ನ್ಯೂಇಯರ್ ಪಾರ್ಟಿಯಲ್ಲಿ ಗಲಾಟೆ… ಮೂಗನ್ನೆ ಕಚ್ಚಿತೆಗೆದ ಭೂಪ!

ಸಮಗ್ರ ನ್ಯೂಸ್: ಹೊಸ ವರ್ಷಾಚರಣೆ ವೇಳೆ ಕುಡಿದು ಒಂದಲ್ಲಾ ಒಂದು ರೀತಿಯಲ್ಲಿ ಅನಾಹುತ ಮಾಡಿಕೊಳ್ಳುವುದಂತು ಇನ್ನೂ ನಿಂತಿಲ್ಲ. ಬೆಂಗಳೂರಿನಲ್ಲಿ ಒಂದು ತರ ಆದರೆ ಮಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದು ಯುವಕನೊಬ್ಬನ ಮೂಗನ್ನೇ ಕಚ್ಚಿ ಕಿತ್ತು ಹಾಕಿದ ಘಟನೆ ನಡೆದಿದೆ.

Ad Widget ... ..

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮದಲ್ಲಿ ಹೊಸ ವರ್ಷಾಚರಣೆಯ ಪ್ರಯುಕ್ತ ಪಾರ್ಟಿ ನಡೆಸಲಾಗುತ್ತಿತ್ತು. ಈ ವೇಳೆ ಕುಡಿದ ಮತ್ತಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೂಲದ ರಾಕೇಶ್ ಮತ್ತು ಉಲ್ಪೆ ಗ್ರಾಮದ ನಿವಾಸಿ ದೀಕ್ಷಿತ್ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಇಬ್ಬರ ನಡುವೆ ಆರಂಭವಾದ ಜಗಳ ವಿಕೋಪಕೆ ತಿರುಗಿದಾಗ ರಾಕೇಶ್ ದೀಕ್ಷಿತ್​ನ ಮೂಗನ್ನು ಕಚ್ಚಿ ಅರ್ಧ ಭಾಗವನ್ನೇ ಕಿತ್ತು ಹಾಕಿದ್ದಾನೆ. ಗಾಯಾಳು ದೀಕ್ಷಿತ್​ನನ್ನು ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ವಿಚಾರವಾಗಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Ad Widget

Leave a Comment

Your email address will not be published. Required fields are marked *