರಣ| ನಾಲ್ವರು ವಶಕ್ಕೆ, ಉಳಿದವರಿಗೆ ಬಲೆ ಬೀಸಿದ ಖಾಕಿ ಪಡೆ Read More »

ಪ್ರೋ ಕಬಡ್ಡಿ ಲೀಗ್ ಸೀಸನ್ 10ಗೆ ರೋಚಕ‌ ತೆರೆ| ಚೊಚ್ಚಲ‌ ಪ್ರಶಸ್ತಿಗೆ ಮುತ್ತಿಕ್ಕಿದ ಪುಣೇರಿ ಪಲ್ಟನ್

ಸಮಗ್ರ ನ್ಯೂಸ್: ಪ್ರೋ ಕಬಡ್ಡಿ ಲೀಗ್​ 10ನೇ ಆವೃತ್ತಿ ಮುಕ್ತಾಯಗೊಂಡಿದೆ. ಮೂರು ತಿಂಗಳ ನಾನ್​ಸ್ಟಾಪ್​ ಮನರಂಜನೆಗೆ ರೋಚಕ ತೆರೆ ಬಿದ್ದಿದೆ. 2023ರ ಡಿಸೆಂಬರ್​ 2ರಿಂದ 2024ರ ಮಾರ್ಚ್​ 1ರವರೆಗೂ ನಡೆದ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಸೋಲಿಸಿ ಪುಣೇರಿ ಪಲ್ಟನ್ ಚೊಚ್ಚಲ ಪ್ರೊ ಕಬಡ್ಡಿ ಲೀಗ್​ ಗೆದ್ದುಕೊಂಡಿದೆ. ಹೈದರಾಬಾದ್‌ನ ಗಚಿಬೌಲಿಯ ಜಿಎಂಸಿ ಬಾಲಯೋಗಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಫೈನಲ್ ಪಂದ್ಯ ನಡೆಯಿತು. 10 ಋತುಗಳಲ್ಲಿ ಮೊದಲ ಬಾರಿಗೆ ಪುಣೇರಿ ಪಲ್ಟಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು. 2024ರ ಪಿಕೆಎಲ್ ನಲ್ಲಿ ಪ್ರಚಂಡ

ಪ್ರೋ ಕಬಡ್ಡಿ ಲೀಗ್ ಸೀಸನ್ 10ಗೆ ರೋಚಕ‌ ತೆರೆ| ಚೊಚ್ಚಲ‌ ಪ್ರಶಸ್ತಿಗೆ ಮುತ್ತಿಕ್ಕಿದ ಪುಣೇರಿ ಪಲ್ಟನ್ Read More »

ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಡಿದ್ದು ದೃಢ| ಎಫ್ಎಸ್ಎಲ್ ವರದಿಯಲ್ಲಿ ಬಹಿರಂಗ

ಸಮಗ್ರ ನ್ಯೂಸ್: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘೋಷಣೆ ಕೂಗಿದ್ದು ದೃಢ ಎಂದು FSL ವರದಿಯಲ್ಲಿ ಬಹಿರಂಗವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಗೆಲುವು ದಾಖಲಿಸಿದ ಸಂದರ್ಭದಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕಿದ್ದರು. ನಾಸೀರ್ ಸಾಬ್ ಜಿಂದಾಬಾದ್ ಮತ್ತು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವ ಮಾಹಿತಿ ಇದೀಗ ಬಹಿರಂಗವಾಗಿದೆ ಎಂದು ಹೇಳಲಾಗುತ್ತಿದೆ. “ವಿಧಾನಸೌಧದಲ್ಲಿ ಸಂಭ್ರಮಾಚರಣೆ ವೇಳೆ ರೆಕಾರ್ಡ್‌ ಆದ ವಿಡಿಯೊ

ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಡಿದ್ದು ದೃಢ| ಎಫ್ಎಸ್ಎಲ್ ವರದಿಯಲ್ಲಿ ಬಹಿರಂಗ Read More »

ಮಾ.03 ಪೋಲಿಯೋ ಭಾನುವಾರ| ಆರೋಗ್ಯ ಇಲಾಖೆಯಿಂದ ವಿಶೇಷ ಪ್ರಕಟಣೆ

ಸಮಗ್ರ ನ್ಯೂಸ್: ಪೊಲಿಯೋ ರಾಷ್ಟ್ರೀಯ ರೋಗನಿರೋಧಕ ದಿನದ ಅಂಗವಾಗಿ ಮಾರ್ಚ್ 3ರಂದು ನಡೆಯುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಯಾವುದೇ ಅರ್ಹ ಮಗು ಪೋಲಿಯೋ ಲಸಿಕೆಯಿಂದ ಹೊರಗುಳಿಯದಂತೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಲಸಿಕೆ ನೀಡಲು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನಗರ ಪ್ರದೇಶಗಳಲ್ಲಿ ಲಸಿಕೆ ನೀಡಲು ಅವಶ್ಯಕತೆ ಇರುವ ಕಡೆಗಳಲ್ಲಿ ತರಬೇತಿಯಲ್ಲಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ನೇಮಿಸಿಕೊಳ್ಳಲಾಗಿದೆ. ಪ್ರವಾಸಿ ಸ್ಥಳಗಳು, ಜನಸಂದಣಿ ಹೆಚ್ಚು ಇರುವ

ಮಾ.03 ಪೋಲಿಯೋ ಭಾನುವಾರ| ಆರೋಗ್ಯ ಇಲಾಖೆಯಿಂದ ವಿಶೇಷ ಪ್ರಕಟಣೆ Read More »

ಬ್ರ್ಯಾಂಡ್ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ ‘ಬಾಂಬ್ ಬೆಂಗಳೂರು’ ಎಂಬ ಕಳಂಕ ತರಬೇಡಿ: ಆರ್.ಅಶೋಕ್

ಸಮಗ್ರ ನ್ಯೂಸ್: ಇಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ವಿಚಾರವಾಗಿ ಮಾತನಾಡಿದವಿರೋಧ ಪಕ್ಷದ ನಾಯಕ ಆರ್​. ಅಶೋಕ ರಾಜ್ಯ ಸರ್ಕಾರ ಬ್ರ್ಯಾಂಡ್ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ ‘ಬಾಂಬ್ ಬೆಂಗಳೂರು’ ಎಂಬ ಕಳಂಕ ತರಬೇಡಿ ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಸಮಾಜಘಾತುಕ ಶಕ್ತಿಗಳಿಗೆ ರೆಕ್ಕೆಪುಕ್ಕ ಬಂದಿದೆ. ಶರ್ಟ್ ಗುಂಡಿ ಬಿಚ್ಚಿಕೊಂಡು ಎದೆ ಉಬ್ಬಿಸಿಕೊಂಡು ಓಡಾಡುತ್ತಿದ್ದಾರೆ. ದೇಶದ ಕಾನೂನು ಇವರಿಗೆ ಅನ್ವಯವಾಗಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಗಲಾಟೆ ಆದಾಗಲೂ ಯಾವುದೇ ಕ್ರಮಕೈಗೊಳ್ಳಲಿಲ್ಲ.

ಬ್ರ್ಯಾಂಡ್ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ ‘ಬಾಂಬ್ ಬೆಂಗಳೂರು’ ಎಂಬ ಕಳಂಕ ತರಬೇಡಿ: ಆರ್.ಅಶೋಕ್ Read More »

ಸದ್ದಿಲ್ಲದೆ ಗೋವಾದಲ್ಲಿ ಮದುವೆಯಾದ ನಟಿ ದೀಪಿಕಾ ದಾಸ್

ಸಮಗ್ರ ನ್ಯೂಸ್: ನಾಗಿಣಿ’ ಖ್ಯಾತಿಯ ನಟಿ ದೀಪಿಕಾ ದಾಸ್ ಸದ್ದಿಲ್ಲದೆ ಗೋವಾದಲ್ಲಿ ಮದುವೆಯಾಗಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದೂ ಅಭಿಮಾನಿಗಳಿಗೆ ಸ್ವಲ್ಪ ಮಟ್ಟಿಗೆ ಶಾಕ್ ಆಗಿದೆ. ಅದರಲ್ಲೂ ಇದು ನಿಜವಾದ ಮದುವೆಯಾ.. ಅಥವಾ ಶೂಟಿಂಗ್ ಆಗಿರಬಹುದಾ ಎಂಬ ಕಮೆಂಟ್ ಗಳನ್ನು ಜನರು ಹಾಕುತ್ತಿದ್ದಾರೆ. ದುಬೈನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಉದ್ಯಮಿ ಜೊತೆ ದೀಪಿಕಾ ದಾಸ್ ಮದುವೆ ಆಗಿದ್ದಾರೆ. ಗೋವಾದ ಕಡಲ ತಡಿಯಲ್ಲಿ ಖಾಸಗಿಯಾಗಿ ವಿವಾಹ ಕಾರ್ಯಕ್ರಮ ನಡೆದಿದ್ದು, ವಧು-ವರರ ಕುಟುಂಬ ಸದಸ್ಯರು ಮಾತ್ರ ಮದುವೆಯಲ್ಲಿ

ಸದ್ದಿಲ್ಲದೆ ಗೋವಾದಲ್ಲಿ ಮದುವೆಯಾದ ನಟಿ ದೀಪಿಕಾ ದಾಸ್ Read More »

ಸುಪ್ರೀಂಕೋರ್ಟ್ ಸೂಚನೆಯಂತೆ ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತ ಸಮಿತಿ ಅಧ್ಯಕ್ಷರ ನೇಮಕ

ಸಮಗ್ರ ನ್ಯೂಸ್: ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ ನಡೆದ ನಂತರ ಚಿತ್ರದುರ್ಗದ ಐತಿಹಾಸಿಕ ಮುರುಘಾಮಠಕ್ಕೆ ಆಡಳಿತ ಸಮಿತಿ ನೇಮಿಸಲು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. 3 ದಿನದಲ್ಲಿ ಆಡಳಿತ ಸಮಿತಿ ನೇಮಿಸಲು ಫೆಬ್ರವರಿ 28ರಂದು ಸುಪ್ರೀಂಕೋರ್ಟ್ ಆದೇಶಿಸಿತ್ತು. ಆಡಳಿತ ಸಮಿತಿ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ನೇಮಕ ಮಾಡಲಾಗಿದೆ. ಸದ್ಯ ಮುರುಘಾ ಸ್ವಾಮೀಜಿ ಜಾಮೀನು ಮೇಲಿದ್ದು, ಅವರ ನಿಯಂತ್ರಣದಲ್ಲಿರುವ ಆಡಳಿತ ಪ್ರಶ್ನಿಸಿ ಮಾಜಿ ಸಚಿವ ಹೆಚ್.ಏಕಾಂತಯ್ಯ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿ ಮಧ್ಯಂತ ಆದೇಶ

ಸುಪ್ರೀಂಕೋರ್ಟ್ ಸೂಚನೆಯಂತೆ ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತ ಸಮಿತಿ ಅಧ್ಯಕ್ಷರ ನೇಮಕ Read More »