March 2024

ಇಂದು ಪೋಲಿಯೋ ಭಾನುವಾರ| ಆರೋಗ್ಯ ಇಲಾಖೆಯಿಂದ 62.8 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

ಸಮಗ್ರ ನ್ಯೂಸ್: ರಾಷ್ಟ್ರೀಯ ಲಸಿಕಾ ದಿನದ ಪ್ರಯುಕ್ತ ಭಾನುವಾರ (ಮಾ.3) ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಆರೋಗ್ಯ ಇಲಾಖೆಯು ರಾಜ್ಯಾದ್ಯಂತ 62,85,880 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದೆ. ರಾಜ್ಯದ ಎಲ್ಲ ಆಸ್ಪತ್ರೆಗಳು, ಬಸ್, ಮೆಟ್ರೋ, ರೈಲ್ವೆ ನಿಲ್ದಾಣ, ಕಾಮಗಾರಿ ಪ್ರದೇಶ, ಕೊಳೆಗೇರಿ, ಗುಡ್ಡಗಾಡು ಪ್ರದೇಶಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಲಸಿಕೆ ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನ ಬೂತ್‌ಗಳಲ್ಲಿ ವಿತರಿಸಲಿದ್ದು, ನಂತರದ 2-3 ದಿನ ಮನೆ ಮನೆ ಭೇಟಿ ಮೂಲಕ 0-5 ವರ್ಷದೊಳಗಿನ ಎಲ್ಲ […]

ಇಂದು ಪೋಲಿಯೋ ಭಾನುವಾರ| ಆರೋಗ್ಯ ಇಲಾಖೆಯಿಂದ 62.8 ಲಕ್ಷ ಮಕ್ಕಳಿಗೆ ಲಸಿಕೆ ಗುರಿ Read More »

ಮುನಿಸು ಮರೆತು ಮತ್ತೆ ಒಂದಾದ ಬಿಎಸ್ ವೈ ಮತ್ತು ವಿ.ಸೋಮಣ್ಣ

ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯನವರ ವಿರುದ್ದ ವಿ.ಸೋಮಣ್ಣ ಅವರು ಸೋಲುಕಂಡಿದ್ದರು. ಇದಾದ ಬಳಿಕ ಬಿ.ಎಸ್​ ಯಡಿಯೂರಪ್ಪ ಹಾಗೂ ವಿ ಸೋಮಣ್ಣ ನಡುವೆ ವೈಮನಸ್ಸು ಬೆಳೆದಿತ್ತು. ಇದೀಗ ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ನಿನ್ನೆ ಡಾಲರ್ಸ್ ಕಾಲನಿಯ ಬಿ.ಎಸ್ ಯಡಿಯೂರಪ್ಪನವರ ನಿವಾಸಕ್ಕೆ ವಿ ಸೋಮಣ್ಣ ಅವರು ಆಗಮಿಸಿದ್ದು, ಇಬ್ಬರು ಕೂಡ ಮುನಿಸು ಮರೆತು ಮತ್ತೆ ಒಂದಾಗಿದ್ದಾರೆ. ಇಬ್ಬರ ರಾಜಿ ಸಂಧಾನದಲ್ಲಿ ಎಂ.ಡಿ.ಲಕ್ಷ್ಮಿನಾರಾಯಣ್, ಶೆಟ್ಟರ್ ಯಶಸ್ವಿಯಾಗಿದ್ದಾರೆ. ಹೈಕಮಾಂಡ್​ ಮಟ್ಟದಲ್ಲಿ ಸೋಮಣ್ಣ, ಬಿಎಸ್​ವೈ

ಮುನಿಸು ಮರೆತು ಮತ್ತೆ ಒಂದಾದ ಬಿಎಸ್ ವೈ ಮತ್ತು ವಿ.ಸೋಮಣ್ಣ Read More »

ಚಿಕ್ಕಮಗಳೂರು: ಧರ್ಮಸ್ಥಳ ಯಾತ್ರಿ ಹೃದಯಾಘಾತದಿಂದ ಸಾವು

ಸಮಗ್ರ ನ್ಯೂಸ್: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರೆ ಹೊರಟಿದ್ದ ಯಾತ್ರಾರ್ಥಿ ಶೌಚಾಲಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಮೃತರನ್ನು ಬೆಂಗಳೂರಿನ ಕಲಾಸಿಪಾಳ್ಯ ನಿವಾಸಿಯಾದ ಮಧುಸೂದನ್(52) ಎಂದು ಗುರುತಿಸಲಾಗಿದೆ. ಅವರು ತನ್ನ 12 ಜನ ಸ್ನೇಹಿತರೊಂದಿಗೆ ಟಿಟಿ ವಾಹನ ಮಾಡಿಕೊಂಡು ಧರ್ಮಸ್ಥಳಕ್ಕೆ ಯಾತ್ರೆ ಹೊರಟಿದ್ದರು. ಟಿಟಿ ವಾಹನ ಕೊಟ್ಟಿಗೆಹಾರಕ್ಕೆ ಬರುತ್ತಿದ್ದಂತೆ ವಾಹನವನ್ನ ಶೌಚಾಲಯಕ್ಕೆ ನಿಲ್ಲಿಸಿದ್ದರು. ಈ ವೇಳೆ ಶೌಚಾಲಯಕ್ಕೆ ಹೋಗಿದ್ದ ಮಧುಸೂದನ್ ಗೆ ಶೌಚಾಲಯದಲ್ಲಿ ಹೃದಯಾಘಾತದಿಂದ ಬಳಲಿ ಬಿದ್ದಿದ್ದರು.

ಚಿಕ್ಕಮಗಳೂರು: ಧರ್ಮಸ್ಥಳ ಯಾತ್ರಿ ಹೃದಯಾಘಾತದಿಂದ ಸಾವು Read More »

ಮಡಿಕೇರಿಯಲ್ಲಿ ನೂತನ ಆಸ್ಪತ್ರೆ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

ಸಮಗ್ರ ನ್ಯೂಸ್: ಮಡಿಕೇರಿ ನಗರದಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಜಿಲ್ಲಾ ಆಸ್ಪತ್ರೆಯ ಕಟ್ಟಡದಿಂದ ಬಿದ್ದು ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಕೊಲ್ಕತ್ತ ಮೂಲದ ಕಾರ್ಮಿಕ ರಾಕಿಬ್ (22) ಮುಂಜಾನೆ ಆಸ್ಪತ್ರೆ ಕಿಟಕಿ ಕೆಲಸ ಮಾಡಲು ಮುಂದಾಗಿದ್ದ ಸಂದರ್ಭ ಹೊರ ಭಾಗದಲ್ಲಿ ಹಾಕಿದ್ದ ಸ್ಟೇಜ್‌ನಿಂದ ಬಿದ್ದಿದ್ದಾರೆ. 30 ಅಡಿ ಎತ್ತರದಿಂದ ಸಿಮೆಂಟ್ ನೆಲಕ್ಕೆ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಶವಗಾರಕ್ಕೆ ರವಾನಿಸಿದ್ದಾರೆ. ಸುರಕ್ಷತಾ

ಮಡಿಕೇರಿಯಲ್ಲಿ ನೂತನ ಆಸ್ಪತ್ರೆ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು Read More »

ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್

ಸಮಗ್ರ ನ್ಯೂಸ್: 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿನೋದ್ ತಾವ್ಡೆ ಸುದ್ದಿಗೋಷ್ಠಿ ನಡೆಸಿದ್ದು, ಈ ಬಾರಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಮೊದಲ ಪಟ್ಟಿಯಲ್ಲಿ ಹಲವು ಪ್ರಮುಖರಿಗೆ ಟಿಕೆಟ್ ನೀಡಲಾಗಿದೆ. ಕಳೆದ 1 ದಶಕದಿಂದ ಪ್ರಧಾನಿ ಮೋದಿ ನೇತೃತ್ವದಲ್ಲಿ ಯಶಸ್ವಿ ಆಡಳಿತ ನಡೆಸಿದ್ದೇವೆ. ಕೇಂದ್ರದಲ್ಲಿ 3ನೇ ಬಾರಿ ಮೋದಿ ನೇತೃತ್ವದಲ್ಲಿ ಬಿಜೆಪಿ ಆಡಳಿತಕ್ಕೆ ಬರಲಿದೆ ಎಂದು ವಿನೋದ್ ತಾವ್ಡೆ

ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ Read More »

ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೊಷ್ಠದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸದಸ್ಯರಾಗಿ ಪ್ರಸಾದ್ ಕಾಟೂರು

ಸಮಗ್ರ ನ್ಯೂಸ್: ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೊಷ್ಠದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸದಸ್ಯರಾಗಿ ಪ್ರಸಾದ್ ಕಾಟೂರು ಆಯ್ಕೆ. ಸುಳ್ಯ ಮಂಡಲ ಬಿಜೆಪಿಯ ಸಾಮಾಜಿಕ ಜಾಲತಾಣದ ಸಹಸಂಚಾಲಕರಾಗಿದ್ದ ಪ್ರಸಾದ್ ಕಾಟೂರು ಈ ಬಾರಿ ಜಿಲ್ಲಾ ಸಮಿತಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೊಷ್ಠದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸದಸ್ಯರಾಗಿ ಪ್ರಸಾದ್ ಕಾಟೂರು Read More »

ನವದೆಹಲಿಯಲ್ಲಿ ಸೌಜನ್ಯ ‌ತಾಯಿ‌ ಹಾಗೂ ಪ್ರತಿಭಟನಾ ನಿರತರು ಅರೆಸ್ಟ್| ಸೌಜನ್ಯಳ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಪ್ರತಿಭಟನಾಕಾರರು

ಸಮಗ್ರ ನ್ಯೂಸ್: 11 ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಕ್ಕಾಗಿ ಹತ್ಯೆಯಾದ ಬೆಳ್ತಂಗಡಿಯ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಬೇಕೆಂದು ದೆಹಲಿಗೆ ತೆರಳಿದ ಸೌಜನ್ಯ ತಾಯಿ ಮತ್ತು ಹೋರಾಟಗಾರರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಬಿಜೆಪಿ ವತಿಯಿಂದ ಬೆಳ್ತಂಗಡಿಯಲ್ಲಿ ನಡೆದ ಸೌಜನ್ಯ ನ್ಯಾಯಕ್ಕಾಗಿ ನಡೆದ ಪ್ರತಿಭಟನೆಯಲ್ಲಿ ಸಂಸದ, ಆಗಿನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸುನೀಲ್ ಕುಮಾರ್ , ಹರೀಶ್ ಪೂಂಜಾ ಇದ್ದ ವೇದಿಕೆಯಲ್ಲಿ ಭಾಗವಹಿಸಿದ್ದ ಸೌಜನ್ಯ ತಾಯಿ ಕುಸುಮಾವತಿ ಭಾಷಣದಲ್ಲಿ ನನ್ನನ್ನು ಪ್ರಧಾನಿ ಮೋದಿಯನ್ನು

ನವದೆಹಲಿಯಲ್ಲಿ ಸೌಜನ್ಯ ‌ತಾಯಿ‌ ಹಾಗೂ ಪ್ರತಿಭಟನಾ ನಿರತರು ಅರೆಸ್ಟ್| ಸೌಜನ್ಯಳ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಪ್ರತಿಭಟನಾಕಾರರು Read More »

ಮಂಗಳೂರಿನ ಅಬ್ಬಕ್ಕ ರಾಣಿ ವಿಹಾರ ನೌಕೆಯಲ್ಲಿ ಸಾಹಿತಿ ಭೀಮರಾವ್ ವಾಷ್ಠರ್ ಅವರ 48ನೇ ಜನ್ಮದಿನ ಸಂಭ್ರಮ|ಕಡಲ ಕವಿಗೋಷ್ಠಿ – ಸಾಹಿತ್ಯ ಕೃತಿ ಬಿಡುಗಡೆ – ಸಾಂಸ್ಕೃತಿಕ ಮಹಾಸಮ್ಮೇಳನ

ಸಮಗ್ರ ನ್ಯೂಸ್:ಸುಳ್ಯದ ಚಂದನ ಸಾಹಿತ್ಯ ವೇದಿಕೆ ಮತ್ತು ಕಲ್ಲೂರಾಯ ಪ್ರತಿಷ್ಠಾನ ಬನದಗದ್ದೆ ಇವರ ಜಂಟಿ ಆಶ್ರಯದಲ್ಲಿ ಕಡಲ ಕವಿಗೋಷ್ಠಿ 2024 , ಸಾಹಿತಿ ಜ್ಯೋತಿಷಿ ಎಚ್ ಭೀಮರಾವ್ ವಾಷ್ಠರ್ ರವರ 48 ನೇ ಹುಟ್ಟುಹಬ್ಬದ ಆಚರಣೆ ಪ್ರಯುಕ್ತ ಕಡಲ ಕವಿಗೋಷ್ಠಿ – ಸಾಹಿತ್ಯ ಕೃತಿ ಬಿಡುಗಡೆ – ಸಾಂಸ್ಕೃತಿಕ ಮಹಾ ಸಮ್ಮೇಳನವು ಮಂಗಳೂರಿನ ಸಮುದ್ರದ ಅಬ್ಬಕ್ಕ ರಾಣಿ ವಿಹಾರ ನೌಕೆಯಲ್ಲಿ ಅದ್ದೂರಿಯಾಗಿ ಜರುಗಿತು. ಸಮಾರಂಭದ ಸಭಾಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್ ಭೀಮರಾವ್ ವಾಷ್ಠರ್ ಅವರು

ಮಂಗಳೂರಿನ ಅಬ್ಬಕ್ಕ ರಾಣಿ ವಿಹಾರ ನೌಕೆಯಲ್ಲಿ ಸಾಹಿತಿ ಭೀಮರಾವ್ ವಾಷ್ಠರ್ ಅವರ 48ನೇ ಜನ್ಮದಿನ ಸಂಭ್ರಮ|ಕಡಲ ಕವಿಗೋಷ್ಠಿ – ಸಾಹಿತ್ಯ ಕೃತಿ ಬಿಡುಗಡೆ – ಸಾಂಸ್ಕೃತಿಕ ಮಹಾಸಮ್ಮೇಳನ Read More »

ಹಟ್ಟಿ ಗೋಲ್ಡ್ ಮೈನ್ಸ್​ನಲ್ಲಿ ಜಾಬ್ ಆಫರ್, ಈಗಲೇ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: ಹಟ್ಟಿ ಗೋಲ್ಡ್​ ಮೈನ್ಸ್​ ಕಂಪನಿ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಫಿಜಿಸಿಯನ್, ಪೀಡಿಯಾಟ್ರಿಕ್ ಸ್ಪೆಷಲಿಸ್ಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್​ 3, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹುದ್ದೆಯ ಮಾಹಿತಿ:ಫಿಜಿಸಿಯನ್-1ಪೀಡಿಯಾಟ್ರಿಕ್ ಸ್ಪೆಷಲಿಸ್ಟ್​-1 ಶೈಕ್ಷಣಿಕ ಅರ್ಹತೆ:ಹಟ್ಟಿ ಗೋಲ್ಡ್​ ಮೈನ್ಸ್​ ಕಂಪನಿ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಬಿಬಿಎಸ್,

ಹಟ್ಟಿ ಗೋಲ್ಡ್ ಮೈನ್ಸ್​ನಲ್ಲಿ ಜಾಬ್ ಆಫರ್, ಈಗಲೇ ಅರ್ಜಿ ಸಲ್ಲಿಸಿ Read More »

ಆಡಳಿತತ್ಮಾಕ ಸುಧಾರಣೆ/ ಕೇಂದ್ರ ಸರ್ಕಾರದಿಂದ ಖಾಸಗಿ ವಲಯದ ಪರಿಣತರ ನೇಮಕ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರವು ಆಡಳಿತ ಸುಧಾರಣೆ ತರುವ ನಿಟ್ಟಿನಲ್ಲಿ ಖಾಸಗಿ ವಲಯದ ಪರಿಣತರನ್ನು ಶೀಘ್ರದಲ್ಲಿ 25 ಜನರನ್ನು ನೇಮಿಸಿಕೊಳ್ಳಲಿದೆ. ವಿವಿಧ ಇಲಾಖೆಗಳ ನಿರ್ದೇಶಕರು, ಹೆಚ್ಚುವರಿ ಕಾರ್ಯದರ್ಶಿಗಳ ಸ್ಥಾನದಲ್ಲಿ ಇವರು ಕೆಲಸ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಂಪುಟ ನೇಮಕ ಸಮಿತಿ (ಎಸಿಸಿ) ಇವರ ನೇಮಕಕ್ಕೆ ಅನುಮೋದನೆ ನೀಡಿದ್ದು, ಮೂವರು ಜಂಟಿ ಕಾರ್ಯದರ್ಶಿ, 22 ನಿರ್ದೇಶಕರು ಹಾಗೂ ಉಪ ನಿರ್ದೇಶಕರ ಹುದ್ದೆಗಳಿಗೆ ಖಾಸಗಿ ವಲಯದ ಪರಿಣತರನ್ನು ನೇಮಕ ಮಾಡಲಾಗುತ್ತದೆ. ಈಗಾಗಲೇ 38 ಪರಿಣತರು 2018ರಲ್ಲಿ ಜಾರಿಯಾದ

ಆಡಳಿತತ್ಮಾಕ ಸುಧಾರಣೆ/ ಕೇಂದ್ರ ಸರ್ಕಾರದಿಂದ ಖಾಸಗಿ ವಲಯದ ಪರಿಣತರ ನೇಮಕ Read More »