May 2023

ಚಿಕ್ಕಮಗಳೂರು: ಮಲೆನಾಡಲ್ಲಿ ಧಾರಾಕಾರ ಆಲಿಕಲ್ಲು ಮಳೆ| ಧರೆಗುರುಳಿದ ಮರ, ಟ್ರಾಫಿಕ್ ಜಾಮ್

ಸಮಗ್ರ ನ್ಯೂಸ್: ಕಾದ ಕಾವಲಿಯಂತಾಗಿದ್ದ ಜಿಲ್ಲೆಯ ಮಲೆನಾಡು ಭಾಗಕ್ಕೆ ವರುಣದೇವ ಕೃಪೆ ತೋರಿದ್ದು, ಕಳೆದೊಂದು ಗಂಟೆಯಿಂದ ಮೂಡಿಗೆರೆ ತಾಲೂಕಿನ ಸುತ್ತಮುತ್ತ ಧಾರಾಕಾರವಾಗಿ ಆಲಿಕಲ್ಲು ಮಳೆ ಸುರಿಯುತ್ತಿತ್ತು ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.‌ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಣಕಲ್ ಬಾಳೂರು, ಹೊರಟ್ಟಿ, ಸಬ್ಬೇನಹಳ್ಳಿ ಸೇರಿದಂತೆ ಸುತ್ತಮುತ್ತ ಆಲಿಕಲ್ಲು ಸಮೇತ ಭಾರೀ ಮಳೆ ಸುರಿಯುತ್ತಿದೆ. ಮಳೆಗಾಗಿ ಆಕಾಶ ನೋಡುತ್ತಿದ್ದ ಮಲೆನಾಡಿಗರ ಮೊಗದಲ್ಲಿ ಮಂದಹಾಸ ಮೂಡಿದೆ. ಭಾರಿ ಮಳೆ-ಗಾಳಿಯಿಂದ ಕೊಟ್ಟಿಗೆಹಾರ ಹಾಗೂ ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ವಾಹನದಟ್ಟಣೆ ಕೂಡ […]

ಚಿಕ್ಕಮಗಳೂರು: ಮಲೆನಾಡಲ್ಲಿ ಧಾರಾಕಾರ ಆಲಿಕಲ್ಲು ಮಳೆ| ಧರೆಗುರುಳಿದ ಮರ, ಟ್ರಾಫಿಕ್ ಜಾಮ್ Read More »

ಚಿಕ್ಕಮಗಳೂರು : ಬೈಕ್ ಮೇಲೆ ಬಿದ್ದ ಮರ| ಸವಾರ ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್:‌ ಬೈಕ್ ಮೇಲೆ ಮರ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಚಿಕ್ಕಹಳ್ಳ ಬಳಿ ಸಂಭವಿಸಿದೆ. ವೇಣುಗೋಪಾಲ್ (45) ಮೃತ ದುರ್ದೈವಿ. ಮೂಲತಃ ಉತ್ತರ ಕರ್ನಾಟಕದವರಾದ ಇವರು ಚಿಕ್ಕಹಳ್ಳ ಗ್ರಾಮದಲ್ಲಿ ಹೋಂ ಸ್ಟೇ ಜೊತೆಗೆ ಮೂಡಿಗೆರೆಯಲ್ಲಿ ಬಳೆ ಅಂಗಡಿ ನಡೆಸುತ್ತಿದ್ದರು. ಈ ಕಾರಣ ಇವರು ತನ್ನ ಹೋಂ ಸ್ಟೇಯಿಂದ ಮನೆಗೆ ತೆರಳುತ್ತಿದ್ದಾಗ ಹೋಂ ಸ್ಟೇಯ ತುಸು ದೂರದಲ್ಲಿ ಒಂದರ ಹಿಂದೆ ಒಂದರಂತೆ ಒಂದೇ ಕಾಲಕ್ಕೆ ಮೂರು ಮರಗಳು ಬಿದ್ದು ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಚಿಕ್ಕಮಗಳೂರು : ಬೈಕ್ ಮೇಲೆ ಬಿದ್ದ ಮರ| ಸವಾರ ಸ್ಥಳದಲ್ಲೇ ಸಾವು Read More »

ಬೆಂಗಳೂರಿನಲ್ಲಿ ಮರಣ ಮಳೆ| ಮೃತ ಮಹಿಳೆ ಕುಟುಂಬಕ್ಕೆ 5 ಲಕ್ಷ ಪರಿಹಾರ – ಸಿಎಂ‌ ಘೋಷಣೆ

ಸಮಗ್ರ ನ್ಯೂಸ್: ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಪ್ರವಾಸಕ್ಕೆ ಬಂದಿದ್ದ ಕುಟುಂಬವೊಂದರ ಇನ್ಫೋಸಿಸ್‌ ಉದ್ಯೋಗಿಯಾಗಿದ್ದ ಭಾನುರೇಖಾ ಎಂಬ ಮಹಿಳೆ ಭಾರೀ ಮಳೆಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ, ಮೃತ ಮಹಿಳೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಡೆದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಳೆಯಿಂದ ಸಂಕಷ್ಟಕ್ಕೆ ಸಿಲುಕಿ ಆಸ್ಪತ್ರೆ ಸೇರಿರುವವರ ಖರ್ಚನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಮೃತಪಟ್ಟ ಮಹಿಳೆಯ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ

ಬೆಂಗಳೂರಿನಲ್ಲಿ ಮರಣ ಮಳೆ| ಮೃತ ಮಹಿಳೆ ಕುಟುಂಬಕ್ಕೆ 5 ಲಕ್ಷ ಪರಿಹಾರ – ಸಿಎಂ‌ ಘೋಷಣೆ Read More »

“ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಹಿಷ್ಕರಿಸಿ” |ಶಾಸಕ ಹರೀಶ್ ಪೂಂಜಾರಿಂದ ಬೆಳ್ತಂಗಡಿ ಜನತೆಗೆ ಮನವಿ?

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅನುಷ್ಟಾನಕ್ಕೆ ತರಲಿರುವ ಗ್ಯಾರಂಟಿ ಯೋಜನೆಗಳನ್ನು ಬಹಿಷ್ಕರಿಸುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕ್ಷೇತ್ರದ ಜನತೆಗೆ ಮನವಿ ಮಾಡಿದ್ದಾರೆ ಎಂಬ ಪೋಸ್ಟರ್ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ನೀವು ಉಚಿತ ಯೋಜನೆಗಳನ್ನು ಪಡೆದರೆ ನನ್ನ ಮಾನ ಹರಾಜು ಹಾಕಿದಂತೆ, ಸ್ವಾಭಿಮಾನ ಇರುವ ನಾವು ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳುವುದು ಬೇಡ, ಯೋಜನೆಗಳನ್ನು ಬಹಿಷ್ಕರಿಸಿ ನನ್ನ ಮಾನ ಉಳಿಸಿ’ ಎಂದು ಮನವಿ ಮಾಡಲಾದ ಪೋಸ್ಟರ್ ಅನ್ನು ಜಾಲತಾಣಗಳಲ್ಲಿ ಕೆಲವರು ಹಂಚಿಕೊಂಡಿದ್ದಾರೆ.

“ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಹಿಷ್ಕರಿಸಿ” |ಶಾಸಕ ಹರೀಶ್ ಪೂಂಜಾರಿಂದ ಬೆಳ್ತಂಗಡಿ ಜನತೆಗೆ ಮನವಿ? Read More »

ಚಂದನವನದ ಪ್ರಮುಖ ನಟ ಮಂಜುನಾಥ್ ಹೆಗ್ಡೆ ಇದೀಗ ಬೇರ ಚಿತ್ರದಲ್ಲಿ

ಸಮಗ್ರ ನ್ಯೂಸ್: ಜೂನ್ ತಿಂಗಳ ಮೊದಲ ವಾರದಲ್ಲೇ ತೆರೆಗೆ ಬರಲಿದೆ “ಬೇರ”ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳಲ್ಲಿ ಮಂಜುನಾಥ್ ಹೆಗಡೆಯವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಇವರು ಚಂದನವನಕ್ಕೆ ಕಾಲಿಟ್ಟಿದ್ದು ಒಂದು ಕಾಕಾತಾಳಿ ಸರಿ. ಚಿಕ್ಕ ವಯಸ್ಸಿನಲ್ಲೇ ಇವರು ಕಾಲೇಜಿನಲ್ಲಿ ಸಣ್ಣಪುಟ್ಟ ನಾಟಕಗಳಲ್ಲಿ ನಟಿಸುತ್ತಿದ್ದರು. ಅವರ ಖುಷಿಗಾಗಿ ಮಾಡುತ್ತಿದ್ದ ಆ ನಾಟಕ ಇಂದು ಅವರ ಜೀವನವನ್ನೇ ಬದಲಿಸಿದೆ. ಕಾಲೇಜಿನಲ್ಲಿ ಇವರ ಅಧ್ಯಾಪಕರಾದ ಎಂ.ಎನ್ ಮುರುಳಿಧರ್ ಅವರು ಇವರ ಕಲೆಯನ್ನು ಗುರುತಿಸಿ ಪಿಜಿ ಡಿಪ್ಲೋಮಾ ಇನ್ ಡ್ರಾಮಾ ಕೋರ್ಸ್ಅನ್ನು ಮಾಡಲು ಸಲಹೆಯನ್ನು ನೀಡಿದರು.

ಚಂದನವನದ ಪ್ರಮುಖ ನಟ ಮಂಜುನಾಥ್ ಹೆಗ್ಡೆ ಇದೀಗ ಬೇರ ಚಿತ್ರದಲ್ಲಿ Read More »

ಸುಳ್ಯ: ಸಿದ್ದರಾಮಯ್ಯ ಅಭಿನಂದನಾ ಬ್ಯಾನರ್ ಹರಿದ ಕಿಡಿಗೇಡಿಗಳು

ಸಮಗ್ರ ನ್ಯೂಸ್: ಕರ್ನಾಟಕದ ನೂತನ ಸಿಎಂ ಆಗಿ ಪದಗ್ರಹಣ ವಹಿಸಿಕೊಂಡ ಸಿದ್ದರಾಮಯ್ಯ ಅವರಿಗೆ ಅಭಿನಂದಿಸಿ ಹಾಕಲಾಗಿದ್ದ ಬ್ಯಾನರ್ ಅನ್ನು ಹರಿದ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ವಳಲಂಬೆಯಲ್ಲಿ ನಡೆದಿದೆ. ಇಲ್ಲಿನ ಬಸ್ ತಂಗುದಾಣ ಪಕ್ಕ ಸಿಎಂ ಸಿದ್ದರಾಮಯ್ಯರಿಗೆ ಅಭಿನಂದನೆ ಸಲ್ಲಿಸುವ ಬ್ಯಾನರ್ ಅನ್ನು ಅವರ ಅಭಿಮಾನಿ ಬಳಗಿದಂದ ಅಳವಡಿಸಲಾಗಿತ್ತು. ಶನಿವಾರ ರಾತ್ರಿ ಈ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ ಘಟನೆ ನಡೆದಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಯ: ಸಿದ್ದರಾಮಯ್ಯ ಅಭಿನಂದನಾ ಬ್ಯಾನರ್ ಹರಿದ ಕಿಡಿಗೇಡಿಗಳು Read More »

ಪ್ರಭಾಕರ್ ಭಟ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಪ್ರಮೋದ್ ಮುತಾಲಿಕ್

ಸಮಗ್ರ ನ್ಯೂಸ್: ಪುತ್ತೂರಿನಲ್ಲಿ ನಡೆದ ಬ್ಯಾನರ್ ವಿವಾದದಲ್ಲಿ ಪೊಲೀಸರಿಂದ ಹಲ್ಲೆಗೊಳಲಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಕಾರ್ಯಕರ್ತರ ಆರೋಗ್ಯವನ್ನು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿಚಾರಿಸಿದರು. ಪುತ್ತೂರಿಗೆ ಆಗಮಿಸಿದ ಅವರು ಆಸ್ಪತ್ರೆಗೆ ತೆರಳಿ ಪೊಲೀಸರಿಂದ ಹಲ್ಲೆಗೊಳಗಾದ ಹಿಂದೂ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪೊಲೀಸ್ ದೌರ್ಜನ್ಯವನ್ನು ಕಾಂಗ್ರೇಸ್ ಮೇಲೆ ಆರೋಪ ಹೊರಿಸಿದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ್ ಪ್ರಭಾಕರ್ ಭಟ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು. ಪುತ್ತೂರಿನಲ್ಲಿ ನಡೆದ ಈ

ಪ್ರಭಾಕರ್ ಭಟ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಪ್ರಮೋದ್ ಮುತಾಲಿಕ್ Read More »

ಬಾಳೆ ಹಣ್ಣಿನ ಸಿಪ್ಪೆ, ತಲೆ ಕೂದಲಿಗೆ ನೀಡುತ್ತೆ ಪೋಷಣೆ!

ಸಮಗ್ರ ನ್ಯೂಸ್: ಬಾಳೆಹಣ್ಣಿನ ಸಿಪ್ಪೆಯನ್ನು ತ್ಯಾಜ್ಯವೆಂದು ಕಸದ ತೊಟ್ಟಗೆ ಎಸೆಯುತ್ತೇವೆ. ಆದರೆ ಇದರಿಂದ ಹೊಳೆಯುವಂತಹ, ದಪ್ಪವಾದ, ಸೊಂಟದವರೆಗೆ ಕೂದಲನ್ನು ನೀಡಲು ಸಹಾಯಕವಾಗಿದೆ ಎಂದು ನಿಮಗೆ ತಿಳಿದಿದ್ಯಾ? ಅಲ್ಲದೇ ಇದರಿಂದ ನೀವು ಮಾಸ್ಕ್ ಅನ್ನು ಕೂಡ ತಯಾರಿಸಬಹುದು. ಅದು ಹೇಗೆ ಅಂತೀರಾ? ಮುಂದೆ ಓದಿ. ಅನೇಕ ಜನರು ಹಲವಾರು ದೈಹಿಕ ಸಮಸ್ಯೆ ಸೇರಿದಂತೆ ಕೂದಲು ಉದುರುವಿಕೆಯಿಂದ ಬೇಸತ್ತುಹೋಗಿದ್ದಾರೆ. ವಿವಿಧ ರಾಸಾಯನಿಕ ಶಾಂಪೂಗಳನ್ನು ಬಳಕೆಯೆ ಬದಲಿಗೆ ಈ ಮನೆಮದ್ದನ್ನು ಬಳಸುವುದರಿಂದ ಕೂದಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂದು ತಿಳಿದರೆ ಬೆರಗಾಗುತ್ತೀರಿ. ಮಾಸ್ಕ್

ಬಾಳೆ ಹಣ್ಣಿನ ಸಿಪ್ಪೆ, ತಲೆ ಕೂದಲಿಗೆ ನೀಡುತ್ತೆ ಪೋಷಣೆ! Read More »

ಬೆಂಗಳೂರು – ಚಿಕ್ಕಮಗಳೂರು ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭ

ಸಮಗ್ರ ನ್ಯೂಸ್: ಪರಿಸರ ಸ್ನೇಹಿ ಸಾರಿಗೆ ಸೇವೆಗೆ ಆದ್ಯತೆ ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಹೊಸದಾಗಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ 6 ಇವಿ ಪವರ್‌ ಪ್ಲಸ್‌ ಎಂಬ ಎಲೆಕ್ಟ್ರಿಕ್‌ ಬಸ್‌ ಸೇವೆಯನ್ನು ಮೇ 19 ರಿಂದ ಆರಂಭಿಸಿದೆ. ಈ ಮೂಲಕ ಬೆಂಗಳೂರು- ಚಿಕ್ಕಮಗಳೂರು ಸಂಪರ್ಕದ ನಡುವೆ ಬರುವ ಹಾಸನ-ಬೇಲೂರು ಪ್ರಯಾಣಿಕರಿಗೂ ಸುಖಾಸೀನ ಎಲೆಕ್ಟ್ರಿಕ್‌ ಬಸ್‌ ಪ್ರಯಾಣದ ಅನುಕೂಲ ಸಿಕ್ಕಂತಾಗಿದೆ. ಬೆಂಗಳೂರಿನಿಂದ ನಿತ್ಯ ಬೆಳಿಗ್ಗೆ 5 ಗಂಟೆಯಿಂದ ಸಂಚಾರ ಆರಂಭವಾಗಲಿದ್ದು, ಬೆಳಿಗ್ಗೆ 6 ಗಂಟೆ, 8

ಬೆಂಗಳೂರು – ಚಿಕ್ಕಮಗಳೂರು ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭ Read More »

ಸೇನೆಯ ನೂತನ ಎಂಜಿಎಫ್ ಆಗು ಅಮರದೀಪ್ ಸಿಂಗ್ ಔಜ್ಲಾ ನೇಮಕ

ಸಮಗ್ರ ನ್ಯೂಸ್: ಚಿನಾರ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅಮರ್‌ದೀಪ್ ಸಿಂಗ್ ಔಜ್ಲಾ ಅವರನ್ನು ಭಾರತೀಯ ಸೇನೆಯ ನೂತನ ಮಾಸ್ಟರ್ ಜನರಲ್ ಸಸ್ಟೆನೆನ್ಸ್ (MGS) ಆಗಿ ನೇಮಿಸಲಾಗಿದೆ. ಯುದ್ಧ ಮತ್ತು ಶಾಂತಿ ಸನ್ನಡತೆ ಕಾಪಾಡುವ ನಿಟ್ಟಿನಲ್ಲಿ ಈ ನೇಮಕಾತಿ ನಡೆದಿದೆ. ಎಲ್ಲಾ ಸಮಯದಲ್ಲೂ ವಾಹನಗಳು ಮತ್ತು ಮಳಿಗೆಗಳು ಸೇರಿದಂತೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ಸಲಕರಣೆಗಳ ಹೆಚ್ಚಿನ ಲಭ್ಯತೆಯನ್ನು ಖಾತ್ರಿಪಡಿಸುವ ಮೂಲಕ ಯುದ್ಧ ಮತ್ತು ಶಾಂತಿಯ ಸಮಯದಲ್ಲಿ ಭಾರತೀಯ ಸೇನೆಯನ್ನು ಬೆಂಬಲಿಸುವುದು MGS ನ ಪಾತ್ರವಾಗಿದೆ. ಲೆಫ್ಟಿನೆಂಟ್

ಸೇನೆಯ ನೂತನ ಎಂಜಿಎಫ್ ಆಗು ಅಮರದೀಪ್ ಸಿಂಗ್ ಔಜ್ಲಾ ನೇಮಕ Read More »