July 2022

ಐವರ್ನಾಡು; ಪ್ರಿಡ್ಜ್ ನಿಂದ ಶಾಕ್ ಹೊಡೆದು 4 ವರ್ಷದ ಬಾಲಕ ಮೃತ್ಯು

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ಪ್ರಿಡ್ಜ್ ನಿಂದ ಶಾಕ್ ಹೊಡೆದು 4 ವರ್ಷದ ಬಾಲಕ ಮೃತಪಟ್ಟ ಘಟನೆಯೊಂದು ಜು.2 ರಂದು ನಡೆದಿದೆ. ಐವರ್ನಾಡಿನ ಆದಂ ಎಂಬವರ ಪುತ್ರಿ ಅಪ್ಸರವರ ಮಗ ಹೈದರ್ ಅಲಿ ಮೃತ ಬಾಲಕ. ಈತ ಪ್ರಿಡ್ಜನ್ನು ಮುಟ್ಟಿದಾಗ ಶಾಕ್ ಹೊಡೆದಿದೆ ಎನ್ನಲಾಗಿದೆ

ಐವರ್ನಾಡು; ಪ್ರಿಡ್ಜ್ ನಿಂದ ಶಾಕ್ ಹೊಡೆದು 4 ವರ್ಷದ ಬಾಲಕ ಮೃತ್ಯು Read More »

ಗ್ರಾ.ಪಂ ಸದಸ್ಯ ಹಾಗೂ ಪಿಡಿಓ ಕಛೇರಿಯಲ್ಲಿ ಲವ್ವಿಡವ್ವಿ ; ಸಿಸಿಟಿವಿಯಲ್ಲಿ ಸೆರೆ, ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್

ಸಮಗ್ರ ನ್ಯೂಸ್ : ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ‌ ಜೆಸಿ ಪುರ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಗ್ರಾ .ಪಂ. ಸದಸ್ಯ ಹಾಗೂ ಪಿಡಿಓ ಲವ್ವಿಡವ್ವಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ‌ಆಗಿದೆ. ಸಾರ್ವಜನಿಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ಗ್ರಾಮ ಪಂಚಾಯತಿ ಸದಸ್ಯ ಹಾಗೂ ಪಿಡಿಓ ಕೋಕಿಲಾ , ಗ್ರಾಮ ಪಂಚಾಯತಿ ಕಚೇರಿಯನ್ನು ಪಲ್ಲಂಗವನ್ನಾಗಿ ಮಾಡಿಕೊಂಡು ಚೆಲ್ಲಾಟವಾಡಿದ ಪ್ರಸಂಗ ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ‌ ಆಗಿದೆ.

ಗ್ರಾ.ಪಂ ಸದಸ್ಯ ಹಾಗೂ ಪಿಡಿಓ ಕಛೇರಿಯಲ್ಲಿ ಲವ್ವಿಡವ್ವಿ ; ಸಿಸಿಟಿವಿಯಲ್ಲಿ ಸೆರೆ, ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ Read More »

ಅಪರೂಪದ ಎರಡು ತಲೆ ಹಾವು ಪತ್ತೆ

ಸಮಗ್ರ ನ್ಯೂಸ್ : ಅಪರೂಪದ ಮತ್ತು ಎರಡು ತಲೆಗಳನ್ನು ಹೊಂದಿರುವ ಸೌಥರ್ನ್ ಬ್ರೌನ್ ಎಗ್-ಈಟರ್ ಹಾವು ದಕ್ಷಿಣ ಆಫ್ರಿಕಾದ ಕಾಡಿನಲ್ಲಿ ಕಂಡುಬಂದಿದೆ. ವ್ಯಕ್ತಿಯೊಬ್ಬರು ತಮ್ಮ ತೋಟದಲ್ಲಿ ಎರಡು ತಲೆಯ ಹಾವನ್ನು ಕಂಡ ಕೂಡಲೇ ಹಾವು ರಕ್ಷಕ ನಿಕ್ ಇವಾನ್ಸ್ ಅವರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಅವರು ಹಾವನ್ನು ರಕ್ಷಣೆ ಮಾಡಿದ್ದಾರೆ.

ಅಪರೂಪದ ಎರಡು ತಲೆ ಹಾವು ಪತ್ತೆ Read More »

44 ನೇ ಹುಟ್ಟುಹಬ್ಬ ದ ಸಡಗರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

ಬೆಂಗಳೂರು: ಸ್ಯಾಂಡಲ್​ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಜನುಮ ದಿನದ ಸಡಗರದಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರಿಗೆ ಇಂದು 44ನೇ ಹುಟ್ಟುಹಬ್ಬದ ಸಂಭ್ರಮ. ಅವರು ಬೆಂಗಳೂರಿನ ನೆಲಮಂಗಲದ ಅಡಕಮರನಹಳ್ಳಿಯಲ್ಲಿ ಜುಲೈ 2, 1980ರಲ್ಲಿ ಕಿಶನ್ ಮತ್ತು ಸುಲೋಚನ ಎಂಬ ದಂಪತಿಗಳ ಮೂರನೇ ಮಗನಾಗಿ ಗಣೇಶ್ ಜನಿಸಿದರು. ಇವರು ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದುಕೊಂಡಿದ್ದಾರೆ. ಇನ್ನೂ ಇವರು 99 ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ್ದಾರೆ

44 ನೇ ಹುಟ್ಟುಹಬ್ಬ ದ ಸಡಗರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ Read More »

ಮಂಗಳೂರು- ದೆಹಲಿ ನಡುವೆ ನೇರ ವಿಮಾನ ಯಾನ ಸೇವೆ ಪ್ರಾರಂಭ

ಸಮಗ್ರ ನ್ಯೂಸ್: ಮಂಗಳೂರು ನಗರದಿಂದ ರಾಷ್ಟ್ರದ ರಾಜಧಾನಿ ದೆಹಲಿ ನಡುವೆ ನೇರ ವಿಮಾನಯಾನ ಸೇವೆ ಪ್ರಾರಂಭಗೊಂಡಿದೆ. ಮಂಗಳೂರು – ದೆಹಲಿ ನಡುವೆ ವಿಮಾನಯಾನ ಸೇವೆ ಆರಂಭಿಸಬೇಕೆಂಬ ಹಲವು ದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಇಂಡಿಗೋ ವಿಮಾನ ಸಂಸ್ಥೆಯು ತನ್ನ ಮೊದಲ ಸಂಚಾರವನ್ನು ಶುಕ್ರವಾರ ಆರಂಭಿಸಿದೆ. ಡೆಲ್ಲಿಯಿಂದ ಪ್ರಯಾಣಿಕರನ್ನು ಹೊತ್ತೊಯ್ದ ವಿಮಾನವು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಅದೇ ರೀತಿ 140 ಪ್ರಯಾಣಿಕರನ್ನು ಮಂಗಳೂರು ವಿಮಾನ ನಿಲ್ದಾಣದಿಂದ ಹೊತ್ತೊಯ್ದ ವಿಮಾನವು 10.40ಕ್ಕೆ ಮರಳಿ ಡೆಲ್ಲಿ ತಲುಪಿದೆ.

ಮಂಗಳೂರು- ದೆಹಲಿ ನಡುವೆ ನೇರ ವಿಮಾನ ಯಾನ ಸೇವೆ ಪ್ರಾರಂಭ Read More »

ಟೈಲರ್ ಹತ್ಯೆ ಬಳಿಕ ಮೆಡಿಕಲ್ ಅಂಗಡಿ ಮಾಲೀಕನ ಕೊಲೆ| ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಹತ್ಯೆಗೈದ ಕಿರಾತಕರು

ಸಮಗ್ರ ನ್ಯೂಸ್: ನೂಪರ್ ಶರ್ಮಾ ಬೆಂಬಲಿಸಿದ್ದ ರಾಜಸ್ಥಾನದ ಹಿಂದೂ ಟೈಲರ್ ಕನ್ಹಯ್ಯಲಾಲ್ ಹತ್ಯೆ ಪ್ರಕರಣದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ನೂಪರ್ ಶರ್ಮಾ ಪರ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಮತ್ತೊಂದು ಹತ್ಯೆಯಾಗಿರುವ ವಿಚಾರ ವರದಿಯಾಗಿದೆ. ಮಹಾರಾಷ್ಟ್ರದ ಅಮರಾವತಿಯಲ್ಲಿ ಮೆಡಿಕಲ್ ಶಾಪ್ ಮಾಲೀಕ ಉಮೇಶ್ ಪ್ರಹ್ಲಾದ್ ರಾವ್ ನೂಪರ್ ಶರ್ಮಾ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು ಎನ್ನಲಾಗಿದ್ದು, ಹೀಗಾಗಿ ಉಮೇಶ್ ಪ್ರಹ್ಲಾದ್ ರಾವ್ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೇಳಲಾಗುತ್ತಿದೆ. ಜೂನ್ 21 ರಂದು

ಟೈಲರ್ ಹತ್ಯೆ ಬಳಿಕ ಮೆಡಿಕಲ್ ಅಂಗಡಿ ಮಾಲೀಕನ ಕೊಲೆ| ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಹತ್ಯೆಗೈದ ಕಿರಾತಕರು Read More »

ಅತಿಥಿ ಉಪನ್ಯಾಸಕರ ಗೌರವ ಧನ 15 ಸಾವಿರ ರೂ.ಗೆ ಹೆಚ್ಚಳ

ಸಮಗ್ರ ನ್ಯೂಸ್ : ಪ್ರಸಕ್ತ ಸಾಲಿನಲ್ಲಿ 3,500 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ಹಾಗೂ ಸಂಭಾವನೆಯನ್ನು 9 ಸಾವಿರ ರೂ.ನಿಂದ 15 ಸಾವಿರ ರೂ.ಗೆ ಹೆಚ್ಚಿಸುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 3,500 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ಹಾಗೂ ಅತಿಥಿ ಉಪನ್ಯಾಸಕರ ಗೌರವಧನವನ್ನು 15 ಸಾವಿರ ರೂ.ಗಳಿಗೆ ಏರಿಕೆ ಮಾಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ

ಅತಿಥಿ ಉಪನ್ಯಾಸಕರ ಗೌರವ ಧನ 15 ಸಾವಿರ ರೂ.ಗೆ ಹೆಚ್ಚಳ Read More »

ಬಂಟ್ವಾಳ; ಕಾರುಗಳ ನಡುವೆ ಅಪಘಾತ; ಚಾಲಕನಿಗೆ  ಗಂಭೀರ ಗಾಯ

ಸಮಗ್ರ ನ್ಯೂಸ್ : ಎರಡು ಕಾರುಗಳ ನಡುವೆ ಅಪಘಾತ ನಡೆದ ಕಾರಣ ಕಾರು ಚಾಲಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆಯೊಂದು ಬಿ.ಸಿ‌.ರೋಡ್ ಪುಂಜಾಲಕಟ್ಟೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ನಯನಾಡು ನಿವಾಸಿ ಬ್ಯಾಪ್ಟಿಸ್ ಲೋಬೋ ಅವರ ಪುತ್ರ ಕಾರು ಚಾಲಕ ರಾಕ್ಲಿನ್ ಲೋಬೋ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವೂರು ಸಮೀಪ ಬಡಗುಂಡಿ ಸಮೀಪ ರಿಟ್ಜ್ ಹಾಗೂ ಎರಿಟಿಗಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಎರಿಟಿಗ ಕಾರಿನಲ್ಲಿ ಇತರ ಪ್ರಯಾಣಿಕರಿಗೂ ಗಾಯಗಳಾಗಿದೆ

ಬಂಟ್ವಾಳ; ಕಾರುಗಳ ನಡುವೆ ಅಪಘಾತ; ಚಾಲಕನಿಗೆ  ಗಂಭೀರ ಗಾಯ Read More »

ಕರಾವಳಿಯಲ್ಲಿ ಪ್ರವಾಹದ ಭೀತಿ ಇದ್ದರೂ ಶಾಸಕರ ಲೆಹ್ ಲಡಾಖ್ ಪ್ರವಾಸ…!!

ಸಮಗ್ರ ನ್ಯೂಸ್: ಮಳೆಯಿಂದಾಗಿ ಕರಾವಳಿ ಸೇರಿದಂತೆ ಕರ್ನಾಟಕದ ಹಲವು ಭಾಗಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ಈ ಸಂದರ್ಭ , ವಿಧಾನಸಭೆಯ ಭರವಸೆ ಸಮಿತಿಗೆ ಸೇರಿದ ಶಾಸಕರ ಗುಂಪು ಚುನಾಯಿತರೂ ಇಲ್ಲದ ಲೇಹ್ ಮತ್ತು ಲಡಾಖ್‌ಗೆ ‘ಅಧ್ಯಯನ ಪ್ರವಾಸ’ ಕೈಗೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ. ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದ ನಿಯೋಗ ಗುರುವಾರ 6 ದಿನಗಳ ಲೇಹ್ ಮತ್ತು ಲಡಾಖ್ ಪ್ರವಾಸಕ್ಕೆ ತೆರಳಿದೆ. ಇಲ್ಲಿ ಪ್ರಶ್ನಾರ್ಹವಾದದ್ದು ಅವರ ಭೇಟಿಯ ಸ್ಥಳ. ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿದ್ದು, ಇದು ಕೇಂದ್ರ ನೇಮಿತ

ಕರಾವಳಿಯಲ್ಲಿ ಪ್ರವಾಹದ ಭೀತಿ ಇದ್ದರೂ ಶಾಸಕರ ಲೆಹ್ ಲಡಾಖ್ ಪ್ರವಾಸ…!! Read More »

ಉದಯಪುರ ಟೈಲರ್ ಕೊಲೆ ಆರೋಪಿಗಳಿಗಿತ್ತಾ ಬಿಜೆಪಿ ನಂಟು? ಇಂಡಿಯಾ ಟುಡೇ ವರದಿಯಲ್ಲಿ ಹೊರಬಿತ್ತು‌ ಶಾಕಿಂಗ್ ನ್ಯೂಸ್!! ಕೊಲೆ ನಡೆಸಲು ಬಿಜೆಪಿ ಸೇರಬಯಸಿದನೇ ಕೊಲೆಗಾರ?

ಸಮಗ್ರ ನ್ಯೂಸ್: ದೇಶದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಟೈಲರ್ ಹತ್ಯೆಯ ಆರೋಪಿಗಳು ಸ್ಥಳೀಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಾಯಕನೊಂದಿಗೆ ಸಂಬಂಧ ಹೊಂದಿರುವ ಬಗ್ಗೆ Indiatoday.com ಮಾಡಿರುವ ತನಿಖಾ ವರದಿಯಲ್ಲಿ ಬೆಳಕಿಗೆ ಬಂದಿದೆ. ರಾಜಸ್ಥಾನದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಲ್ಲಿ ಕಳೆದ ಹತ್ತು ವರ್ಷಗಳಿಂದ ಇರುವ ಸದಸ್ಯ ಇರ್ಷಾದ್‌ ಚೈನ್‌ವಾಲ ಆರೋಪಿಗಳಲ್ಲಿ ಓರ್ವನಾದ ರಿಯಾಝ್‌ ಜೊತೆ ಕಾಣಿಸಿಕೊಂಡಿರುವ ಹಲವು ಚಿತ್ರಗಳನ್ನು ಇಂಡಿಯಾ ಟುಡೆ ವರದಿ ಮಾಡಿದೆ. ಈ ಕುರಿತು ಇರ್ಷಾದ್‌ ಬಳಿ ಕೇಳಿದಾಗ, ಬಿಜೆಪಿ ನಾಯಕ ಗುಲಾಬ್‌ ಚಂದ್‌ ಕಟಾರಿಯಾ

ಉದಯಪುರ ಟೈಲರ್ ಕೊಲೆ ಆರೋಪಿಗಳಿಗಿತ್ತಾ ಬಿಜೆಪಿ ನಂಟು? ಇಂಡಿಯಾ ಟುಡೇ ವರದಿಯಲ್ಲಿ ಹೊರಬಿತ್ತು‌ ಶಾಕಿಂಗ್ ನ್ಯೂಸ್!! ಕೊಲೆ ನಡೆಸಲು ಬಿಜೆಪಿ ಸೇರಬಯಸಿದನೇ ಕೊಲೆಗಾರ? Read More »