July 2023

ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಯೋಗೇನ ಚಿತ್ತಸ್ಯ ಯೋಗ ಕೇಂದ್ರಕ್ಕೆ ಪ್ರಶಸ್ತಿ

ಸಮಗ್ರ ನ್ಯೂಸ್: ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರ ಕಡೂರು ಇವರು ನಡೆಸಿದ ಮುಕ್ತ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯದ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಯೋಗಪಟುಗಳಿಗೆ ಹಲವು ಪ್ರಶಸ್ತಿ ಲಭಿಸಿದೆ. 8 ರಿಂದ 12ನೇ ವಯೋಮಾನದ ಬಾಲಕರ ವಿಭಾಗದಲ್ಲಿ ತನುಷ್ ಕೆ ಆರ್ ದ್ವಿತೀಯ ಸ್ಥಾನ, ತನುಷ್ ಮೋಂಟಡ್ಕ ತೃತೀಯ ಸ್ಥಾನ, 5 ರಿಂದ 7ನೇ ವಯೋಮಾನದ ಬಾಲಕರ ವಿಭಾಗದಲ್ಲಿ ಆಶ್ರಿತ್ ಎ.ಸಿ ಚತುರ್ಥ ಸ್ಥಾನ, 8 ರಿಂದ 12ನೇ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸೋನಾ ಅಡ್ಕಾರ್ […]

ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಯೋಗೇನ ಚಿತ್ತಸ್ಯ ಯೋಗ ಕೇಂದ್ರಕ್ಕೆ ಪ್ರಶಸ್ತಿ Read More »

ಜು.09: ಬೆಳ್ತಂಗಡಿಯ ಸೋಮಂತಡ್ಕದಲ್ಲಿ ವೆಂಕಟರಮಣ ಕ್ರೆಡಿಟ್ ಕೋ.ಆ. ಸೊಸೈಟಿಯ 22ನೇ ಶಾಖೆ ಲೋಕಾರ್ಪಣೆ| ಶಾಸಕ ಹರೀಶ್ ಪೂಂಜಾ ಸೇರಿ ಹಲವು ಗಣ್ಯರು ಭಾಗಿ

ಸಮಗ್ರ ನ್ಯೂಸ್: ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ, ಸುಳ್ಯ ಇದರ ನೂತನ 22 ನೇ ಶಾಖೆಯ ಉದ್ಘಾಟನೆ ಜು.9 ರಂದು ಬೆಳ್ತಂಗಡಿ ತಾಲೂಕಿನ ಸೋಮಂತಡ್ಕದ ಡಿ’ಸೋಜಾ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದರು. ಅವರು ಜು.5 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಂಘವು 1997ರಲ್ಲಿ ಗೌಡರ ಯುವ ಸೇವಾ ಸಂಘ ಇವರಿಂದ ಪ್ರವರ್ತಿಸಲ್ಪಟ್ಟಿದ್ದು ಪ್ರಾರಂಭದಲ್ಲಿ 435 ಜನರಿಂದ ಪ್ರಾರಂಭವಾದ ಈ ಸಂಘದಲ್ಲಿ ಪ್ರಸ್ತುತ 17,596

ಜು.09: ಬೆಳ್ತಂಗಡಿಯ ಸೋಮಂತಡ್ಕದಲ್ಲಿ ವೆಂಕಟರಮಣ ಕ್ರೆಡಿಟ್ ಕೋ.ಆ. ಸೊಸೈಟಿಯ 22ನೇ ಶಾಖೆ ಲೋಕಾರ್ಪಣೆ| ಶಾಸಕ ಹರೀಶ್ ಪೂಂಜಾ ಸೇರಿ ಹಲವು ಗಣ್ಯರು ಭಾಗಿ Read More »

ಮೋದಿ ಉಪನಾಮ ಪ್ರಕರಣ| ರಾಹುಲ್ ಗಾಂಧಿಗೆ ಎರಡು ವರ್ಷ ಶಿಕ್ಷೆ ಖಾಯಂ

ಸಮಗ್ರ ನ್ಯೂಸ್: ಮೋದಿ ಉಪನಾಮಕ್ಕೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಶಿಕ್ಷೆಯ ವಿರುದ್ಧ ಗುಜರಾತ್ ಹೈಕೋರ್ಟ್​ ಇಂದು ತೀರ್ಪು ಪ್ರಕಟಿಸಿದೆ. ರಾಹುಲ್​ ಗಾಂಧಿಗೆ ಹಿನ್ನಡೆಯಾಗಿದೆ. ಮಾರ್ಚ್​ 23ರಂದು ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಿ ಎರಡು ವರ್ಷಗಳ ಬಳಿಕ ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ರಾಹುಲ್ ಗಾಂಧಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ಶಿಕ್ಷೆ ಪ್ರಕಟವಾದ ಬಳಿಕ ಅವರನ್ನು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು. ಈ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಜಾಮೀನು ಸಿಕ್ಕಿದೆ.

ಮೋದಿ ಉಪನಾಮ ಪ್ರಕರಣ| ರಾಹುಲ್ ಗಾಂಧಿಗೆ ಎರಡು ವರ್ಷ ಶಿಕ್ಷೆ ಖಾಯಂ Read More »

ಕುಡಿದ ನಶೆಯಲ್ಲಿ ಕಾರೊಳಗೆ ಸೆಕ್ಸ್ ನಲ್ಲಿ ತೊಡಗಿದ ಜೋಡಿ!! ಅನುಮಾನಗೊಂಡು ನೋಡಿದ ಮನೆಯೊಡತಿ| ಮುಂದೇನಾಯ್ತು ಗೊತ್ತಾ?

ಸಮಗ್ರ ನ್ಯೂಸ್: ಮನೆಮುಂದೆ ಕಾರು ನಿಲ್ಲಿಸಿ ಜೋಡಿಯೊಂದು ಸೆಕ್ಸ್ ಮಾಡುತ್ತಿದ್ದು, ಅದನ್ನು ಪ್ರಶ್ನಿಸಿದ ಮಹಿಳೆಯ ಜೊತೆಗೂ ಅನುಚಿತವಾಗಿ ವರ್ತಿಸಿದ ಘಟನೆ ಬುಧವಾರ ಬೆಳಗ್ಗೆ 5 ಗಂಟೆಗೆ ಹರ್ಯಾಣದ ಗುರುಗಾಂವ್‍ನಲ್ಲಿ ನಡೆದಿದೆ. ಮಹಿಳೆಯೊಬ್ಬರು ಯಾರೆಂದು ನೋಡಲು ಮನೆಯಿಂದ ಹೊರಗೆ ಬಂದಿದ್ದರು. ಆಗ ಮನೆಮುಂದೆಯೇ ಕಾರು ನಿಲ್ಲಿಸಿ ಒಂದು ಜೋಡಿ ಕಾರಿನಲ್ಲಿ ಸೆಕ್ಸ್ ಮಾಡುತ್ತಿದ್ದರು. ಕಾರಿನಲ್ಲಿ ಪಕ್ಕದ್ಮನೆಯ 26 ವರ್ಷದ ಯುವತಿ ಇದ್ದು, ಮಹಿಳೆ ಮೊದಲು ಆಕೆಯನ್ನು ಗುರುತಿಸಲಿಲ್ಲ. ನಂತರ ಅವರ ಹತ್ತಿರ ಹೋಗಿ ಅವರ ಹೆಸರನ್ನು ಕೇಳಿದ್ದಾರೆ. ಆದರೆ

ಕುಡಿದ ನಶೆಯಲ್ಲಿ ಕಾರೊಳಗೆ ಸೆಕ್ಸ್ ನಲ್ಲಿ ತೊಡಗಿದ ಜೋಡಿ!! ಅನುಮಾನಗೊಂಡು ನೋಡಿದ ಮನೆಯೊಡತಿ| ಮುಂದೇನಾಯ್ತು ಗೊತ್ತಾ? Read More »

ಬುರ್ಖಾದೊಳಗೆ ಅವಳಲ್ಲ ಅವನು! ಉಚಿತ ಪ್ರಯಾಣದ ಆಸೆಯಿಂದ ಪೇಚಿಗೆ ಸಿಲುಕಿದ ಆತ!!

ಸಮಗ್ರ ನ್ಯೂಸ್: ಸರ್ಕಾರದ ಯೋಜನೆಗಳನ್ನು ಪಡೆಯಲು ಜನರು ನಕಲಿ ಆಧಾರ್, ವೋಟರ್ ಐಡಿ ಸೇರಿದಂತೆ ಅನೇಕ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಸಿಕ್ಕಿಬಿದ್ದ ಸಾಕಷ್ಟು ನಿದರ್ಶನಗಳಿವೆ. ಅಂತಹುದೇ ಮತ್ತೊಂದು ಪ್ರಸಂಗ ಸಂಶಿಯಲ್ಲಿ ನಡೆದಿದೆ. ಸಂಶಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಗುರುವಾರ ಬುರ್ಖಾ ತೊಟ್ಟು ಕುಳಿತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಮಾಡಿರುವ ತಂತ್ರ ಎಂದು ಅನುಮಾನಿಸಿ ಹಿಡಿದಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬುರ್ಖಾ ತೊಟ್ಟಿದ್ದ ವ್ಯಕ್ತಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ

ಬುರ್ಖಾದೊಳಗೆ ಅವಳಲ್ಲ ಅವನು! ಉಚಿತ ಪ್ರಯಾಣದ ಆಸೆಯಿಂದ ಪೇಚಿಗೆ ಸಿಲುಕಿದ ಆತ!! Read More »

ಭ್ರಷ್ಟ ಅಧಿಕಾರಿ ಅಜಿತ್ ರೈ ನ್ಯಾಯಾಂಗ ಬಂಧನಕ್ಕೆ ‌ಕೋರ್ಟ್‌ ಆದೇಶ

ಸಮಗ್ರ ವಾರ್ತೆ: ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ವಶದಲ್ಲಿದ್ದ ಅಜಿತ್ ರೈ ಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಲೋಕಾಯುಕ್ತ ಕಸ್ಟಡಿ ಅವಧಿ ಜು.6ಕ್ಕೆ ಮುಕ್ತಾಯವಾದ ಹಿನ್ನೆಲೆ ಅಜಿತ್ ರೈ ಅವರನ್ನು ಇಂದು ಕೋರ್ಟ್ಗೆ ಹಾಜರುಪಡಿಸಿದ ಲೋಕಾಯುಕ್ತ ಅಧಿಕಾರಿಗಳು, ಮತ್ತೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಆದರೆ ವಿಚಾರಣೆ ನಡೆಸಿದ ಕೋರ್ಟ್ ‘ಅಜಿತ್ ರೈ’ ಯನ್ನು ನ್ಯಾಯಾಂಗ ವಶಕ್ಕೆ ನೀಡಿದ ವಿಶೇಷ ನ್ಯಾಯಾಲಯ ಜುಲೈ 11 ಕ್ಕೆ ವಿಚಾರಣೆ

ಭ್ರಷ್ಟ ಅಧಿಕಾರಿ ಅಜಿತ್ ರೈ ನ್ಯಾಯಾಂಗ ಬಂಧನಕ್ಕೆ ‌ಕೋರ್ಟ್‌ ಆದೇಶ Read More »

ಕೈಲಾಸವಾಸಿ ನಿತ್ಯಾನಂದನ ಇಬ್ಬರು ಶಿಷ್ಯೆಯರ ಮೇಲೆ ಜಾಮೀನು ರಹಿತ ವಾರಂಟ್

ಸಮಗ್ರ ನ್ಯೂಸ್: ಪರಾರಿಯಾಗಿರುವ ಕೈಲಾಸ ದೇಶದ ಸಂಸ್ಥಾಪಕ, ಬಿಡದಿ ಧ್ಯಾನಪೀಠದ ಮುಖ್ಯಸ್ಥ ನಿತ್ಯಾನಂದ ಸ್ವಾಮೀಜಿಯ ಇಬ್ಬರು ಶಿಷ್ಯರ ವಿರುದ್ಧ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ರಾಮನಗರ ಜಿಲ್ಲಾ ನ್ಯಾಯಾಲಯವು ನಿತ್ಯಾನಂದನ ಶಿಷ್ಯರಾದ ಶಿವವಲ್ಲಭನೇನಿ ಮತ್ತು ಜಮುನಾ ರಾಣಿ ವಿರುದ್ಧ ವಾರಂಟ್ ಜಾರಿಯಾಗಿದೆ. ಭಕ್ತೆಯೊಬ್ಬರ ಮೇಲೆ ನಿತ್ಯಾನಂದ ಸ್ವಾಮೀಜಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಅವರ ಇಬ್ಬರು ಅನುಯಾಯಿಗಳನ್ನು ಮೂರು ಮತ್ತು ಆರನೇ ಆರೋಪಿಗಳೆಂದು ಹೆಸರಿಸಲಾಗಿದೆ. ಪ್ರಕರಣಕ್ಕೆ

ಕೈಲಾಸವಾಸಿ ನಿತ್ಯಾನಂದನ ಇಬ್ಬರು ಶಿಷ್ಯೆಯರ ಮೇಲೆ ಜಾಮೀನು ರಹಿತ ವಾರಂಟ್ Read More »

ದಶಪಥ ಹೆದ್ದಾರಿಯಲ್ಲಿ ವ್ಹೀಲಿಂಗ್ ಹುಚ್ಚಾಟ| ನಾಲ್ವರನ್ನು ಬಂಧಿಸಿ ಕೇಸ್ ಜಡಿದ ಪೊಲೀಸರು

ಸಮಗ್ರ ನ್ಯೂಸ್: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯ ಪ್ಲೈ ಓವರ್ ಮೇಲೆ ಬೈಕ್ ವೀಲಿಂಗ್ ಮಾಡಿ ದುಸ್ಸಾಹಸ ತೋರಿದ್ದ ನಾಲ್ವರು ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಮೊಹಮದ್ ಹುಸೇನ್, ವಾಸೀಂ ಖಾನ್, ಮುಜಾಮೀನ್, ಸುಲ್ತಾನ್ ಎಂದು ಗುರುತಿಸಲಾಗಿದೆ. ಓನ್ ವೇ ಯಲ್ಲಿ ಹುಡುಗಿಯರೊಂದಿಗೆ ವ್ಹೀಲಿಂಗ್ ಮಾಡಿ ಹುಚ್ಚಾಟ ತೋರಿದ್ದರು ಮಾತ್ರವಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಕುಂಬಳಗೋಡು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋ ಆಧರಿಸಿ ನಾಲ್ವರ ಮೇಲೆ ಮೋಟಾರ್ ವೆಹಿಕಲ್ ಆಕ್ಟ್

ದಶಪಥ ಹೆದ್ದಾರಿಯಲ್ಲಿ ವ್ಹೀಲಿಂಗ್ ಹುಚ್ಚಾಟ| ನಾಲ್ವರನ್ನು ಬಂಧಿಸಿ ಕೇಸ್ ಜಡಿದ ಪೊಲೀಸರು Read More »

ಜು. 8ರಂದು ಮಂಗಳೂರಿನ ಕೆಲವೆಡೆ ನಿಷೇದಾಜ್ಞೆ ಜಾರಿ

ಸಮಗ್ರ ನ್ಯೂಸ್: ಜು.8ರಂದು ಕರ್ನಾಟಕ ಭೂ ದಾಖಲೆಗಳ ಇಲಾಖೆ ವತಿಯಿಂದ ಲೈಸಸ್ಸ್ಡ್ ಸರ್ವೆಯರ್ ಆನ್ಲೈನ್ ಪರೀಕ್ಷೆ ಮೂಡುಬಿದರೆಯ ಯೆನಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಮಂಗಳೂರಿನ ಮಂಗಳೂರು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್ ನಲ್ಲಿ ನಡೆಯಲಿದೆ. ಈ ಪರೀಕ್ಷೆಗಳು ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಸಿ ಆರ್ ಪಿ ಸಿ ಕಲಂ 144 ರಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತರು ಹಾಗೂ ವಿಶೇಷ

ಜು. 8ರಂದು ಮಂಗಳೂರಿನ ಕೆಲವೆಡೆ ನಿಷೇದಾಜ್ಞೆ ಜಾರಿ Read More »

Health Tips:ಹಲಸಿನ ಹಣ್ಣು ಅಂದರೆ ನಿಮಗೆ ಇಷ್ಟನಾ? ಹಾಗಿದ್ರೆ ತಿನ್ನುವ ಮೊದಲು ಇದನ್ನು ಓದಿ.

ಸಮಗ್ರ ನ್ಯೂಸ್: ದೇಶದಲ್ಲಿ ಸಾಕಷ್ಟು ಮಂದಿ ಮಧುಮೇಹ ಕಾಯಿಲೆಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಳೆ ಇದೆ. ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಇದರಿಂದ ದೇಹದ ವಿವಿಧ ಅಂಗಗಳು, ಕಣ್ಣಿನಿಂದ ಹಿಡಿದು ಹೃದಯ, ಮೂತ್ರಪಿಂಡಗಳು ಸೇರಿದಂತೆ ಕೆಲ ಭಾಗಗಳು ಹಾನಿಗೊಳಗಾಗುತ್ತವೆ. ಭಾರತದ ಜನಸಂಖ್ಯೆಯಲ್ಲಿ ಶೇ. 8.7 ರಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಅದರಲ್ಲಿಯೂ 20 ರಿಂದ 70 ವರ್ಷ ವಯಸ್ಸಿನವರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂಬುದನ್ನು ಇತ್ತೀಚಿಗೆ ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗಪಡಿಸಿದೆ. ಮಧುಮೇಹ ಬಂದಾಗ

Health Tips:ಹಲಸಿನ ಹಣ್ಣು ಅಂದರೆ ನಿಮಗೆ ಇಷ್ಟನಾ? ಹಾಗಿದ್ರೆ ತಿನ್ನುವ ಮೊದಲು ಇದನ್ನು ಓದಿ. Read More »