July 2022

ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಗ್ಗೆ ಚರ್ಚೆ

ಸಮಗ್ರ ನ್ಯೂಸ್: ಭಾರಿ ಮಳೆಯ ನಡುವೆ ಅಡಿಕೆ ಮಾರುಕಟ್ಟೆಯಲ್ಲಿ ಏರಿಕೆಯ ಬಗ್ಗೆ ಚರ್ಚೆಯಾಗುತ್ತಿದೆ. ಮುಂದಿನ ವಾರದಿಂದ 10 ರೂಪಾಯಿಯಷ್ಟು ಏರಿಕೆ ಕಾಣಲಿದೆ. ಹಳೆ ಅಡಿಕೆ 550ರೂ ಆಸುಪಾಸಿನಲ್ಲಿ ಹಾಗೂ ಹೊಸ ಅಡಿಕೆ 445 ರೂ ಆಸುಪಾಸಿಗೆ ಏರಿಕೆ ಸಾಧ್ಯತೆ ಇದೆ. ಅಡಿಕೆ ಧಾರಣೆಯು ಕಳೆದ ಕೆಲವು ದಿನಗಳಿಂದ ಸ್ಥಿರತೆಯಲ್ಲಿತ್ತು. ಕ್ಯಾಂಪ್ಕೋ ಧಾರಣೆಯು ಹೊಸ ಅಡಿಕೆಗೆ 450 ರೂ ಗರಿಷ್ಠ ಧಾರಣೆ ಇದ್ದು 430 ರೂ. ಗೆ ಖರೀದಿ ನಡೆಯುತ್ತಿತ್ತು. ಹಳೆಯ ಅಡಿಕೆಧಾರಣೆಯು 550 ರೂ. ನಿಗದಿಯಾದರೂ 520 […]

ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಗ್ಗೆ ಚರ್ಚೆ Read More »

“ಪುನೀತ್ ರಾಜ್ ಕುಮಾರ್ ಕಾಣೆಯಾಗಿದ್ದಾರೆ ಹುಡುಕಿ ಕೊಟ್ಟವರಿಗೆ ಕೇಳಿದ್ದನ್ನು ಕೊಡಲಾಗುವುದು” -ಪೋಸ್ಟರ್ ವೈರಲ್

ಸಮಗ್ರ ನ್ಯೂಸ್: ಪುನೀತ್ ರಾಜ್ ಕುಮಾರ್ ನಿಧನವನ್ನು ಇನ್ನೂ ಅವರ ಅಭಿಮಾನಿಗಳು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ಅಗಲಿ ಎಂಟು ತಿಂಗಳು ಕಳೆದರೂ, ಅಭಿಮಾನಿಗಳು ಇನ್ನೂ ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ‘ಕಾಣೆಯಾಗಿದ್ದಾರೆ’ ಎನ್ನುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟ ಕಾಣೆಯಾಗಿದ್ದಾರೆ ಹುಡುಕಿಕೊಟ್ಟವರಿಗೆ ಕೇಳಿದ್ದನ್ನು ಕೊಡಲಾಗುವುದು ಎಂದು ಭಿತ್ತಿ ಪತ್ರವನ್ನು ಅಂಟಿಸುತ್ತಿದ್ದಾರೆ. ಹುಡುಗನೊಬ್ಬ ಭಿತ್ತಿ ಪತ್ರವನ್ನು ಗೋಡೆಗೆ ಅಂಟಿಸಿ ಕಾಣೆಯಾಗಿರುವ ತಮ್ಮ ನೆಚ್ಚಿನ ನಟನನ್ನು ಹುಡುಕಿಕೊಡಿ ಎಂದು

“ಪುನೀತ್ ರಾಜ್ ಕುಮಾರ್ ಕಾಣೆಯಾಗಿದ್ದಾರೆ ಹುಡುಕಿ ಕೊಟ್ಟವರಿಗೆ ಕೇಳಿದ್ದನ್ನು ಕೊಡಲಾಗುವುದು” -ಪೋಸ್ಟರ್ ವೈರಲ್ Read More »

ಬಕ್ರೀದ್ ಹಬ್ಬಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಸಮಗ್ರ ನ್ಯೂಸ್: ಮುಸ್ಲಿಂ ಬಾಂಧವರ ಬಕ್ರೀದ್ ಇದೇ ಜುಲೈ 10ರಂದು ರಾಜ್ಯದಾದ್ಯಂತ ಆಚರಿಸಲಾಗುತ್ತಿದ್ದು, ಹಬ್ಬವನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಕೆಲ ಕಾನೂನು ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ಸರ್ಕಾರ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದೆ. ಹಬ್ಬದ ದಿನದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುವವರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಾರ್ವತ್ರಿಕ ಅಧಿನಿಯಮ 2020ರ ನಿಯಮಗಳು ಉಲ್ಲಂಘನೆಯಾಗದಂತೆ ಖುರ್ಬಾನಿ ನೆರವೇರಿಸಬೇಕು. ಸಾರ್ವಜನಿಕ ಪ್ರದೇಶ, ರಸ್ತೆಗಳು, ಶಾಲಾ ಕಾಲೇಜು, ಆಸ್ಪತ್ರೆ ಆವರಣಗಳಲ್ಲಿ ಖುರ್ಬಾನಿಯನ್ನು ನಿಷೇಧಿಸಲಾಗಿದೆ. ಸ್ಥಳೀಯಾಡಳಿತ

ಬಕ್ರೀದ್ ಹಬ್ಬಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ Read More »

ಸಾಲುಮರದ ತಿಮ್ಮಕ್ಕ ಇನ್ಮುಂದೆ ರಾಜ್ಯಸರ್ಕಾರದ ಪರಿಸರ ರಾಯಭಾರಿ| ವೃಕ್ಷಮಾತೆಗೆ ಸಂಪುಟ ದರ್ಜೆಯ ಸ್ಥಾನಮಾನ

ಸಮಗ್ರ ನ್ಯೂಸ್: ವೃಕ್ಷಮಾತೆ, ರಾಷ್ಟ್ರ, ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರನ್ನು, ರಾಜ್ಯ ಸರ್ಕಾರ ಪರಿಸರ ರಾಯಭಾರಿಯಾಗಿ ನೇಮಕ ಮಾಡಿ ಆದೇಶಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ನಾಡೋಜ ಪ್ರಶಸ್ತಿ ಪುರಸ್ಕೃತೆ, ರಾಜ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದಂತ ಸಾಲುಮರದ ತಿಮ್ಮಕ್ಕ ಅವರನ್ನು ಪರಿಸರ ರಾಯಭಾರಿಯಾಗಿ ನೇಮಿಸಲಾಗಿದೆ. ಅವರಿಗೆ ಈ ಕೂಡಲೇ ರಾಜ್ಯ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಸಾಲುಮರದ ತಿಮ್ಮಕ್ಕ ಇನ್ಮುಂದೆ ರಾಜ್ಯಸರ್ಕಾರದ ಪರಿಸರ ರಾಯಭಾರಿ| ವೃಕ್ಷಮಾತೆಗೆ ಸಂಪುಟ ದರ್ಜೆಯ ಸ್ಥಾನಮಾನ Read More »

ರೈಲ್ವೇ ಅಂಡರ್ ಪಾಸ್ ಗೋಡೆಗೆ ಟೊಮೆಟೊ ತುಂಬಿದ ಲಾರಿ ಡಿಕ್ಕಿ ; ಚಾಲಕನಿಗೆ ಗಂಭೀರ ಗಾಯ

ಸಮಗ್ರ ನ್ಯೂಸ್ : ಚಿಕ್ಕಬಳ್ಳಾಪುರ ತಾಲ್ಲೂಕಿನ ಜಾತವಾರ ಬಳಿಯ ಹೊಸಹಳ್ಳಿ ರೈಲ್ವೇ ಅಂಡರ್ ಪಾಸ್‌ ಗೋಡೆಗೆ ಟೊಮೆಟೊ ಲಾರಿ ಡಿಕ್ಕಿ ಹೊಡೆದು ಡಿಕ್ಕಿಯ ರಭಸಕ್ಕೆ ಟೊಮೆಟೊ ತುಂಬಿದ್ದ ಲಾರಿ ಉರುಳಿ ಬಿದ್ದಿದೆ. ಚಾಲಕನಿಗೆ ಗಂಭೀರ ಗಾಯವಾಗಿದೆ. ಲಾರಿ ಉರುಳಿ ಬಿದ್ದ ಪರಿಣಾಮ ಟೊಮೆಟೊ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಚಿಂತಾಮಣಿಯಿಂದ ಟೊಮೆಟೊ ತುಂಬಿಸಿಕೊಂಡು ಬರುತ್ತಿದ್ದ ಲಾರಿ ಇದಾಗಿದ್ದು, ರಾತ್ರಿ ವೇಳೆ ಹಂಪ್ಸ್‌ನಲ್ಲಿ ಲಾರಿ ನಿಯಂತ್ರಣ ತಪ್ಪಿದ ಪರಿಣಾಮ ಲಾರಿ ರೈಲ್ವೇ ಅಂಡರ್ ಪಾಸ್‌ ಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ರೈಲ್ವೇ ಅಂಡರ್ ಪಾಸ್ ಗೋಡೆಗೆ ಟೊಮೆಟೊ ತುಂಬಿದ ಲಾರಿ ಡಿಕ್ಕಿ ; ಚಾಲಕನಿಗೆ ಗಂಭೀರ ಗಾಯ Read More »

ಕೇರಳ; ಸ್ಕ್ರ್ಯಾಪ್ ಸಂಗ್ರಹಿಸಲು ತೊಡಗಿದ್ದ ತಂದೆ ಮತ್ತು ಮಗ ಸ್ಫೋಟದಲ್ಲಿ ಬಲಿ

ಸಮಗ್ರ ನ್ಯೂಸ್ : ಕೇರಳದ ಕಣ್ಣೂರು ಜಿಲ್ಲೆಯ ಮಟ್ಟನ್ನೂರಿನ ಕಾಸಿಮುಕ್ಕು ಎಂಬಲ್ಲಿ ಬಾಡಿಗೆ ಮನೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ತಂದೆ ಮತ್ತು ಮಗ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ. ಮಾಹಿತಿಗಳ ಪ್ರಕಾರ, ಸ್ಕ್ರ್ಯಾಪ್ ಸಂಗ್ರಹಿಸಲು ತೊಡಗಿದ್ದ ಅಸ್ಸಾಂ ಮೂಲದ ಫಸಲ್ ಹಕ್ (45) ಮತ್ತು ಮಗ ಶಹೀದುಲ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಇವರು ಗುಜರಿ ಹೆಕ್ಕಿ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದು, ಸ್ಕ್ರ್ಯಾಪ್ ಸಂಗ್ರಹದ ವೇಳೆ ತಮಗೆ ದೊರೆತಿದ್ದ ಸ್ಟೀಲ್‌ ಬಾಕ್ಸ್‌ವೊಂದನ್ನು ಮನೆಗೆ ತಂದು ಓಪನ್‌ ಮಾಡಿದ ತಕ್ಷಣ ಅದು

ಕೇರಳ; ಸ್ಕ್ರ್ಯಾಪ್ ಸಂಗ್ರಹಿಸಲು ತೊಡಗಿದ್ದ ತಂದೆ ಮತ್ತು ಮಗ ಸ್ಫೋಟದಲ್ಲಿ ಬಲಿ Read More »

ರಾಜ್ಯಸಭೆ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಚಿತ್ರನಟ ಜಗ್ಗೇಶ್|ಇಲ್ಲಿದೆ ವಿಡಿಯೋ

ಸಮಗ್ರ ನ್ಯೂಸ್: ರಾಜ್ಯಸಭೆ ಸದಸ್ಯರಾಗಿ ಕನ್ನಡ ಚಿತ್ರನಟ ಜಗ್ಗೇಶ್ ಪ್ರಮಾಣವಚನ ಸ್ವೀಕರಿಸಿದರು. ರಾಘವೇಂದ್ರ ಸ್ವಾಮಿ ದೇವರ ಹೆಸರಿನಲ್ಲಿ ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸುವ ಮೂಲಕ ಜಗ್ಗೇಶ್ ಗಮನ ಸೆಳೆದರು. “ಜಗ್ಗೇಶ್ ಎಂಬ ಹೆಸರಿನವನಾದ ನಾನು, ರಾಜ್ಯಸಭೆಯ ಸದಸ್ಯನಾಗಿ ಚುನಾಯಿತನಾದವನಾಗಿ ಕಾನೂನು ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನಕ್ಕೆ ಸತ್ಯ, ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆ ಎಂದು ಭಾರತದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು ಮತ್ತು ನಾನು ಈಗ ಕೈಗೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆ ಎಂದು ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ

ರಾಜ್ಯಸಭೆ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಚಿತ್ರನಟ ಜಗ್ಗೇಶ್|ಇಲ್ಲಿದೆ ವಿಡಿಯೋ Read More »

ಟ್ಯಾಂಕರ್ ನಿಂದ ಲಿಕ್ವಿಡ್ ಸೋರಿಕೆ; ವಾಹನ ಸಂಚಾರಕ್ಕೆ ಬದಲಿ ಮಾರ್ಗ

ಸಮಗ್ರ ನ್ಯೂಸ್ : ರಾಷ್ಟ್ರೀಯ ಹೆದ್ದಾರಿ 66 ರ ಉಳಿಯಾರಗೋಳಿ ಬಿಕ್ಕೋ ಬಳಿ ಟ್ಯಾಂಕರ್ ನಿಂದ ಲಿಕ್ವಿಡ್ ಸೋರಿಕೆಯಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಮಂಗಳೂರು ಕಡೆಗೆ ತೆರಳುತ್ತಿರುವ ಟ್ಯಾಂಕರ್ ನ ಹೊರ ಭಾಗದಲ್ಲಿ ಲಿಕ್ವಿಡ್ ಸೋರಿಕೆಯಾಗುತ್ತಿದ್ದು, ಸುತ್ತಲೂ ಹೊಗೆ ಆವರಿಸಿಕೊಂಡಿತ್ತು. ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಕಾಪು‌ ಪೊಲೀಸರು ಸ್ಥಳಕ್ಕೆ‌ ಭೇಟಿ ನೀಡಿದ್ದು, ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ.

ಟ್ಯಾಂಕರ್ ನಿಂದ ಲಿಕ್ವಿಡ್ ಸೋರಿಕೆ; ವಾಹನ ಸಂಚಾರಕ್ಕೆ ಬದಲಿ ಮಾರ್ಗ Read More »

ಮಂಗಳೂರು: ಧಾರಾಕಾರ ಮಳೆ ಹಿನ್ನೆಲೆ ವಾರಪೂರ್ತಿ ರಜೆ| ಪಠ್ಯ ಸರಿದೂಗಿಸಲು ಸಾರ್ವತ್ರಿಕ ರಜೆಗೆ ಕತ್ತರಿ -ಡಿಸಿ ಸೂಚನೆ

ಸಮಗ್ರ‌ನ್ಯೂಸ್: ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಶಾಲಾ ಕಾಲೇಜುಗಳಿಗೆ ನೀಡಲಾಗಿರುವ ರಜೆ ಅವಧಿಯಲ್ಲಿ ನಿರ್ವಹಿಸಬೇಕಾದ ಪಠ್ಯಗಳನ್ನು ಇತರ ಸಾರ್ವತ್ರಿಕ ರಜಾದಿನಗಳಂದು ಸರಿದೂಗಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಮಂಗಳವಾರದಿಂದ ವಿಪರೀತ ಮಳೆ ಸುರಿಯುತ್ತಿದ್ದು, ನಿರಂತರವಾಗಿ ರೆಡ್ ಅಲರ್ಟ್ ಘೋಷಣೆಯಾಗುತ್ತಿದೆ. ಅಲ್ಲದೆ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ರಸ್ತೆ, ಮನೆಗಳಿಗೆ ನೀರು ನುಗ್ಗುತ್ತಿದೆ. ಜಿಲ್ಲೆಯ ಕೆಲವೆಡೆ ಭೂಕುಸಿತದಂತಹ ಘಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ

ಮಂಗಳೂರು: ಧಾರಾಕಾರ ಮಳೆ ಹಿನ್ನೆಲೆ ವಾರಪೂರ್ತಿ ರಜೆ| ಪಠ್ಯ ಸರಿದೂಗಿಸಲು ಸಾರ್ವತ್ರಿಕ ರಜೆಗೆ ಕತ್ತರಿ -ಡಿಸಿ ಸೂಚನೆ Read More »

ಅವೈಜ್ಞಾನಿಕ ಕಾಮಗಾರಿ; ಕಲ್ಲಡ್ಕದಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್| ಸಾರ್ವಜನಿಕರಿಂದ ಹಿಡಿಶಾಪ

ಸಮಗ್ರ ನ್ಯೂಸ್: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕದಲ್ಲಿ ಇಂದು ಬೆಳಿಗ್ಗೆಯಿಂದ ಸಂಚಾರಕ್ಕೆ ತಡೆ ಉಂಟಾಗಿದೆ. ಬೆಳಿಗ್ಗೆ ಸುಮಾರು ‌8 ಗಂಟೆಯ ವೇಳೆ ಆರಂಭವಾದ ಸಂಚಾರಕ್ಕೆ ಅಡಚಣೆ 10.30 ಗಂಟೆ ವರೆಗೂ ಮುಗಿದಿಲ್ಲ. ಕಲ್ಲಡ್ಕ ಅಮ್ಟೂರು ಕ್ರಾಸ್ ನ ಬಳಿ ಹೆದ್ದಾರಿಯಲ್ಲಿ ಬೃಹತ್ ಹೊಂಡ ವೊಂದು ನಿರ್ಮಾಣವಾದ ಹಿನ್ನೆಲೆಯಲ್ಲಿ ಪ್ರಾರಂಭವಾದ ಬ್ಲಾಕ್ ನಿರಂತರವಾಗಿ ಮುಂದುವರಿದಿದೆ.ಬೆಳಿಗ್ಗೆ ಹೊತ್ತು ಕೆಲಸಕ್ಕೆ ಹೋಗುವವರ ಜೊತೆ ಅಂಬ್ಯುಲೆನ್ಸ್ ವಾಹನಗಳು ಕೂಡ ತಾಸು ಗಟ್ಟಲೆ ಕ್ಯೂ ನಲ್ಲಿ ನಿಂತು ಪರದಾಡಬೇಕಾಯಿತು. ರಾಷ್ಟ್ರೀಯ ಹೆದ್ದಾರಿ

ಅವೈಜ್ಞಾನಿಕ ಕಾಮಗಾರಿ; ಕಲ್ಲಡ್ಕದಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್| ಸಾರ್ವಜನಿಕರಿಂದ ಹಿಡಿಶಾಪ Read More »