ವಿಟ್ಲ: ಕುಡಿದ ಅಮಲಿನಲ್ಲಿ ಕತ್ತಿಯಿಂದ ಹಲ್ಲೆ , ಓರ್ವ ಗಂಭೀರ
ವಿಟ್ಲ: ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಹಲ್ಲೆಗೈದ ಘಟನೆಯೊಂದು ಅಡ್ಯನಡ್ಕ ದ ಪುಣಚ ಸೊಸೈಟಿ ಮುಂಭಾಗ ನಡೆದಿದೆ. ಘಟನೆಯಿಂದ ಗಂಭೀರ ಗಾಯಗೊಂಡ ವ್ಯಕ್ತಿ ಕೊಳ್ಳಪದವು ನಿವಾಸಿ ದಿನೇಶ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ದಿನೇಶ್ ನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಟ್ಲ: ಕುಡಿದ ಅಮಲಿನಲ್ಲಿ ಕತ್ತಿಯಿಂದ ಹಲ್ಲೆ , ಓರ್ವ ಗಂಭೀರ Read More »