June 2023

ಚಾರ್ಮಾಡಿ: ಬಸ್ ನ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು

ಸಮಗ್ರ ನ್ಯೂಸ್: ಸರ್ಕಾರಿ ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಕೂಟಿ ಸವಾರ ಸಾವನ್ನಪ್ಪಿದ ಘಟನೆ ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ನಡೆದಿದೆ. ಘಾಟಿಯ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಸವಾರನು ಬಿದ್ದು ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ಮಾಗುಂಡಿ ಗ್ರಾಮದ ಇರ್ಫಾನ್ (29) ಎನ್ನಲಾಗಿದ್ದು ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಸರ್ಕಾರಿ ಬಸ್ ಧರ್ಮಸ್ಥಳದಿಂದ ಹರಪ್ಪನ ಹಳ್ಳಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ಚಾರ್ಮುಡಿ ಘಾಟ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ.

ಚಾರ್ಮಾಡಿ: ಬಸ್ ನ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು Read More »

ಕರಾವಳಿಗೆ ಎಂಟ್ರಿ ಕೊಡದ ಮುಂಗಾರು| ಆತಂಕದಲ್ಲಿ ರೈತಾಪಿ ವರ್ಗ| ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾದರೆ ಬಚಾವ್!!

ಸಮಗ್ರ ನ್ಯೂಸ್: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ಬಾರಿ ಮುಂಗಾರು ಪ್ರವೇಶದ ಲೆಕ್ಕದಲ್ಲಿ ಗೊಂದಲದಲ್ಲಿ ಸಿಲುಕಿದೆ. ಈ ಬಾರಿ ನಿರೀಕ್ಷೆಯ ಪ್ರಕಾರ ಮುಂಗಾರು ಪ್ರವೇಶ ಕೇರಳಕ್ಕೆ ನಿಧಾನವಾಗುತ್ತಿದೆ. ಇದಕ್ಕಾಗಿ ಎರಡು ದಿನಗಳ ಕಾಲ ಮುಂಗಾರು ಕುರಿತು ಮತ್ತಷ್ಟು ಅಧ್ಯಯನಕ್ಕೆ ಇಳಿದು ಬಿಟ್ಟಿದೆ. ಕೇರಳದಲ್ಲಿ ಮುಂಗಾರು ಪ್ರವೇಶ ಜೂನ್ 4ರ ಬಳಿಕ ಆಗಬಹುದು ಎಂದು ಐಎಂಡಿ ಮೊದಲು ವರದಿ ನೀಡಿತ್ತು. ಆದರೆ ಈ ಬಳಿಕ ಇದು ಜೂನ್ 7ರಿಂದ 8ರೊಳಗೆ ಆಗುವ ಸಾಧ್ಯತೆಗಳು ಇದೆ ಎನ್ನುವ ಅಂದಾಜು

ಕರಾವಳಿಗೆ ಎಂಟ್ರಿ ಕೊಡದ ಮುಂಗಾರು| ಆತಂಕದಲ್ಲಿ ರೈತಾಪಿ ವರ್ಗ| ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾದರೆ ಬಚಾವ್!! Read More »

ಸುಂಟಿಕೊಪ್ಪ: ನಾಪತ್ತೆಯಾಗಿದ್ದ ಯುವಕ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ಎರಡು ದಿನದಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ನೇಣುಬಿಗಿದುಕೊಂಡು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಡಗು ಜಿಲ್ಲೆ ಸುಂಟಿಕೊಪ್ಪದಲ್ಲಿ ಘಟನೆ ನಡೆದಿದ್ದು, ಬಾಳೆಕಾಡು ತೋಟದ ನಿವಾಸಿ ಕಪಾಲಿ ಮುರುಗೇಶ್ ಅವರ ಪುತ್ರ ವಿಜಯ (23) ಮೃತ ಯುವಕ. ಈತ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ. ಸೋಮವಾರ ಸಂಜೆ ತೋಟದ ಮರ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕಾರ್ಮಿಕರು ಕೆಲಸ ಮಾಡಿ ತೆರಳುವ ವೇಳೆ ಯುವಕ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಕಂಡುಬಂದಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ

ಸುಂಟಿಕೊಪ್ಪ: ನಾಪತ್ತೆಯಾಗಿದ್ದ ಯುವಕ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ಮಂಗಳೂರು: ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆ

ಸಮಗ್ರ ನ್ಯೂಸ್: ನಗರದ ಕಲ್ಲಾಪು ಯುನಿಟಿ ಹಾಲ್ ಸಮೀಪ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದು, ಈ ಬಗ್ಗೆ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 60 ವರ್ಷವಾಗಿರುವ ಇವರು 5.9 ಅಡಿ ಎತ್ತರ, ಗೋಧಿ-ಬಿಳಿ ಮೈಬಣ್ಣ ಹಾಗೂ ಸದೃಢ ಶರೀರ ಹೊಂದಿರುತ್ತಾರೆ. ಕುತ್ತಿಗೆ ಮತ್ತು ಸೊಂಟದ ಮೇಲೆ ಕಪ್ಪು ಎಳ್ಳು ಮಚ್ಚೆ ಇರುತ್ತದೆ. ಬಲಗೈ ಮೇಲೆ ಮುರುಗಾ ಚಿತ್ರದ ಅಚ್ಚೆ ದ್ದು, 2 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು ಮತ್ತು

ಮಂಗಳೂರು: ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆ Read More »

ಮಂಗಳೂರು: ಜೂ.6,7 ರಂದು ದ.ಕ ಜಿಲ್ಲೆಯಲ್ಲಿ ಗೃಹ ಸಚಿವರ ಪ್ರವಾಸ

ಸಮಗ್ರನ್ಯೂಸ್: ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಜೂ.6 ಹಾಗೂ 7ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ವಿವರ:ಜೂ.6ರಂದು ಬೆಳಿಗ್ಗೆ 8.35ಕ್ಕೆ ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ, 8.45ಕ್ಕೆ ನಗರದ ಸಕ್ರ್ಯೂಟ್ ಹೌಸ್‍ಗೆ ತೆರಳುವರು. ಬೆಳಿಗ್ಗೆ 10 ಗಂಟೆಗೆ ಪೊಲೀಸ್ ಪಶ್ಚಿಮ ವಲಯ ಕಚೇರಿ ಭೇಟಿ ಮತ್ತು ವಲಯ ಪರಿಶೀಲನಾ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲಿದ್ದಾರೆ. 12.30ಕ್ಕೆ ಪೊಲೀಸ್ ಆಯುಕ್ತರ ಕಚೇರಿಗೆ

ಮಂಗಳೂರು: ಜೂ.6,7 ರಂದು ದ.ಕ ಜಿಲ್ಲೆಯಲ್ಲಿ ಗೃಹ ಸಚಿವರ ಪ್ರವಾಸ Read More »

ಮಂಗಳೂರು: ವಿಶ್ವ ಪರಿಸರ ದಿನಾಚರಣೆ | ಕುದ್ರುವಿನಲ್ಲಿ ಕಾಂಡ್ಲಾ ಸಸಿ ನಾಟಿ

ಸಮಗ್ರನ್ಯೂಸ್: ಅರಣ್ಯ ಇಲಾಖೆಯ ಮಂಗಳೂರು ಅರಣ್ಯ ವಿಭಾಗದಿಂದ ಜೂ.5ರ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಡಲತೀರದಲ್ಲಿ ಕಾಂಡ್ಲಾವನದ ಮಹತ್ವ ಮತ್ತು ಉಪಯುಕ್ತತೆ ಕಾಂಡ್ಲಾ ಸಸಿ ನೆಡುವ ಮತ್ತು ಒಲವು ಮೂಡಿಸುವ ಕಾರ್ಯಕ್ರಮವನ್ನು ಮಂಗಳೂರು ಪ್ಯಾರಡೈಸ್ ಐಲ್ಯಾಂಡ್ (ಕುದ್ರು)ನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಿ ಕಾಂಡ್ಲಾ ಬೀಜ ಬಿತ್ತನೆಯೊಂದಿಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಕಾಂಡ್ಲಾ ವನ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿ ಆನ್‍ಲೈನ್ ಮೂಲಕ ಪರಿಸರ

ಮಂಗಳೂರು: ವಿಶ್ವ ಪರಿಸರ ದಿನಾಚರಣೆ | ಕುದ್ರುವಿನಲ್ಲಿ ಕಾಂಡ್ಲಾ ಸಸಿ ನಾಟಿ Read More »

ಖಾಸಗಿ ಬಸ್- ಬೈಕ್ ಅಪಘಾತ| ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಸಾವು

ಸಮಗ್ರ ನ್ಯೂಸ್: ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಹಂಡೇಲು ಎಂಬಲ್ಲಿ ಖಾಸಗಿ ಬಸ್‌ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ, ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಳ್ವಾಸ್ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿ ಎಡಪದವು ರಾಜೇಶ್ವರೀ ಜ್ಯುವೆಲ್ಲರ್ಸ್‌ನ ಚಂದ್ರಹಾಸ ಆಚಾರ್ಯ ಅವರ ಪುತ್ರ ಕಾರ್ತಿಕ್ ಆಚಾರ್ಯ (19) ಮೃತಪಟ್ಟವರು. ಸಹಸವಾರ ಅದೇ ಕಾಲೇಜಿನ ವಿದ್ಯಾರ್ಥಿ ಹರ್ಷ ಎಂಬವರು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಕಾರ್ತಿಕ್ ಅವರು ಕಾಲೇಜು ಮುಗಿಸಿ ತನ್ನ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ

ಖಾಸಗಿ ಬಸ್- ಬೈಕ್ ಅಪಘಾತ| ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಸಾವು Read More »

ರಾಜ್ಯಸರ್ಕಾರದಿಂದ ‘ಶಕ್ತಿ’ ಯೋಜನೆಗೆ ಅಧಿಕೃತ ಆದೇಶ ಜಾರಿ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದಿಂದ ಈಗಾಗಲೇ ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗೆ ಮಾರ್ಗಸೂಚಿಯನ್ನು ಪ್ರಕಟಿಸಿತ್ತು. ಈ ಬೆನ್ನಲ್ಲೇ ಇಂದು ರಾಜ್ಯದ ಎಲ್ಲಾ ಮಹಿಳಾ ಪ್ರಯಾಣಿಕರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆ ಜಾರಿಗೊಳಿಸಿ, ಆಡಳಿತಾತ್ಮಕ ಅನುಮೋದನೆಯ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಕುರಿತಂತೆ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ.ವಿಎಸ್ ಅವರು ನಡವಳಿಗಳನ್ನು ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರು ನಾಲ್ಕು

ರಾಜ್ಯಸರ್ಕಾರದಿಂದ ‘ಶಕ್ತಿ’ ಯೋಜನೆಗೆ ಅಧಿಕೃತ ಆದೇಶ ಜಾರಿ Read More »

ಭೀಕರ ಅಪಘಾತ| ಮಲೆಯಾಳಂ ನಟ ಕೊಲ್ಲಂ ಸುಧಿ ದುರ್ಮರಣ

ಸಮಗ್ರ ನ್ಯೂಸ್: ಕಾರು ಮತ್ತು ಪಿಕಪ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಲಯಾಳಂ ನಟ ಮತ್ತು ಮಿಮಿಕ್ರಿ ಕಲಾವಿದ ಕೊಲ್ಲಂ ಸುಧಿ ಸಾವನ್ನಪ್ಪಿದ್ದಾರೆ. ತ್ರಿಶೂರ್​ನ ಕೈಪಮಂಗಲಂ ಪಣಾಂಬಿಕುನ್​ನಲ್ಲಿ ಬೆಳಗಿನ ಜಾವ 4.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಕೊಲ್ಲ ಸುಧಿ ಮತ್ತು ತಂಡ ಕೋಯಿಕ್ಕೋಡ್​ನ ವಡಕಾರದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಕಾರ್ಯಕ್ರಮವನ್ನು ಮುಗಿಸಿ ಮುಂಜಾನೆ ಹಿಂತಿರುಗುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಪಿಕಪ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸುಧಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ

ಭೀಕರ ಅಪಘಾತ| ಮಲೆಯಾಳಂ ನಟ ಕೊಲ್ಲಂ ಸುಧಿ ದುರ್ಮರಣ Read More »

ಬಾಲಸೋರ್ ರೈಲು ದುರಂತದ ಬೆನ್ನಲ್ಲೇ, ಒಡಿಶಾದಲ್ಲಿ ಮತ್ತೊಂದು ದುರಂತ

ಸಮಗ್ರ ನ್ಯೂಸ್: ಇಡೀ ಜಗತ್ತನ್ನು ಬೆಚ್ಚಿಬೀಳಿಸಿದ ಬಾಲಸೋರ್ ರೈಲು ದುರಂತದ ಬೆನ್ನಲ್ಲೇ, ಒಡಿಶಾದಲ್ಲಿ ಮತ್ತೊಂದು ರೈಲು ಹಳಿ ತಪ್ಪಿದೆ ಎಂದು ವರದಿಯಾಗಿದೆ. ಬರ್ಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಒಡಿಶಾದ ಬಾಲಸೋರ್‌ನಲ್ಲಿ ಮೂರು ದಿನಗಳ ಹಿಂದಷ್ಟೇ ತ್ರಿವಳಿ ರೈಲು ಅಪಘಾತ ಸಂಭವಿಸಿ 275 ಮಂದಿ ಮೃತಪಟ್ಟಿದ್ದರು. ಈ ಕಹಿ ಘಟನೆ ಜನಮಾನಸದಿಂದ ಮಾಸುವ ಮೊದಲೇ ಒಡಿಶಾದಲ್ಲಿ ಮತ್ತೊಂದು ರೈಲು ಹಳ್ಳಿ ತಪ್ಪಿದ್ದು ಒಡಿಶಾದ ಬರಘಢ ಜಿಲ್ಲೆಯಲ್ಲಿ ಸುಣ್ಣದ ಕಲ್ಲು ಹೊತ್ತು ಸಾಗುತ್ತಿದ್ದ ಸರಕು ಸಾಗಣೆ ರೈಲಿನ 5

ಬಾಲಸೋರ್ ರೈಲು ದುರಂತದ ಬೆನ್ನಲ್ಲೇ, ಒಡಿಶಾದಲ್ಲಿ ಮತ್ತೊಂದು ದುರಂತ Read More »