March 2022

ಈ ಒಂಟೆಯ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ! ಹರಾಜಾಗ್ತಿದೆ ಅತಿ ದುಬಾರಿ ಒಂಟೆ|

ಸಮಗ್ರ ಡಿಜಿಟಲ್ ಡೆಸ್ಕ್: ಇಸ್ಲಾಂ ಧರ್ಮದ ಪವಿತ್ರ ತಿಂಗಳು ರಂಜಾನ್‌ ಶುರುವಾಗುವುದರಲ್ಲಿದೆ. ರಂಜಾನ್‌ ಗೂ ಮುನ್ನವೇ ಸೌದಿ ಅರೇಬಿಯಾದಲ್ಲಿ ಒಂಟೆಯೊಂದು ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಒಂಟೆಗೆ ಸಿಕ್ಕ ಬೆಲೆ ಕೇಳಿದ್ರೆ ನೀವು ದಿಗ್ಭ್ರಮೆಗೊಳ್ಳೋದು ಗ್ಯಾರಂಟಿ. ಇದು ಜಗತ್ತಿನ ಅತ್ಯಂತ ದುಬಾರಿಈ ಒಂಟೆಯ ಬೆಲೆ 14 ಕೋಟಿ 23 ಲಕ್ಷ ರೂಪಾಯಿ!. ಸೌದಿ ಅರೇಬಿಯಾದಲ್ಲಿ ಈ ಒಂಟೆಯನ್ನು ಸಾರ್ವಜನಿಕವಾಗಿ ಹರಾಜು ಹಾಕಲಾಯ್ತು. ಈ ವಿಡಿಯೋ ಕೂಡ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಒಂಟೆಗೆ ಸಿಕ್ಕ ಆರಂಭಿಕ ಬೆಲೆಯೇ 7 ಮಿಲಿಯನ್‌ […]

ಈ ಒಂಟೆಯ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ! ಹರಾಜಾಗ್ತಿದೆ ಅತಿ ದುಬಾರಿ ಒಂಟೆ| Read More »

ಎ.5ರ ಮೋದಿ ಕರ್ನಾಟಕ ಪ್ರವಾಸ ರದ್ದು|

ಸಮಗ್ರ ನ್ಯೂಸ್: ವಿವಿಧ ಕಾರ್ಯಕ್ರಮ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಏಪ್ರಿಲ್ 5 ರಂದು ಕರ್ನಾಟಕಕ್ಕೆ ಆಗಮಿಸಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ರದ್ದಾಗಿದೆ. ಸತತ ಎರಡನೇ ಬಾರಿ ಪ್ರಧಾನಿ ರಾಜ್ಯ ಪ್ರವಾಸ ರದ್ದಾಗಿದೆ. ಈ ಕುರಿತು ಸಿಎಂ ಕಚೇರಿಗೆ ಪ್ರಧಾನಿಗಳ ಕಚೇರಿಯಿಂದ ಅಧಿಕೃತ ಮಾಹಿತಿ ನೀಡಲಾಗಿದೆ. ಇತ್ತೀಚಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೋದಿ ಪ್ರವಾಸ ಕುರಿತು ಮಾಹಿತಿ ಬಹಿರಂಗ ಪಡಿಸಿದ್ದರು. ಏಪ್ರಿಲ್ 5 ರಂದು ಪ್ರಧಾನಿ ಭೇಟಿ ನೀಡುವ ಸಾಧ್ಯತೆ ಇದೆ ಎಂದಿದ್ದರು. ಇದೇ

ಎ.5ರ ಮೋದಿ ಕರ್ನಾಟಕ ಪ್ರವಾಸ ರದ್ದು| Read More »

ಪರೀಕ್ಷೆ ಬರೆಯುತ್ತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು|

ಸಮಗ್ರ ನ್ಯೂಸ್: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾಗಲೇ ಹೃದಯಾಘಾತಕ್ಕೀಡಾಗಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯಲ್ಲಿ ಸಂಭವಿಸಿದೆ. ಜಿಲ್ಲೆಯ ತಿ.ನರಸೀಪುರ ತಾಲೂಕಿನ ಅಕ್ಕೂರು ಗ್ರಾಮದ ಕೆಂಪರಾಜು ಮತ್ತು ಲಕ್ಷ್ಮಮ್ಮ ದಂಪತಿ ಪುತ್ರಿ ಅನುಶ್ರೀ ಮೃತ ವಿದ್ಯಾರ್ಥಿನಿ. ಮಾದಾಪುರ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಈಕೆ ತಿ.ನರಸೀಪುರ ತಾಲೂಕಿನ ವಿದ್ಯೋದಯ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ಪರೀಕ್ಷೆ ಬರೆಯುತ್ತಿದ್ದಳು.

ಪರೀಕ್ಷೆ ಬರೆಯುತ್ತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು| Read More »

ಪುತ್ತೂರು ಬಸ್‌ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು| ತುಳುನಾಡ ವೀರರ ಹೆಸರಲ್ಲಿ ರಾರಾಜಿಸಲಿದೆ ದ.ಕ ಜಿಲ್ಲೆಯ ಅತಿದೊಡ್ಡ ಬಸ್ ನಿಲ್ದಾಣ|

ಸಮಗ್ರ ನ್ಯೂಸ್: ಸರಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಜಿಲ್ಲೆಯ ಅತಿದೊಡ್ಡ ಬಸ್ ನಿಲ್ದಾಣವೆಂಬ ಖ್ಯಾತಿಗೆ ಪಾತ್ರವಾಗಿರುವ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಇನ್ನು ಮುಂದೆ ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರ ಹೆಸರಿನಲ್ಲಿ ರಾರಾಜಿಸಲಿದೆ. ಕೆ.ಎಸ್.ಆರ್.ಟಿ.ಸಿ ಯು ಕೋಟಿ ಚೆನ್ನಯರ ಹೆಸರನ್ನು ಪುತ್ತೂರು ಬಸ್ ನಿಲ್ದಾಣಕ್ಕೆ ಇಡುವ ಸಂಬಂಧ ನಿರ್ಣಯ ಕೈಗೊಂಡಿದ್ದು, ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಬೆಂಬಿಡದ ಪ್ರಯತ್ನದ ಫಲವಾಗಿ ಯೋಜನೆ ಕೈಗೂಡಿದ್ದು, ಬಹುತೇಕ ಮುಂದಿನ ತಿಂಗಳು ನಾಮಕರಣ

ಪುತ್ತೂರು ಬಸ್‌ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು| ತುಳುನಾಡ ವೀರರ ಹೆಸರಲ್ಲಿ ರಾರಾಜಿಸಲಿದೆ ದ.ಕ ಜಿಲ್ಲೆಯ ಅತಿದೊಡ್ಡ ಬಸ್ ನಿಲ್ದಾಣ| Read More »

ಇಂಡಿಯನ್ ಬಾಕ್ಸಾಫೀಸ್ ಉಡೀಸ್ ಮಾಡಿದ KGF 2| ರಿಲೀಸ್ ಗೂ ಮೊದಲೇ ಕೋಟಿ ಕೋಟಿ ಗಳಿಸಿದ ಚಿತ್ರ|

ಸಮಗ್ರ ನ್ಯೂಸ್: KGF 2 ಟ್ರೇಲರ್ ರಿಲೀಸ್ ಆದ 20 ಗಂಟೆಯೊಳಗೆ 109+ ಮಿಲಿಯನ್ ವೀಕ್ಷಕರು ನೋಡಿದ್ದು ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಮಾಡಿದೆ. ಕನ್ನಡದಲ್ಲಿ 18 ಮಿಲಿಯನ್ , ಹಿಂದಿಯಲ್ಲಿ 47 ಮಿಲಿಯನ್ , ತೆಲುಗಿನಲ್ಲಿ 17 ಮಿಲಿಯನ್ , ತಮಿಳಿನಲ್ಲಿ 11 ಮಿಲಿಯನ್ , ಮಲಯಾಳಂನಲ್ಲಿ 7 ಮಿಲಿಯನ್ ವೀವ್ಸ್ ಗಳನ್ನು ಪಡೆದಿರುವ ಟ್ರೈಲರ್ ನಿಂದ ಚಿತ್ರತಂಡ ಫುಲ್ ಖುಷ್ ಆಗಿದೆ. ಈ ಮೂಲಕ ಬ್ಲಾಕ್ ಬಾಸ್ಟರ್ ಇಂಡಿಯಾದ ಎಲ್ಲಾ ಸಿನಿಮಾಗಳ ಹಿಂದಿನ ರೆಕಾರ್ಡ್

ಇಂಡಿಯನ್ ಬಾಕ್ಸಾಫೀಸ್ ಉಡೀಸ್ ಮಾಡಿದ KGF 2| ರಿಲೀಸ್ ಗೂ ಮೊದಲೇ ಕೋಟಿ ಕೋಟಿ ಗಳಿಸಿದ ಚಿತ್ರ| Read More »

ಮುಟ್ಟಾಳೆ ಧರಿಸಿ ಪದ್ಮಶ್ರೀ ಸ್ವೀಕರಿಸಿದ ಆಧುನಿಕ ಭಗೀರಥ ಮಹಾಲಿಂಗ ನಾಯ್ಕ್

ಸಮಗ್ರ ನ್ಯೂಸ್: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೋಮವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ 2022 ಅನ್ನು ಪ್ರಧಾನ ಮಾಡಿದರು. ಈ ವೇಳೆ ಸುರಂಗ ಕೊರೆದು ಭಗೀರಥ ಪ್ರಯತ್ನದ ಮೂಲಕ ನೀರು ಹರಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಅಮೈ ಮಹಾಲಿಂಗ ನಾಯ್ಕ್ ಅವರು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪುರಸ್ಕಾರ ಸ್ವೀಕರಿಸಿದರು. ಈ ವೇಳೆ ಅವರು ಮುಟ್ಟಾಳೆ ಧರಿಸಿ ಆಗಮಿಸುವ ಮೂಲಕ ತುಳುನಾಡಿನ ಕೃಷಿ ಪರಂಪರೆಯನ್ನು ದೇಶ ವ್ಯಾಪ್ತಿ ಬಿಂಬಿಸಿದರು.

ಮುಟ್ಟಾಳೆ ಧರಿಸಿ ಪದ್ಮಶ್ರೀ ಸ್ವೀಕರಿಸಿದ ಆಧುನಿಕ ಭಗೀರಥ ಮಹಾಲಿಂಗ ನಾಯ್ಕ್ Read More »

ಮಂಗಳೂರು: ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಚುನಾವಣೆ| ಪ್ರಧಾನ ಕಾರ್ಯದರ್ಶಿಯಾಗಿ ಕೀರ್ತನ್ ಗೌಡ ಕೊಡಪಾಲ ಆಯ್ಕೆ|

ಸಮಗ್ರ ನ್ಯೂಸ್: ಮಂಗಳೂರು ವಿಶ್ವವಿದ್ಯಾನಿಲಯದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೀರ್ತನ್ ಕೊಡಪಾಲ ಆಯ್ಕೆಯಾಗಿದ್ದಾರೆ.ಮಾ.26 ರಂದು ಮಂಗಳೂರಿನಲ್ಲಿ ಚುನಾವಣೆ ‌ನಡೆದಿದೆ. ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಕಾಲೇಜು ಸುಬ್ರಹ್ಮಣ್ಯ ಇಲ್ಲಿ ಬಿ.ಕಾಂ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಯಾಗಿರುವ ಕೀರ್ತನ್ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ದಿನೇಶ್ ಕೊಡಪಾಲ – ವಸಂತಿ ಕೊಡಪಾಲ ರವರ ಪುತ್ರ.‌ ಸುಳ್ಯ ತಾಲೂಕು ಎನ್.ಎಸ್.ಯು.ಐ. ಅಧ್ಯಕ್ಷ ರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಮಂಗಳೂರು: ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಚುನಾವಣೆ| ಪ್ರಧಾನ ಕಾರ್ಯದರ್ಶಿಯಾಗಿ ಕೀರ್ತನ್ ಗೌಡ ಕೊಡಪಾಲ ಆಯ್ಕೆ| Read More »

ಕಡಬ: ಮುಸ್ಲಿಂ ಯುವಕನಿಂದ ಹಿಂದೂ ಯುವತಿಗೆ ಲೈಂಗಿಕ ಕಿರುಕುಳ| ದೂರು ದಾಖಲು

ಸಮಗ್ರ ನ್ಯೂಸ್: ಮುಸ್ಲಿಂ ಯುವಕನೋರ್ವ ಹಿಂದು ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯುವತಿ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ. ಕಿರುಕುಳ ನೀಡಿದ ಯುವಕನನ್ಮು ತಾಲೂಕಿನ ಐತೂರು ಗ್ರಾಮದ ಶಕೀರ್ ಎಂದು ಗುರುತಿಸಲಾಗಿದ್ದು ಪೋಲಿಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೃತ್ಯದ ಕುರಿತು ಕಡಬ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿರುವ ಯುವತಿ, ಶಕೀರ್ ಎಂಬಾತ ಕಳೆದ ಎರಡು ದಿನಗಳಿಂದ ಕಿರುಕುಳ ನೀಡುತ್ತಿದ್ದು, ಮಾ.28ರಂದು ಕಲ್ಲಾಜೆ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ದಾರಿಯಲ್ಲಿ ಅಡ್ಡ ನಿಂತು ಲೈಂಗಿಕ ಕಿರುಕುಳ ನೀಡಿದ್ದಾನೆ, ಕಳೆದೆರಡು

ಕಡಬ: ಮುಸ್ಲಿಂ ಯುವಕನಿಂದ ಹಿಂದೂ ಯುವತಿಗೆ ಲೈಂಗಿಕ ಕಿರುಕುಳ| ದೂರು ದಾಖಲು Read More »

ಹಾಸನ: ಮಾಜಿ ಪ್ರಧಾನಿ ದೇವೆಗೌಡ ಪತ್ನಿ ಚೆನ್ನಮ್ಮಗೆ ಐಟಿ ಸಂಕಷ್ಟ

ಸಮಗ್ರ ನ್ಯೂಸ್: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಅವರಿಗೆ ಸಂಬಂಧಿಸಿದ ಆಸ್ತಿ ವಿವರದ ಬಗ್ಗೆ ಮಾಹಿತಿಯನ್ನು ನೀಡುವಂತೆ ನೋಟಿಸ್ ನಲ್ಲಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವಿಚಾರವನ್ನು ಅವರ ಪುತ್ರ ಮಾಜಿ ಸಚಿವ ಹೆಚ್ ಡಿ ರೇವಣ್ಣ ಕೂಡ ದೃಢಪಡಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ ರೇವಣ್ಣ, ಐಟಿ ಅಧಿಕಾರಿಗಳು ನನ್ನ ತಾಯಿಗೆ ನೋಟಿಸ್ ನೀಡಿದ್ದಾರೆ. ಆಸ್ತಿ ವಿವರದ ಮಾಹಿತಿ ಕೋರಿದ್ದಾರೆ.

ಹಾಸನ: ಮಾಜಿ ಪ್ರಧಾನಿ ದೇವೆಗೌಡ ಪತ್ನಿ ಚೆನ್ನಮ್ಮಗೆ ಐಟಿ ಸಂಕಷ್ಟ Read More »

ಆದಾಯ ಮೀರಿ ಆಸ್ತಿ ಗಳಿಕೆ| ಸಚಿವ ಸೋಮಣ್ಣಗೆ ಬಂಧನ ಭೀತಿ

ಸಮಗ್ರ ನ್ಯೂಸ್: ತನ್ನ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದಲ್ಲಿ ಸಚಿವ ವಿ.ಸೋಮಣ್ಣಗೆ ಬಂಧನ ಭೀತಿ ಎದುರಾಗಿದೆ. ನಿರೀಕ್ಷಣಾ ಜಾಮೀನು ಕೋರಿ ಸಚಿವ ಸೋಮಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್‌ ಮಾರ್ಚ್‌ 30ಕ್ಕೆ ಮುಂದೂಡಿದೆ. ಇನ್ನು ಆಕ್ಷೇಪಣೆ ಸಲ್ಲಿಸಲು ದೂರುದಾರರ ಪರ ವಕೀಲರಿಗೆ ಸೂಚನೆ ನೀಡಿಲಾಗಿದೆ. ಸೋಮಣ್ಣ ಶಾಸಕನಾಗುವ ಮೊದಲಿನ ಆದಾಯ, ನಂತರದ ಆದಾಯ ಗಳಿಕೆ, ಆಸ್ತಿಯ ಸೂಕ್ತ ವಿವರಣೆ ನೀಡುವಲ್ಲಿ ಪೊಲೀಸರು ವಿಫಲವಾಗಿದ್ದು, ಅಸಮರ್ಪಕ ತನಿಖೆ ಎಂದು ಕೋರ್ಟ್‌ ಅಭಿಪ್ರಾಯ ಪಟ್ಟಿದೆ. ಈ‌ ಕುರಿತು ಜನಪ್ರತಿನಿಧಿಗಳ

ಆದಾಯ ಮೀರಿ ಆಸ್ತಿ ಗಳಿಕೆ| ಸಚಿವ ಸೋಮಣ್ಣಗೆ ಬಂಧನ ಭೀತಿ Read More »