ಸಮಗ್ರ ನ್ಯೂಸ್: ಕೇರಳ ಗಡಿಭಾಗ ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಮಹಾಸಭೆಯು ಮೊಕ್ತೇಸರ ಬಿ.ಸದಾನಂದ ರೈ ಯವರ ಅಧ್ಯಕ್ಷತೆಯಲ್ಲಿ ನ.28 ರಂದು ನಡೆಯಿತು.
ಸಭೆಯ ಆರಂಭದಲ್ಲಿ ವಾರ್ಷಿಕ ವರದಿವಾಚನ ಮತ್ತು ಲೆಕ್ಕಪತ್ರವನ್ನು ಮಂಡಿಸಲಾಯಿತು. ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷದ ಅವಧಿಗೆ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.
ಕ್ಷೇತ್ರದ ಮೊಕ್ತೇಸರರಾಗಿ ಬಿ. ಸದಾನಂದ ರೈ, ಅಧ್ಯಕ್ಷ ಬಿ. ಸುಭಾಶ್ಚಂದ್ರ ರೈ ತೋಟ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಬೊಡ್ಡನಕೊಚ್ಚಿ, ಕೋಶಾಧಿಕಾರಿ ಐ.ಮೋನಪ್ಪ ಗೌಡ ರವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರುಗಳನ್ನಾಗಿ ಪಿ. ಯಂ. ಭೋಜಪ್ಪ ಗೌಡ, ಬಿ.ರವೀಂದ್ರನಾಥ್ ರೈ, ವಿ.ಸುರೇಶ್ ಕುಮಾರ್, ಬಿ. ಸದಾಶಿವ ರೈ, ಸಹಕಾರ್ಯದರ್ಶಿ
ಯಂ. ಕೆ. ನಿತ್ಯಾನಂದ,
ಕೆ. ರಾಧಾಕೃಷ್ಣನ್ ನಂಬಿಯಾರ್, ಯಂ.ವೆಂಕಪ್ಪ ರೈ, ಕಮಲಾಕ್ಷನ್ ಕೋಡೋತ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನ ಆಡಳಿತ ಸಮಿತಿಯ ನೇತೃತ್ವದಲ್ಲಿ ಡಿ. 18 ರಂದು ಕ್ಷೇತ್ರದಲ್ಲಿ ವರ್ಷಂಪ್ರತಿ ನಡೆಯುವ ಷಷ್ಠಿ ಮಹೋತ್ಸವದ ಆಚರಣೆಯ ಕಾರ್ಯಕ್ರಮಗಳ ರೂಪು ರೇಷೆಗಳ ಕುರಿತು ಪೂರ್ವಭಾವಿಯಾಗಿ ಚರ್ಚಿಸಲಾಯಿತು.