October 2022

ಕಾಸರಗೋಡು: ಹಾವು ಕಡಿದು ಇಂಜಿನಿಯರ್ ಸಾವು| ದೀಪಾವಳಿ ಆಚರಣೆಗೆ ಊರಿಗೆ ಬಂದಿದ್ದಾತನ ಮನೆಯಲ್ಲಿ ಸೂತಕ

ಸಮಗ್ರ ನ್ಯೂಸ್: ದೀಪಾವಳಿ ರಜೆಯಲ್ಲಿ ಊರಿಗೆ ಬಂದಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಯುವಕನೊಬ್ಬ ಮನೆಯ ಬಳಿ ಹಾವಿನ ಕಡಿತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ಕಾಸರಗೋಡಿನ ಬದಿಯಡ್ಕದಲ್ಲಿ ನಡೆದಿದೆ. ಬದಿಯಡ್ಕ ಬಳಿಯ ಪಾಟಾಜೆ ನಿವಾಸಿ ಪಿ.ವಿ. ಕೃಷ್ಣ ಕುಮಾರ್ (27) ಮೃತ ಯುವಕ. ಗೋಪಾಲಕೃಷ್ಣ ಭಟ್ ಮತ್ತು ತಿರುಮಲೇಶ್ವರಿ ದಂಪತಿಯ ಪುತ್ರನಾದ ಕೃಷ್ಣ ಕುಮಾರ್ ಚೆನ್ನೈನಲ್ಲಿ ಅಮೆರಿಕದ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಮನೆಯವರ ಜೊತೆ ದೀಪಾವಳಿ ಆಚರಿಸಲು ಊರಿಗೆ ಬಂದಿದ್ದರು. ಮನೆಯ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ಹಾವು ಕಡಿದಿದ್ದು […]

ಕಾಸರಗೋಡು: ಹಾವು ಕಡಿದು ಇಂಜಿನಿಯರ್ ಸಾವು| ದೀಪಾವಳಿ ಆಚರಣೆಗೆ ಊರಿಗೆ ಬಂದಿದ್ದಾತನ ಮನೆಯಲ್ಲಿ ಸೂತಕ Read More »

ಮಹಿಳೆಗೆ ಕಪಾಳಮೋಕ್ಷ ಪ್ರಕರಣ| ಸಚಿವ ವಿ.ಸೋಮಣ್ಣ ತಲೆದಂಡ!?

ಸಮಗ್ರ ನ್ಯೂಸ್: ತನ್ನ ಕಷ್ಟವನ್ನು ಹೇಳಿಕೊಳ್ಳಲು ಆಗಮಿಸಿದಂತ ಮಹಿಳೆಯೊಬ್ಬರಿಗೆ, ವಸತಿ ಸಚಿವ ವಿ.ಸೋಮಣ್ಣ ಕಪಾಳ ಮೋಕ್ಷ ಮಾಡಿದ ವೀಡಿಯೋ ಸಖತ್ ವೈರಲ್ ಆಗಿತ್ತು. ಈ ಬಳಿಕ ಮಹಿಳೆಯ ಕ್ಷಮೆ ಕೇಳಿದ್ದು, ಈ ಪ್ರಕರಣದಲ್ಲಿ ಸಚಿವ ವಿ.ಸೋಮಣ್ಣ ಅವರಿಗೆ ರಾಜೀನಾಮೆ ನೀಡುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ ಎನ್ನಲಾಗುತ್ತಿದೆ. ವಸತಿ ಸಚಿವ ವಿ.ಸೋಮಣ್ಣ ನಿನ್ನೆ ಚಾಮರಾಜನಗರದಲ್ಲಿ ವಿವಿಧ ಕಾರ್ಯಕ್ರಮದ ನಿಮಿತ್ತ ತೆರಳಿದ್ದ ಸಂದರ್ಭದಲ್ಲಿ, ಪರಿಶಿಷ್ಟ ಮಹಿಳೆಯೊಬ್ಬರು ತಮಗೆ ನಿವೇಶನ ಹಂಚಿಕೆ ಆಗಿಲ್ಲ. ದಯವಿಟ್ಟು ಕೊಡಿಸುವಂತೆ ಮನವಿ ಮಾಡಿಕೊಳ್ಳಲು ಮುಂದಾಗಿದ್ದರು. ಅಲ್ಲದೇ

ಮಹಿಳೆಗೆ ಕಪಾಳಮೋಕ್ಷ ಪ್ರಕರಣ| ಸಚಿವ ವಿ.ಸೋಮಣ್ಣ ತಲೆದಂಡ!? Read More »

ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆ| ಅ.28ರಂದು ಅಧಿಕಾರ ಸ್ವೀಕಾರ

ಸಮಗ್ರ ನ್ಯೂಸ್: ಭಾರತ ಮೂಲದ, ಇನ್ಫೋಸಿಸ್‌ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್‌ (Rishi Sunak) ಅವರು ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆಯಾದ ಮೊದಲ ಅನಿವಾಸಿ ಭಾರತೀಯ ಎನಿಸಿದ್ದಾರೆ. ರಿಷಿ ಸುನಕ್‌ ಅವರಿಗೆ 196 ಸಂಸದರ ಬೆಂಬಲ ಸಿಕ್ಕಿದ್ದು, ಪೆನ್ನಿ ಮೋರ್ಡಾಂಟ್‌ ಅವರಿಗೆ ಕೇವಲ 27 ಸಂಸದರು ಬೆಂಬಲ ನೀಡಿದ್ದರು. ಹಾಗಾಗಿ, ರಿಷಿ ಅವರನ್ನು ನೂತನ ಪ್ರಧಾನಿಯನ್ನಾಗಿ ಘೋಷಣೆ ಮಾಡಲಾಗಿದ್ದು, ಅಕ್ಟೋಬರ್‌ 28ರಂದು ಪದಗ್ರಹಣ ಮಾಡಲಿದ್ದಾರೆ. ಲಿಜ್‌ ಟ್ರಸ್‌

ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆ| ಅ.28ರಂದು ಅಧಿಕಾರ ಸ್ವೀಕಾರ Read More »

ಸುಳ್ಯ: ನ.ಪಂ ಮಾಜಿ ಉಪಾಧ್ಯಕ್ಷರ ಪತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಗೆ ಯತ್ನ

ಸಮಗ್ರ ನ್ಯೂಸ್ : ಸುಳ್ಯದ ನ.ಪಂ ಮಾಜಿ ಉಪಾಧ್ಯಕ್ಷರ ಪತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಅ.24ರಂದು ನಡೆದಿದೆ. ವ್ಯಕ್ತಿ ಯನ್ನು ಸುಳ್ಯ.ನ.ಪಂ ಮಾಜಿ ಉಪಾಧ್ಯಕ್ಷರ ಶಾಂತಿ ಪ್ರಭುರವರ ಪತಿ ಸುಳ್ಯದ ಜಟ್ಟಿಪಳ್ಳ ನಿವಾಸಿ ಕೇಶವ ಪ್ರಭು ಎಂದು ತಿಳಿದು ಬಂದಿದೆ. ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಪೂರ್ವಾಹ್ನ 11 ಗಂಟೆಯ ಸುಮಾರಿಗೆ ಅವರ ಮನೆಯೊಳಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ. ಗುಂಡು ಹಾರಿಸಿಕೊಳ್ಳಲು

ಸುಳ್ಯ: ನ.ಪಂ ಮಾಜಿ ಉಪಾಧ್ಯಕ್ಷರ ಪತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಗೆ ಯತ್ನ Read More »

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ| ಬಾವಿಗೆ ಹಾರಲು ಯತ್ನಿಸಿದ ಬಾಲಕಿ

ಸಮಗ್ರ ನ್ಯೂಸ್: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಯ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಅಪ್ರಾಪ್ತ ಯುವತಿಗೂ ಕಳೆಂಜ ಗ್ರಾಮದ ಯುವಕನಿಗೂ ಕಳೆದ ಕೆಲವು ತಿಂಗಳುಗಳಿಂದ ಇನ್ ಸ್ಟಾಗ್ರಾಮ್ ಮೂಲಕ ಪರಿಚಯವಾಗಿತ್ತು. ಬಳಿಕ ಆಕೆಯ ದೂರವಾಣಿ ನಂಬರ್ ಪಡೆದು ಆಕೆಯೊಂದಿಗೆ ಚಾಟ್ ಮಾಡುತ್ತಿದ್ದ ಪರಿಚಯ ಪ್ರೀತಿಯಾಗಿ, ಆಕೆಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಎರಡು ಬಾರಿ ಲೈಂಗಿಕವಾಗಿಯೂ ಬಳಸಿಕೊಂಡಿದ್ದ ಎಂದು ಆರೋಪಿಸಲಾಗಿದೆ. ಇವರಿಬ್ಬರ ದೂರವಾಣಿ ಚಾಟ್ ಆಕೆಯ ಸಂಬಂಧಿಕರಿಗೆ

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ| ಬಾವಿಗೆ ಹಾರಲು ಯತ್ನಿಸಿದ ಬಾಲಕಿ Read More »

ರೈತ ಸಮುದಾಯಕ್ಕೆ‌ ಗುಡ್ ನ್ಯೂಸ್ ನೀಡಿದ ಸಚಿವ ಸುನಿಲ್‌ಕುಮಾರ್| 3.5 ಲಕ್ಷ ಜನರಿಗೆ ಉಚಿತ ಸೌರ ವಿದ್ಯುತ್

ಸಮಗ್ರ ನ್ಯೂಸ್: ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕುಸುಮ್ ಯೋಜನೆಯಡಿ ರಾಜ್ಯದ ಸುಮಾರು 3.50 ಲಕ್ಷ ರೈತರಿಗೆ ಉಚಿತ ಸೌರ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಘೋಷಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸುಮಾರು 3.50 ಲಕ್ಷ ರೈತಗರಿಗೆ ಉಚಿತವಾಗಿ ಸೌರ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ ಕುಸುಮ್ ಯೋಜನೆಯನ್ನು ಜಾರಿಗೊಳಿಸಲಾಗುವುದು. ಕೇಂದ್ರ ಸರ್ಕಾರದ ಸಹಾಯದಿಂದ ಅನುಷ್ಠಾನಗೊಳಿಸಲಾಗುವ ಈ ಯೋಜನೆಯಡಿ ರಾಜ್ಯದಲ್ಲಿ 1,000 ಮೆಗಾ ವ್ಯಾಟ್ ಸಾಮರ್ಥ್ಯದ

ರೈತ ಸಮುದಾಯಕ್ಕೆ‌ ಗುಡ್ ನ್ಯೂಸ್ ನೀಡಿದ ಸಚಿವ ಸುನಿಲ್‌ಕುಮಾರ್| 3.5 ಲಕ್ಷ ಜನರಿಗೆ ಉಚಿತ ಸೌರ ವಿದ್ಯುತ್ Read More »

ನೇಣುಬಿಗಿದುಕೊಂಡು ಸ್ವಾಮೀಜಿ ಆತ್ಮಹತ್ಯೆ

ಸಮಗ್ರ ನ್ಯೂಸ್: ರಾಮನಗರ ಜಿಲ್ಲೆಯ ಸೋಲೂರಿನ ಬಂಡೆ ಮಠದ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ಸೋಲೂರಿನಲ್ಲಿರುವ ಕಂಚುಗಲ್ ಬಂಡೆ ಮಠದಲ್ಲಿ 43 ವರ್ಷದ ಬಸವಲಿಂಗ ಸ್ವಾಮೀಜಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಠದಲ್ಲಿಯೇ ಬಂಡೆ ಮಠದ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನುಮಾನಾಸ್ಪದ ರೀತಿಯಲ್ಲಿ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಠದ ಜಮೀನು ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಗಡಿ ತಾಲೂಕಿನಲ್ಲೇ ದೊಡ್ಡ ಮಠ ಎಂಬ

ನೇಣುಬಿಗಿದುಕೊಂಡು ಸ್ವಾಮೀಜಿ ಆತ್ಮಹತ್ಯೆ Read More »

ಕೊಡಗು: 700 ವರ್ಷದ ಹಳೆಯ ಶಿವ ದೇಗುಲ‌ ಪತ್ತೆ|

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೆಳ್ಳುಮಾಡು ಗ್ರಾಮದಲ್ಲಿ ಕೆಂಪು ಕಲ್ಲಿನಿಂದ ನಿರ್ಮಿತವಾದ, ತಾಮ್ರದ ಹೊದಿಕೆಯೊಂದಿಗೆ ವಿಶೇಷವಾಗಿ ಕಾಣುವ ಬನಹೊಂದಿರುವ ಶಿವನ ದೇಗುಲವು ಪತ್ತೆಯಾಗಿದೆ. ವಿರಾಜಪೇಟೆ ತಾಲೂಕಿನ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಕುಂಜಿಲಗೇರಿ, ಅರಪಟ್ಟು, ಬೆಳ್ಳುಮಾಡು, ಕಂಡಂಗಮರೂರು, ಬೆಪ್ಪುನಾಡು ಖ್ಯಾತಿಯ ಗ್ರಾಮವಾಗಿದ್ದ ಬೆಳ್ಳುಮಾಡು ಗ್ರಾಮದ ಸರ್ವೇ ಸಂಖ್ಯೆ 76/10ರಲ್ಲಿ ಇಂದಿನ ಬೆಳ್ಳುಮಾಡು ದವಸ ಭಂಡಾರ ಸಹಕಾರ ನಿಯಮಿತ ಕಟ್ಟಡದ ಹಿಂಭಾಗದ ಸ್ಥಳದಲ್ಲಿ ಸುಮಾರು 13ನೇ ಶತಮಾನದಲ್ಲಿ ನಾಡು ದೇವನಾಗಿ ಸ್ಥಿತನಾಗಿದ್ದ ಶ್ರೀ ಮಾದೇವರಪ್ಪ

ಕೊಡಗು: 700 ವರ್ಷದ ಹಳೆಯ ಶಿವ ದೇಗುಲ‌ ಪತ್ತೆ| Read More »

ನಾಳೆ(ಅ.25) ವರ್ಷದ ಕೊನೆಯ ಸೂರ್ಯಗ್ರಹಣ| ಹೇಗಿರುತ್ತೆ ನೆರಳು ಬೆಳಕಿನಾಟ?

ಸಮಗ್ರ ನ್ಯೂಸ್: ಈ ವರತಷದ ಕೊನೆಯ ಸೂರ್ಯಗ್ರಹಣ ನಾಳೆ(ಅಕ್ಟೋಬರ್ 25) ರಂದು ಗೋಚರವಾಗಲಿದೆ. ದೀಪಾವಳಿ ಅಮಾವಾಸ್ಯೆಯ ದಿನ ಗ್ರಹಣ ಸಂಭವಿಸಲಿರುವುದು ಈ ಬಾರಿಯ ವಿಶೇಷ. ನಾಳೆ ಕಂಡುಬರಲಿರುವ ಗ್ರಹಣವು ಭಾಗಶಃ ಸೂರ್ಯಗ್ರಹಣವಾಗಿದೆ. ಚಂದ್ರನ ನೆರಳಿನ ಕೇಂದ್ರವು ಭೂಮಿಯನ್ನು ತಪ್ಪಿಸಿಕೊಂಡಾಗ ಭೂಮಿಯ ಧ್ರುವ ಪ್ರದೇಶಗಳಲ್ಲಿ ಸಂಭವಿಸುತ್ತದೆ. ಭಾಗಶಃ ಸೂರ್ಯಗ್ರಹಣದ ವಿವರ:ಚಂದ್ರನು ಸೂರ್ಯನ ಸಂಪೂರ್ಣ ಮೇಲ್ಮೈ ಪ್ರದೇಶವನ್ನು ಆವರಿಸದಿದ್ದಾಗ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯನ ತಟ್ಟೆಯ ಅರ್ಧಭಾಗ ಅಥವಾ ಒಂದು ಭಾಗ ಮಾತ್ರ ಚಂದ್ರನಿಂದ ಆವರಿಸಲ್ಪಡುತ್ತದೆ. ಇದು ಭಾಗಶಃ ಸೂರ್ಯಗ್ರಹಣಕ್ಕೆ

ನಾಳೆ(ಅ.25) ವರ್ಷದ ಕೊನೆಯ ಸೂರ್ಯಗ್ರಹಣ| ಹೇಗಿರುತ್ತೆ ನೆರಳು ಬೆಳಕಿನಾಟ? Read More »

ರೆಡ್ ಬುಲ್ ಸಂಸ್ಥಾಪಕ ಮ್ಯಾಟೆಸ್ಚಿಟ್ಜ್ ಇನ್ನಿಲ್ಲ

ಸಮಗ್ರ ನ್ಯೂಸ್: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಪಾನೀಯ ದೈತ್ಯ ರೆಡ್ ಬುಲ್ ಸಂಸ್ಥಾಪಕ ಮ್ಯಾಟೆಸ್ಚಿಟ್ಜ್ ಶನಿವಾರ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಸ್ಟೈರಿಯನ್ ಮೂಲದ ಉದ್ಯಮಿ ಡೈಟ್ರಿಚ್ ರೆಡ್ ಬುಲ್ ಸುತ್ತಲೂ ಜಾಗತಿಕ ಸಾಮ್ರಾಜ್ಯವನ್ನು ನಿರ್ಮಿಸಿದರು ಮತ್ತು ಆಸ್ಟ್ರಿಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟರು. ಮಾಟೆಸ್ಚಿಟ್ಜ್ ಅವರ ಸಂಪತ್ತು ಸುಮಾರು 25 ಬಿಲಿಯನ್ ಯುರೋಗಳು ($24.65 ಬಿಲಿಯನ್) ಎಂದು ಅಂದಾಜಿಸಲಾಗಿದೆ. ಇದು ವಿಶ್ವದ ಶ್ರೀಮಂತ ವ್ಯಕ್ತಿಗಳ ಫೋರ್ಬ್ಸ್ ಪಟ್ಟಿಯಲ್ಲಿ ಅವರನ್ನು 51 ನೇ ಸ್ಥಾನದಲ್ಲಿ

ರೆಡ್ ಬುಲ್ ಸಂಸ್ಥಾಪಕ ಮ್ಯಾಟೆಸ್ಚಿಟ್ಜ್ ಇನ್ನಿಲ್ಲ Read More »