November 2021

ಹಳಿತಪ್ಪಿದ ಬೆಂಗಳೂರು- ಕಣ್ಣೂರು ರೈಲು| ಅದೃಷ್ಟವಶಾತ್ ತಪ್ಪಿದ ಅನಾಹುತ

ಬೆಂಗಳೂರು : ಇಂದು ಬೆಳ್ಳಂಬೆಳಗ್ಗೆ ರೈಲು ಹಳಿಯ ಮೇಲೆ ಬಂಡೆಗಳು ಉರುಳಿ ಬಿದ್ದ ಪರಿಣಾಮ ಕಣ್ಣೂರು-ಬೆಂಗಳೂರು ಎಕ್ಸ್ ಪ್ರೆಸ್ ಬ ರೈಲಿನ 5 ಬೋಗಿಗಳು ಹಳಿ ತಪ್ಪಿರುವ ಘಟನೆ ನಡೆದಿದೆ. ಇಂದು ಮುಂಜಾನೆ 3.50 ರ ಸುಮಾರಿಗೆ ಕಣ್ಣೂರು-ಬೆಂಗಳೂರು ಎಕ್ಸ್ ಪ್ರೆಸ್ ನ 5 ಬೋಗಿಗಳು ಹಳಿ ತಪ್ಪಿದವು, ಬೆಂಗಳೂರು ವಿಭಾಗದ ಟೋಪ್ಪುರು-ಸಿವ್ದಿ ನಡುವೆ ಬಂಡೆಗಳು ಇದ್ದಕ್ಕಿದ್ದಂತೆ ಬಿದ್ದವು. ರೈಲಿನಲ್ಲಿಪ್ರಯಾಣಿಸುತ್ತಿದ್ದ ಎಲ್ಲಾ 2348 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ನೈಋತ್ಯ ರೈಲ್ವೆ ವರದಿ ಮಾಡಿದೆ, ಯಾವುದೇ ಸಾವು ನೋವು […]

ಹಳಿತಪ್ಪಿದ ಬೆಂಗಳೂರು- ಕಣ್ಣೂರು ರೈಲು| ಅದೃಷ್ಟವಶಾತ್ ತಪ್ಪಿದ ಅನಾಹುತ Read More »

ಕಂಗನಾ ಭಿಕ್ಷೆ ಹೇಳಿಕೆಗೆ ವ್ಯಾಪಕ ವಿರೋಧ| ದೆಹಲಿಯಲ್ಲಿ ದೂರು ನೀಡಿದ‌ ಆಪ್

ನವದೆಹಲಿ: ‘ಭಾರತಕ್ಕೆ 2014ರಲ್ಲಿ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ. 1947ರಲ್ಲಿ ಸಿಕ್ಕಿದ್ದು ಭಿಕ್ಷೆ’ ಎಂದು ಹೇಳಿಕೆ ನೀಡಿರುವ ಬಾಲಿವುಡ್‌ ನಟಿ ಕಂಗನಾ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಕುರಿತು ಗುರುವಾರ ತಡರಾತ್ರಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಭಿಕ್ಷೆ ಬೇಡಿದವರಿಗೆ ಕ್ಷಮಾದಾನ ಸಿಕ್ಕಿದೆ.ಧೈರ್ಯದಿಂದ ಹೋರಾಡಿದ ವೀರರಿಗೆ ಸ್ವಾತಂತ್ರ್ಯ ದೊರೆತಿದೆ’ ಎಂದು ತಿರುಗೇಟು ನೀಡಿದೆ. ಕಂಗನಾ ಹೇಳಿಕೆ ವಿಚಾರವಾಗಿ ಹರಿಹಾಯ್ದಿರುವ ಕಾಂಗ್ರೆಸ್‌ ನಾಯಕ ಆನಂದ್‌ ಶರ್ಮಾ, ‘ಕಂಗನಾ ಅವರ ಅಭಿಪ್ರಾಯಗಳನ್ನು ಪ್ರಧಾನಿ ಮೋದಿ ಅನುಮೋದಿಸುತ್ತಾರೆಯೇ? ಈ ಕುರಿತು ತಮ್ಮ ಮೌನವನ್ನು

ಕಂಗನಾ ಭಿಕ್ಷೆ ಹೇಳಿಕೆಗೆ ವ್ಯಾಪಕ ವಿರೋಧ| ದೆಹಲಿಯಲ್ಲಿ ದೂರು ನೀಡಿದ‌ ಆಪ್ Read More »

1947 ರಲ್ಲಿ ಸ್ವಾತಂತ್ರ್ಯ ಅಲ್ಲ, ಭಿಕ್ಷೆ ಸಿಕ್ಕಿದ್ದು- ಕಂಗನಾ ರಣಾವತ್

ಡಿಜಿಟಲ್‌ ಡೆಸ್ಕ್‌ : ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಇತ್ತೀಚೆಗೆ ನಡೆದ ಖಾಸಗಿ ಚಾನಲ್‌ನ ಕಾರ್ಯಕ್ರಮವೊಂದರಲ್ಲಿ ”1947ರಲ್ಲಿ ದೇಶಕ್ಕೆ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ, ಅದು ಭಿಕ್ಷೆ. ಸಧ್ಯ ಈ ಹೇಳಿಕೆಯನ್ನ ಬಿಜೆಪಿ ಸಂಸದ ವರುಣ್ ಗಾಂಧಿ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ಕಂಗನಾರ ಈ ಮಾತಿಗೆ ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಹಲವೆಡೆ ಆಕ್ಷೇಪ ವ್ಯಕ್ತವಾಗಿದೆ. ಇನ್ನು ಕಂಗನಾ ಹೇಳಿಕೆ ವಿರುದ್ಧ ಮುಂಬೈನಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತೆಯಾದ ಪ್ರೀತಿ ಮೆನನ್ ಪೊಲೀಸರಿಗೆ ದೂರು ನೀಡಿದ್ದಾರೆ.

1947 ರಲ್ಲಿ ಸ್ವಾತಂತ್ರ್ಯ ಅಲ್ಲ, ಭಿಕ್ಷೆ ಸಿಕ್ಕಿದ್ದು- ಕಂಗನಾ ರಣಾವತ್ Read More »

ನೀತಿ ಸಂಹಿತೆ ಎಂದರೇನು,ಗೊತ್ತೆ?

ಯಾವುದೇ ಚುನಾವಣೆ ಬಂದಾಗಲೆಲ್ಲಾ ಮೊದಲು ಚುನಾವಣಾ ನೀತಿ ಸಂಹಿತೆಯದ್ದೇ ಸದ್ದು. ಹಾಗಾಗಿ ಈ ನೀತಿಸಂಹಿತೆ ಬಗ್ಗೆ ಹೇಳುವುದಾದರೆ ಚುನಾವಣಾ ಅಕ್ರಮಗಳಿಗೆ ತಡೆ ಹಾಕಿ, ಸುಸೂತ್ರವಾಗಿ, ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಅನುಸರಿಸಲಾಗುವ ಕಾನೂನು ಕ್ರಮಗಳನ್ನು ನೀತಿ ಸಂಹಿತೆ ಎನ್ನುವರು. ಇನ್ನೂ ಇದು ಚುನಾವಣೆಗೆ ದಿನಾಂಕ ಘೋಷಣೆ ಆದಾಗಿನಿಂದ ಮತದಾನ ಮುಗಿಯುವವರೆಗೆ ಇದು ಜಾರಿಯಲ್ಲಿರುತ್ತದೆ. ಸರ್ಕಾರ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಈ ಚುನಾವಣಾ ನೀತಿ ಸಂಹಿತೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. –

ನೀತಿ ಸಂಹಿತೆ ಎಂದರೇನು,ಗೊತ್ತೆ? Read More »

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ‌ಮುಂದುವರಿದ ಮಳೆ| ಜಿಲ್ಲೆಗಳಲ್ಲಿ ಎಚ್ಚರದಿಂದಿರಲು‌ ಸೂಚನೆ|

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಬೆಂಗಳೂರಲ್ಲಿ ತಾಪಮಾನ ಕುಸಿದಿದ್ದು, ಶೀತಗಾಳಿ ಬೀಸುತ್ತಿದೆ. ನಗರದಲ್ಲಿ ಇನ್ನೂ ನಾಲ್ಕು ದಿನ ಮಳೆ ಮುಂದುವರೆಯಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಗುರುವಾರ ದಿನ ಪೂರ್ತಿ ಮಳೆಯಾಗಿದೆ. ಜಿಟಿ ಜಿಟಿ ಮಳೆ ಹಾಗೂ ಶೀತದ ವಾತಾವರಣ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ. ಬೆಂಗಳೂರು ನಗರದ ತಾಪಮಾನ 17 ರಿಂದ 18 ಡಿಗ್ರಿಗೆ ಕುಸಿದಿದೆ. ಗುರುವಾರ ದಿನಪೂರ್ತಿ ತುಂತುರು

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ‌ಮುಂದುವರಿದ ಮಳೆ| ಜಿಲ್ಲೆಗಳಲ್ಲಿ ಎಚ್ಚರದಿಂದಿರಲು‌ ಸೂಚನೆ| Read More »

ಟಿ.20 ವಿಶ್ವಕಪ್| ಪಾಕಿಸ್ತಾನವನ್ನು ಮಣಿಸಿದ ಆಸ್ಟ್ರೇಲಿಯಾ ಪೈನಲ್ ಗೆ ಲಗ್ಗೆ|

ದುಬೈ: ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್​​​​​​ ಸೆಮಿಫೈನಲ್-​​​2 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ. ಪಾಕ್​​ ನೀಡಿದ ರನ್​​ಗಳ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ನಿಗದಿತ 19 ಓವರ್​​ನಲ್ಲಿ 5 ವಿಕೆಟ್​​ ನಷ್ಟಕ್ಕೆ 177 ರನ್​​​​ ಗಳಿಸಿ ಗೆದ್ದು ಬೀಗಿದೆ. ಟಾಸ್​​ ಸೋತರೂ ಮೊದಲು ಬ್ಯಾಟಿಂಗ್​​ ಮಾಡಿದ ಪಾಕ್​​​ 4 ವಿಕೆಟ್​​ ನಷ್ಟಕ್ಕೆ 176 ರನ್​​ ಗಳಿಸಿತ್ತು. ಈ ಮೂಲಕ ಆಸ್ಟ್ರೇಲಿಯಾಗೆ 177 ರನ್​​ಗಳ ಟಾರ್ಗೆಟ್​ ನೀಡಿತ್ತು. ಪಾಕ್​​​ ಪರ ಆರಂಭಿಕ

ಟಿ.20 ವಿಶ್ವಕಪ್| ಪಾಕಿಸ್ತಾನವನ್ನು ಮಣಿಸಿದ ಆಸ್ಟ್ರೇಲಿಯಾ ಪೈನಲ್ ಗೆ ಲಗ್ಗೆ| Read More »

ಕಡಬ: ಒಂದೂವರೆ ವರ್ಷದಿಂದ ನಿರಂತರ ಲೈಂಗಿಕ ದೌರ್ಜನ್ಯ| ಗರ್ಭಿಣಿಯಾದ ಅಪ್ರಾಪ್ತೆ, ಆರೋಪಿ ಅಂದರ್|

ಕಡಬ: ತಾಲೂಕಿನ ಕೋಡಿಂಬಾಳ ಗ್ರಾಮದಲ್ಲಿ ಅಪ್ರಾಪ್ತೆ ಗರ್ಭಿಣಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಾಲಕಿಯ ಸಂಬಂಧಿಕನನ್ನು ಪೊಕ್ಸೊ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಕೋಡಿಂಬಾಳ ಗ್ರಾಮದ ಪಾಜೋವು ಸಮೀಪದ ರಮೇಶ್ ಎಂಬಾತ ತನ್ನ ಸಂಬಂಧಿಕರಾಗಿರುವ ಅಪ್ರಾಪ್ತೆಯನ್ನು ಕಳೆದ ಒಂದೂವರೆ ವರ್ಷದಿಂದ ಲೈಂಗಿಕವಾಗಿ ಬಳಸಿಕೊಂಡಿದ್ದು, ಇದೀಗ ಆಕೆ ಗರ್ಭವತಿಯಾಗಿದ್ದು ಪ್ರಕರಣ ಬೆಳಕಿಗೆ ಬಂದಿದೆ.ಆರೋಪಿ ರಮೇಶನನ್ನು ಕಡಬ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಿದ್ದಾರೆ. 2020ರ ಏಪ್ರಿಲ್ ತಿಂಗಳಿನಿಂದ ರಮೇಶ್ ಆಗಾಗ ಬಾಲಕಿಯ ಮನೆಗೆ ಬರುತ್ತಿದ್ದ

ಕಡಬ: ಒಂದೂವರೆ ವರ್ಷದಿಂದ ನಿರಂತರ ಲೈಂಗಿಕ ದೌರ್ಜನ್ಯ| ಗರ್ಭಿಣಿಯಾದ ಅಪ್ರಾಪ್ತೆ, ಆರೋಪಿ ಅಂದರ್| Read More »

ಅಷ್ಟಕ್ಕೂ ಹಾಜಬ್ಬರ ಕೈಗೆ ಏನಾಗಿತ್ತು?: ಕೈಗೆ ಗಾಯವಾಗಲು ಕಾರಣ ಏನು ಗೊತ್ತಾ?

ಮಂಗಳೂರು: ಹರೇಕಳ ಹಾಜಬ್ಬರ ವ್ಯಕ್ತಿತ್ವದ‌ ಬಗ್ಗೆ ತಿಳಿದುಕೊಳ್ಬೇಕಾದ್ರೆ ಈ ಸ್ಟೋರಿ ಓದ್ಲೇ ಬೇಕು. ಇದು ಅವರ ವ್ಯಕ್ತಿತ್ವದ ಅನಾವರಣ. ಹಾಜಬ್ಬ ಕಡುಬಡತನ ಹೊಂದಿದರೂ ಮನೆಗೆ ಬಂದವರಿಗೆ ಸತ್ಕಾರ ಮಾಡದೇ ಕಳುಹಿಸಿದವರಲ್ಲ. ತಮ್ಮ ಕುಟುಂಬ ಸದಸ್ಯರಿಗೆ ಅನಾರೋಗ್ಯವಿದ್ದರೂ ಯಾರ ಮುಂದೆಯೂ ವೈಯುಕ್ತಿಕವಾಗಿ ಹಣ ಕೇಳಿದವರಲ್ಲ. ಮನೆಗೆ ಬಂದವರಿಗೆ ಸೀಯಾಳ ನೀಡಿ ಸತ್ಕರಿಸೋದು ಹಾಜಬ್ಬರ ಸಂಪ್ರದಾಯ. ನವೆಂಬರ್ 8ರಂದು ಹಾಜಬ್ಬರು ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕಾರ ಮಾಡಿದ್ದರು. ನವೆಂಬರ್ 7ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ

ಅಷ್ಟಕ್ಕೂ ಹಾಜಬ್ಬರ ಕೈಗೆ ಏನಾಗಿತ್ತು?: ಕೈಗೆ ಗಾಯವಾಗಲು ಕಾರಣ ಏನು ಗೊತ್ತಾ? Read More »

ಕಣ್ಣೀರು ತರಿಸುತ್ತೆ ಈ ಕಥೆ..! ಮೃತ ಗರ್ಭಿಣಿ ಹೊಟ್ಟೆಯಲ್ಲಿ ಜೀವಂತ ಮಗು| ವೈದ್ಯಲೋಕದ ಅಚ್ಚರಿ

ಗದಗ : ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರು ಮೃತ ಗರ್ಭಿಣಿ ಹೊಟ್ಟೆಯಿಂದ ಜೀವಂತ ಮಗುವನ್ನು ಹೊರತೆಗೆದಿದ್ದಾರೆ. ಗರ್ಭಿಣಿ ಅನ್ನಪೂರ್ಣ ಎಂಬುವವರು ಲೋ ಬಿಪಿ, ಮೂರ್ಛೆ ರೋಗದಿಂದ ಬಳಲುತ್ತಿದ್ದರು. ಊರಿನಿಂದ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಗರ್ಭಿಣಿ ಮೃತಪಟ್ಟಿದ್ದಾರೆ. ಆದರೆ ಹೊಟ್ಟೆಯಲ್ಲಿದ್ದ ಮಗು ಜೀವಂತವಿರುವುದು ವೈದ್ಯರಿಗೆ ತಿಳಿದ ತಕ್ಷಣ ಆಪರೇಷನ್ ಮಾಡಿದ್ದಾರೆ. ಆಪರೇಷನ್ ನಡೆಸಿದ ವೈದ್ಯರ ತಂಡ ಹೆಣ್ಣು ಮಗುವನ್ನು ಹೊರತೆಗೆದಿದ್ದಾರೆ. ನವೆಂಬರ್ 4ರಂದು ನಡೆದ ಅಪರೂಪದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗದಗ ಜಿಲ್ಲೆಯ ರೋಣ

ಕಣ್ಣೀರು ತರಿಸುತ್ತೆ ಈ ಕಥೆ..! ಮೃತ ಗರ್ಭಿಣಿ ಹೊಟ್ಟೆಯಲ್ಲಿ ಜೀವಂತ ಮಗು| ವೈದ್ಯಲೋಕದ ಅಚ್ಚರಿ Read More »

ರಾಜ್ಯದಲ್ಲಿ ಮತ್ತೊಂದು ಹೇಯ ಕೃತ್ಯ| ಟಿವಿ ತೋರಿಸುವ ನೆಪದಲ್ಲಿ 3 ವರ್ಷದ ಕಂದಮ್ಮನ ಅತ್ಯಾಚಾರ|

ಶಿವಮೊಗ್ಗ: 3 ವರ್ಷದ ಕಂದಮ್ಮನ ಮೇಲೆ ಪಕ್ಕದ ಮನೆಯ ಯುವಕನೇ ಅತ್ಯಾಚಾರವೆಸಗಿರುವ ಘೋರ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ. ಮಗುವಿಗೆ ಟಿವಿ ತೋರಿಸುವ ಆಮಿಷವೊಡ್ಡಿ ಕರೆದೊಯ್ದ ನೆರೆಮನೆ ಯುವಕ ಬಳಿಕ ನೀಚ ಕೃತ್ಯವೆಸಗಿದ್ದಾನೆ. ಮಗುವಿಗೆ ರಕ್ತಸ್ರಾವವಾಗುತ್ತಿರುವುದನ್ನು ಕಂಡ ಪೋಷಕರು ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಕೃತ್ಯದ ಬಗ್ಗೆ ಗೊತ್ತಾಗಿದೆ. ಆರೋಪಿ ಯುವಕನನ್ನು ಹಿಡಿದು ಪೋಷಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಮತ್ತೊಂದು ಹೇಯ ಕೃತ್ಯ| ಟಿವಿ ತೋರಿಸುವ ನೆಪದಲ್ಲಿ 3 ವರ್ಷದ ಕಂದಮ್ಮನ ಅತ್ಯಾಚಾರ| Read More »