Ad Widget .

“ಅಯ್ಯೋ ಅದೆಲ್ಲಾ ಸುಳ್ಳು’, ವಿಜಯ್ ಮತ್ತು ನನ್ನ ನಡುವೆ ನಡೆದದ್ದು ಇಷ್ಟು‌ ಮಾತ್ರ”| ಸತ್ಯ‌ಬಿಚ್ಚಿಟ್ಟ‌ ರಶ್ಮಿಕಾ ಮಂದಣ್ಣ

ಸಮಗ್ರ ನ್ಯೂಸ್: 2018 ರಿಂದಲೂ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವಿನ ಗಾಸಿಪ್‌ಗಳು ಹರಿದಾಡುತ್ತಲೇ ಇವೆ. ಅದಕ್ಕೆ ತಕ್ಕಂತೆ ಆಗಾಗ್ಗೆ ಅವರು ಹೈದರಾಬಾದ್, ಮುಂಬೈ ನಗರಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಪರಸ್ಪರರ ಮನೆಗಳಿಗೆ ಭೇಟಿ ಸಹ ನೀಡುತ್ತಿರುತ್ತಾರೆ. ಆದರೆ ಇದೀಗ ಮೊದಲ ಬಾರಿಗೆ ತಮ್ಮ ಹಾಗೂ ವಿಜಯ್ ದೇವರಕೊಂಡ ನಡುವಿನ ಸಂಬಂಧದ ಬಗ್ಗೆ, ತಮ್ಮಿಬ್ಬರ ಬಗ್ಗೆ ಹಬ್ಬಿರುವ ಸುದ್ದಿಗಳ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ.

Ad Widget . Ad Widget .

ಸಂದರ್ಶನವೊಂದರಲ್ಲಿ ವಿಜಯ್ ಜೊತೆಗಿನ ಡೇಟಿಂಗ್ ಸುದ್ದಿಗಳ ಬಗ್ಗೆ ಕೇಳಿದಾಗ ಮಾತನಾಡಿರುವ ರಶ್ಮಿಕಾ, ಆ ಸುದ್ದಿಗಳನ್ನೆಲ್ಲ ಕೇಳಿದಾಗ ‘ಅಯ್ಯೋ ಬಾಬು’ ಎಂದುಕೊಳ್ಳುತ್ತಿದ್ದೆ ಎಂದಿದ್ದಾರೆ. ಮುಂದುವರೆದು, ”ನಾನು ಹಾಗೂ ವಿಜಯ್ ಸಾಕಷ್ಟು ಸಿನಿಮಾಗಳನ್ನು, ಜಾಹೀರಾತುಗಳನ್ನು ಒಟ್ಟಿಗೆ ಮಾಡಿದ್ದೇವೆ. ಅದೂ ನನ್ನ ವೃತ್ತಿ ಜೀವನದ ಆರಂಭದಲ್ಲಿಯೇ ಹಾಗಾಗಿ ಈ ರೀತಿ ಸುದ್ದಿಗಳು ಹಬ್ಬಿರಬಹುದು” ಎಂದಿದ್ದಾರೆ.

Ad Widget . Ad Widget .

”ನನಗೆ ಉದ್ಯಮ ಏನು ಎಂಬುದು ಅಷ್ಟಾಗಿ ಗೊತ್ತಿಲ್ಲದೇ ಇರುವಾಗ ನಾನು ವಿಜಯ್ ಜೊತೆ ಕೆಲಸ ಮಾಡಿದೆ. ವಿಜಯ್‌ಗೂ ಸಹ ನಾಯಕನಾಗಿ ಆಗಷ್ಟೆ ಮೇಲೆ ಬರುತ್ತಿದ್ದ ಇಬ್ಬರಿಗೂ ಈ ಉದ್ಯಮ ಹೊಸದು. ಆ ಸಮಯದಲ್ಲಿ ಒಂದೇ ಮನಸ್ಥಿತಿಯ ಇಬ್ಬರು ಒಟ್ಟಿಗೆ ನಟಿಸಿದಾಗ ಗೆಳೆಯರಾಗುವುದು ಸಹಜ. ಅಲ್ಲದೆ, ನನಗೆ ಹೈದರಾಬಾದ್‌ನಲ್ಲಿ ಒಂದು ಗೆಳೆಯರ ಗ್ಯಾಂಗ್ ಇತ್ತು, ವಿಜಯ್‌ಗೂ ಒಂದು ಗ್ಯಾಂಗ್ ಇತ್ತು. ನಾವೆಲ್ಲರೂ ಒಟ್ಟಿಗೆ ಸೇರಿ ಚಿಲ್ ಮಾಡುತ್ತಿದ್ದೆವು, ಇದನ್ನೇ ಜನ ಲವ್, ಡೇಟಿಂಗ್ ಎಂದುಕೊಂಡರು” ಎಂದಿದ್ದಾರೆ ರಶ್ಮಿಕಾ ಮಂದಣ್ಣ.

Leave a Comment

Your email address will not be published. Required fields are marked *