November 2023

ಕೈಯಲ್ಲಲ್ಲ, ಬೆನ್ನಲ್ಲಿ ಕ್ಯಾಚ್ ಹಿಡಿದು ತಂಡ ಗೆಲ್ಲಿಸಿದ ವಿಕೆಟ್ ಕೀಪರ್| ಹೀಗೂ ಕ್ರಿಕೆಟ್ ಆಡ್ಬೂದು..!

ಸಮಗ್ರ ನ್ಯೂಸ್: 2023ರ ಐಸಿಸಿ ವಿಶ್ವಕಪ್‌’ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತವಾಗಿ ಆಟವಾಡಿ, ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದರು. ಈ ಮೂಲಕ ಅಸಾಧ್ಯವಾದ ಜಯವನ್ನು ಸಾಧಿಸಿದ್ದರು. ಈ ಪಂದ್ಯದ ಸಂದರ್ಭದಲ್ಲಿ ಗ್ಲೆನ್ ಮ್ಯಾಕ್ಸ್‌’ವೆಲ್ ಕಾಲಿಗೆ ಗಾಯವಾಗಿತ್ತು. ಆದರೆ ತಂಡದ ಗೆಲುವಿಗಾಗಿ ಹೋರಾಡಿದ ಅವರು ಛಲ ಬಿಡದೆ ಮೈದಾನದಲ್ಲಿ ದೃಢವಾಗಿ ನಿಂತರು. ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಪವಾಡವೇ ಸರಿ. ಇದೀಗ ಇಂತಹದ್ದೇ ಸನ್ನಿವೇಶ ಫೀಲ್ಡಿಂಗ್’ನಲ್ಲಿ ನಡೆದಿದೆ. ಸದ್ಯ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ […]

ಕೈಯಲ್ಲಲ್ಲ, ಬೆನ್ನಲ್ಲಿ ಕ್ಯಾಚ್ ಹಿಡಿದು ತಂಡ ಗೆಲ್ಲಿಸಿದ ವಿಕೆಟ್ ಕೀಪರ್| ಹೀಗೂ ಕ್ರಿಕೆಟ್ ಆಡ್ಬೂದು..! Read More »

ಮಡಿಕೇರಿ: ಸರ್ಕಾರಿ ನೌಕರರು ಸಾರ್ವಜನಿಕರಿಗೆ ಸ್ಪಂದಿಸಿ: ಲೋಕಾಯುಕ್ತ ಎಸ್‍ಪಿ ಸುರೇಶ್ ಬಾಬು

ಸಮಗ್ರ ನ್ಯೂಸ್: ನ.10 ಸರ್ಕಾರಿ ನೌಕರರು ಸಾರ್ವಜನಿಕರಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಬೇಕು. ಅದನ್ನು ಬಿಟ್ಟು ಸತಾಯಿಸಬಾರದು ಎಂದು ಲೋಕಾಯುಕ್ತ ಎಸ್‍ಪಿ ಸುರೇಶ್ ಬಾಬು ಅವರು ಸಲಹೆ ಮಾಡಿದ್ದಾರೆ. ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನ. 10 ರಂದು ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಿ ಅವರ ಸಮಸ್ಯೆಗಳನ್ನು ಆಲಿಸಿ ಬಳಿಕ ಅವರು ಮಾತನಾಡಿದರು.ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತುಂಬಾ ಎಚ್ಚರವಹಿಸಿ ನಿಯಮಾನುಸಾರಿ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕ ಸೇವೆಯನ್ನು ಸರ್ಕಾರದ ಸೇವೆ ಎಂದು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ಸರ್ಕಾರಿ ಸೇವೆಗೆ

ಮಡಿಕೇರಿ: ಸರ್ಕಾರಿ ನೌಕರರು ಸಾರ್ವಜನಿಕರಿಗೆ ಸ್ಪಂದಿಸಿ: ಲೋಕಾಯುಕ್ತ ಎಸ್‍ಪಿ ಸುರೇಶ್ ಬಾಬು Read More »

ಬಿಡದಿಯವರೆಗೆ ರೈಲು/ ಸಮಗ್ರ ಯೋಜನಾ ವರದಿಗೆ ಸಿದ್ಧತೆ

ಸಮಗ್ರ ನ್ಯೂಸ್: ಬೆಂಗಳೂರಿನ ಬಿಡದಿಯವರೆಗೆ ನೇರಳೆ ಮಾರ್ಗ ಮೆಟ್ರೋ ರೈಲು ವಿಸ್ತರಣೆ ಮಾಡುವ ವಿಚಾರವಾಗಿ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಸೂಚಿಸಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಬಿಡದಿ ಪ್ರದೇಶದಲ್ಲಿ ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗ ಮಾಡುತ್ತಿದ್ದು, ಅವರ ಪ್ರಯಾಣಕ್ಕೆ ಅನುಕೂಲವಾಗಲಿ ಎಂಬ ಆಲೋಚನೆಯಿಂದ ಮೆಟ್ರೋ ವಿಸ್ತರಣೆಯ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಬಿಡದಿ ಪ್ರಾಧಿಕಾರ ರದ್ದು ಮಾಡಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಬದಲಾಯಿಸಲು ಆದೇಶ ನೀಡಲಾಗಿದೆ ಎಂದು ಅವರು ಹೇಳಿದರು.

ಬಿಡದಿಯವರೆಗೆ ರೈಲು/ ಸಮಗ್ರ ಯೋಜನಾ ವರದಿಗೆ ಸಿದ್ಧತೆ Read More »

ಪುತ್ತೂರು: ಪುತ್ತಿಲ ಪರಿವಾರದ ಕಚೇರಿ ಎದುರು ತಲವಾರು ಪ್ರದರ್ಶನ| ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ ಆರೋಪ| 9 ಮಂದಿ ವಿರುದ್ಧ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಮುಕ್ರಂಪಾಡಿಯಲ್ಲಿ ಹೊಂದಿರುವ ಪುತ್ತಿಲ ಪರಿವಾರದ ಕಚೇರಿಯ ಮುಂಭಾಗದಲ್ಲಿ ಯುವಕನೋರ್ವ ನಾಲ್ವರು ಸಹಚರರೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿ ಕಿರುಚಾಡಿದ ಘಟನೆ ನಡೆದಿದೆ. ಅರುಣ್ ಪುತ್ತಿಲ ಬೆಂಬಲಿಗರಾದ ಮನೀಶ್ ಕುಲಾಲ್ ಬನ್ನೂರು ಅವರನ್ನು ಗುರಿಯಾಗಿಟ್ಟುಗೊಂಡು ದಿನೇಶ್ ಪಂಜಿಗ ಎಂಬಾತ ನಾಲ್ವರು ಯುವಕರೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿದ್ದರು. ಪುತ್ತಿಲ ಕಚೇರಿಯಲ್ಲಿ ಕೃಷ್ಣಪ್ರಸಾದ್ ಶೆಟ್ಟಿ ಮತ್ತಿತರರು ಇದ್ದರು. ಮನೀಶ್ ಕುಲಾಲ್ ಕಚೇರಿಯಲ್ಲಿ ಇರಲಿಲ್ಲ. ಮಾಹಿತಿ ತಿಳಿದ ಮನೀಶ್ ಕುಲಾಲ್ ಪೊಲೀಸರಿಗೆ ಮಾಹಿತಿ

ಪುತ್ತೂರು: ಪುತ್ತಿಲ ಪರಿವಾರದ ಕಚೇರಿ ಎದುರು ತಲವಾರು ಪ್ರದರ್ಶನ| ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ ಆರೋಪ| 9 ಮಂದಿ ವಿರುದ್ಧ ಪ್ರಕರಣ ದಾಖಲು Read More »

ರಾಜ್ಯ ಬಿಜೆಪಿಗೆ ಹೊಸ ಸಾರಥಿ| ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ನೇಮಕ

ಸಮಗ್ರ ನ್ಯೂಸ್: ಶಿಕಾರಿಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರನ್ನು ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಅಧ್ಯಕರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಕಳೆದ ಹಲವು ವರ್ಷಗಳಿಂದ ರಾಜ್ಯಾಧ್ಯಕ್ಷರಾಗಿದ್ದ ಸಂಸದ ನಳಿನ್ ಕುಮಾರ್ ಅವರಿಗೆ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಶಾಸಕ ವಿಜಯೇಂದ್ರ ಯಡಿಯೂರಪ್ಪ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ

ರಾಜ್ಯ ಬಿಜೆಪಿಗೆ ಹೊಸ ಸಾರಥಿ| ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ನೇಮಕ Read More »

ಸಹಕಾರಿ ಸಂಘಗಳು ‘ಬ್ಯಾಂಕ್’ ಪದ ಬಳಕೆ ಮಾಡುವಂತಿಲ್ಲ – RBI

ಸಮಗ್ರ ನ್ಯೂಸ್: ಸಹಕಾರಿ ಸಂಘಗಳು ಬ್ಯಾಂಕ್ ಹೆಸರನ್ನು ಬಳಸಬಾರದು ಎಂದು ಆರ್‌ಬಿಐ ಪತ್ರಿಕೆಯ ಜಾಹೀರಾತಿನ ಮೂಲಕ ಸ್ಪಷ್ಟಪಡಿಸಿದೆ. ಈ ಬಗ್ಗೆ ಜಾಹೀರಾತು ನೀಡಿರುವ ಆರ್‌ಬಿಐನ ಸಹಕಾರಿ ಸಂಘಗಳಲ್ಲಿನ ಹೂಡಿಕೆಗೆ ಯಾವುದೇ ರಕ್ಷಣೆ ಇಲ್ಲ ಎಂದು ಹೇಳುತ್ತದೆ. ಸಚಿವ ವಿ.ಎನ್.ವಾಸವನ್ ಮಾತನಾಡಿ, ಸಹಕಾರಿ ಸಂಘಗಳ ಹೆಸರನ್ನು ಬ್ಯಾಂಕ್ ಎಂದು ಬಳಸದಂತೆ ರಿಸರ್ವ್ ಬ್ಯಾಂಕ್ ಈ ಹಿಂದೆಯೇ ನಿರ್ದೇಶನ ನೀಡಿದೆ. ಹೊಸ ಅಧಿಸೂಚನೆಯನ್ನು ಸಹಕಾರ ಇಲಾಖೆ ಪರಿಶೀಲಿಸಲಿದೆ ಎಂದು ಸಚಿವರು ಹೇಳಿದರು. ಆರ್‌ಬಿಐ ವಿರುದ್ಧ ರಾಜ್ಯವೂ ನ್ಯಾಯಾಲಯದ ಮೊರೆ ಹೋಗಿತ್ತು.

ಸಹಕಾರಿ ಸಂಘಗಳು ‘ಬ್ಯಾಂಕ್’ ಪದ ಬಳಕೆ ಮಾಡುವಂತಿಲ್ಲ – RBI Read More »

ಕುಕ್ಕೆ ಸುಬ್ರಹ್ಮಣ್ಯ: ಮಾಧ್ಯಮಗಳ ವರದಿ ಬೆನ್ನಲ್ಲೇ ಕುಕ್ಕೆಗೆ ಮರಳಿದ ದೇವಳದ ಒಂದು ಕಾರು| ಮತ್ತೊಂದು ಕಾರು ಮರಳಿಸಲು ಸಿಕ್ಕಿಲ್ಲ‌ ಮುಹೂರ್ತ!!

ಸಮಗ್ರ ನ್ಯೂಸ್: ಮಾಧ್ಯಮಗಳ ಸತತ ವರದಿಯ ಬಳಿಕ ಕೊನೆಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಕೆಗೆ ಖರೀದಿಸಿದ್ದ ಇನ್ನೋವಾ ಕಾರು ಮತ್ತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮರಳಿದೆ. 4 ವರ್ಷಗಳಿಂದ ಈ ಕಾರು ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಓಡಾಡುತ್ತಿದ್ದು ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ಆದರೆ ಎರಡು ವರ್ಷ ಹಿಂದೆ ಖರೀದಿಸಿದ್ದ ಮತ್ತೊಂದು ಕಾರನ್ನು ಧಾರ್ಮಿಕ ದತ್ತಿ ಇಲಾಖೆಯಲ್ಲಿ ಇರಿಸಿಕೊಂಡಿದೆ. ನಾಲ್ಕು ವರ್ಷಗಳ ಹಿಂದೆ ಕಾರು ಖರೀದಿ ಮಾಡಿದ ಎರಡೇ ತಿಂಗಳಲ್ಲಿ ಕಾರನ್ನು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು, ಸರಕಾರದ

ಕುಕ್ಕೆ ಸುಬ್ರಹ್ಮಣ್ಯ: ಮಾಧ್ಯಮಗಳ ವರದಿ ಬೆನ್ನಲ್ಲೇ ಕುಕ್ಕೆಗೆ ಮರಳಿದ ದೇವಳದ ಒಂದು ಕಾರು| ಮತ್ತೊಂದು ಕಾರು ಮರಳಿಸಲು ಸಿಕ್ಕಿಲ್ಲ‌ ಮುಹೂರ್ತ!! Read More »

ಹಾಲಿನ ದರ ಹೆಚ್ಚಳ/ ಪ್ರಸ್ತಾವನೆ ಸಲ್ಲಿಸಿದ ಪಶು ಸಂಗೋಪನಾ ಇಲಾಖೆ

ಸಮಗ್ರ ನ್ಯೂಸ್: ಪ್ರತಿ ಆರು ತಿಂಗಳಿಗೊಮ್ಮೆ ಶೇಕಡಾ 5ರಷ್ಟು ಹಾಲಿನ ದರ ಏರಿಕೆಗೆ ಅವಕಾಶ ನೀಡಬೇಕು ಮತ್ತು ಹಾಲಿನ ದರ ಏರಿಕೆಯನ್ನು ಕರ್ನಾಟಕ ಹಾಲು ಮಹಾಮಂಡಳಕ್ಕೆ ಅನುಮತಿ ನೀಡಬೇಕು ಎಂದು ರಾಜ್ಯ ಪಶು ಸಂಗೋಪನಾ ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯದ ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿ ಹಾಲಿನ ದರ ಹೆಚ್ಚಳಕ್ಕೆ ಅನುಮತಿ ನೀಡಬೇಕು ಎಂದು ಕೋರಲಾಗಿದೆ. ಕೆಎಂಎಫ್ ಹಾಲಿನ ಪುಡಿ ಪೂರೈಸುತ್ತಿರುವ ಕ್ಷೀರಭಾಗ್ಯ ಯೋಜನೆಯಲ್ಲಿ ಪ್ರತಿ ಕೆ.ಜಿ. ಹಾಲಿನ ಪುಡಿಗೆ 300 ರೂಪಾಯಿಗಳನ್ನು ನೀಡಲಾಗುತ್ತಿದ್ದು,

ಹಾಲಿನ ದರ ಹೆಚ್ಚಳ/ ಪ್ರಸ್ತಾವನೆ ಸಲ್ಲಿಸಿದ ಪಶು ಸಂಗೋಪನಾ ಇಲಾಖೆ Read More »

ಹಾಸನಾಂಬೆ ದೇಗುಲದಲ್ಲಿ ಕರೆಂಟ್ ಅವಾಂತರ..!ಕರೆಂಟ್ ಶಾಕ್ ಗೆ ಕುಸಿದು ಬಿದ್ದ ಜನ

ಸಮಗ್ರ ಸಮಾಚಾರ: ಹಾಸನದ ಹಾಸನಾಂಬೆ ದೇವಾಲಯ ಬಳಿ ಕರೆಂಟ್ ಶಾಕ್ ವಿಚಾರವಾಗಿ ಅಲ್ಲೋಲ ಕಲ್ಲೋಲವಾಗಿದೆ. ದಿಢೀರ್ ನೂಕು ನುಗ್ಗಲು ಆರಂಭವಾಗಿದೆ. ಧರ್ಮ‌ ದರ್ಶನ ಸರತಿ ಸಾಲಿನ ಬಳಿ ಮಹಿಳೆಯರು ನರಳಾಡುತ್ತಿದ್ದಾರೆ. ಹಾಸನಾಂಬೆ ದರ್ಶನಕ್ಕೆಂದು ತೆರಳಿದ್ದ ಭಕ್ತರಿಗೆ ಕರೆಂಟ್​ ಶಾಕ್​ ತಗುಲಿದೆ. ಕೆಲವರಿಗೆ ಕರೆಂಟ್ ಶಾಕ್ ಆಗಿ ಕುಸಿದು ಬಿದ್ದು ಅವಾಂತರ ಉಂಟಾಗಿದೆ. ಒಬ್ಬರ ಮೇಲೆ ಒಬ್ಬರು ಬಿದ್ದು ಓಡಿದ ಮಹಿಳೆಯರಿಂದ ಕಾಲ್ತುಳಿತ ಕೂಡ ಉಂಟಾಗಿದೆ. ಇದರಿಂದಾಗಿ ಹಲವಾರು ಮಹಿಳೆಯರು ನರಳಾಡುವಂತಾಗಿದೆ. ಹಾಸನಾಂಬೆ ದರ್ಶನಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತರು

ಹಾಸನಾಂಬೆ ದೇಗುಲದಲ್ಲಿ ಕರೆಂಟ್ ಅವಾಂತರ..!ಕರೆಂಟ್ ಶಾಕ್ ಗೆ ಕುಸಿದು ಬಿದ್ದ ಜನ Read More »

ಇಂದು ಟಿಪ್ಪು ಜಯಂತಿ/ ಶ್ರೀರಂಗಪಟ್ಟಣದಲ್ಲಿ ಬಿಗುಭದ್ರತೆ

ಸಮಗ್ರ ನ್ಯೂಸ್: ಸರಕಾರದಿಂದ ಅಧಿಕೃತವಾಗಿ ಟಿಪ್ಪು ಜಯಂತಿ ಆಚರಣೆ ಇಲ್ಲದಿದ್ದರೂ, ಇಂದು ಶ್ರೀರಂಗಪಟ್ಟಣದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತಿದೆ. ಟಿಪ್ಪು ವಕ್ಫ್ ಎಸ್ಟೇಟ್‍ನಿಂದ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದ್ದು, ರಾಜ್ಯದ ಹಲವು ಜಿಲ್ಲೆಗಳಿಂದ ಜನರು ಭಾಗವಹಿಸುವ ನಿರೀಕ್ಷೆ ಇದೆ. ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಕೋಮು ಸಂಘರ್ಷದ ಭೀತಿ ಎದುರಾಗಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶ್ರೀರಂಗಪಟ್ಟಣದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 11ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ತಿಳಿಸಿದ್ದಾರೆ.

ಇಂದು ಟಿಪ್ಪು ಜಯಂತಿ/ ಶ್ರೀರಂಗಪಟ್ಟಣದಲ್ಲಿ ಬಿಗುಭದ್ರತೆ Read More »