March 2022

ಉಕ್ರೇನ್: ರಾಜಧಾನಿ ಕಿವ್ ನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಭಾರತೀಯ ವಿದ್ಯಾರ್ಥಿಗೆ ಗುಂಡೇಟು

ಸಮಗ್ರ‌ ನ್ಯೂಸ್: ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದಲ್ಲಿ ಭಾರತೀಯ ವಿದ್ಯಾರ್ಥಿಗಳು ಬಡವಾಗಿದ್ದಾರೆ. ಈಗಾಗಲೇ ಉಕ್ರೇನ್​ನಲ್ಲಿರುವ ಭಾರತೀಯ ರಾಜಭಾರಿ ಕಚೇರಿಯಿಂದ ಖಿವ್ ನಗರವನ್ನು ತೊರೆಯುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ಆದರೆ ನಗರವನ್ನು ತೊರೆಯಲು ಪ್ರಯತ್ನಿಸಿದ ಭಾರತೀಯ ವಿದ್ಯಾರ್ಥಿಗಳನ್ನು ಗುಂಡಿಕ್ಕಿರುವ ಘಟನೆ ನಡೆದಿದೆ. ಉಕ್ರೇನ್ ರಾಜಧಾನಿ ಕೈವ್‌ನಲ್ಲಿ ಭಾರತೀಯ ವಿದ್ಯಾರ್ಥಿಯ ಮೇಲೆ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ ಎಂದು ಕೇಂದ್ರ ಸಚಿವ ವಿಕೆ ಸಿಂಗ್ ಗುರುವಾರ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ. ಖಾರ್ಕಿವ್ ನಗರದಲ್ಲಿ ರಷ್ಯಾದ ಶೆಲ್ […]

ಉಕ್ರೇನ್: ರಾಜಧಾನಿ ಕಿವ್ ನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಭಾರತೀಯ ವಿದ್ಯಾರ್ಥಿಗೆ ಗುಂಡೇಟು Read More »

ಶಿವಮೊಗ್ಗ: ಮತ್ತೊಬ್ಬ ವ್ಯಕ್ತಿಯ ಮೇಲೆ ಮಾರಕ ದಾಳಿ

ಸಮಗ್ರ ನ್ಯೂಸ್: ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ ನಂತರ ಶಿವಮೊಗ್ಗದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿ ಪರಿಸ್ಥಿತಿ ತಿಳಿಯಾಗತೊಡಗಿದೆ. ಇದೇ ವೇಳೆ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಗೋಪಾಳದಲ್ಲಿ ವಾಕಿಂಗ್ ಹೋಗಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಲಾಗಿದೆ. 49 ವರ್ಷದ ವೆಂಕಟೇಶ್ ಹಲ್ಲೆಗೊಳಗಾದವರು. ಗೋಪಾಳದ ಪದ್ಮ ಟಾಕೀಸ್ ಬಳಿ ವೆಂಕಟೇಶ್ ಮೇಲೆ ನಾಲ್ವರು ಯುವಕರು ತಂಡ ದಾಳಿ ಮಾಡಿ, ಕಲ್ಲು, ದೊಣ್ಣೆಗಳಿಂದ ಹಲ್ಲೆ ಮಾಡಿದೆ. ತೀವ್ರವಾಗಿ ಗಾಯಗೊಂಡಿರುವ ವೆಂಕಟೇಶ್ ಅವರನ್ನು ಸ್ಥಳೀಯರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಶಿವಮೊಗ್ಗ: ಮತ್ತೊಬ್ಬ ವ್ಯಕ್ತಿಯ ಮೇಲೆ ಮಾರಕ ದಾಳಿ Read More »

“ಗಡಿ ತಲುಪಿದವರನ್ನು ಕರೆತಂದು ಶೋ-ಆಪ್ ಮಾಡ್ತಿದಾರೆ, ಉಕ್ರೇನ್ ಗೆ ಭಾರತ ಕಾಲಿಟ್ಟೇ ಇಲ್ಲ” – ಕೇಂದ್ರದ ವಿರುದ್ಧ ಕನ್ನಡಿಗ ವಿದ್ಯಾರ್ಥಿ ಆಕ್ರೋಶ

ಸಮಗ್ರ ನ್ಯೂಸ್: ಉಕ್ರೇನ್ ನಲ್ಲಿ ಸಿಲುಕಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿ ಅನೀಶ್ ಜಯಂತ್ ಎಂಬವರು ಹಂಗೇರಿ ಗಡಿ ಮೂಲಕ ಭಾರತಕ್ಕೆ ಸುರಕ್ಷಿತವಾಗಿ ಆಗಮಿಸಿದ್ದಾರೆ. ಸರ್ಕಾರದ ಸಹಾಯವಿಲ್ಲದೇ ಸ್ನೇಹಿತರ ಜೊತೆ ಗಡಿ ತಲುಪಿದ್ದ ಅನೀಶ್ ಇದೀಗ ದೆಹಲಿಗೆ ಆಗಮಿಸಿದ್ದು, ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ವಿದ್ಯಾರ್ಥಿ ಅನೀಶ್ , ಉಕ್ರೇನ್ ನಿಂದ ವಾಪಸ್ ಆಗಿರುವುದು ಖುಷಿ ತಂದಿದೆ ಆದರೆ, ಅಲ್ಲಿಯ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನಾವು ವೆಸ್ಟರ್ನ್ ಸೈಡ್ ಅಲ್ಲಿ ಇರುವುದರಿಂದ ಬಂದಿದ್ದೇವೆ,

“ಗಡಿ ತಲುಪಿದವರನ್ನು ಕರೆತಂದು ಶೋ-ಆಪ್ ಮಾಡ್ತಿದಾರೆ, ಉಕ್ರೇನ್ ಗೆ ಭಾರತ ಕಾಲಿಟ್ಟೇ ಇಲ್ಲ” – ಕೇಂದ್ರದ ವಿರುದ್ಧ ಕನ್ನಡಿಗ ವಿದ್ಯಾರ್ಥಿ ಆಕ್ರೋಶ Read More »

ಉಡುಪಿ: ಸರಣಿ ಅಪಘಾತ

ಸಮಗ್ರ ನ್ಯೂಸ್: ಕರಾವಳಿ ಬೈಪಾಸ್ ಬಳಿ ನಡೆದ ಅಪಘಾತದಲ್ಲಿ ಎರಡು ಕಾರುಗಳಲ್ಲಿದ್ದ ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ಮಾ.3ರ ಗುರುವಾರ ನಡೆದಿದೆ. ಕುಂದಾಪುರ ಕಡೆಗೆ ಚಲಿಸುತ್ತಿದ್ದ ಕಾರೊಂದು ಸಿಗ್ನಲ್ ಇಲ್ಲದೆ ಟೈಲ್ಸ್ ಸಾಗಿಸುತ್ತಿದ್ದ ಲಾರಿ ಏಕಾಏಕಿ ನಿಧಾನವಾದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಲಾರಿಗೆ ಡಿಕ್ಕಿ ಹೊಡೆಯುವುದರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಕಾರು ಚಾಲಕ ರಸ್ತೆಯ ಮಧ್ಯಭಾಗಕ್ಕೆ ಬಂದ ಪರಿಣಾಮ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಇದೇ ಸಂದರ್ಭ ಕುಂದಾಪುರ ಕಡೆಗೆ ಸಾಗುತ್ತಿದ್ದ ಇನ್ನೊಂದು ಕಾರು ಮೊದಲ

ಉಡುಪಿ: ಸರಣಿ ಅಪಘಾತ Read More »

ಪುತ್ತೂರು : ಔಷಧಿ ತರಲೆಂದು ಹೋದ ತಾಯಿ ಮಗು ನಾಪತ್ತೆ

ಸಮಗ್ರ ನ್ಯೂಸ್: ಔಷಧಿ ತರಲೆಂದು ಮಗನೊಂದಿಗೆ ಪುತ್ತೂರಿಗೆ ತೆರಳಿದ್ದ ಕಡಿರುದ್ಯಾವರ ಗ್ರಾಮದ ಮಹಿಳೆಯೋರ್ವರು ಮರಳಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ನಡೆದಿದೆ. ಕಡಿರುದ್ಯಾವರ ಗ್ರಾಮದ ಎರ್ಮಾಳ್ ಪಲ್ಕೆ ನಿವಾಸಿ ಶಹಜಾದ್ ರವರ ಪತ್ನಿ ರಶೀನಾ ಹಾಗೂ ಅವರ ಪುತ್ರ ಮುಸೈಬ್ ಹಕ್ ಎಂಬವರು ನಾಪತ್ತೆಯಾಗಿದ್ದಾರೆ. ಶಹಜಾದ್ ರವರು ತಮ್ಮ ಪತ್ನಿ ರಶೀನಾ, ಪುತ್ರ ಮುಸೈಬ್ ಹಕ್ ರೊಂದಿಗೆ ಪುತ್ತೂರಿಗೆ ಔಷಧಿ ತರಲೆಂದು ತೆರಳಿದ್ದು, ಅಲ್ಲಿಂದ ಮರಳಿ ಮನೆಗೂ ಬಾರದೆ ನಾಪತ್ತೆಯಾಗಿರುತ್ತಾರೆ ಎಂಬುವುದಾಗಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ

ಪುತ್ತೂರು : ಔಷಧಿ ತರಲೆಂದು ಹೋದ ತಾಯಿ ಮಗು ನಾಪತ್ತೆ Read More »

ಕೊಚ್ಚಿ: ಸೊಂಟಕ್ಕೆ ಟ್ಯಾಟೂ ಹಾಕಿಸಿಕೊಳ್ಳಲು ಹೋದವಳ ಅತ್ಯಾಚಾರಗೈದ ಟ್ಯಾಟೂ ಕಲಾವಿದ

ಸಮಗ್ರ ನ್ಯೂಸ್: ಕೇರಳದ ಕೊಚ್ಚಿಯಲ್ಲಿರುವ ಟ್ಯಾಟೂ ಕಲಾವಿದನ ವಿರುದ್ಧ ಕೆಲ ಯುವತಿಯರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಟ್ಯೂಟೂ ಕಲಾವಿದ ಸುಜೀಶ್​ನ​​ ಕರಾಳ ಮುಖವನ್ನು ಒಂದೊಂದಾಗಿ ಬಿಚ್ಚಿಟ್ಟಿರುವ ಸಂತ್ರಸ್ತೆಯರು ಟ್ಯಾಟೂ ಪಾರ್ಲರ್​ನ ಅಕ್ರಮವನ್ನು ಹೊರ ಹಾಕಿದ್ದಾರೆ. ಆರೋಪಿ ಸುಜಿತ್ ಟ್ಯಾಟೂ ಸೂಜಿಯಿಂದ ಹೆದರಿಸಿ ದೌರ್ಜನ್ಯ ಎಸಗಿದರು ಎಂದು ಸಂತ್ರಸ್ತೆಯೊಬ್ಬಳು ಆರೋಪಿಸಿದರೆ, ವರ್ಷದ ಹಿಂದೆ ಸುಜೀಶ್​ ಅತ್ಯಾಚಾರ ಮಾಡಿದ್ದಾರೆ ಎಂದು ಮತ್ತೊಬ್ಬ ಸಂತ್ರಸ್ತೆ ಹೇಳಿದ್ದಾರೆ. ಅಂದಹಾಗೆ ಸುಜೀಶ್​ ಟ್ಯೂಟೂ ಪಾರ್ಲರ್​ ಸಿಕ್ಕಾಪಟ್ಟೆ ಫೇಮಸ್​ ಆಗಿರುವ ಟ್ಯಾಟೂ ಕೇಂದ್ರ. ಅಲ್ಲಿಗೆ

ಕೊಚ್ಚಿ: ಸೊಂಟಕ್ಕೆ ಟ್ಯಾಟೂ ಹಾಕಿಸಿಕೊಳ್ಳಲು ಹೋದವಳ ಅತ್ಯಾಚಾರಗೈದ ಟ್ಯಾಟೂ ಕಲಾವಿದ Read More »

ಹರ್ಷ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 25 ಲಕ್ಷ ಪರಿಹಾರ – ಸಚಿವ ಈಶ್ವರಪ್ಪ

ಸಮಗ್ರ ನ್ಯೂಸ್: ಫೆ.20ರಂದು ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಕುಟುಂಬಸ್ಥರಿಗೆ, ರಾಜ್ಯ ಸರ್ಕಾರ ಇದೀಗ 25 ಲಕ್ಷ ಪರಿಹಾರವನ್ನು ಘೋಷಿಸಿದೆ. ಈ ಕುರಿತಂತೆ ಮಾಹಿತಿ ನೀಡಿದ ಸಚಿವ ಈಶ್ವರಪ್ಪ ಮಾಹಿತಿ ನೀಡಿದ್ದಾರೆ. ಮಾರ್ಚ್ 6ರಂದು ಹರ್ಷ ಮನೆಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ನಾನು ಹೋಗಿ ಪರಿಹಾರ ನೀಡುವುದಾಗಿ ಈಶ್ವರಪ್ಪ ತಿಳಿಸಿದರು. ಅಂದ ಹಾಗೇ ಹರ್ಷ ಹತ್ಯೆಯ ಬಳಿಕ, ಉದ್ವಿಗ್ನ ಸ್ಥಿತಿ ಶಿವಮೊಗ್ಗ ನಗರದಲ್ಲಿ ಉಂಟಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಒಂದು ವಾರ ಶಾಲಾ-ಕಾಲೇಜು ಬಂದ್ ಕೂಡ

ಹರ್ಷ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 25 ಲಕ್ಷ ಪರಿಹಾರ – ಸಚಿವ ಈಶ್ವರಪ್ಪ Read More »

‘ಅಮರಾವತಿಯೇ ಆಂದ್ರದ ರಾಜಧಾನಿ’ ಮಹತ್ವದ ತೀರ್ಪು ನೀಡಿದ ಹೈಕೋರ್ಟ್

ಸಮಗ್ರ‌ ನ್ಯೂಸ್: ಆಂಧ್ರಪ್ರದೇಶ ರಾಜಧಾನಿ ವಿಚಾರದಲ್ಲಿ 3 ರಾಜಧಾನಿಗಳು, ಸಿಆರ್‌ಡಿಎ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತು ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ರಾಜ್ಯ ಸರ್ಕಾರ ಸಿಆರ್‌ಡಿಎ ಕಾಯ್ದೆ ಪ್ರಕಾರವೇ ನಡೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ʻಅಮರಾವತಿʼಯನ್ನು ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಆದೇಶಿಸಲಾಗಿದೆ. ರೈತರೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ 6 ತಿಂಗಳೊಳಗೆ ಮಾಸ್ಟರ್ ಪ್ಲಾನ್ ಪೂರ್ಣಗೊಳಿಸಬೇಕು. ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕಾಲಕಾಲಕ್ಕೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆಯೂ ಸೂಚಿಸಿದೆ. ಒಪ್ಪಂದದಂತೆ 6 ತಿಂಗಳೊಳಗೆ ಮಾಸ್ಟರ್ ಪ್ಲಾನ್

‘ಅಮರಾವತಿಯೇ ಆಂದ್ರದ ರಾಜಧಾನಿ’ ಮಹತ್ವದ ತೀರ್ಪು ನೀಡಿದ ಹೈಕೋರ್ಟ್ Read More »

ಪುತ್ತೂರು: ಕದ್ದ ಅಡಿಕೆಯನ್ನು ಮತ್ತೆ ತಂದಿರಿಸಿದ ಕಳ್ಳರು

ಸಮಗ್ರ ನ್ಯೂಸ್: ಎರಡು ದಿನಗಳ ಹಿಂದೆ ಅಂಗಡಿಯಿಂದ ಅಡಿಕೆ ಕದ್ದೊಯ್ದ ಕಳ್ಳರು ಮರುದಿನ ಅದೇ ಅಂಗಡಿಯ ಮುಂಭಾಗದಲ್ಲಿ ಇಟ್ಟು ಹೋಗಿರುವ ವಿಚಿತ್ರ ಘಟನೆ ತಿಂಗಳಾಡಿಯಲ್ಲಿ ನಡೆದಿದೆ. ತಿಂಗಳಾಡಿಯ ಶಾಲೆಯ ಬಳಿಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದ ಜಗನ್ನಾಥ ರೈ ಎಂಬವರ ಅಂಗಡಿಯ ಹಿಂಬಾಗಿಲ ಚಿಲಕ ಮುರಿದ ಕಳ್ಳರು ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಸುಮಾರು 60,000 ರೂ.ಮೌಲ್ಯದ 4 ಗೋಣಿ ಚೀಲ ಅಡಿಕೆಯನ್ನು ಮಾ. 01ರಂದು ರಾತ್ರಿಯ ವೇಳೆ ಕದ್ದೊಯ್ದಿದ್ದರು. ಈ ಕುರಿತು ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಸ್ಥಳಕ್ಕೆ

ಪುತ್ತೂರು: ಕದ್ದ ಅಡಿಕೆಯನ್ನು ಮತ್ತೆ ತಂದಿರಿಸಿದ ಕಳ್ಳರು Read More »

ಉಕ್ರೇನ್ ಬಿಕ್ಕಟ್ಟು; ಭಾರತೀಯ ವಿದ್ಯಾರ್ಥಿಗಳ‌ ರಕ್ಷಣೆಗೆ ಮುಂದಾದ ರಷ್ಯಾ| ಇದು ಮೋದಿ- ಪುಟಿನ್ ಮಾತುಕತೆ ಫಲಶ್ರುತಿ

ಸಮಗ್ರ ನ್ಯೂಸ್: ಉಕ್ರೇನ್​ ವಿರುದ್ಧ ನಡೆಯುತ್ತಿರುವ ಯುದ್ಧದ ನಡುವೆಯೇ ರಷ್ಯಾದ ರಾಯಭಾರಿ ನಿಯೋಜಿತ ಡೇನಿಸ್​ ಅಲಿಪೋವ್​​ ಉಕ್ರೇನ್​ನ ಖಾರ್ಕಿವ್​, ಸುಮಿ ಹಾಗೂ ಇತರೆ ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿವ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಉಕ್ರೇನ್,​ ಭಾರತೀಯ ವಿದ್ಯಾರ್ಥಿಗಳನ್ನು ತನ್ನ ಒತ್ತೆಯಾಳಾಗಿ ನೋಡುತ್ತಿದೆ ಎಂದು ರಷ್ಯಾ ಹೇಳಿದೆ. ಖಾರ್ಕಿವ್‌ನಿಂದ ಭಾರತೀಯ ವಿದ್ಯಾರ್ಥಿಗಳ ಗುಂಪನ್ನು ತುರ್ತಾಗಿ ಸ್ಥಳಾಂತರಿಸಲು ರಷ್ಯಾ ಪ್ರಯತ್ನಿಸುತ್ತಿದೆ. ಆದರೆ ಉಕ್ರೇನ್​ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳಂತೆ ನೋಡಿಕೊಳ್ತಿದೆ ಎಂದು

ಉಕ್ರೇನ್ ಬಿಕ್ಕಟ್ಟು; ಭಾರತೀಯ ವಿದ್ಯಾರ್ಥಿಗಳ‌ ರಕ್ಷಣೆಗೆ ಮುಂದಾದ ರಷ್ಯಾ| ಇದು ಮೋದಿ- ಪುಟಿನ್ ಮಾತುಕತೆ ಫಲಶ್ರುತಿ Read More »