Ad Widget .

ಪುತ್ತೂರು: ಜ.14ರಿಂದ ಜ. 19ರವರೆಗೆ ಪಡುಮಲೆ ಶ್ರೀ ಉಳ್ಳಾಕುಲು ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಶ್ರೀ ದೈವಗಳ ನೇಮೊತ್ಸವ

ಸಮಗ್ರ ನ್ಯೂಸ್: ಪಡುಮಲೆ ಶ್ರೀ ಉಳ್ಳಾಕುಲು ವ್ಯಾಘ್ರಚಾಮುಂಡಿ ದೈವಸ್ಥಾನ ಪಡುಮಲೆ ಇಲ್ಲಿನ ವಾರ್ಷಿಕ ನೇಮೊತ್ಸವ ಜ.14ರಿಂದ 19ರ ವರೆಗೆ ನಡೆಯಲಿರುವುದು.

Ad Widget . Ad Widget .

ಜ.14ನೇ ಆದಿತ್ಯವಾರ ಭಂಡಾರ ತೆಗೆಯುವುದು, ಧ್ವಜಾರೋಹಣ, ಬೀರತಂಬಿಲ. 15ರಂದು ರಾತ್ರಿ ಪೂ. ಗಂಟೆ 6-00ರಿಂದ 48 ಕಾಯಿ ಗಣಪತಿ ಹೋಮ, ಪೂ. ಗಂಟೆ 9-00ರಿಂದ ಆನೆ ಚಪ್ಪರ ಏರಿಸುವುದು, ಬಳಿಕ ಮಕರ ತೋರಣ ಏರಿಸುವುದು, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಗಂಟೆ 8ರಿಂದ ಪಾಲಕ್ಕಿ ಉತ್ಸವ, ಬೀರತಂಬಿಲ.

Ad Widget . Ad Widget .

16ರಂದು ಪೂ. ಗಂಟೆ 11-00ರಿಂದ ಕಿನ್ನಿಮಾಣಿ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ಗಂಟೆ 8-00ರಿಂದ ಪಾಲಕ್ಕಿ ಉತ್ಸವ, ಬೀರ ತಂಬಿಲ. 17ರಂದು ಪೂ. ಗಂಟೆ 11ರಿಂದ ಪೂಮಾಣಿ ದೈವದ ನೇಮ, ಪ್ರಸಾದ ವಿತರಣೆ. ಅನ್ನಸಂತರ್ಪಣೆ. ರಾತ್ರಿ ಗಂಟೆ 8ರಿಂದ ಪಾಲಕ್ಕಿ ಉತ್ಸವ, ಬೀರ ತಂಬಿಲ.

18ನೇ ಗುರುವಾರ ಪೂ. ಗಂಟೆ 7ರಿಂದ ಬೆಳ್ಳಿಪ್ಪಾಡಿ ಪಡುಮಲೆ ಮನೆಯಿಂದ ಮಲರಾಯ ದೈವದ ಭಂಡಾರ ಬಂದು, ಮಲರಾಯ ದೈವದ ನೇಮ. ಪೂ. ಗಂಟೆ 11ರಿಂದ ವ್ಯಾಘ್ರಚಾಮುಂಡಿ (ರಾಜನ್) ದೈವದ ನೇಮ. ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಸಂಜೆ ಗಂಟೆ 5ರಿಂದ ಕನ್ನಡ್ಕ ತರವಾಡಿನ ದೈವಸ್ಥಾನದಿಂದ ರುದ್ರ ಚಾಮುಂಡಿ ದೈವದ ಭಂಡಾರ ಬರುವುದು. ರಾತ್ರಿ ಗಂಟೆ 7-30ರಿಂದ ಪಡುಮಲೆ-ದೊಡ್ಡಮನೆಗೆ ಅವಭೃತ ಸ್ನಾನಕ್ಕೆ ಹೋಗುವುದು, ಕಟ್ಟೆಪೂಜೆ, ಧ್ವಜಾವರೋಹಣ, ರುದ್ರಾಂಡಿ ದೈವದ ನೇಮ, ನವಕಾಭಿಷೇಕ, ಮಂತ್ರಾಕ್ಷತೆ, ಬಳಿಕ ಗುಳಿಗ ದೈವದ ನೇಮ.

19ನೇ ಶುಕ್ರವಾರ ಪೂ. ಗಂಟೆ 10-00ರಿಂದ ಪಡುಮಲೆ ದೇವಸ್ಥಾನದ ಪಿಲಿಮಾಡದ ವಠಾರದಲ್ಲಿ ವ್ಯಾಘ್ರಚಾಮುಂಡಿ ದೈವದ ನೇಮ ನಡೆಯಲಿದೆ.

Leave a Comment

Your email address will not be published. Required fields are marked *