April 2023

ಸುರಕ್ಷಿತವಲ್ಲ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇ| ಪ್ರಯಾಣಿಕರ ಪ್ರಾಣಕ್ಕಿಲ್ಲ ಗ್ಯಾರಂಟಿ!!

ಸಮಗ್ರ ನ್ಯೂಸ್: ರಾಜ್ಯದ ಸುಸಜ್ಜಿತ ಹೆದ್ದಾರಿ ಎಂದು ಹೇಳುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಕನಿಷ್ಠ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲ. ಪರಿಣಾಮ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರ ಜೀವಕ್ಕೆ ಗ್ಯಾರಂಟಿಯೇ ಇಲ್ಲದಂತಾಗಿದೆ. ನೂತನ ಬೆಂಗಳೂರು-ಮೈಸೂರು ಹೆದ್ದಾರಿ ಪ್ರಯಾಣಕ್ಕೆ ಮುಕ್ತವಾದ ಬಳಿಕ ಅಪಘಾತಗಳು ಹೆಚ್ಚಾಗಿವೆ. ಮೊದಲ ಹಂತದ ಹೆದ್ದಾರಿ ಉದ್ಘಾಟನೆಗೊಂಡು ಟೋಲ್‌ ಶುಲ್ಕ ಸಂಗ್ರಹಿಸಲು ಆರಂಭಿಸಿದೆಯಾದರೂ, ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಪ್ರಯಾಣಿಕರಿಗೆ ದೊರೆಯಬೇಕಾದ ಕನಿಷ್ಠ ಸುರಕ್ಷತಾ ಸೌಲಭ್ಯಗಳು ಇಲ್ಲ ಎಂಬ ಸಂಗತಿ ಏಪ್ರಿಲ್‌ 22 ರಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತ […]

ಸುರಕ್ಷಿತವಲ್ಲ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇ| ಪ್ರಯಾಣಿಕರ ಪ್ರಾಣಕ್ಕಿಲ್ಲ ಗ್ಯಾರಂಟಿ!! Read More »

ಪ್ರಸಿದ್ಧ ಬರಹಗಾರ ತಾರೆಕ್ ಫತಾಹ್ ಇನ್ನಿಲ್ಲ

ಸಮಗ್ರ ನ್ಯೂಸ್: ಪಾಕಿಸ್ತಾನ ಮೂಲದ ಕೆನಡಾದ ಬರಹಗಾರ ಮತ್ತು ಅಂಕಣಕಾರ ತಾರೆಕ್ ಫತಾಹ್ ಸೋಮವಾರ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿದ್ದು, ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ತಾರೆಕ್ ಮಗಳು ನತಾಶಾ ತಾರಿಕ್ ತಂದೆಯ ಸಾವನ್ನು ದೃಢಪಡಿಸಿದ್ದಾರೆ. ತಾರಿಕ್ ಅವರ ಮಗಳು ನತಾಶಾ ಟ್ವೀಟ್ ಮಾಡಿ, ‘ಪಂಜಾಬಿನ ಸಿಂಹ, ಹಿಂದೂಸ್ತಾನದ ಮಗ, ಕೆನಡಾದ ಗೆಳೆಯ, ಸತ್ಯದ ಪ್ರತಿಪಾದಕ, ನ್ಯಾಯಕ್ಕಾಗಿ ಹೋರಾಡುವ ವ್ಯಕ್ತಿ, ತುಳಿತಕ್ಕೊಳಗಾದವರ ಧ್ವನಿ ತಾರೀಖ್ ಫತೇಹ್ ಇನ್ನಿಲ್ಲ. ಅವರನ್ನು ಬಲ್ಲ ಮತ್ತು ಪ್ರೀತಿಸುವ ಎಲ್ಲರೊಂದಿಗೂ ಕ್ರಾಂತಿ ಮುಂದುವರಿಯುತ್ತದೆ’

ಪ್ರಸಿದ್ಧ ಬರಹಗಾರ ತಾರೆಕ್ ಫತಾಹ್ ಇನ್ನಿಲ್ಲ Read More »

ಹೆಲಿಕಾಪ್ಟರ್ ನ ರೆಕ್ಕೆ ಬಡಿದು ಅಧಿಕಾರಿ ಸಾವು

ಡೆಹ್ರಾಡೂನ್: ಹೆಲಿಕಾಪ್ಟರ್ ನ ರೆಕ್ಕೆ ಬಡಿದು ಅಧಿಕಾರಿಯೊಬ್ಬರು ಸಾವನಪ್ಪಿದ ಘಟನೆ ಗಡ್ವಾಲ್ ಮಂಡಲ್ ವಿಕಾಸ್ ನಿಗಮ್ ಹೆಲಿಪ್ಯಾಡ್‌ನಲ್ಲಿ ಸಂಭವಿಸಿದೆ. 2017 ರ ಬ್ಯಾಚ್ ರಾಜ್ಯ ಹಣಕಾಸು ಸೇವಾ ಅಧಿಕಾರಿ ಅಮಿತ್ ಸೈನಿ ಮೃತ ಅಧಿಕಾರಿ. ಅವರು ಏಪ್ರಿಲ್ 25 ರಂದು ಪ್ರಾರಂಭವಾಗುವ ಕೇದಾರನಾಥ ಯಾತ್ರೆಗೆ ಮುಂಚಿತವಾಗಿ ಆಡಿಟ್ ಮತ್ತು ತಪಾಸಣೆ ಸಂಬಂಧಿತ ಕೆಲಸಕ್ಕಾಗಿ ಭಾನುವಾರ ಬೆಳಿಗ್ಗೆ ಡೆಹ್ರಾಡೂನ್‌ನಿಂದ ಕೇದಾರನಾಥಕ್ಕೆ ಇತರ ಅಧಿಕಾರಿಗಳೊಂದಿಗೆ ತೆರಳಿದ್ದರು. ಕೆಲಸ ಮುಗಿದ ನಂತರ ಅಧಿಕಾರಿ ಡೆಹ್ರಾಡೂನ್‌ಗೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ . ಕೆಸ್ಟ್ರೆಲ್

ಹೆಲಿಕಾಪ್ಟರ್ ನ ರೆಕ್ಕೆ ಬಡಿದು ಅಧಿಕಾರಿ ಸಾವು Read More »

ಸುಳ್ಯ: ಕೊಲ್ಲಮೊಗ್ರದ ಯುವಕ ಬೆಂಗಳೂರಿನಲ್ಲಿ ಅಪಘಾತಕ್ಕೆ ಬಲಿ

ಸಮಗ್ರ ನ್ಯೂಸ್: ಕೊಲ್ಲಮೊಗ್ರ ಯುವಕನೋರ್ವ ಬೆಂಗಳೂರಿನಲ್ಲಿ ಅಪಘಾತಕ್ಕೆ ಬಲಿಯಾದ ಘಟನೆ ಎ.24 ರಂದು ಸಂಭವಿಸಿದೆ. ಕೊಲ್ಲಮೊಗ್ರ ಧರ್ಮಪಾಲ ಗೌಡ ಬಾಳೆಬೈಲು ಮತ್ತು ಶ್ರೀಮತಿ ವಿಮಲಾಕ್ಷಿ ದಂಪತಿಗಳ ಪುತ್ರ ಯತೀಶ್ ಬಾಳೆಬೈಲು ಮೃತಪಟ್ಟ ದುರ್ದೈವಿ. ಎ.24 ರ ಬೆಳಿಗ್ಗೆ ಯತೀಶ್ ರವರು ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾರೊಂದು ಡಿಕ್ಕಿ ಹೊಡೆದಿರುವುದು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಯತೀಶ್ ರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುವವುದಾಗಿ ತಿಳಿದು ಬಂದಿದೆ. ಅವಿವಾಹಿತರಾಗಿರುವ ಯತೀಶ್ ಅವರು ಬೆಂಗಳೂರಿನ ವಿಮಾನ ನಿಲ್ದಾಣ ಬಳಿ ಉದ್ಯೋಗದಲ್ಲಿದ್ದು,

ಸುಳ್ಯ: ಕೊಲ್ಲಮೊಗ್ರದ ಯುವಕ ಬೆಂಗಳೂರಿನಲ್ಲಿ ಅಪಘಾತಕ್ಕೆ ಬಲಿ Read More »

ಸ್ಯಾಂಡಲ್ ವುಡ್ ನಟ, ನಿರ್ದೇಶಕ ಟಪೋರಿ ಸತ್ಯ ನಿಧನ

ಸಮಗ್ರ ನ್ಯೂಸ್: ಸ್ಯಾಂಡಲ್‌ವುಡ್‌ ನಟ ಹಾಗೂ ನಿರ್ದೇಶಕ ಟಪೋರಿ ಸತ್ಯ ನಿಧನರಾಗಿದ್ದಾರೆ. ಟಪೋರಿ ಸತ್ಯ ನಂದ ಲವ್ಸ್ ನಂದಿತಾ ಸಿನಿಮಾ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ‘ಮೇಳ’ ಎನ್ನುವ ಸಿನಿಮಾವನ್ನು ನಿರ್ದೇಶನವನ್ನು ಮಾಡಿದ್ದಾರೆ. ಅನಾರೋಗ್ಯದಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅವರು ಪತ್ನಿ, ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

ಸ್ಯಾಂಡಲ್ ವುಡ್ ನಟ, ನಿರ್ದೇಶಕ ಟಪೋರಿ ಸತ್ಯ ನಿಧನ Read More »

ಬೆಳ್ತಂಗಡಿ: ಮಾಜಿ ಸಚಿವ ಗಂಗಾಧರ ಗೌಡ ಮನೆ‌ ಮೇಲೆ ಐಟಿ ದಾಳಿ

ಸಮಗ್ರ ನ್ಯೂಸ್: ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡ ಮತ್ತು ಮಗ ರಂಜನ್ ಗೌಡ ಅವರ ಮನೆಗಳಿಗೆ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಒಟ್ಟು ಮೂರು ಸ್ಥಳಗಳಿಗೆ ಇಂದು ಏ.24 ರಂದು ಬೆಳಗ್ಗೆ ದಾಳಿ ಸಂಭವಿಸಿದೆ. ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಪಕ್ಕದಲ್ಲಿರುವ ಮನೆಯ ಮೇಲೆ, ಲಾಯಿದಲ್ಲಿರುವ ಪ್ರಸನ್ನ ಎಜುಕೇಶನ್ ಇನ್ಸಿಟ್ಯೂಷನ್ ಮತ್ತು ಇಂದಬೆಟ್ಟುನಲ್ಲಿರುವ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ. ಇಂದು ಬೆಳಗ್ಗೆ 6.30 ರ ಸುಮಾರಿಗೆ ಇನೋವಾ ಕಾರಿನಲ್ಲಿ

ಬೆಳ್ತಂಗಡಿ: ಮಾಜಿ ಸಚಿವ ಗಂಗಾಧರ ಗೌಡ ಮನೆ‌ ಮೇಲೆ ಐಟಿ ದಾಳಿ Read More »

ರಾಜ್ಯದ ಹಲವೆಡೆ ಲೋಕಾಯುಕ್ತ ಮಿಂಚಿನ ದಾಳಿ| ಹಲವು ಭ್ರಷ್ಟ ತಿಮಿಂಗಿಲಗಳು ಬಲೆಗೆ

ಸಮಗ್ರ ನ್ಯೂಸ್: ರಾಜ್ಯದ ವಿವಿಧೆಡೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ ಮಾಡಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಕೆಲ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಾಗಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಬೀದರ್, ಕೋಲಾರ, ಬಳ್ಳಾರಿ ಸೇರಿದಂತೆ ಕೆಲ ಕಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ದಾಖಲಾತಿಗಳ ಪರಿಶೀಲನೆ ಮುಂದುವರೆಸಿದ್ದಾರೆ. ಬೀದರ್ ಜಿಲ್ಲೆಯ 6 ಕಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ. ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಬಸವಕಲ್ಯಾಣ ತಾಲೂಕಿನ ಮುಡಬಿಯ

ರಾಜ್ಯದ ಹಲವೆಡೆ ಲೋಕಾಯುಕ್ತ ಮಿಂಚಿನ ದಾಳಿ| ಹಲವು ಭ್ರಷ್ಟ ತಿಮಿಂಗಿಲಗಳು ಬಲೆಗೆ Read More »

ಕಟೀಲು ದುರ್ಗೆಯ ದರ್ಶನ ಪಡೆದ ನಟಿ‌ ಶಿಲ್ಪಾ ಶೆಟ್ಟಿ

ಸಮಗ್ರ ನ್ಯೂಸ್: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಯವರು ಇಂದು ಕಟೀಲಿಗೆ ಭೇಟಿ ನೀಡಿದ್ದರು. ಕುಟುಂಬ ಸಮೇತವಾಗಿ ಆಗಮಿಸಿದ್ದ ಶಿಲ್ಪಾ ಶೆಟ್ಟಿ ದುರ್ಗಾ ಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.‌ಮೂಲತಃ ಕತಾವಳಿಯವರಾದ ಶಿಲ್ಪಾಶೆಟ್ಟಿ ಮುಂಬೈನಲ್ಲಿ ನೆಲೆಸಿದ್ದಾರೆ.ಆದರೆ ಅವರು ತಮ್ಮ ಹುಟ್ಟೂರನ್ನು ಮರೆತಿಲ್ಲ. ಆಗಾಗ, ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುತ್ತಿರುತ್ತಾರೆ. ಭೂತ ಕೋಲಾ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರುತ್ತಾರೆ. ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಗಳ ದೇಗುಲಗಳ ದರ್ಶನವೂ ಮಾಡುತ್ತಿದ್ದಾರೆ.

ಕಟೀಲು ದುರ್ಗೆಯ ದರ್ಶನ ಪಡೆದ ನಟಿ‌ ಶಿಲ್ಪಾ ಶೆಟ್ಟಿ Read More »

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ನೋಂದಣಿ ಆರಂಭ

ಸಮಗ್ರ ನ್ಯೂಸ್: ಕರ್ನಾಟಕ ದ್ವಿತೀಯ ಪಿಯುಸಿ 2023 ರ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ದ್ವಿತೀಯ ಪಿಯುಸಿ ಸಪ್ಲಿಮೆಂಟರಿ (ಪೂರಕ) ಪರೀಕ್ಷೆಯ ನೋಂದಣಿ ಇಂದು kseab.karnataka.gov.in ನಲ್ಲಿ ಆರಂಭವಾಗಲಿದೆ. ಮಂಡಳಿಯು ಹೊರಡಿಸಿದ ಪತ್ರಿಕಾ ಹೇಳಿಕೆಯ ಪ್ರಕಾರ, ಫಲಿತಾಂಶಗಳ ಪ್ರಕಟಣೆಯ ದಿನಾಂಕದಿಂದ ನೋಂದಣಿ ಪ್ರಾರಂಭವಾಗುತ್ತದೆ ಮತ್ತು ದಂಡವಿಲ್ಲದೆ ಏಪ್ರಿಲ್ 26, 2023 ರವರೆಗೆ ಅರ್ಜಿ ಸಲ್ಲಿಸಬಹುದು. ದಂಡದೊಂದಿಗೆ ನೋಂದಣಿ ಪ್ರಕ್ರಿಯೆಯು ಏಪ್ರಿಲ್ 27 ರಂದು ಪ್ರಾರಂಭವಾಗುತ್ತದೆ ಮತ್ತು ಮೇ 2, 2023 ರಂದು ಮುಕ್ತಾಯಗೊಳ್ಳುತ್ತದೆ. ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಏಪ್ರಿಲ್

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ನೋಂದಣಿ ಆರಂಭ Read More »

‘ಶೋಭಕ್ಕ, ನಿಮ್ಮ ಪಕ್ಷದವರಂತೆ ನಾವು 40% ಕಮಿಷನ್ ಪಡೆದಿಲ್ಲ’ | ಶೋಭಾ ಕರಂದ್ಲಾಜೆ ಆರೋಪಕ್ಕೆ ಡಿಕೆಶಿ ಪ್ರತಿಕ್ರಿಯೆ

ಸಮಗ್ರ ನ್ಯೂಸ್: ‘ಶೋಭಕ್ಕ ನಿಮ್ಮ ಪಕ್ಷದವರಂತೆ ನಾವು 40 ಪರ್ಸೆಂಟ್‌ ಕಮಿಷನ್‌ ಪಡೆದಿಲ್ಲ. ನಿಮ್ಮ ಕಮಿಷನ್‌ ಸರ್ಕಾರದ ಬಗ್ಗೆ ಬಸನಗೌಡ ಪಾಟೀಲ್‌ ಯತ್ನಾಳ್‌, ನೆಹರೂ ಓಲೇಕಾರ್‌, ಮಾಡಾಳ್‌ ವಿರೂಪಾಕ್ಷಪ್ಪ, ಎಚ್‌. ವಿಶ್ವನಾಥ್‌, ಗೂಳಿಹಟ್ಟಿ ಶೇಖರ್‌ ಅವರೇ ಸಾಕ್ಷಿ ನೀಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ಟಿಕೆಟ್‌ ಅರ್ಜಿ ಜತೆಗೆ ಕಾಂಗ್ರೆಸ್‌ ಪಕ್ಷ 2 ಲಕ್ಷ ರೂ ಸ್ವೀಕರಿಸಿದೆ. ಹೀಗಾಗಿ ಚುನಾವಣಾ ಆಯೋಗವು 223 ಕಾಂಗ್ರೆಸ್‌ ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕಾರ ಮಾಡಬೇಕು ಎಂಬ ಕೇಂದ್ರ ಸಚಿವೆ

‘ಶೋಭಕ್ಕ, ನಿಮ್ಮ ಪಕ್ಷದವರಂತೆ ನಾವು 40% ಕಮಿಷನ್ ಪಡೆದಿಲ್ಲ’ | ಶೋಭಾ ಕರಂದ್ಲಾಜೆ ಆರೋಪಕ್ಕೆ ಡಿಕೆಶಿ ಪ್ರತಿಕ್ರಿಯೆ Read More »