Ad Widget .

ಫಸಲ್ ಬೀಮಾ ಯೋಜನೆಯಲ್ಲಿ ಅರ್ಜಿ‌ ಸಲ್ಲಿಸಿದ್ದೀರಾ? ಹಾಗಿದ್ದಲ್ಲಿ ಈ ಮಾಹಿತಿ ತಿಳಿದುಕೊಳ್ಳಿ

ಸಮಗ್ರ ನ್ಯೂಸ್: ರೈತರು ತಮ್ಮ ಕೃಷಿ ಹಾಗೂ ಕೃಷಿ ವಲಯಕ್ಕೆ ಒಳ್ಳೆಯ ಬೆಲೆ ಸಿಗಬೇಕು ಹಾಗೂ ರೈತರು ತಮ್ಮ ಚಟುವಟಿಕೆಗಳಲ್ಲಿ ಬೆಲೆ‌ಸಿಗದೆ ಇದ್ದಾಗ ನಿರಾಸೆಯಾಗದಂತೆ ತಡೆಯಲು ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ರೂಪಿಸಲಾಗಿದೆ. ಇದರಲ್ಲಿ ರೈತರು ತಾವು ಬೆಳೆದ ಬೆಳೆಗೆ ಎಷ್ಟು ಹಣ ವಿಮೆ ಕಟ್ಟಬೇಕು, ಹಾಗೂ ರೈತರ ಬೆಳೆದ ಬೆಳೆಯು ಆಕಸ್ಮಿಕವಾಗಿ ನಾಶ ಹೊಂದಿದರೆ ಅದಕ್ಕೆ ಎಷ್ಟು ಪರಿಹಾರ ಬರುತ್ತದೆ. 2022-23ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದರದಲ್ಲಿ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಿಂದೆ ನೀಡುವ ವಿಮೆಗಿಂತ ಸ್ವಲ್ಪ ಹೆಚ್ಚು ಮಾಡಲು ಸರ್ಕಾರವು ನಿರ್ಧರಿಸಿದೆ. ಎಲ್ಲಾ ರೈತರಿಗೆ ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರ ಹಣ ವಿವಿಧ ಕಾರಣಗಳಿಂದ ಜಮೆಯಾಗುತ್ತಿಲ್ಲ. ಸ್ವಲ್ಪ ಕೃಷಿಕರಿಗೆ ಬೆಳೆ ವಿಮೆ ಮತ್ತು ಬೆಳೆ ಹಾನಿ ಹಣ ಖಾತೆಗೆ ಬಂದಿದೆ. ಮೂಂದಿನ ದಿನಗಳಲ್ಲಿ ಉಳಿದ ರೈತರಿಗೆ ಹಣ ಬರಲಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೆಳೆ ವಿಮೆ ಪರಿಹಾರ ಮತ್ತು ಬೆಳೆ ಹಾನಿ ಪರಿಹಾರ ಎರಡು ಬೇರೆ ಬೇರೆಯಾಗಿದೆ. ಕೆಲ ರೈತರು ಇವೆರೆಡೂ ಒಂದೇ ಎಂದು ಭಾವಿಸಿದ್ದಾರೆ, ಅದು ತಪ್ಪು ಕಲ್ಪನೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Ad Widget . Ad Widget . Ad Widget .

ರೈತರಿಗೆ ದೈನಂದಿನವಾಗಿ ಆಗುವ ಹವಾಮಾನದ ಏರಿಳಿತದಿಂದಾಗಿ, ಮಳೆ ಅಥವಾ ಗಾಳಿಯಿಂದ ಬೆಳೆ ಹಾಳಾದಾಗ ಆರ್ಥಿಕತೆಯ ಸಂಕಷ್ಟವನ್ನು ತಪ್ಪಿಸಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತಂದಿದೆ.

ಬೆಳೆ ವಿಮೆ ಪರಿಹಾರ ಬಿತ್ತಿದ ಬೆಳೆಗಳಿಗೆ ವಿಮೆ ಮಾಡಿಸಿದ್ದರೆ ಮಾತ್ರ ಹಣ ಬರಲಿದೆ ದೊರೆಯುತ್ತದೆ. ಬೆಳೆ ಹಾನಿ ಪರಿಹಾರವನ್ನು ಸರ್ಕಾರವು ಹಾನಿ ಪ್ರಮಾಣ ಹಾಗೂ NDRF,SDRFಗಳ ಮೂಲ ವರದಿಗಳನ್ನಿಟ್ಟುಕೊಂಡು ಘೋಷಿಸುತ್ತದೆ.

ಬೆಳೆ ವಿಮೆ ಪರಿಹಾರ:
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಈ ಪರಿಹಾರ ನೀಡಲಾಗುವುದು. ತಮ್ಮ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದ ರೈತರಿಗೆ ಹವಾಮಾನದ ಏರಿಳಿತದಿಂದಾಗಿ, ಮಳೆ ಅಥವಾ ಗಾಳಿಯಿಂದ ಬೆಳೆ ಹಾಳಾದರೆ ಬೆಳೆ ವಿಮಾ ಪರಿಹಾರ ರೈತರಿಗೆ ದೊರೆಯುತ್ತದೆ. ಬೆಳೆ ಹಾಳಾದಾಗ 2-3 ದಿನಗಳೊಳಗೆ ಆಯಾ ಜಿಲ್ಲೆಯ ರೈತರು ತಮ್ಮ ವಿಮಾ ಕಂಪನಿಗೆ ಕಂಪ್ಲೇಂಟ್ ಕೋಡಬೇಕು. ಅಂತಹ ಸಂದರ್ಭದಲ್ಲಿ ವಿಮಾ ಕಂಪನಿಯ ಸಿಬ್ಬಂದಿ ವರ್ಗದವರು ರೈತನ ಜಮೀನಿಗೆ ಭೇಟಿ, ಬೆಳೆಯು ಹಾಳಾದ ಪ್ರಮಾಣವನ್ನು ಗಮನಿಸಿ ವರದಿ ಸಲ್ಲಿಸುತ್ತಾರೆ. ನಂತರ ರೈತರ ಬೆಳ ಹಾಳಾದ ಪ್ರಮಾಣವನ್ನಾಧರಿಸಿ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು.

ಪ್ರಸ್ತಕ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರು ಆನ್ಲೈನ್ ನಲ್ಲೀಯೇ ಅರ್ಜಿಯ ಸ್ಟೇಟಸನ್ನು ಚೆಕ್ ಮಾಡಬಹುದು.

ಅರ್ಜಿಯ ಸ್ಟೇಟಸ ಚೆಕ್ ಮಾಡುವ ವಿಧಾನ:
https://www.samrakshane.karnataka.gov.in/
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು.

ಬೆಳೆ ಹಾನಿ ಪರಿಹಾರ:
ಇದರ ಘೋಷಣೆ ರಾಜ್ಯ ಸರ್ಕಾರ ಮಾಡುತ್ತದೆ.
ಅತಿಹೆಚ್ಚು ಮಳೆಯಾದಾಗ, ಪ್ರವಾಹ, ಬರಗಾಲದಂತಹ ಪರಿಸ್ಥಿತಿಯಲ್ಲಿ ಬೆಳೆ ಹಾನಿಯಾಗಿದ್ದರೆ ಎಕರೆಗೆ ಇಂತಿಷ್ಟು ಬೆಳೆ ಹಾನಿ ಪರಿಹಾರವನ್ನು ರಾಜ್ಯ ಸರ್ಕಾರವು ಘೋಷಿಸುತ್ತದೆ.

ಬೆಳೆ ಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡುವ ವಿಧಾನ:
https://www.samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

ಅಲ್ಲಿ ಕೇಳುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ಪರಿಹಾರ ಪಡೆಯಲು ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.

Leave a Comment

Your email address will not be published. Required fields are marked *