September 2022

ಸುಳ್ಯ: ಡಿ.ಸಿ ಮನ್ನಾ ಜಾಗ ಅತಿಕ್ರಮಣ ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ದ ಕ್ರಮವಹಿಸಿ – ಅಂಬೇಡ್ಕರ್ ರಕ್ಷಣಾ ವೇದಿಕೆ

ಸಮಗ್ರ ನ್ಯೂಸ್: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟ ಡಿ.ಸಿ ಮನ್ನಾ ಜಮೀನನ್ನು ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮವಹಿಸಿ ಆ ಜಾಗವನ್ನು ಸರಿಪಡಿಸುವಂತೆ ಮತ್ತು‌ ಜಾಗವನ್ನು ಅರ್ಹರಿಗೆ ಒದಗಿಸಲು ಸುಳ್ಯ ತಹಶೀಲ್ದಾರರಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು. ಬ್ರಿಟಿಷ್ ಸರ್ಕಾರ 1932 ರಿಂದ 1939 ರ ಅವಧಿಯಲ್ಲಿ ದಲಿತ ಸಮುದಾಯಕ್ಕೆ ಮೀಸಲಿಟ್ಟ ಡಿಸಿ ಮನ್ನಾ ಜಮೀನು ಇಂದಿಗೂ ಹಂಚಿಕೆಯಾಗದಿರುವುದು ದುರಂತ. ಹಾಗೆ ಸುಳ್ಯ ತಾಲೂಕಿನ 31 ಗ್ರಾಮದಲ್ಲಿ 676.38 ಎಕರೆ 326.82 ಎಕರೆ ಜಮೀನು […]

ಸುಳ್ಯ: ಡಿ.ಸಿ ಮನ್ನಾ ಜಾಗ ಅತಿಕ್ರಮಣ ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ದ ಕ್ರಮವಹಿಸಿ – ಅಂಬೇಡ್ಕರ್ ರಕ್ಷಣಾ ವೇದಿಕೆ Read More »

ಮಳೆಗೆ ನಲುಗಿದ ಬೆಂಗಳೂರು| ಮ್ಯಾಪ್ ಗೂ ಗೊತ್ತಾಗ್ತಿಲ್ಲ ನಿಖರ ದಾರಿ| ಗೂಗಲ್ ಫುಲ್ ಆಫ್ ಕನ್ಪ್ಯೂಸ್!!

ಸಮಗ್ರ ನ್ಯೂಸ್: ಮಹಾಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಯಂತಾಗಿವೆ. ಇದರಿಂದಾಗಿ ಅಗತ್ಯ ಸಂದರ್ಭಗಳಲ್ಲಿ ವಾಹನ ಸವಾರರಿಗೆ ದಾರಿ ತೋರಿಸಬೇಕಾದ ಗೂಗಲ್ ಮ್ಯಾಪ್ ಈಗ ಸವಾರರ ದಿಕ್ಕು ತಪ್ಪಿಸುತ್ತಿದೆ. ಬೆಂಗಳೂರಿನ ನಿವಾಸಿಯೊಬ್ಬರು ಜೆ ಪಿ ನಗರದಿಂದ ಹೊಸೂರಿನವರೆಗಿನ ಮಾರ್ಗಕ್ಕಾಗಿ ಗೂಗಲ್‌ ಮ್ಯಾಪ್‌ನಲ್ಲಿ ದಾರಿಯನ್ನು ಸರ್ಚ್‌ ಮಾಡಿದ್ದಾರೆ. ಆದರೆ, ಬೆಂಗಳೂರು ನಗರದ ರಸ್ತೆಗಳು ಜಲಾವೃತಗೊಂಡಿರುವ ಕಾರಣ ಕೆಲ ಮಾರ್ಗಗಳನ್ನು ಗೂಗಲ್ ಮ್ಯಾಪ್ ತೋರಿಸುತ್ತಿಲ್ಲ. ಭಾರೀ ಮಳೆಯಿಂದಾಗಿ ಬೆಂಗಳೂರಿನ ಸ್ಥಿತಿ ಸಿಕ್ಕಾಪಟ್ಟೆ ಹದಗೆಟ್ಟಿದೆ. ಯಾವ ರಸ್ತೆ ಜಲಾವೃತವಾಗಿದೆ, ಯಾವ ರಸ್ತೆಯಲ್ಲಿ ಸಂಚರಿಸಿದರೆ ಮುಂದಕ್ಕೆ

ಮಳೆಗೆ ನಲುಗಿದ ಬೆಂಗಳೂರು| ಮ್ಯಾಪ್ ಗೂ ಗೊತ್ತಾಗ್ತಿಲ್ಲ ನಿಖರ ದಾರಿ| ಗೂಗಲ್ ಫುಲ್ ಆಫ್ ಕನ್ಪ್ಯೂಸ್!! Read More »

ದ.ಕ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧ| ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧಿಸಿ ಹಸಿರು ಪೀಠ ಆದೇಶವಿದೆ. ಇದೇ ಆಧಾರ ಮೇಲೆ ದ.ಕ. ಜಿಲ್ಲೆಯಲ್ಲೂ ಸಿಆರ್‌ಝೆಡ್‌ನಲ್ಲೂ ಮರಳುಗಾರಿಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಇದೀಗ ತಡೆ ನೀಡುವಂತೆ ಮರಳುಗಾರರು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು, ಹೈಕೋರ್ಟ್‌ ಜಿಲ್ಲಾಧಿಕಾರಿ ಆದೇಶಕ್ಕೆ ತಡೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನಿಷೇಧ ಮಾಡುವಂತೆ ಮೇ 22 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ. ರಾಜೇಂದ್ರ ಆದೇಶ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೂಡಲೇ ನದಿ

ದ.ಕ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧ| ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ Read More »

ಮಗಳ ಹುಟ್ಟುಹಬ್ಬದ ದಿನವೇ ದಂಪತಿಗಳಿಬ್ಬರು ಆತ್ಮಹತ್ಯೆಗೆ ಶರಣು

ಸಮಗ್ರ ನ್ಯೂಸ್: ಮಗಳ ಹುಟ್ಟುಹಬ್ಬದ ದಿನವೇ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಆಂಧ್ರ ಪ್ರದೇಶದ ಅಲ್ಲೂರಿ ಸಿತಾರಾಮರಾಜು ಜಿಲ್ಲೆಯಲ್ಲಿ ನಡೆದಿದೆ. ಆನ್​ ಲೈನ್ ಲೋನ್ ಆಯಪ್ ಮಾಲೀಕನ ಕಿರುಕುಳಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್​ ಅಧಿಕಾರಿಗಳು, ಕೊಳ್ಳಿ ದುರ್ಗ ರಾವ್ ಹಾಗೂ ರಮ್ಯಾ ಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ 6 ವರ್ಷದ ಹಿಂದೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಇವರಿಗೆ ನಾಗ ಸಾಯಿ (4), ಲಿಖಿತಾ (2)

ಮಗಳ ಹುಟ್ಟುಹಬ್ಬದ ದಿನವೇ ದಂಪತಿಗಳಿಬ್ಬರು ಆತ್ಮಹತ್ಯೆಗೆ ಶರಣು Read More »

ಕರ್ತವ್ಯ ನಿರತ ಹೆಡ್ ಕಾನ್ಸ್ ಟೇಬಲ್ ಹೃದಯಾಘಾತದಿಂದ ಸಾವು

ಸಮಗ್ರ ನ್ಯೂಸ್ : ಕರ್ತವ್ಯ ನಿರತ ಹೆಡ್‌ಕಾನ್ಸ್‌ಟೇಬಲ್ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆಯೊಂದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ನಡೆದಿದೆ. ನಗರದ ಲಾಡ್ಜ್ ಕೋಣೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಕಲ್ಯಾಣಿ ಗುಗ್ಗರಿ(45) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಲ್ಯಾಣಿ, ಕಲಬುರಗಿ ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನಸ್ಟೇಬಲ್ ಆಗಿದ್ದರು. ಅದಲ್ಲದೇ, ಕಳೆದ ರಾತ್ರಿ ಸುಸ್ತಾಗುತ್ತಿದ್ದರಿಂದ ಮಾತ್ರೆ ತೆಗೆದುಕೊಳ್ಳಲು ಲಾಡ್ಜ್ ನಲ್ಲಿದ್ದ ತಮ್ಮ ಕೋಣೆಗೆ ಹೋಗಿದ್ದರು. ಎದೆ ನೋವು ಕಾಣಿಸಿಕೊಂಡಿದ್ದರಿಂದ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದಿದ್ದರು. ಆದರೆ ನಸುಕಿನ

ಕರ್ತವ್ಯ ನಿರತ ಹೆಡ್ ಕಾನ್ಸ್ ಟೇಬಲ್ ಹೃದಯಾಘಾತದಿಂದ ಸಾವು Read More »

ನಿವೃತ್ತ ಶಿಕ್ಷಕಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿ

ಬೆಂಗಳೂರು: ನಿವೃತ್ತ ಶಿಕ್ಷಕಿಯನ್ನು ಉಸಿರುಗಟ್ಟಿಸಿ ಕೊಲೆಗೈದ ದುಷ್ಕರ್ಮಿಗಳು ಪರಾರಿಯಾದ ಘಟನೆಯೊಂದು ನಗರದ ವಿದ್ಯಾರಣ್ಯಪುರ ಅಂಬಾ ಭವಾನಿ ದೇವಸ್ಥಾನದ ಬಳಿ ನಡೆದಿದೆ. 60 ವರ್ಷದ ಪ್ರಸನ್ನ ಕುಮಾರಿ ಕೊಲೆಯಾದ ನಿವೃತ್ತ ಶಿಕ್ಷಕಿ. ನಿನ್ನೆ ತಡರಾತ್ರಿ‌ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕೊಲೆ ಮಾಡಿ ಆಕೆಯ ಬಳಿಯಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ. ಸದ್ಯ ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ನಿವೃತ್ತ ಶಿಕ್ಷಕಿ ಪ್ರಸನ್ನ ಕುಮಾರಿ ಅವರು ವಿಜಯವಾಡ ಮೂಲದವರು ಎಂದು ತಿಳಿದುಬಂದಿದೆ.

ನಿವೃತ್ತ ಶಿಕ್ಷಕಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿ Read More »

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ; ಓರ್ವನಿಗೆ ಚಾಕು ಇರಿದು ಕೊಲೆ

ಗದಗ : ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಗಲಾಟೆ ವೇಳೆ ಓರ್ವನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ನಗರದ ತೋಂಟದಾರ್ಯ ಮಠದ ಬಳಿ ನಡೆದಿದೆ. ಚಾಕು ಇರಿತಕ್ಕೆ ಒಳಗಾದ 27 ವರ್ಷದ ಸುದೀಪ್ ಮುಂಡೆವಾಡಿ ಎಂಬ ಯುವಕ ತೀವ್ರ ರಕ್ತಸ್ರಾವದಿಂದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೃತ ಸುದೀಪ್ ಸ್ನೇಹಿತರಾಗಿದ್ದ ಆದಿತ್ಯ ಮುತಗಾರ ಹಾಗೂ ಐದಾರು ಜನರ ಸ್ನೇಹಿತರು ಸೇರಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ನಾಲ್ಕು ಜನ ಕೈ ಕಾಲು ಹಿಡಿದುಕೊಂಡು ಹೊಟ್ಟೆ

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ; ಓರ್ವನಿಗೆ ಚಾಕು ಇರಿದು ಕೊಲೆ Read More »

ಪೋಲಿಸರ ರಾತ್ರಿ ಪ್ರಯಾಣ ನಿರ್ಬಂಧ

ಬೆಂಗಳೂರು : ಆಂಧ್ರಪ್ರದೇಶದ ಚಿತ್ತೂರು ಬಳಿಯಲ್ಲಿ ಗಾಂಜಾ ಗ್ಯಾಂಗ್ ಹಿಡಿಯುವ ವೇಳೆ ಪೊಲೀಸರ ಕಾರು ಅಪಘಾತವಾಯಿತು. ಈ ಘಟನೆಯಲ್ಲಿ ಸಬ್ ಇನ್ಸ್ ಪೆಕ್ಟರ್, ಕಾನ್ಸ್ ಟೇಬಲ್ ಸೇರಿ ಮೂವರು ಸಾವನ್ನಪ್ಪಿದ್ದರು. ಈ ಬಳಿಕ ಎಚ್ಚೆತ್ತುಕೊಂಡಿರುವಂತ ಸರ್ಕಾರ, ಪೊಲೀಸರ ರಾತ್ರಿ ಪ್ರಯಾಣವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. ಈ ಬಗ್ಗೆ ರಾಜ್ಯ ಪೊಲೀಸ್ ಇಲಾಖೆಯ ಸಿಐಡಿ, ಡಿಜಿಪಿ ಆದೇಶ ಹೊರಡಿಸಿದ್ದು, ಕಾನೂನು ಸುವ್ಯವಸ್ಥೆ ಬಂದೋಬಸ್ತ್, ಚುನಾವಣಾ ಕರ್ತವ್ಯ, ಅಪರಾಧ ಪ್ರಕರಣಗಳ ತನಿಖೆ ಸೇರಿದಂತೆ ಇನ್ನಿತರ ಅನ್ಯ ಕಾರ್ಯದ ಮೇಲೆ ನಿಯೋಜನೆಗೊಳ್ಳುವಂತ

ಪೋಲಿಸರ ರಾತ್ರಿ ಪ್ರಯಾಣ ನಿರ್ಬಂಧ Read More »

ಪಾದಚಾರಿಗೆ ಬೈಕ್ ಡಿಕ್ಕಿ; ಬೈಕ್ ಸವಾರ ಮೃತ್ಯು

ಕಾಪು: ಪಾದಚಾರಿಗೆ ಬೈಕ್‌ ಡಿಕ್ಕಿ ಹೊಡೆದು, ಬೈಕ್‌ ಸವಾರ ಮೃತಪಟ್ಟ ಘಟನೆ ಮೂಳೂರು ಬೊಬ್ಬರ್ಯ ದೈವಸ್ಥಾನದ ಬಳಿ ನಡೆದಿದೆ. ಸುರೇಶ ಎಲ್. ಪುತ್ರನ್ ಮೃತಪಟ್ಟವರು. ಸ್ನೇಹಿತನೊಂದಿಗೆ ಬೈಕ್ ನಲ್ಲಿ ಉಡುಪಿಯಿಂದ ಮೂಳೂರು ಕಡೆಗೆ ಹೊರಟಿದ್ದ ವೇಳೆ ಘಟನೆ ಸಂಭವಿಸಿದೆ. ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ ಪರಿಣಾಮ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಈರಣ್ಣ ರವರಿಗೆ ಬೈಕ್‌ ಡಿಕ್ಕಿ ಹೊಡೆದಿದೆ. ಇದರಿಂದ ಈರಣ್ಣ ರಸ್ತೆಯ ಬದಿಗೆ ಬಿದ್ದು ಗಾಯಗೊಂಡಿದ್ದರು. ಇದೇ ವೇಳೆ ಬೈಕ್‌ ಸಮೇತ ಸವಾರರಿಬ್ಬರು

ಪಾದಚಾರಿಗೆ ಬೈಕ್ ಡಿಕ್ಕಿ; ಬೈಕ್ ಸವಾರ ಮೃತ್ಯು Read More »

ಐತಿಹಾಸಿ‌ಕ‌ ಸಾಧನೆಗೈದ ನೀರಜ್ ಛೋಪ್ರಾ| ಚಿನ್ನದ ಹುಡುಗನಿಂದ ಮತ್ತೊಂದು ಮೈಲಿಗಲ್ಲು

ಸಮಗ್ರ ನ್ಯೂಸ್: ಟೋಕಿಯೋ ಒಲಿಂಪಿಕ್ ಚಿನ್ನದ ಪದಕ ವಿಜೇತ ಭಾರತದ ಜಾವೆಲಿನ್ ಕ್ರೀಡೆಯ ದಿಗ್ಗಜ ನೀರಜ್ ಚೋಪ್ರಾ ಗುರುವಾರ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜ್ಯೂರಿಚ್ ನ ಪ್ರತಿಷ್ಠಿತ ಡೈಮಂಡ್ ಲೀಗ್ ಫೈನಲ್ಸ್‌ನಲ್ಲಿ ಭಾಗಿಯಾಗಿ ಪ್ರಶಸ್ತಿ ಗೆದ್ದಿರುವ ಮೊದಲ ಭಾರತೀಯ ಎನಿಸಿಕೊಂಡರು.ಚೋಪ್ರಾ ಅವರು ಫೌಲ್‌ನೊಂದಿಗೆ ಆಟ ಪ್ರಾರಂಭಿಸಿದ್ದರು. ಆದರೆ ತಮ್ಮ ಎರಡನೇ ಪ್ರಯತ್ನದಲ್ಲಿ 88.44 ಮೀ ದೂರ ಜಾವೆಲಿನ್ ಎಸೆದು ಅಗ್ರಸ್ಥಾನಕ್ಕೆ ಜಿಗಿದರು. ಇದು ಅವರ ವೃತ್ತಿಜೀವನದ ಅತ್ಯಂತ ದೊಡ್ಡ ಗೆಲುವುಗಳಲ್ಲಿ ಒಂದು. ತಮ್ಮ ಮುಂದಿನ ನಾಲ್ಕು

ಐತಿಹಾಸಿ‌ಕ‌ ಸಾಧನೆಗೈದ ನೀರಜ್ ಛೋಪ್ರಾ| ಚಿನ್ನದ ಹುಡುಗನಿಂದ ಮತ್ತೊಂದು ಮೈಲಿಗಲ್ಲು Read More »