ಲಾರಿ- ಬೈಕ್ ಮುಖಾಮುಖಿ ಢಿಕ್ಕಿ| ಇಬ್ಬರು ಸ್ಪಾಟ್ ಔಟ್|
ಚಿಕ್ಕಮಗಳೂರು: ತಾಲ್ಲೂಕಿನ ಉದ್ದೇಬೋರನಹಳ್ಳಿಯ ಬಳಿ ದ್ವಿಚಕ್ರ ವಾಹನ ಮತ್ತು ಗ್ಯಾಸ್ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಜಯಣ್ಣ (58) ಹಾಗೂ ಪುತ್ರಿ ರಕ್ಷಿತಾ (19) ಎಂದು ಗುರುತಿಸಲಾಗಿದೆ. ಗೌರಿ ಹಬ್ಬದ ನಿಮಿತ್ತ ಮುಗಳವಳ್ಳಿಯ ಜಯಣ್ಣ ಅವರು ದ್ವಿಚಕ್ರ ವಾಹನದಲ್ಲಿ ಪಿಳ್ಳೆನಹಳ್ಳಿಗೆ ತೆರಳಿ ಸಹೋದರಿಗೆ ಬಾಗಿನ ನೀಡಿ ವಾಪಸಾಗುವಾಗ ಅವಘಡ ಸಂಭವಿಸಿದೆ. ಲಾರಿಯಲ್ಲಿ ಎಲ್‌ಪಿಜಿ ಸಿಲಿಂಡರ್ ತುಂಬಿದ್ದು ಮತ್ತು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿವೆ.ಢಿಕ್ಕಿಯ […]
ಲಾರಿ- ಬೈಕ್ ಮುಖಾಮುಖಿ ಢಿಕ್ಕಿ| ಇಬ್ಬರು ಸ್ಪಾಟ್ ಔಟ್| Read More »