August 2023

ಬಂಟ್ವಾಳ: ಕೋಟಿ ಮೌಲ್ಯದ ಪಡಿತರ ಅಕ್ಕಿ ನಾಪತ್ತೆ..! | ಅಧಿಕಾರಿಗಳಿಂದ ತನಿಕೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಣೆಯಾಗುವ ಭಾರತೀಯ ಆಹಾರ ಇಲಾಖೆ ನೀಡುವ ಅಕ್ಕಿಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಗೋಲ್ ಮಾಲ್. ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಸುಮಾರು 1,32,36,000ರೂ ಮೌಲ್ಯದ 3892.95.450 ಕ್ವಿಂಟಾಲ್ ಅಕ್ಕಿಯ ಕೊರತೆ ಕಂಡು ಬಂದಿದ್ದು, ಇಲ್ಲಿ ಅವ್ಯವಹಾರ ನಡೆದಿದೆ ಎಂದು ಕರ್ನಾಟಕ ಆಹಾರ ಮತ್ತು ಸರಬರಾಜು ನಿಗಮ(Karnataka Food and Supplies Corporation)ದ ಕಚೇರಿ ವ್ಯವಸ್ಥಾಪಕ ಶರತ್ ಕುಮಾರ್ ಹಾಂಡ ಬಂಟ್ವಾಳ […]

ಬಂಟ್ವಾಳ: ಕೋಟಿ ಮೌಲ್ಯದ ಪಡಿತರ ಅಕ್ಕಿ ನಾಪತ್ತೆ..! | ಅಧಿಕಾರಿಗಳಿಂದ ತನಿಕೆ Read More »

ಭೂಮಿ ಮೋಹಕ್ಕೆ ಸೌಜನ್ಯಳ ಕೊಲೆಯಾಗಿದೆ‌| ಸ್ಪೋಟಕ ಹೇಳಿಕೆ ನೀಡಿದ ವಸಂತ ಬಂಗೇರ

ಸಮಗ್ರ ನ್ಯೂಸ್: ಉಜಿರೆಯ ಎಸ್ ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆಗೆ ಭೂಮಿ(ಜಮೀನು) ಮೋಹ ಕಾರಣ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಳ್ತಂಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಧರ್ಮಸ್ಥಳ ಹೆಗಡೆ ಪರಿವಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಹೆಗಡೆ ಪರಿವಾರದಂತಹ ಜಮೀನ್ದಾರರು ಹುಟ್ಟಲೇಬಾರದು, ತಾಲೂಕಿನ ಎಲ್ಲಾ ಜಮೀನುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ನನ್ನ ತಂದೆಯೂ ಜಮೀನ್ದಾರ ಆಗಿದ್ದರು, ಆದರೆ ಯಾರ್ಯಾರ ಜಮೀನನ್ನು ವಶಪಡಿಸಿಕೊಳ್ಳಲು ನಾನು ಬಿಡಲಿಲ್ಲ. ಆ

ಭೂಮಿ ಮೋಹಕ್ಕೆ ಸೌಜನ್ಯಳ ಕೊಲೆಯಾಗಿದೆ‌| ಸ್ಪೋಟಕ ಹೇಳಿಕೆ ನೀಡಿದ ವಸಂತ ಬಂಗೇರ Read More »

ಕಡಿಮೆ ರಕ್ತದ ಒತ್ತಡ ಕಾರಣಗಳೇನು?

ಸಮಗ್ರ ನ್ಯೂಸ್: ಹೃದಯದಿಂದ ನಿರಂತರವಾಗಿ ರಕ್ತ ದೇಹದ ಎಲ್ಲಾ ಅಂಗಗಳಿಗೆ ಸರಬರಾಜು ಆಗುತ್ತಲೇ ಇರುತ್ತದೆ. ಹೃದಯದಿಂದ ರಕ್ತ ಹೊರಹಾಕಲ್ಪಟ್ಟ ಮೇಲೆ ರಕ್ತದ ಏಕಮುಖ ಹರಿವು ರಕ್ತನಾಳಗಳ ಒಳಪದರಗಳ ಮೇಲೆ ಹೇರುವ ಒತ್ತಡವನ್ನು “ರಕ್ತದ ಒತ್ತಡ” ಎಂದು ಕರೆಯಲಾಗುತ್ತದೆ. ಆರೋಗ್ಯವಂತ ಮಧ್ಯ ವಯಸ್ಕ ಮಹಿಳೆ ಮತ್ತು ಪುರುಷರಲ್ಲಿ ರಕ್ತದ ಒತ್ತಡವು 120/80 ಮಿಲಿ ಮೀಟರ್‍ನಷ್ಟು (ಪಾದರಸ ಕಂಬದ ಎತ್ತರ) ಇರುತ್ತದೆ. ವಯಸ್ಸಾದಂತೆಲ್ಲ 50ರ ಹರೆಯದ ನಂತರ ಸುಮಾರು 130/90 ಮಿಲಿ ಮೀಟರ್‍ನಷ್ಟು ಇರುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ದೇಹದ

ಕಡಿಮೆ ರಕ್ತದ ಒತ್ತಡ ಕಾರಣಗಳೇನು? Read More »

ಸುಳ್ಯ:ಎಂ.ಬಿ. ಫೌಂಡೇಶನ್ ಸ್ಥಾಪಕಾಧ್ಯಕ್ಷಎಂ.ಬಿ.ಸದಾಶಿವ ರವರಿಗೆ ಮಾತೃ ವಿಯೋಗ ಸುಳ್ಯ ಎಸ್‌ಡಿಪಿಐ ಸಂತಾಪ

ಸಮಗ್ರ ನ್ಯೂಸ್:ಸುಳ್ಯದ ಹಿರಿಯ ಉದ್ಯಮಿ ಎಂ.ಬಿ. ಬಾಲಕೃಷ್ಣರವರ ಪತ್ನಿ ಎಂ.ಬಿ. ದೇವಕಿ ವಿಧಿವಶ. ದೇವಕಿ ಅವರ ಅಗಲಿಕೆಯು ನೋವನ್ನುಂಟು ಮಾಡಿದೆ. ಅವರ ಕುಟುಂಬದ ಸದಸ್ಯರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಸೃಷ್ಟಿಕರ್ತನು ನೀಡಲಿ ಎಂದು ಆಶಿಸುವುದರೊಂದಿಗೆ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿಯು ತೀವ್ರ ಸಂತಾಪವನ್ನು ಸೂಚಿಸುತ್ತದೆ.

ಸುಳ್ಯ:ಎಂ.ಬಿ. ಫೌಂಡೇಶನ್ ಸ್ಥಾಪಕಾಧ್ಯಕ್ಷಎಂ.ಬಿ.ಸದಾಶಿವ ರವರಿಗೆ ಮಾತೃ ವಿಯೋಗ ಸುಳ್ಯ ಎಸ್‌ಡಿಪಿಐ ಸಂತಾಪ Read More »

ಸೌಜನ್ಯ ಪರ ಹೋರಾಟಗಾರ ತಿಮರೋಡಿಗೆ ಗನ್ ಮ್ಯಾನ್| ಅಧಿಕೃತ ಆದೇಶ ಹೊರಡಿಸಿದ ಹೋಮ್ ಮಿನಿಸ್ಟರ್

ಸಮಗ್ರ ನ್ಯೂಸ್: ಕಳೆದ 11 ವರ್ಷಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಸೌಜನ್ಯ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ ಮುಂದಾಳತ್ವವನ್ನು ವಹಿಸಿಕೊಂಡಿರುವ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ಜೀವಕ್ಕೆ ಅಪಾಯ ಅಗುವ ಸಾಧ್ಯತೆ ಇರುವ ಕಾರಣ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರಾರ ಮನವಿ ಮೇರೆಗೆ ಕರ್ನಾಟಕ ರಾಜ್ಯ ಸರಕಾರವು ಇಬ್ಬರು ಗನ್ ಮ್ಯಾನ್ ಒದಗಿಸಲು ಮುಂದಾಗಿದೆ. ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಆಗಸ್ಟ್ 17 ರಂದು

ಸೌಜನ್ಯ ಪರ ಹೋರಾಟಗಾರ ತಿಮರೋಡಿಗೆ ಗನ್ ಮ್ಯಾನ್| ಅಧಿಕೃತ ಆದೇಶ ಹೊರಡಿಸಿದ ಹೋಮ್ ಮಿನಿಸ್ಟರ್ Read More »

ಸಕಲೇಶಪುರ: ಕಾಡಾನೆ ದಾಳಿಗೆ ಮಹಿಳೆ ಬಲಿ

ಸಮಗ್ರ ನ್ಯೂಸ್: ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಮೃತ ಪಟ್ಟ ಘಟನೆ ಸಕಲೇಶಪುರ ತಾಲ್ಲೂಕಿನ ಕುನಿಗನಹಳ್ಳಿಯ ವಡೂರು ಬಳಿ ನಡೆದಿದೆ. ಕಾಡಾನೆ ದಾಳಿಗೆ ಕವಿತಾ (40) ಎಂಬವರು ಬಲಿಯಾಗಿದ್ದು, ಅವರು ವಡೂರಿನಲ್ಲಿರುವ ತನ್ನ ಅಮ್ಮನನ್ನು ನೋಡಲೆಂದು ಬಂದಿದ್ದ ಅವರು ಮನೆಯ ಬಳಿ ಇದ್ದಾಗಲೇ ಕಾಡಾನೆ ಅಟ್ಟಿಸಿಕೊಂಡು ಬಂದಿದೆ. ಈ ವೇಳೆ ಕೆಳಗೆ ಬಿದ್ದ ಕವಿತಾ ಅವರ ಮೇಲೆ ಆನೆ ದಾಳಿ ಮಾಡಿ ಸೊಂಟದ ಭಾಗವನ್ನು ತುಳಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾದರು ಚಿಕಿತ್ಸೆ ಫಲಕಾರಿಯಾಗದೇ ಕೊನೆ ಉಸಿರೆಳೆದಿದ್ದಾರೆ.

ಸಕಲೇಶಪುರ: ಕಾಡಾನೆ ದಾಳಿಗೆ ಮಹಿಳೆ ಬಲಿ Read More »

ಕಾಣಿಯೂರು: ಯೋಗಾಸನ ಸ್ಪರ್ಧೆಯಲ್ಲಿ ಮೋನಿಷ್ ತಂಟೆಪ್ಪಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಮಗ್ರ ನ್ಯೂಸ್: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಮೋನಿಷ್ ತಂಟೆಪ್ಪಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆ. ಪುತ್ತೂರು ಮತ್ತು ಕಡಬದ ಜಂಟಿ ಆಶ್ರಯದಲ್ಲಿ ನಡೆದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ಚಾಂಪಿಯನ್ ಶಿಪ್ ಪ್ರಶಸ್ತಿ ಪಡೆದು, ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಯೋಗಗುರು ಶಶಿಕಲಾ ಅವರ ವಿದ್ಯಾರ್ಥಿ.

ಕಾಣಿಯೂರು: ಯೋಗಾಸನ ಸ್ಪರ್ಧೆಯಲ್ಲಿ ಮೋನಿಷ್ ತಂಟೆಪ್ಪಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆ Read More »

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಆಂಬುಲೆನ್ಸ್ ಪಲ್ಟಿ| ಚಾಲಕ ಸಾವು

ಸಮಗ್ರ ನ್ಯೂಸ್: ಬೆಳ್ತಂಗಡಿ ಕಡೆಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿರುವ ಘಟನೆ ಆ. 18 ರಂದು ನಡೆದಿದೆ. ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿದ್ದ ಟೂಫಾನ್ ಆಂಬುಲೆನ್ಸ್ ಬಂಟ್ವಾಳದ ವಗ್ಗ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ಮಡಂತ್ಯಾರ್ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಆಂಬುಲೆನ್ಸ್ ಪಲ್ಟಿ| ಚಾಲಕ ಸಾವು Read More »

ಸುಬ್ರಹ್ಮಣ್ಯ:ಟವರ್ ನಿರ್ಮಾಣದ ಆಮೀಷವೊಡ್ಡಿ ವಂಚನೆ ಆರೋಪ

ಸಮಗ್ರ ನ್ಯೂಸ್: ಖಾಸಗಿ ಕಂಪೆನಿಯ ಟವರ್ ನಿರ್ಮಿಸಲು ಸ್ವಂತ ಜಾಗದಲ್ಲಿ ಅವಕಾಶ ನೀಡುವಂತೆ ಕೋರಿ ವಂಚಿಸಲಾದ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐವತ್ತೊಕ್ಲು ಗ್ರಾಮದ ನಾರಾಯಣ ಎನ್. ಎಂಬವರಿಗೆ ಖಾಸಗಿ ಕಂಪೆನಿಯವರೆಂದು ಪರಿಚಯಿಸಿಕೊಂಡು ಪೋನ್ ಕರೆ ಮಾಡಿರುವ ಅಪರಿಚಿತರು ಟವರ್ ನಿರ್ಮಾಣಕ್ಕೆ ಸ್ವಂತ ಜಾಗದಲ್ಲಿ ಸ್ಥಳಾವಕಾಶ ಕೋರಿದ್ದು, ಈ ಬಗ್ಗೆ ನಾರಾಯಣ ಅವರಿಂದ ದಾಖಲೆಯನ್ನು ವಾಟ್ಸಪ್ ಮೂಲಕ ಪಡೆದಿದ್ದಾರೆ. ಆ. 12 ಮತ್ತು ಆ.14ರ ಅವಧಿಯಲ್ಲಿ ಒಟ್ಟು 52 ಸಾವಿರ ರೂಪಾಯಿಗಳನ್ನು ಬೇರೆ ಬೇರೆ ಖಾತೆಗಳಿಗೆ

ಸುಬ್ರಹ್ಮಣ್ಯ:ಟವರ್ ನಿರ್ಮಾಣದ ಆಮೀಷವೊಡ್ಡಿ ವಂಚನೆ ಆರೋಪ Read More »

ಕುಕ್ಕೆ ಸುಬ್ರಹ್ಮಣ್ಯ: ಅಕ್ರಮ ಗೋ ಸಾಗಾಟ ಪೊಲೀಸ್ ವಶ

ಸಮಗ್ರ ನ್ಯೂಸ್: ಸುಬ್ರಹ್ಮಣ್ಯ ಭಾಗದಿಂದ ಅರಕಲಗೋಡು ಭಾಗಕ್ಕೆ ಕೃಷಿ ಉದ್ದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ದನ ಹಾಗೂ ಒಂದು ಕರುವನ್ನು ಸುಬ್ರಹ್ಮಣ್ಯ ಪೊಲೀಸರು ಆ. 17ರಂದು ಮಧ್ಯಾಹ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಮಧ್ಯಾಹ್ನ ಪೊಲೀಸ್ ತಪಾಸಣೆ ವೇಳೆ ಯಾವುದೇ ಅಗತ್ಯ ದಾಖಲೆಗಳಿಲ್ಲದೆ ಗೋವುಗಳನ್ನು ಸುಬ್ರಹ್ಮಣ್ಯ ಭಾಗದಿಂದ ಅರಕಲಗೋಡು ಭಾಗಕ್ಕೆ ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ವಾಹನವನ್ನು ತಡೆದು ನಿಲ್ಲಿಸಲಾದರು ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಎರಡು ದನ, ಒಂದು ಕರುವನ್ನು ಮತ್ತು KA44 8819 ಸಂಖ್ಯೆಯ ವಾಹನವನ್ನು ವಶಕ್ಕೆ ಪಡೆಯಲಾದ ವಾಹನದಲ್ಲಿ

ಕುಕ್ಕೆ ಸುಬ್ರಹ್ಮಣ್ಯ: ಅಕ್ರಮ ಗೋ ಸಾಗಾಟ ಪೊಲೀಸ್ ವಶ Read More »