Ad Widget .

ಮಕ್ಕಳ ಮೆದುಳು ಚುರುಕಾಗಿಸಲು ಬೇಕು “ವಿಟಮಿನ್ ಎ”| ಇದನ್ನು ಪೂರೈಕೆ ಮಾಡೋದ್ಹೇಗೆ?

ಸಮಗ್ರ ವಿಶೇಷ: ಬೇಸಿಗೆ ಕಾಲ ಮುಗಿದು ಮಳೆಗಾಲ ಆರಂಭವಾದರೆ ಸಾಕು ಕೆಲವು ಮಕ್ಕಳಲ್ಲಿ ನೆಗಡಿ, ಜ್ವರದಂತಹ ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ. ಮಕ್ಕಳಿಗೆ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಉಂಟಾದಾಗ ಆ ಸಮಯದಲ್ಲಿ ಮಕ್ಕಳಿಗೆ ಅಗತ್ಯವಿರುವಷ್ಟು ರೋಗ ನಿರೋಧಕ ಶಕ್ತಿ ಇಲ್ಲದೆ ಇರುರಿಂದ ಮಕ್ಕಳಲ್ಲಿ ಅರೋಗ್ಯದ ಸಮಸ್ಯೆಗಳು ಕಾಡುತ್ತದೆ. ಅದರಲ್ಲೂ ಮುಖ್ಯವಾಗಿ ಬೆಳೆಯುವ ಮಕ್ಕಳಿಗೆ ಜಿಂಕ್, ಕಬ್ಬಿಣ, ಕ್ಯಾಲ್ಸಿಯಂ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ‘ಎ ವಿಟಮಿನ್’ ಹೊಂದಿರುವ ಆಹಾರವನ್ನು ಕೊಡುವುದು ಕೂಡ ಬಹಳ ಅವಶ್ಯಕ.

Ad Widget . Ad Widget .

ಹಾಲು, ಮೊಟ್ಟೆ, ಕ್ಯಾರೆಟ್, ಪಾಲಾಕ್, ಕುಂಬಳಕಾಯಿ, ಪರಂಗಿ, ಸಿಹಿ ಗೆಣಸು, ಪುಟ್ಟ ಧಾನ್ಯಗಳಲ್ಲಿ ವಿಟಮಿನ್ ಎ ದೊರಕುತ್ತದೆ. ಇದರ ಜೊತೆಗೆ ಮೊಟ್ಟೆಯಲ್ಲಿರುವ ಬಿಳಿ ಲೋಳೆಯನ್ನು ಮಕ್ಕಳಿಗೆ ತಿನಿಸಿದರೆ ಮತ್ತಷ್ಟು ಒಳ್ಳೆಯದು. ದೋಸೆ, ಇಡ್ಲಿ ಮುಂತಾದ ಹಿಟ್ಟುಗಳಿಗೆ ಕ್ಯಾರೆಟ್, ಪಾಲಾಕ್ ಬೆರೆಸಿ ತಿಂಡಿ ಮಾಡಿದರೆ ಮಕ್ಕಳ ಕಣ್ಣಿಗೆ ಆಕರ್ಷಕವಾಗಿ ಕಾಣುವುದಲ್ಲದೆ ದೇಹಕ್ಕೆ ಅಗತ್ಯವಾದ ವಿಟಮಿನ್ ಗಳು ಕೂಡ ದೊರಕುತ್ತವೆ.

Ad Widget . Ad Widget .

ಎ ವಿಟಮಿನ್ ಗಳಂತಹ ಆಹಾರ ಪದಾರ್ಥಗಳು ದೃಷ್ಟಿಯನ್ನು ತೀಕ್ಷ್ಣಗೊಳಿಸುವುದಲ್ಲದೆ, ಮೂಳೆಗಳಲ್ಲಿ ಶಕ್ತಿಯನ್ನು ಕೂಡ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಇದರ ಜೊತೆಗೆ ಮೆದುಳು ಚುರುಕಾಗಿ ಕಾರ್ಯ ನಿರ್ವಹಿಸಲು ದಾರಿ ಮಾಡಿಕೊಡುತ್ತದೆ. ಆಟ ಪಾಠಗಳಲ್ಲಿ ಮುಂದೆ ಇರುವಂತೆ ಮಕ್ಕಳನ್ನು ಪ್ರೋತ್ಸಾಹಿಸುತ್ತದೆ.

Leave a Comment

Your email address will not be published. Required fields are marked *