Ad Widget .

ಮಹಿಳೆಯನ್ನ ಕೆಲಸದಿಂದ ಲೇ ಆಫ್​ ಮಾಡಿದ​ ಗೂಗಲ್! ಯಾಕೆ ಏನಾಯ್ತು?

ಕೋವಿಡ್ ನಂತರದ ಸಮಯ ಸಹ ಕೋವಿಡ್ ಸಮಯದಷ್ಟೇ ಕಠಿಣವಾಗಿದೆ: ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ನಂತರದ ಸಮಯ ಅನೇಕರ ಹೊಟ್ಟೆಯ ಮೇಲೆ ಮತ್ತು ಜೀವನದ ಮೇಲೆ ಮಾಸದ ಬರೆ ಎಳೆದಿದೆ ಅಂತ ಹೇಳಬಹುದು. ಹೌದು, ಕೋವಿಡ್ ಶುರುವಾದಾಗಿನಿಂದ ದೊಡ್ಡ ದೊಡ್ಡ ಕಂಪನಿಗಳು ಸರಿಯಾದ ವ್ಯವಹಾರವಿಲ್ಲದೆ, ತಮ್ಮಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನು ಆರ್ಥಿಕ ಸಂಕಷ್ಟದ ಕಾರಣವನ್ನು ಮುಂದಿಟ್ಟುಕೊಂಡು ಕೆಲಸದಿಂದ ರಾತ್ರೋರಾತ್ರಿ ವಜಾಗೊಳಿಸಿದ್ದು ನಿಜಕ್ಕೂ ಅನೇಕರಿಗೆ ಅಚ್ಚರಿ ಮತ್ತು ನಿರಾಶೆಯನ್ನು ಸಹ ಮೂಡಿಸಿದೆ.

Ad Widget . Ad Widget .

ನಿಜವಾಗಿಯೂ ಕೋವಿಡ್ ನಂತರದ ಸಮಯ ಕೋವಿಡ್ ಸಮಯದಷ್ಟೇ ಕಠಿಣವಾಗಿದೆ, ವಿಶೇಷವಾಗಿ ಐಟಿ ವಲಯ ಮತ್ತು ಅದರ ಉದ್ಯೋಗಿಗಳಿಗೆ ಅಂತ ಹೇಳಬಹುದು. ಅವರು ಕಳೆದ ಹಲವಾರು ತಿಂಗಳುಗಳಲ್ಲಿ ಹಲವಾರು ಹಂತದ ವಜಾಗಳನ್ನು ಅನುಭವಿಸಿದ್ದಾರೆ.

Ad Widget . Ad Widget .

18 ವರ್ಷಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡಿದ ಉದ್ಯೋಗಿಯನ್ನು ವಜಾಗೊಳಿಸಿದ ಗೂಗಲ್: ಅವರಲ್ಲಿ ಕೆಲವರು ತಮ್ಮ ಸಂಕಟವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಮುಂದೆ ಬಂದರು. ಇತ್ತೀಚೆಗೆ, ಕಳೆದ 18 ವರ್ಷಗಳಿಂದ ಕಂಪನಿಯೊಂದಿಗೆ ಕೆಲಸ ಮಾಡುತ್ತಿದ್ದ ಗೂಗಲ್ ಉದ್ಯೋಗಿಯನ್ನು ಇತ್ತೀಚಿನ ಸುತ್ತಿನಲ್ಲಿ ವಜಾಗೊಳಿಸುವ ಸಮಯದಲ್ಲಿ ಕೆಲಸದಿಂದ ವಜಾಗೊಳಿಸಲಾಗಿದೆಯಂತೆ.

ಇವರು ತಮ್ಮ ಲಿಂಕ್ಡ್ಇನ್ ಪೋಸ್ಟ್‌ಗಳಲ್ಲಿ ಕೆಲಸದಿಂದ ವಜಾಗೊಳಿಸಿದ್ದರ ಕುರಿತು ಮಾತನಾಡಿದ್ದಾರೆ, ತಮ್ಮ ಉದ್ಯೋಗದ ಸ್ಥಿತಿಯ ಕುರಿತು ಅವರು ಅಪ್ಡೇಟ್ ನೀಡಿದ್ದಾರೆ. ಯಾವುದೇ ಹೊಸ ಅವಕಾಶದೊಂದಿಗೆ ತಮಗೆ ಸಹಾಯ ಮಾಡುವಂತೆ ತನ್ನ ನೆಟ್‌ವರ್ಕ್‌ನಲ್ಲಿರುವ ಜನರನ್ನು ವಿನಂತಿಸಿದ್ದಾರೆ. ಗೂಗಲ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ರೀಟಾ ಅವರು 18 ವರ್ಷಗಳಿಂದ ಗೂಗಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ವಜಾಗೊಂಡಿರುವುದಾಗಿ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಅವರು ಎಚ್ಆರ್, ಟ್ಯಾಲೆಂಟ್ ಹಂಟ್ ಅಥವಾ ವೃತ್ತಿ ಅಭಿವೃದ್ಧಿ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಹುಡುಕುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಗೂಗಲ್ ನಲ್ಲಿ ದೀರ್ಘ ಕಾಲ ಕೆಲಸ ಮಾಡಿದ್ದರ ಕುರಿತು ಏನ್ ಹೇಳ್ತಾರೆ ನೋಡಿ ರೀಟಾ. “ಸುಮಾರು 18 ವರ್ಷಗಳ ನಂತರ, ನಾನು ಗೂಗಲ್ ನ ಇತ್ತೀಚಿನ ಲೇ-ಆಫ್ ನ ಭಾಗವಾಗಿದ್ದೇನೆ. ನಾನು ಎಚ್ಆರ್, ಟ್ಯಾಲೆಂಟ್ ಸ್ವಾಧೀನ ಅಥವಾ ಉದ್ಯಮ ಮತ್ತು ಅಕಾಡೆಮಿ ಎರಡರಲ್ಲೂ ವೃತ್ತಿ ಅಭಿವೃದ್ಧಿಯಲ್ಲಿ ಹೊಸ ಪಾತ್ರವನ್ನು ಹುಡುಕುತ್ತಿದ್ದೇನೆ.

ನೀವು ನೀಡುವ ಯಾವುದೇ ಸಂಪರ್ಕಗಳು, ಸಲಹೆಗಳು ಅಥವಾ ಅವಕಾಶಗಳಿಗಾಗಿ ಮುಂಚಿತವಾಗಿಯೇ ನನ್ನ ಧನ್ಯವಾದಗಳು. ನನ್ನ ರೆಸ್ಯೂಮ್‌ನಲ್ಲಿ ನಿಮಗೆ ಆಸಕ್ತಿ ಇದ್ದರೆ, ನನಗೆ ಸಂದೇಶ ಕಳುಹಿಸಲು ಮುಕ್ತವಾಗಿರಿ” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ವಜಾಗೊಂಡ ಗೂಗಲ್ ಉದ್ಯೋಗಿಯೊಬ್ಬರು ತಮ್ಮ ವಜಾಗೊಳಿಸುವ ಕಥೆಯನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿರುವುದು ಇದೇ ಮೊದಲಲ್ಲ. ಹಿಂದೆ ಸಹ ಹಲವಾರು ವಜಾಗೊಳಿಸಿದ ಉದ್ಯೋಗಿಗಳು ಉದ್ಯೋಗ ಹುಡುಕಾಟ ವೇದಿಕೆಯಲ್ಲಿ ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ ಮತ್ತು ಹೊಸ ಅವಕಾಶವನ್ನು ಹುಡುಕುವಲ್ಲಿ ಜನರ ಬೆಂಬಲವನ್ನು ಸಹ ವಿನಂತಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ, ಗೂಗಲ್ ತನ್ನ ಜಾಗತಿಕ ನೇಮಕಾತಿ ತಂಡದಿಂದ ನೂರಾರು ಸದಸ್ಯರನ್ನು ವಜಾಗೊಳಿಸಲು ನಿರ್ಧರಿಸಿತು ಮತ್ತು ನ್ಯೂಜೆರ್ಸಿಯ ಕ್ರಾನ್‌ಫೋರ್ಡ್‌ನ ರೀಟಾ ಪಾಪಲಿಯೊ ರೂಯಿಜ್ ಅವರಲ್ಲಿ ಒಬ್ಬರು. ವಜಾಗೊಳಿಸಿದ ಉದ್ಯೋಗಿಗಳಿಗೆ ಬೇರೆಡೆ ಹೊಸ ಕೆಲಸಗಳನ್ನು ಹುಡುಕಲು ಕಂಪನಿಯು ಸಹಾಯ ಮಾಡುತ್ತದೆ ಎಂದು ಗೂಗಲ್ ಹೇಳಿದೆ.

Leave a Comment

Your email address will not be published. Required fields are marked *