Ad Widget .

20 ಮೊಬೈಲ್ ಅನ್ನ ಒಟ್ಟೊಟ್ಟಿಗೆ ಬಳಸ್ತಾರಂತೆ ಗೂಗಲ್ ಸಿಇಒ ಸುಂದರ್ ಪಿಚೈ! ಹೇಗಿದೆ ಸಾಧ್ಯ?

ಸಮಗ್ರ ನ್ಯೂಸ್: ಈ ಟೆಕ್ ಕಂಪನಿಗಳ ದೊಡ್ಡ ಬಾಸ್‌ಗಳು ತಮ್ಮ ದೈನಂದಿನ ಜೀವನದಲ್ಲಿ ತಂತ್ರಜ್ಞಾನವನ್ನು ಎಷ್ಟರ ಮಟ್ಟಿಗೆ ಬಳಸುತ್ತಾರೆ ಅಂತ ನೀವು ತಿಳಿದುಕೊಂಡರೆ ಗ್ಯಾರೆಂಟಿ ಶಾಕ್ ಆಗ್ತೀರಾ. ಬನ್ನಿ ಹಾಗಾದರೆ ಗೂಗಲ್ ಮತ್ತು ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ ಅವರು ಈ ಬಗ್ಗೆ ಇತ್ತೀಚೆಗೆ ನೀಡಿದ ಒಂದು ಸಂದರ್ಶನದಲ್ಲಿ ಏನಂತ ಹೇಳಿದ್ದಾರೆ ನೋಡಿ. ತಮ್ಮ ಟೆಕ್ ಅಭ್ಯಾಸಗಳ ಬಗ್ಗೆ ಮಾತನಾಡಿದ ಸುಂದರ್ ಪಿಚೈ ಅವರು ಹೇಳಿದ ಒಂದು ಆಶ್ಚರ್ಯಕರವಾದ ವಿಷಯವೆಂದರೆ ಅವರು ವಿವಿಧ ಕಾರಣಗಳಿಗಾಗಿ ಒಂದೇ ಬಾರಿಗೆ 20 ಕ್ಕೂ ಹೆಚ್ಚು ಫೋನ್‌ಗಳನ್ನು ಬಳಸುತ್ತಾರಂತೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಹೆಚ್ಚಿನ ಜನರು ಕೇವಲ ಒಂದು ಮೊಬೈಲ್ ಫೋನ್ ಅನ್ನು ನಿರ್ವಹಿಸಲು ಹೆಣಗಾಡುತ್ತಿರುವ ಸಮಯದಲ್ಲಿ, ಪಿಚೈ ಅವರು ಬಹಿರಂಗಪಡಿಸಿದ ಮಾತು ಬಹಳಷ್ಟು ಮಂದಿಗೆ ತುಂಬಾನೇ ಅದ್ಭುತ ಅಂತ ಅನ್ನಿಸಬಹುದು. ನಿಜವಾಗಿಯೂ ಅವರು ಇಷ್ಟೊಂದು ಫೋನ್‌ಗಳನ್ನು ಬಳಸುತ್ತಾರಂತೆ, ತನ್ನ ಕೆಲಸದ ಭಾಗವಾಗಿ ಅವರು ಎಲ್ಲಾ ಸಾಧನಗಳಲ್ಲಿ ಗೂಗಲ್ ಉತ್ಪನ್ನಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ವಿವಿಧ ಸಾಧನಗಳನ್ನು ಪರೀಕ್ಷಿಸುವ ಅಗತ್ಯವಿದೆಯಂತೆ. ಇತ್ತೀಚಿನ ತಂತ್ರಜ್ಞಾನದೊಂದಿಗೆ ಅಪ್ಡೇಟ್ ಆಗಿರಲು ಮತ್ತು ಗೂಗಲ್ ಹೊಸತನವನ್ನು ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳಲು ಅವರು ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ.

Ad Widget . Ad Widget . Ad Widget .

ಆದರೆ ಪಿಚೈ ಅವರ ತಂತ್ರಜ್ಞಾನದ ಅಭ್ಯಾಸಗಳು ಕೇವಲ ಅವರ ಫೋನ್ ಸಂಗ್ರಹದ ಬಗ್ಗೆ ಅಲ್ಲ. ಅವರ ಮಕ್ಕಳು ಸ್ಕ್ರೀನ್ ಮೇಲೆ ಎಷ್ಟು ಸಮಯವನ್ನು ಕಳೆಯುತ್ತಾರೆ ಎಂದು ಕೇಳಿದಾಗ, ಕಟ್ಟುನಿಟ್ಟಾದ ನಿಯಮಗಳಿಗಿಂತ ವೈಯಕ್ತಿಕ ಮಿತಿಗಳನ್ನು ಹೊಂದಿಸುವುದು ಮುಖ್ಯ ಎಂದು ಅವರು ಸಲಹೆ ನೀಡಿದರು. ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸುವುದನ್ನು ಅವರು ನಂಬುತ್ತಾರೆ ಎಂದು ಇದು ತೋರಿಸುತ್ತದೆ, ಅದರಲ್ಲೂ ವಿಶೇಷವಾಗಿ ಇಂದಿನ ಡಿಜಿಟಲ್ ಜಗತ್ತಿನಲ್ಲಿ ಪೋಷಕರಾದವರು ಮಾಡಬೇಕಾದ ಕೆಲಸ ಇದಾಗಿದೆ.

ತಮ್ಮ ಖಾತೆಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವ ವಿಷಯ ಬಂದಾಗ, ಪಿಚೈ ಅವರು ತಮ್ಮ ಪಾಸ್‌ವರ್ಡ್‌ಗಳನ್ನು ಆಗಾಗ್ಗೆ ಬದಲಾಯಿಸುವುದಿಲ್ಲ ಎಂದು ಒಪ್ಪಿಕೊಂಡರು. ಬದಲಿಗೆ, ಅವರು ಹೆಚ್ಚುವರಿ ಭದ್ರತೆಗಾಗಿ ಎರಡು ಅಂಶಗಳ ದೃಢೀಕರಣವನ್ನು ಅವಲಂಬಿಸಿದ್ದಾರೆ. ಅವರು ಆಧುನಿಕ ಭದ್ರತಾ ವಿಧಾನಗಳನ್ನು ನಂಬುತ್ತಾರೆ ಆದರೆ ಬಳಕೆದಾರರು ತಮ್ಮ ಸ್ವಂತ ಸುರಕ್ಷತೆಗೆ ಆನ್‌ಲೈನ್‌ನಲ್ಲಿ ಜವಾಬ್ದಾರರಾಗಿರಬೇಕು ಎಂದು ಭಾವಿಸುತ್ತಾರೆ.

ಪಿಚೈ ಅವರು ಕೃತಕ ಬುದ್ಧಿಮತ್ತೆ (ಎಐ) ಬಗ್ಗೆ ಕೆಲವು ದೊಡ್ಡ ಆಲೋಚನೆಗಳನ್ನು ಹೊಂದಿದ್ದಾರಂತೆ. ಈಗಿನ ಯುಗದಲ್ಲಿ ಎಐ ಪ್ರಮುಖ ತಂತ್ರಜ್ಞಾನವಾಗಿದೆ ಎಂದು ಅವರು ಭಾವಿಸುತ್ತಾರೆ, ಅದರ ಪರಿಣಾಮದ ಬಗ್ಗೆ ತುಂಬಾನೇ ಅರಿವಿರುವ ಪಿಚೈ ಅವರು ತಂತ್ರಜ್ಞಾನವು ಮುಂದೆ ಏನೆಲ್ಲಾ ಆಕಾರ ಪಡೆದುಕೊಳ್ಳಬಹುದು ಮತ್ತು ಅದು ಹೇಗೆ ವಿಸ್ತರಿಸುತ್ತಾ ಹೋಗುತ್ತದೆ ಎಂಬುದರ ಗಡಿಗಳನ್ನು ತಳ್ಳುವಲ್ಲಿ ವಿಶ್ವಾಸ ಇಟ್ಟಿರುವಂತಹವರು.

Leave a Comment

Your email address will not be published. Required fields are marked *