November 2023

ಸುಳ್ಯ: ಮದ್ಯದ ನಶೆಯಲ್ಲಿ ಹೆತ್ತವರ ಮೇಲೆ ಕತ್ತಿ ಬೀಸಿದ ಪುತ್ರ| ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸರು

ಸಮಗ್ರ ನ್ಯೂಸ್: ಕುಡಿತದ ನಶೆಯಲ್ಲಿ ಹೆತ್ತ ತಂದೆ ತಾಯಿ ಮೇಲೆ‌ ಮಗನೋರ್ವ ಕತ್ತಿಬೀಸಿದ ಘಟನೆ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಪಣೆಯಲ್ಲಿ ನ.20ರ ರಾತ್ರಿ ನಡೆದಿದೆ. ಕೊಡಿಯಾಲ ನಿವಾಸಿಗಳಾದ ಮಂಜುನಾಥ್, ಧರ್ಮಾವತಿ ಗಾಯಗೊಂಡ ದಂಪತಿಗಳು ಎಂದು ತಿಳಿದುಬಂದಿದೆ. ಮಗ ದೇವಿ ಪ್ರಸಾದ್ ಎಂಬಾತ ಕುಡಿದ ಮತ್ತಿನಿಂದ ಜಾಗದ ವಿಚಾರವಾಗಿ ತಕರಾರು ಎದ್ದು ತಂದೆ ತಾಯಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಮಗನನ್ನು ಪೊಲೀಸರು ಬಂದಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ತಂದೆ-ತಾಯಿಯನ್ನು ಮಂಗಳೂರಿನ […]

ಸುಳ್ಯ: ಮದ್ಯದ ನಶೆಯಲ್ಲಿ ಹೆತ್ತವರ ಮೇಲೆ ಕತ್ತಿ ಬೀಸಿದ ಪುತ್ರ| ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸರು Read More »

ಮಗಳನ್ನು ಪ್ರೀತಿಸಿದಕ್ಕೆ ಪ್ರಿಯಕರನ ಕೊಂದ ಅಪ್ಪ

ಸಮಗ್ರ ಸಮಾಚಾರ: ಬೆಂಗಳೂರಿನಲ್ಲಿ ಮಗಳ ಮರ್ಯಾದೆ ಉಳಿಸಲು ತಂದೆಯೆ ಪ್ರಿಯಕರನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.ಮಗಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಪಾಗಲ್ ಪ್ರೇಮಿಯ ಉಸಿರನ್ನ ಯುವತಿಯ ತಂದೆ ನಿಲ್ಲಿಸಿದ್ದಾರೆ. ಡೇವಿಡ್ ಕೊಲೆಯಾದ ಯುವಕ. ಮಂಜುನಾಥ್ ಎಂಬವರ ಮಗಳನ್ನು ಡೇವಿಡ್ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಇದೇ ವಿಚಾರವಾಗಿ ಒಂದೂವರೆ ವರ್ಷದ ಹಿಂದೆ ರಾಜಿ ಪಂಚಾಯ್ತಿಯೂ ನಡೆದಿತ್ತು. ಮಗಳ ತಂಟೆಗೆ ಬರದಂತೆ ಡೇವಿಡ್​ಗೆ ಎಚ್ಚರಿಕೆ ನೀಡಲಾಗಿತ್ತು. ಆದ್ರೂ ಡೇವಿಡ್ ತನ್ನ ಚಾಳಿಯನ್ನು ನಿಲ್ಲಿಸಿರಲಿಲ್ಲ. ಮದುವೆ ಮಾಡಿಕೊಡಿ ಇಲ್ಲವಾದ್ರೆ ಖಾಸಗಿ ಫೋಟೋಗಳನ್ನು ರಿವೀಲ್

ಮಗಳನ್ನು ಪ್ರೀತಿಸಿದಕ್ಕೆ ಪ್ರಿಯಕರನ ಕೊಂದ ಅಪ್ಪ Read More »

ಮಾದಕ ವಸ್ತು ಮಾರಾಟ ಮಾಡುತಿದ್ದ ಇಬ್ಬರ ಬಂಧನ

ಸಮಗ್ರ ನ್ಯೂಸ್: ಮಡಿಕೇರಿ – ಮಂಗಳೂರು ರಸ್ತೆಯಲ್ಲಿ ನಿಷೇಧಿತ MDMA ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಮಡಿಕೇರಿ ನಗರ ಪೊಲೀಸ್ ತನಿಖಾ ತಂಡ ದಾಳಿ ನಡೆಸಿದ ಘಟನೆ ನ. 19ರಂದು ವರದಿಯಾಗಿದೆ. ಕುಂಜಿಲ ನಿವಾಸಿ ನೌಫಲ್ (25) ಮತ್ತು ಎಮ್ಮೆಮಾಡು ಪೈಸಾರಿ ನಿವಾಸಿ ಸಾದಿಕ್ (32) ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಬ್ಬರು ಈ ಸಂದರ್ಭ ಆರೋಪಿಗಳನ್ನು ದಸ್ತಗಿರಿ ಮಾಡಿ 7.46 ಗ್ರಾಂ. MDMA ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ

ಮಾದಕ ವಸ್ತು ಮಾರಾಟ ಮಾಡುತಿದ್ದ ಇಬ್ಬರ ಬಂಧನ Read More »

ಶ್ರೀಲಂಕಾ ಜೈಲಿನಿಂದ ಬಿಡುಗಡೆಯಾದ ಮೀನುಗಾರರು/ ಚೆನ್ನೈಗೆ ಆಗಮನ

ಸಮಗ್ರ ನ್ಯೂಸ್: ಶ್ರೀಲಂಕಾ ಜಲಪ್ರದೇಶಕ್ಕೆ ಅಕ್ರಮ ಪ್ರವೇಶದ ಹಿನ್ನಲೆಯಲ್ಲಿ ಬಂಧಿತರಾಗಿದ್ದ ಮೀನುಗಾರರನ್ನು ಲಂಕಾ ಸರ್ಕಾರ ಬಿಡುಗಡೆ ಮಾಡಿದ್ದು, ಅವರು ಇಂದು ಚೆನ್ನೈಗೆ ಆಗಮಿಸಿದರು. ಅಕ್ಟೋಬರ್ 28 ಹಾಗೂ ನವೆಂಬರ್ 14ರಂದು ಮೀನುಗಾರಿಕೆಗೆ ತೆರಳಿದ್ದ ಒಟ್ಟು 37 ಮಂದಿಯನ್ನು ಶ್ರೀಲಂಕಾದ ಅಧಿಕಾರಿಗಳು ಬಂಧಿಸಿದ್ದರು. ಇವರ ಬಿಡುಗಡೆಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಮೀನುಗಾರಿಕೆ ಇಲಾಖೆ ಮಧ್ಯಸ್ಥಿಕೆ ವಹಿಸಿ, ಬಿಡುಗಡೆಗೆ ಶ್ರಮವಹಿಸಿತ್ತು. ಇಂದು ಚೆನ್ನೈಗೆ ಬಂದಿಳಿದ ಮೀನುಗಾರರನ್ನು ತಮಿಳುನಾಡು ಬಿಜೆಪಿಯ ನಾಯಕರು ಬರಮಾಡಿಕೊಂಡರು. ನಂತರ ಅವರು ರಾಮೇಶ್ವರಂಗೆ ತೆರಳಿದರು.

ಶ್ರೀಲಂಕಾ ಜೈಲಿನಿಂದ ಬಿಡುಗಡೆಯಾದ ಮೀನುಗಾರರು/ ಚೆನ್ನೈಗೆ ಆಗಮನ Read More »

ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಹಿಂದೆ ಇತ್ತು ಕುಡ್ಲದ ಬೆಡಗಿಯ ಕರಾಮತ್ತು| ತಂಡದ ಮ್ಯಾನೇಜರ್ ಮಂಗಳೂರಿನ ಊರ್ಮಿಳಾ ಸ್ಟೋರಿ ಇಲ್ಲಿದೆ…

ಸಮಗ್ರ ನ್ಯೂಸ್: ಅಜೇಯ ಭಾರತ ತಂಡವನ್ನು ಸೋಲಿಸಿ ಸತತ ಆರನೇ ಬಾರಿಗೆ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೆಜರ್ ಕರಾವಳಿ ಮೂಲದ ಯುವತಿ. ಮಂಗಳೂರು ಸಮೀಪದ ಕಿನ್ನಿಗೋಳಿ ಮೂಲದ ಊರ್ಮಿಳಾ ರೊಸಾರಿಯೊ ಕ್ರಿಕೆಟ್ ಆಸ್ಟೇಲಿಯಾ ತಂಡದ ಮ್ಯಾನೇಜರ್. 34 ವರ್ಷದ ಊರ್ಮಿಳಾ ಮಂಗಳೂರು ಸಮೀಪದ ಕಿನ್ನಿಗೋಳಿ ಮೂಲದ ಐವಿ ಮತ್ತು ವ್ಯಾಲೆಂಟೈನ್ ರೊಸಾರಿಯೋ ದಂಪತಿಯ ಪುತ್ರಿ. ಸದ್ಯ ಆಕೆಯ ತಂದೆ ತಾಯಿ ಏಳು ವರ್ಷಗಳ ಹಿಂದೆ ಭಾರತಕ್ಕೆ ಮರಳಿದರು ಮತ್ತು ಸಕಲೇಶಪುರದಲ್ಲಿ ನೆಲೆಸಿದ್ದಾರೆ.ಊರ್ಮಿಳಾ ರೊಸಾರಿಯೋ ಕಾರ್ನೆಗೀ

ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಹಿಂದೆ ಇತ್ತು ಕುಡ್ಲದ ಬೆಡಗಿಯ ಕರಾಮತ್ತು| ತಂಡದ ಮ್ಯಾನೇಜರ್ ಮಂಗಳೂರಿನ ಊರ್ಮಿಳಾ ಸ್ಟೋರಿ ಇಲ್ಲಿದೆ… Read More »

‘ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ!!’ | ಖರ್ಗೆ ಅಚಾತುರ್ಯದ ಮಾತುಗಳು ಫುಲ್ ವೈರಲ್

ಸಮಗ್ರ ನ್ಯೂಸ್: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾಷಣದಲ್ಲಿ ರಾಜೀವ್ ಗಾಂಧಿಯನ್ನು ಉಲ್ಲೇಖಿಸುವ ಬದಲು ರಾಹುಲ್ ಗಾಂಧಿ ಅವರನ್ನು ತಪ್ಪಾಗಿ ಹೆಸರಿಸಿದ್ದಾರೆ ಎಂದು ಬಿಜೆಪಿ ಸೋಮವಾರ ಲೇವಡಿ ಮಾಡಿದೆ. ರಾಜಸ್ಥಾನದ ಅನುಪ್ಗಢದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಯಂತಹ ನಾಯಕರು ದೇಶದ ಏಕತೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ ಎಂದು ತಪ್ಪಾಗಿ ಹೇಳಿದ್ದಾರೆ. ವೇದಿಕೆಯಲ್ಲಿದ್ದ ಜನರು ಖರ್ಗೆ ಅವರ ತಪ್ಪಿನ ಬಗ್ಗೆ ಎಚ್ಚರಿಸಿದಾಗ, ಅವರು ತಮ್ಮನ್ನು ಸರಿಪಡಿಸಿಕೊಂಡರು ಮತ್ತು ಅವರು

‘ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ!!’ | ಖರ್ಗೆ ಅಚಾತುರ್ಯದ ಮಾತುಗಳು ಫುಲ್ ವೈರಲ್ Read More »

ರಸಗುಲ್ಲಾ ಶಾರ್ಟೆಜ್/ ಮದುವೆ ಮನೆಯಲ್ಲಿ ಹೊಡೆದಾಟ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ನಡೆದ ಮದುವೆ ಕಾರ್ಯಕ್ರಮದಲ್ಲಿ ರಸಗುಲ್ಲಾ ಕಡಿಮೆಯಾಯಿತೆಂದು ಬಡಿದಾಡಿಕೊಂಡ ಘಟನೆ ನಡೆದಿದೆ. ಇದರಿಂದಾಗಿ ಮಹಿಳೆಯರು ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಶಂಸಾಬಾದ್‍ನ ಬ್ರಿಜ್ಛಾನ್ ಕುಶ್ವಾಹಾ ಅವರ ನಿವಾಸದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದು, ಮದುವೆಗೆ ರಸಗುಲ್ಲಾ ಮಾಡಿಸಲಾಗಿತ್ತು. ಆದರೆ ರಸಗುಲ್ಲಾ ಶಾರ್ಟೆಜ್ ಆಗಿತ್ತು. ಈ ಕುರಿತು ಸಂಬಂಧಿಕರೊಬ್ಬರು ರಸಗುಲ್ಲಾ ಕಡಿಮೆಯಾಗಿದೆ ಎಂದು ಜೋರಾಗಿ ಕೂಗಿ ಹೇಳಿದ್ದು ಜಗಕ್ಕೆ ಕಾರಣವಾಗಿತ್ತು. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಶಂಸಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸಗುಲ್ಲಾ ಶಾರ್ಟೆಜ್/ ಮದುವೆ ಮನೆಯಲ್ಲಿ ಹೊಡೆದಾಟ Read More »

ಅಯೋಧ್ಯಾ ರಾಮಮಂದಿರಕ್ಕೆ ಅರ್ಚಕರ ನೇಮಕಾತಿ/ ಸಲ್ಲಿಕೆಯಾದ ಅರ್ಜಿಗಳು 3000

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ 2024ರ ಜನವರಿ 22ರಂದು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳನ್ನು ಮಾಡಲಾಗುತ್ತಿದೆ, ಈ ಹಿನ್ನಲೆಯಲ್ಲಿ ರಾಮಮಂದಿರಕ್ಕೆ ಅರ್ಚಕರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇಲ್ಲಿಯವರೆಗೆ ಮೂರು ಸಾವಿರ ಅರ್ಜಿಗಳ ಸಲ್ಲಿಕೆಯಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅರ್ಚಕ ಹುದ್ದೆಯ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು, ಸಲ್ಲಿಕೆಯಾದ ಮೂರು ಸಾವಿರ ಅರ್ಜಿಗಳ ಪೈಕಿ, ಆರ್ಹತೆಯ ಆಧಾರದ ಮೇಲೆ 200 ಮಂದಿಯನ್ನು ಸಂದರ್ಶನಕ್ಕೆ ಶಾರ್ಟ್‍ಲಿಸ್ಟ್ ಮಾಡಲಾಗಿದೆ. ಅಂತಿಮವಾಗಿ 20 ಮಂದಿಯನ್ನು ಆಯ್ಕೆ ಮಾಡಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.

ಅಯೋಧ್ಯಾ ರಾಮಮಂದಿರಕ್ಕೆ ಅರ್ಚಕರ ನೇಮಕಾತಿ/ ಸಲ್ಲಿಕೆಯಾದ ಅರ್ಜಿಗಳು 3000 Read More »

ಪುತ್ತೂರು:ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ

ಸಮಗ್ರ ನ್ಯೂಸ್: ಬನ್ನೂರು ಕೃಷ್ಣ ನಗರ ಅಲುಂಬುಡ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ. 15ರಂದು ಮಕ್ಕಳ ದಿನಾಚರಣೆಯನ್ನು ಆಚರಸಲಾಯಿತು. ನಂತರ ಆಟೋಟ ಸ್ಪರ್ಧೆಗಳಿಂದ ಆರಂಭಗೊಂಡು , ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಹುಭಾಷಾ ಮಕ್ಕಳ ಸಾಹಿತಿ ಉಲ್ಲಾಸಣ್ಣ (ಯು.ಕೆ.ಪೈ) ಅವರು ಪಾಲ್ಗೊಂಡು ಕಾರ್ಯಕ್ರಮದ ಔಚಿತ್ಯದ ಬಗ್ಗೆ ತಿಳಿಸಿದರು ಹಾಗೆಯೇ ಮಕ್ಕಳೊಂದಿಗೆ ಮಕ್ಕಳಾಗಿ ಶಿಶು ಗೀತೆಗಳನ್ನು ಮಕ್ಕಳಿಗೆ ಅಭಿನಯದ ಮೂಲಕ ಹೇಳಿಕೊಟ್ಟರು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ವಹಿಸಿದ್ದರು. ಮಕ್ಕಳ

ಪುತ್ತೂರು:ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ Read More »

ಭಾರತ-ಪಾಕ್ ಗಡಿಯಲ್ಲಿ ಡ್ರೋಣ್ ಸಂಚಾರ/ವಶಕ್ಕೆ ಪಡೆದ ಗಡಿ ಭದ್ರತಾ ಪಡೆ

ಸಮಗ್ರ ನ್ಯೂಸ್: ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶವಾದ ಪಂಜಾಬ್‌ನ ತರಣ್ ತಾರಣ್ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದ ಡ್ರೋಣ್ ಒಂದನ್ನು ಗಡಿ ಭದ್ರತಾ ಪಡೆಯ ಸೈನಿಕರು ವಶಕ್ಕೆ ಪಡೆದುಕೊಂಡಿದ್ದಾರೆ. ಪಂಜಾಬ್‌ನ ವಿವಿಧೆಡೆಗಳಲ್ಲಿ ಒಂದು ವಾರದ ಒಳಗಡೆ ಗಡಿ ಭದ್ರತಾ ಪಡೆಯ ಸಿಬ್ಬಂದಿಗಳು ವಶಪಡಿಸಿಕೊಂಡ ಎಂಟನೇ ಡ್ರೋಣ್ ಇದಾಗಿದೆ. ಪಾಕಿಸ್ತಾನವು ಡ್ರೋನ್ ಗಳನ್ನುಗಡಿಪ್ರದೇಶದಲ್ಲಿ ಹೆರಾಯಿನ್‌ ಕಳ್ಳಸಾಗಣೆ ಮಾಡಲು ಬಳಸುತ್ತಿದೆ. ಈ ಮಾಹಿತಿ ಆಧರಿಸಿ ಬಿಎಸ್‌ಎಫ್ ಮತ್ತು ಪೊಲೀಸರು ತರಣ್ ತಾರಣ್‌ ಜಿಲ್ಲೆಯಲ್ಲಿ ಸೋಮವಾರ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ

ಭಾರತ-ಪಾಕ್ ಗಡಿಯಲ್ಲಿ ಡ್ರೋಣ್ ಸಂಚಾರ/ವಶಕ್ಕೆ ಪಡೆದ ಗಡಿ ಭದ್ರತಾ ಪಡೆ Read More »