January 2023

ದೀರ್ಘಕಾಲ ಮೊಬೈಲ್ ಬಳಸುವ ಅಭ್ಯಾಸ ಇದೆಯಾ? ಹಾಗಾದ್ರೆ ಈ ಸ್ಟೋರಿ ಓದ್ಲೇಬೇಕು

ಸಮಗ್ರ ನ್ಯೂಸ್: ಆಧುನಿಕ ತಂತ್ರಜ್ಞಾನದಿಂದಾಗಿ ಎಲ್ಲರೂ ಫೋನ್ ಬಳಸುತ್ತಿದ್ದಾರೆ. ಫೋನ್ ಬಳಸುವುದು ವಾಡಿಕೆಯಾಗಿಬಿಟ್ಟಿದೆ. ಪ್ರತಿಯೊಂದು ಸಣ್ಣ ಕೆಲಸವೂ ಮೊಬೈಲ್ ಮೇಲೆ ಅವಲಂಬಿತವಾಗಿರುತ್ತದೆ. ಕಛೇರಿಯ ಕೆಲಸದ ಅಗತ್ಯಗಳಿಗೂ ನಾವು ಲ್ಯಾಪ್ಟಾಪ್ ಬಳಸುತ್ತೇವೆ. ಅಲ್ಲದೇ ಮನೆಯಲ್ಲಿರುವ ಮಹಿಳೆಯರು ಬಹಳ ಹೊತ್ತು ಟಿವಿ ನೋಡುತ್ತಾರೆ. ಆದರೆ, ತಜ್ಞರು ಯಾವಾಗಲೂ ಪರದೆಯ ಮೇಲೆ ಹೆಚ್ಚು ಸಮಯ ಕಳೆಯುವುದರಿಂದ ನಿದ್ರಾಭಂಗ ಉಂಟಾಗುತ್ತದೆ ಎಂದು ಹೇಳುತ್ತಾರೆ. ಇನ್ನು ಫೋನ್ ಅಥವಾ ಇತರ ಸಾಧನಗಳನ್ನು ದೀರ್ಘಕಾಲ ಬಳಸಿದರೆ ಚರ್ಮ ಮತ್ತು ಕೂದಲಿನ ಸಮಸ್ಯೆಯೂ ಹೆಚ್ಚಾಗುತ್ತದೆ ಎಂದು ತಜ್ಞರು […]

ದೀರ್ಘಕಾಲ ಮೊಬೈಲ್ ಬಳಸುವ ಅಭ್ಯಾಸ ಇದೆಯಾ? ಹಾಗಾದ್ರೆ ಈ ಸ್ಟೋರಿ ಓದ್ಲೇಬೇಕು Read More »

ಅಥಣಿ: ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಮಹೇಶ ಕುಮಠಳ್ಳಿ

ಸಮಗ್ರ ನ್ಯೂಸ್ : ಅಥಣಿ ತಾಲೂಕಿನ‌ ಹುಲಗಬಾಳಿ ಗ್ರಾಮದಲ್ಲಿ‌ ಇದುವರೆಗೆ ಕನಿಷ್ಠ 10 ಕೋಟಿ ರೂ ಅನುದಾನದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ದೆನೆ, ಬರುವ ದಿನಮಾನದಲ್ಲಿ ಇನ್ನಷ್ಟು ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡು ಹುಲಗಬಾಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸುವೆ ಎಂದು ಅಥಣಿ ಶಾಸಕ ಹಾಗೂ ಕರ್ನಾಟಕ ಅಭಿವೃದ್ದಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಅವರು ಹೇಳಿದರು. ಅವರು ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ಸುಮಾರು 02 ಕೋಟಿ 50 ಲಕ್ಷ ರೂ ವೆಚ್ಚದಲ್ಲಿ ಅಥಣಿ ಕ್ಲಬ್ ನಿಂದ

ಅಥಣಿ: ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಮಹೇಶ ಕುಮಠಳ್ಳಿ Read More »

ಸಂತ್ರಸ್ತ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದ ಬಾವಾ!

ಸಮಗ್ರ ನ್ಯೂಸ್: ಮಹಾತ್ಮ ಗಾಂಧಿಯವರ ಪುಣ್ಯತಿಥಿ ಹಾಗೂ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಸಮಾರೋಪ ಹಿನ್ನೆಲೆಯಲ್ಲಿ ಇಲ್ಲಿನ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಮತ್ತು ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ಸೋಮವಾರ ಮುಂಜಾನೆ ನೆರವೇರಿತು. ಇದೇ ಸಂದರ್ಭದಲ್ಲಿ ಇತ್ತೀಚಿಗೆ ಯಕ್ಷಗಾನ ರಂಗಸ್ಥಳದಲ್ಲಿ ನಿಧಾನರಾದ ಖ್ಯಾತ ಯಕ್ಷಗಾನ ಕಲಾವಿದ ಗುರುವಪ್ಪ ಬಾಯಾರ್ ಹಾಗೂ ಕಾವೂರಿನಲ್ಲಿ ಬೆಂಕಿ ಆಕಸ್ಮಿಕದಿಂದ ಮನೆ ಕಳೆದುಕೊಂಡ ಇಂದಿರಾ ಅವರ ಕುಟುಂಬಕ್ಕೆ ಮಾಜಿ ಶಾಸಕ ಬಿ.ಎ. ಮೊಯಿದೀನ್ ಬಾವಾ ಅವರು ನೆರವಿನ ಚೆಕ್

ಸಂತ್ರಸ್ತ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದ ಬಾವಾ! Read More »

ಪುತ್ತೂರು: ಒಬ್ಬಳಿಗಾಗಿ ಇಬ್ಬರು ಹೊಡೆದಾಟ| 9 ಮಂದಿ ವಿರುದ್ಧ ಕೇಸ್

ಸಮಗ್ರ ನ್ಯೂಸ್: ಯುವಕನೋರ್ವ ತನ್ನ ಪ್ರಿಯತಮೆ ಜೊತೆ ಮಾತನಾಡುತ್ತಿರುವಾಗ ಆಕೆಯ ಮಾಜಿ ಪ್ರಿಯಕರ ಸ್ನೇಹಿತರೊಂದಿಗೆ ಬಂದು ಹಲ್ಲೆ ನಡೆಸಿದ್ದಾನೆಂದು ಆರೋಪಿಸಿ ಯುವಕನೋರ್ವ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾನೆ. ಮಂಗಳೂರು ಕೋಡಿಕಲ್ ನಿವಾಸಿ ಸಾಗರ್ (23) ನೀಡಿದ ದೂರಿನ ಮೇರೆಗೆ ಕೌಶಿಕ್, ಯಜ್ಞೇಶ್, ಕೇಶವ, ಸೃಜನ್, ವಿನೀತ್, ಲತೇಶ್, ಮನ್ವಿತ್, ಮೋಹಿತ್, ಹೇಮಂತ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ.29 ರಂದು ಮಧ್ಯಾಹ್ನ ಸಾಗರ್ ಕಂಬಳಗದ್ದೆಯಲ್ಲಿರುವ ವೇಳೆ ಆತನ ಪ್ರೇಯಸಿ ಕೂಡ ಇದ್ದು, ಅವಳಲ್ಲಿ

ಪುತ್ತೂರು: ಒಬ್ಬಳಿಗಾಗಿ ಇಬ್ಬರು ಹೊಡೆದಾಟ| 9 ಮಂದಿ ವಿರುದ್ಧ ಕೇಸ್ Read More »

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ತಾತ್ಕಾಲಿಕ ಆಯ್ಕೆಪಟ್ಟಿ ರದ್ದು| ರಾಜ್ಯ ಹೈಕೋರ್ಟ್ ನಿಂದ ಮಹತ್ವದ ಆದೇಶ

ಸಮಗ್ರ ನ್ಯೂಸ್: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕರೆಯಲಾಗಿದ್ದ 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಪ್ರವೇಶ ಪರೀಕ್ಷೆ, ದಾಖಲಾತಿ ಪರಿಶೀಲನೆ ಬಳಿಕ, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು.‌ ಈ ಪಟ್ಟಿಯನ್ನು ಇದೀಗ ರಾಜ್ಯ ಹೈಕೋರ್ಟ್ ನ ಏಕ ಸದಸ್ಯ ನ್ಯಾಯಪೀಠ ರದ್ದುಗೊಳಿಸಿದೆ. ಈ ಸಂಬಂಧ ನೂರಾರು ಅಭ್ಯರ್ಥಿಗಳು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರನ್ನೊಳಗೊಂಡ ಏಕ ಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿತು. ಹಿರಿಯ ವಕೀಲ ಶಶಿಕಿರಣ್

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ತಾತ್ಕಾಲಿಕ ಆಯ್ಕೆಪಟ್ಟಿ ರದ್ದು| ರಾಜ್ಯ ಹೈಕೋರ್ಟ್ ನಿಂದ ಮಹತ್ವದ ಆದೇಶ Read More »

ಮಂಗಳೂರು: ಅಪಘಾತ- ನಟ, ರಂಗಕರ್ಮಿ ಅರವಿಂದ ಬೋಳಾರ್ ಗಂಭೀರ

ಸಮಗ್ರ ನ್ಯೂಸ್: ತುಳು ರಂಗಭೂಮಿ, ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ತುಳುನಾಡ ಮಾಣಿಕ್ಯ ಖ್ಯಾತಿಯ ಅರವಿಂದ್ ಬೋಳಾರ್‌ರವರ ವಾಹನ ಸ್ಕಿಡ್ ಆಗಿ ಅಪಘಾತಕ್ಕೊಳಗಾದ ಘಟನೆ ಮಂಗಳೂರು ಪಂಪ್‌ವೆಲ್ ಬಳಿ ಜ.30 ರಂದು ಸಂಭವಿಸಿದೆ. ಅವರು ಚಲಾಯಿಸುತ್ತಿದ್ದ ಆಕ್ಟೀವಾ ಹೊಂಡಾ ಸ್ಕಿಡ್ ಹೊಡೆದು ಅಪಘಾತಕ್ಕೊಳಗಾಗಿದೆ. ಚಿಕಿತ್ಸೆಗಾಗಿ ಎನಪೋಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆಪರೇಷನ್‌ ನಡೆಸುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ.

ಮಂಗಳೂರು: ಅಪಘಾತ- ನಟ, ರಂಗಕರ್ಮಿ ಅರವಿಂದ ಬೋಳಾರ್ ಗಂಭೀರ Read More »

ಡಿಕೆಶಿ ಕಪ್ಪುಹಣವನ್ನು ವೈಟ್ ಮಾಡ್ತಿದಾರೆ| ಅಕ್ರಮ ಆಸ್ತಿಯನ್ನು ಸಕ್ರಮ‌ ಮಾಡ್ತಿದಾರೆ| ರಮೇಶ್ ಜಾರಕಿಹೋಳಿ ಗಂಭೀರ ಆರೋಪ

ಸಮಗ್ರ ನ್ಯೂಸ್: ಆಡಿಯೋ ಬಾಂಬ್​ ಸಿಡಿಸುವ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರು ಡಿಕೆಶಿ ಅಕ್ರಮ ಆಸ್ತಿ ಮತ್ತು ಅವರು ಕಪ್ಪು ಹಣವನ್ನು ವೈಟ್​ ಮನಿಯನ್ನಾಗಿ ಮಾಡುವ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಗ್ರಾಮೀಣ ಭಾಗದ ಶಾಸಕಿ ಹೆಬ್ಬಾಳ್ಕರ್‌ಗೆ ಸಕ್ಕರೆ ಫ್ಯಾಕ್ಟರಿ ಇದ್ದು, ಕಳೆದ ನಾಲ್ಕೈದು ವರ್ಷದಿಂದ ಸಾವಿರಾರು ಕೋಟಿ ಆವ್ಯವಹಾರವಾಗಿದೆ. ಬ್ಯಾಂಕ್​ ಲೋನ್​ ಡೈವರ್ಟ್​​ ಆಗಿದೆ. ಮಹಾನಾಯಕನ ಬಗ್ಗೆ ತನಿಖೆ ಆಗಬೇಕು. ಬ್ಯಾಕ್​ಮನಿಯನ್ನು ವೈಟ್​ ಮನಿಯನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ. ಇದನ್ನು ಸಿಬಿಐಗೆ

ಡಿಕೆಶಿ ಕಪ್ಪುಹಣವನ್ನು ವೈಟ್ ಮಾಡ್ತಿದಾರೆ| ಅಕ್ರಮ ಆಸ್ತಿಯನ್ನು ಸಕ್ರಮ‌ ಮಾಡ್ತಿದಾರೆ| ರಮೇಶ್ ಜಾರಕಿಹೋಳಿ ಗಂಭೀರ ಆರೋಪ Read More »

ಬೆಳ್ತಂಗಡಿ: ವೈಯಕ್ತಿಕ ವೀಡಿಯೋ ವೈರಲ್ ಬೆದರಿಕೆ|ಭಯಗೊಂಡ ವಿದ್ಯಾರ್ಥಿ ಆತ್ಮಹತ್ಯೆ

ಸಮಗ್ರ ನ್ಯೂಸ್: ವೈಯಕ್ತಿಕ ವೀಡಿಯೋ ವೈರಲ್ ಮಾಡೋದಾಗಿ ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ್ದರಿಂದ ಭಯಗೊಂಡ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿಯ ಖಾಸಗಿ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಹರ್ಷಿತ್ ಮೃತ ವ್ಯಕ್ತಿ. ಈತನಿಗೆ ಇನ್ ಸ್ಟಾಗ್ರಾಂ ನಲ್ಲಿ  ಅಪರಿಚಿತ ವ್ಯಕ್ತಿ ಪರಿಚಯವಾಗಿದ್ದು, ಇವರು ಚಾಟ್ ಮಾಡುತ್ತಿದ್ದಲ್ಲದೆ  ವೀಡಿಯೋಕಾಲ್ ಮಾಡಿ ಮಾತನಾಡುತ್ತಿದ್ದರೆನ್ನಲಾಗಿದೆ.  ಈ ನಡುವೆ ಅಪರಿಚಿತ  ತನ್ನ ಬಳಿ  ನಿನ್ನ ವೈಯುಕ್ತಿಕ ವೀಡಿಯೋ ಇದೆ, ಹಣ ನೀಡದಿದ್ದಲ್ಲಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಆದರೆ ಹಣ ನೀಡಲು ಸಾಧ್ಯವಾಗದ ವಿದ್ಯಾರ್ಥಿ ಭಯಗೊಂಡು ಮನೆಯಲ್ಲಿ ಜ.24 ರಂದು ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮನೆಯವರು ಇದನ್ನು ಗಮನಿಸಿದ್ದು ಕೂಡಲೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ . ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಳ್ತಂಗಡಿ: ವೈಯಕ್ತಿಕ ವೀಡಿಯೋ ವೈರಲ್ ಬೆದರಿಕೆ|ಭಯಗೊಂಡ ವಿದ್ಯಾರ್ಥಿ ಆತ್ಮಹತ್ಯೆ Read More »

ಕಾರ್ಕಳ: ಟೈಮಿಂಗ್ ವಿಚಾರದಲ್ಲಿ ಸರ್ಕಾರಿ ಬಸ್ ಚಾಲಕ, ಖಾಸಗಿ ಬಸ್ ಕಂಡಕ್ಟರ್ ನಡುವೆ ಮಾರಾಮಾರಿ

ಸಮಗ್ರ ನ್ಯೂಸ್: ಟೈಮಿಂಗ್ ವಿಚಾರದಲ್ಲಿ ಸರ್ಕಾರಿ ಬಸ್ ಚಾಲಕ ಹಾಗೂ ಖಾಸಗಿ ಬಸ್ ನಡುವೆ ನಿರ್ವಾಹಕ ಹೊಡೆದಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ಬಸ್ ನಿಲ್ದಾಣದಲ್ಲಿ ನಡೆದಿದೆ. ಸರಕಾರಿ ಬಸ್ ಚಾಲಕ ಮೊಹಮ್ಮದ್ ಸೈಯದ್ ಮತ್ತು ಖಾಸಗಿ ಬಸ್ ಕಂಡಕ್ಟರ್ ಟೈಮಿಂಗ್ ವಿಚಾರದಲ್ಲಿ ಮೊದಲು ಜಗಳವಾಡಿದ್ದು, ನಂತರ ಜಗಳ ತಾರಕಕ್ಕೆ ಏರಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಅಲ್ಲದೇ ಸರ್ಕಾರಿ ಬಸ್ ಚಾಲಕ ಖಾಸಗಿ ಬಸ್ ನಿರ್ವಾಹಕನಿಗೆ ಚಪ್ಪಲಿ ಏಟು ನೀಡಿದ ಘಟನೆಯೂ ನಡೆಯಿತು. ಸದ್ಯ ಇಬ್ಬರೂ ಬಡಿದಾಡಿಕೊಂಡ ವಿಡಿಯೋ

ಕಾರ್ಕಳ: ಟೈಮಿಂಗ್ ವಿಚಾರದಲ್ಲಿ ಸರ್ಕಾರಿ ಬಸ್ ಚಾಲಕ, ಖಾಸಗಿ ಬಸ್ ಕಂಡಕ್ಟರ್ ನಡುವೆ ಮಾರಾಮಾರಿ Read More »

ಪಾಕಿಸ್ತಾನದ ಪೇಶಾವರದಲ್ಲಿ ಬಾಂಬ್ ಸ್ಪೋಟ| 17 ಸಾವು, ನೂರಾರು ಜನ ಗಂಭೀರ

ಸಮಗ್ರ ನ್ಯೂಸ್ : ಪಾಕಿಸ್ತಾನದ ಪೇಶಾವರದಲ್ಲಿ ಮಸೀದಿಯೊಂದರ ಬಳಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದ್ದು, ಇದ್ರಲ್ಲಿ 17 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ವಿನಾಶಕಾರಿ ಸ್ಫೋಟದಲ್ಲಿ 90ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, 17 ಮಂದಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಲೇಡಿ ರೀಡಿಂಗ್ ಹಾಸ್ಪಿಟಲ್ (LRC) ವಕ್ತಾರ ಮೊಹಮ್ಮದ್ ಅಸಿಮ್ ಅವರ ಪ್ರಕಾರ, ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ. ಅಧಿಕಾರಿಗಳು ಈ ಪ್ರದೇಶವನ್ನ ಸಂಪೂರ್ಣವಾಗಿ

ಪಾಕಿಸ್ತಾನದ ಪೇಶಾವರದಲ್ಲಿ ಬಾಂಬ್ ಸ್ಪೋಟ| 17 ಸಾವು, ನೂರಾರು ಜನ ಗಂಭೀರ Read More »