January 2023

ಕಾವೂರು: 3.56 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಭರತ್ ಶೆಟ್ಟಿಯಿಂದ ಗುದ್ದಲಿಪೂಜೆ!

ಸಮಗ್ರ ನ್ಯೂಸ್: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾವೂರು 18ನೇ ವಾರ್ಡ್ ನಲ್ಲಿ 3.56 ಕೋಟಿ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವೈ. ಅವರು ಗುದ್ದಲಿಪೂಜೆ ನೆರವೇರಿಸಿದರು. ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪೋದರ್ ಶಾಲೆ, ಮಾಲಾಡಿ ಮಂಜಲ್ ಕಟ್ಟೆ ರಸ್ತೆ, ಚರಂಡಿ ಮತ್ತಿತರ ಕಾಮಗಾರಿಗಳಿಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಬಳಿಕ ಮಾತಾಡಿದ ಶಾಸಕ ಭರತ್ ಶೆಟ್ಟಿ ಅವರು, “ಈ ಭಾಗದ ಜನರಿಗೆ […]

ಕಾವೂರು: 3.56 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಭರತ್ ಶೆಟ್ಟಿಯಿಂದ ಗುದ್ದಲಿಪೂಜೆ! Read More »

ಕಾವೂರು ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಬೆಂಕಿಗಾಹುತಿ

ಸಮಗ್ರ ನ್ಯೂಸ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಇಡೀ ಮನೆ ಬೆಂಕಿಗಾಹುತಿಯಾದ ಘಟನೆ ಕಾವೂರು ಸಮೀಪದ ಪಳನೀರ್ ಎಂಬಲ್ಲಿ ಜರುಗಿದೆ. ಇಂದಿರಾ ಎಂಬವರ ಮನೆ ಆಕಸ್ಮಿಕ ಬೆಂಕಿ ಅವಘಡಕ್ಕೆ ತುತ್ತಾಗಿದ್ದು ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ಸೊತ್ತುಗಳ ಸಹಿತ ಬೆಲೆಬಾಳುವ ಸೊತ್ತುಗಳು ಸುಟ್ಟುಹೋಗಿದ್ದು ಅಂದಾಜು 5 ಲಕ್ಷ ರೂ. ನಷ್ಟ ಉಂಟಾಗಿದೆ. ಇಂದಿರಾ ಅವರು ಕೆಲಸಕ್ಕೆ ಹೋಗಿದ್ದು ಘಟನೆ ಸಂದರ್ಭದಲ್ಲಿ ಮನೆಯಲ್ಲಿರಲಿಲ್ಲ. ಆಕಸ್ಮಿಕ ದುರ್ಘಟನೆಯಿಂದಾಗಿ ಬಡಕುಟುಂಬ ತಲೆಮೇಲೆ ಕೈಹೊತ್ತು ಕೂತಿದೆ. ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ ಭೇಟಿ, ಪರಿಶೀಲನೆ!ಬೆಂಕಿ ಅವಘಡಕ್ಕೆ

ಕಾವೂರು ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಬೆಂಕಿಗಾಹುತಿ Read More »

“ಬೆಂಕಿ ಆಕಸ್ಮಿಕಕ್ಕೆ ಮನೆ ಕಳೆದುಕೊಂಡವರಿಗೆ ಶೀಘ್ರವೇ ಮನೆ ನಿರ್ಮಾಣ”-ಭರತ್ ಶೆಟ್ಟಿ

ಸುರತ್ಕಲ್: ಕಳೆದ ವಾರ ಸುರತ್ಕಲ್ ಬಳಿಯ ಬಾಂಗ್ಲಾ ಕಾಲನಿಯಲ್ಲಿ ಬೆಂಕಿ ಆಕಸ್ಮಿಕದಿಂದ ಮನೆ ಕಳೆದುಕೊಂಡಿರುವ ಉಮೇಶ್ ಆಚಾರ್ಯ ಹಾಗೂ ಕಾವೂರು ಪಳನೀರು ನಿವಾಸಿ ಇಂದಿರಾ ಅವರ ಕುಟುಂಬಕ್ಕೆ ಹೊಸ ಮನೆ ನಿರ್ಮಾಣಕ್ಕೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ವೈ. ಹೇಳಿದರು. ಮಾಧ್ಯಮಗಳ ಜೊತೆ ಮಾತಾಡಿದ ಅವರು, “ಬೇಸಿಗೆಯಲ್ಲಿ ಬೆಂಕಿ ಅನಾಹುತದ ಬಗ್ಗೆ ನಾಗರಿಕರು ಎಚ್ಚರಿಕೆಯಿಂದಿರಬೇಕು. ಬೆಂಕಿ ಅನಾಹುತಕ್ಕೆ ಮನೆಗಳನ್ನು ಕಳೆದುಕೊಂಡಿರುವ ಎರಡೂ ಕುಟುಂಬಗಳಿಗೆ ಕೂಡಲೇ ಹೊಸ ಮನೆ ಕಟ್ಟಿಕೊಡುವ ಬಗ್ಗೆ

“ಬೆಂಕಿ ಆಕಸ್ಮಿಕಕ್ಕೆ ಮನೆ ಕಳೆದುಕೊಂಡವರಿಗೆ ಶೀಘ್ರವೇ ಮನೆ ನಿರ್ಮಾಣ”-ಭರತ್ ಶೆಟ್ಟಿ Read More »

2.41 ಕೋ. ರೂ. ಅನುದಾನದಲ್ಲಿ ಬೈಕಂಪಾಡಿಯಲ್ಲಿ ಅಭಿವೃದ್ಧಿಗೆ ಶಾಸಕರಿಂದ ಗುದ್ದಲಿಪೂಜೆ!

ಸಮಗ್ರ ನ್ಯೂಸ್: ಬೈಕಂಪಾಡಿ 10ನೇ ವಾರ್ಡ್ ಅಭಿವೃದ್ಧಿಗಾಗಿ 2.41 ಕೋಟಿ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವೈ. ಅವರು ಗುದ್ದಲಿಪೂಜೆ ನೆರವೇರಿಸಿದರು. ಬಳಿಕ ಮಾತಾಡಿದ ಶಾಸಕರು “ಬೈಕಂಪಾಡಿ 10ನೇ ವಾರ್ಡ್ ನಲ್ಲಿ ವಿವಿಧ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಣ್ಣಪುಟ್ಟ ಅಡಚಣೆ ಎದುರಾಗುವುದು ಸಹಜ. ಜನರು ಸಹಕಾರ ನೀಡಿದಲ್ಲಿ ಆದಷ್ಟು ಶೀಘ್ರವಾಗಿ ಕಾಮಗಾರಿ ಮುಗಿಯಲಿದೆ” ಎಂದರು. ಸ್ಥಳೀಯ ಕಾರ್ಪೋರೇಟರ್ ಸುಮಿತ್ರಾ ಕರಿಯ,

2.41 ಕೋ. ರೂ. ಅನುದಾನದಲ್ಲಿ ಬೈಕಂಪಾಡಿಯಲ್ಲಿ ಅಭಿವೃದ್ಧಿಗೆ ಶಾಸಕರಿಂದ ಗುದ್ದಲಿಪೂಜೆ! Read More »

ಉತ್ತರದ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಸಂಭವ| ಕರ್ನಾಟಕದಲ್ಲಿಯೂ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಮುಂದಿನ ಎರಡ್ಮೂರು ದಿನಗಳಲ್ಲಿ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಶೀತದ‌ ವಾತಾವರಣ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ವಾರ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ, ಆದರೆ ಜನವರಿ 24 ಮತ್ತು 26 ರ ನಡುವೆ ದೆಹಲಿಯು ಲಘು ಮಳೆ ಮತ್ತು ಮೋಡ ಕವಿದ ಆಕಾಶ ಇರಲಿದೆ ಎಂದು ಇಲಾಖೆ ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆ

ಉತ್ತರದ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಸಂಭವ| ಕರ್ನಾಟಕದಲ್ಲಿಯೂ ಮಳೆ ಸಾಧ್ಯತೆ Read More »

19 ವರ್ಷದ ಪಾಕಿಸ್ತಾನಿ ಯುವತಿ ಬೆಂಗಳೂರಿನಲ್ಲಿ ಬಂಧನ

ಸಮಗ್ರ ನ್ಯೂಸ್: ಭಾರತದಲ್ಲಿ ಅಕ್ರಮವಾಗಿ ನೆಲೆಸಲು ತನ್ನ ಗುರುತನ್ನು ನಕಲಿ ಮಾಡಿದ್ದ 19 ವರ್ಷದ ಪಾಕಿಸ್ತಾನಿ ಯುವತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಇಕ್ರಾ ಜೀವನಿ ಎಂಬಾಕೆಯನ್ನು ಬಂಧಿಸಿರುವ ಪೊಲೀಸರು, ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸದ್ಯ ಇಕ್ರಾ ಅವರನ್ನು ಮಹಿಳಾ ಪುನರ್ವಸತಿ ಕೇಂದ್ರದಲ್ಲಿರಿಸಲಾಗಿದೆ. ಪಾಕಿಸ್ತಾನದ ನಿವಾಸಿ ಇಕ್ರಾ, ಕೆಲ ತಿಂಗಳ ಹಿಂದೆ ಡೇಟಿಂಗ್ ಆ್ಯಪ್‌ ಮೂಲಕ ಉತ್ತರ ಪ್ರದೇಶದ ಮುಲಾಯಂ ಸಿಂಗ್ (25) ಅವರನ್ನು ಪರಿಚಯ ಮಾಡಿ ಕೊಂಡಿದ್ದರು.

19 ವರ್ಷದ ಪಾಕಿಸ್ತಾನಿ ಯುವತಿ ಬೆಂಗಳೂರಿನಲ್ಲಿ ಬಂಧನ Read More »

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿ ಚುನಾವಣೆಗೆ ಸಿದ್ದತೆ| ಹಲವರು ಪಕ್ಷಕ್ಕೆ ಸೇರ್ಪಡೆ

ಸಮಗ್ರ ನ್ಯೂಸ್: ಆಮ್ ಆದ್ಮಿ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಸಿದ್ದತಾ ಸಭೆಯು ದೇವಮ್ಮ ಕಾನತ್ತಿಲ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗುರುಪ್ರಸಾದ್ ನೇತೃತ್ವದಲ್ಲಿ ಸುರೇಶ್ ಮುಂಡಕಜೆ, ಕಿರಣ್, ರಮೇಶ್, ರಂಜಿತ್ ಅಲ್ಲದೇ ಜಯರಾಜ್ ಕೇರ್ಪಳ ಅವರು ಅಧಿಕೃತವಾಗಿ ಪಕ್ಷ ಸೇರ್ಪಡೆಯಾದರು. ರಾಷ್ಟ್ರೀಯ ಸಮಿತಿ ಸದಸ್ಯ ಅಶೋಕ ಎಡಮಲೆ, ಜಿಲ್ಲಾ ನಾಯಕ ರಶೀದ್ ಜಟ್ಟಿಪಳ್ಳ, ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಆಕಾಂಕ್ಷಿ ಸುಮನಾ ಬೆಳ್ಳಾರ್ಕರ್, ನಾಯಕರಾದ ರಾಮಕೃಷ್ಣ ಬೀರಮಂಗಲ ಕಲಂದರ್ ಎಲಿಮಲೆ, ನಳಿನ್ ಕುಮಾರ್ ರೈ,

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿ ಚುನಾವಣೆಗೆ ಸಿದ್ದತೆ| ಹಲವರು ಪಕ್ಷಕ್ಕೆ ಸೇರ್ಪಡೆ Read More »

ಕಾರ್ಕಳದಲ್ಲಿ ಬಿಜೆಪಿಗೆ ಬಿಗ್ ಶಾಕ್| ಪಕ್ಷೇತರ ಅಭ್ಯರ್ಥಿಯಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಮುತಾಲಿಕ್ ಕಣಕ್ಕೆ

ಸಮಗ್ರ ನ್ಯೂಸ್: ‘ಈ ಬಾರಿಯ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ’ ಎಂದು ಶ್ರೀರಾಮ ಸೇನೆ ನಾಯಕ ಪ್ರಮೋದ್ ಮುತಾಲಿಕ್ ಅಧಿಕೃತ ಘೋಷಣೆ ಮಾಡಿದ್ದು, ಬಿಜೆಪಿಗೆ ಬಾರೀ ಶಾಕ್ ನೀಡಿದ್ದಾರೆ. ಹಾಲಿ ಎಂಎಲ್ಎ ಹಾಗೂ ಸಚಿವ ಸುನಿಲ್ ಕುಮಾರ್ ಗೆ ಇದು ನುಂಗಲಾರದ ತುತ್ತಾಗಿ‌ ಪರಿಣಮಿಸಿದೆ. ಕಾರ್ಕಳದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಸಾವಿರಾರು ಕಾರ್ಯಕರ್ತರ ಒತ್ತಡದಿಂದ ನೋವಿನ ಧನಿಯಾಗಿ ಈ ಘೋಷಣೆ ಮಾಡುತ್ತಿದ್ದೇನೆ. ಏಳೆಂಟು ಬಾರಿ ಕ್ಷೇತ್ರವನ್ನು ಸುತ್ತಾಡಿದ್ದೇನೆ ಜನ ಬೆಂಬಲಿಸಿದ್ದಾರೆ.

ಕಾರ್ಕಳದಲ್ಲಿ ಬಿಜೆಪಿಗೆ ಬಿಗ್ ಶಾಕ್| ಪಕ್ಷೇತರ ಅಭ್ಯರ್ಥಿಯಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಮುತಾಲಿಕ್ ಕಣಕ್ಕೆ Read More »

ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವು

ಸಮಗ್ರ ನ್ಯೂಸ್: ಟ್ರಾನ್ಸ್‌ಫಾರ್ಮರ್ ದುರಸ್ಥಿ ವೇಳೆ ವಿದ್ಯುತ್​ ಶಾಕ್​ಗೆ ಒಳಗಾಗಿ ಪವರ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ‌ ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಗೌತಮ್(32) ಎಂದು ಗುರುತಿಸಲಾಗಿದೆ. ಜ.23ರ ಬೆಳಗ್ಗೆ 9 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಟ್ರಾನ್ಸ್‌ಫಾರ್ಮರ್ ದುರಸ್ಥಿ ವೇಳೆ ಕರೆಂಟ್​ ಶಾಕ್​ಗೆ ಒಳಗಾಗಿ ವಿದ್ಯುತ್ ಕಂಬದಿಂದ ಕೆಳಕ್ಕೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ರಕ್ಷಣೆಗೆ ಬಂದು, ಆತನನ್ನು ಸುಗುಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಗೌತಮ್

ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವು Read More »

ಲಾರಿಗೆ ಡಿಕ್ಕಿ ಹೊಡೆದ ಕಾರು; ಐವರು ಸಾವು

ಸಮಗ್ರ ನ್ಯೂಸ್: ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಕೇರಳದ ಅಲಪ್ಪುಳ ಜಿಲ್ಲೆಯ ಅಂಬಲಪುಳ ಬಳಿ ಸೋಮವಾರ ನಸುಕಿನ ವೇಳೆ ನಡೆದಿದೆ. ಇವರಲ್ಲಿ ನಾಲ್ವರು ತಿರುವನಂತಪುರಂ ಮೂಲದವರಾಗಿದ್ದು, ನಗರದ ಇಸ್ರೋ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಆಂಧ್ರಪ್ರದೇಶದಿಂದ ಅಕ್ಕಿ ಸಾಗಿಸುತ್ತಿದ್ದ ಲಾರಿ ಹಾಗೂ ಐವರು ಪ್ರಯಾಣಿಸುತ್ತಿದ್ದ ಕಾರು ಪರಸ್ಪರ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡಿದ್ದ ಮತ್ತೊಬ್ಬರು ವೈದ್ಯಕೀಯ ಕಾಲೇಜು

ಲಾರಿಗೆ ಡಿಕ್ಕಿ ಹೊಡೆದ ಕಾರು; ಐವರು ಸಾವು Read More »