September 2021

ಸಿಎ ಪರೀಕ್ಷೆ‌: ಹೊಸ ಕೋರ್ಸ್ ನಲ್ಲಿ ನಂದಿನಿ ದೇಶಕ್ಕೆ ಟಾಪರ್| ಅಣ್ಣನಿಗೂ 18ನೇ ಸ್ಥಾನ

ಭೋಪಾಲ್: ಇನ್ಸಿಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟ್ಸ್‌ ಆಫ್‌ ಇಂಡಿಯಾದ ಅಖಿಲ ಭಾರತ ಮಟ್ಟದ ಚಾರ್ಟರ್ಡ್‌ ಅಕೌಂಟ್ಸ್‌ (ಸಿಎ) ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಮಂಗಳೂರಿನ ರುಥ್‌ ಕ್ಲೇರ್‌ ಡಿಸಿಲ್ವ ಅವರು ದೇಶಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಬಾರಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಇನ್ನು ಹೊಸ ಕೋರ್ಸ್​​ನಲ್ಲಿ ಮಧ್ಯಪ್ರದೇಶದ ಮೊರಿನಾದ ನಂದಿನಿ ಅಗರ್​ವಾಲ್​ ದೇಶಕ್ಕೇ ಟಾಪರ್ ಆಗಿದ್ದಾರೆ​. 800ಕ್ಕೆ 614 ಅಂಕ ಗಳಿಸಿದ ನಂದಿನಿ ಮೊದಲ ಸ್ಥಾನ ಗಳಿಸಿದ್ದರೆ, ಆಕೆಯ 21 ವರ್ಷದ ಅಣ್ಣ ಸಚಿನ್ ಅಗರ್ವಾಲ್ […]

ಸಿಎ ಪರೀಕ್ಷೆ‌: ಹೊಸ ಕೋರ್ಸ್ ನಲ್ಲಿ ನಂದಿನಿ ದೇಶಕ್ಕೆ ಟಾಪರ್| ಅಣ್ಣನಿಗೂ 18ನೇ ಸ್ಥಾನ Read More »

ರಾಜ್ಯಕ್ಕೆ ಕಾಲಿಟ್ಟ ನಿಫಾ| ಮಂಗಳೂರಿನಲ್ಲಿ ಮೊದಲ‌ ಕೇಸ್ ಪತ್ತೆ…!

ಮಂಗಳೂರು: ಕೇರಳದಲ್ಲಿ ಕೊರೊನಾ ಹಾವಳಿಯ ನಡುವೆ ನಿಫಾ ಆತಂಕವೂ ಹೆಚ್ಚಾಗುತ್ತಿರುವ ಕಾರಣ ಕರ್ನಾಟಕದ ಗಡಿ ಭಾಗಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನ ವಹಿಸಲಾಗಿದೆ. ತೀವ್ರ ಮುನ್ನೆಚ್ಚರಿಕೆ ನಡುವೆಯೂ ಇದೀಗ ರಾಜ್ಯಕ್ಕೆ ನಿಫಾ ಕಾಲಿಟ್ಟಿರುವುದು ಆತಂಕ ಸೃಷ್ಟಿಸುವಂತೆ‌ ಮಾಡಿದೆ. ಇಂದು ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕನಲ್ಲಿ ಇದೀಗ ನಿಫಾ ವೈರಸ್ ನ ಲಕ್ಷಣಗಳು ಪತ್ತೆಯಾಗಿದ್ದು, ಜನರನ್ನ ಆತಂಕಕ್ಕೆ ದೂಡಿದೆ. ಈತ ಜಿಲ್ಲಾ ಆರೋಗ್ಯ ಇಲಾಖೆಯ ವ್ಯಕ್ತಿಯಾಗಿದ್ದು, ಸ್ವ್ಯಾಬ್ ಹಾಗೂ ರಕ್ತದ ಮಾದರಿಯನ್ನ ಪುಣೆ ಲ್ಯಾಬ್ ಗೆ ರವಾನೆ ಮಾಡಲಾಗಿದೆ. ಕೇರಳದಲ್ಲಿ

ರಾಜ್ಯಕ್ಕೆ ಕಾಲಿಟ್ಟ ನಿಫಾ| ಮಂಗಳೂರಿನಲ್ಲಿ ಮೊದಲ‌ ಕೇಸ್ ಪತ್ತೆ…! Read More »

ಮೂಡುಬಿದಿರೆ: ಹಾಸ್ಟೆಲ್ ‌ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ

ಮೂಡಬಿದಿರೆ : ವಿದ್ಯಾರ್ಥಿಯೋರ್ವ ಕಾಲೇಜು ಹಾಸ್ಟೇಲ್‌ನ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್‌ ಕಾಲೇಜು ಹಾಸ್ಟೆಲ್‌ನಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಬೆಳಗಾವಿ ಮೂಲದ ರಜತ್‌ ಸುರೇಶ್‌ ಪಟ್ಟದ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿರುವ ವಿದ್ಯಾರ್ಥಿಯಾಗಿದ್ದಾರೆ. ಸದ್ಯ ವಿದ್ಯಾರ್ಥಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ನಿನ್ನೆ ಸಂಜೆಯ 7 ಗಂಟೆಯ ಸುಮಾರಿಗೆ ಹಾಸ್ಟೇಲ್‌ನಲ್ಲಿ ವಿದ್ಯಾರ್ಥಿಗಳೆಲ್ಲಾ ಅಭ್ಯಾಸ ಮಾಡುತ್ತಿದ್ದರು. ಈ ವೇಳೆಯಲ್ಲಿ ವಿದ್ಯಾರ್ಥಿ ಏಕಾಏಕಿಯಾಗಿ ಹಾಸ್ಟೇಲ್‌ನ 5ನೇ ಮಹಡಿಯಿಂದ

ಮೂಡುಬಿದಿರೆ: ಹಾಸ್ಟೆಲ್ ‌ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ Read More »

ನಾಗಾಲೋಟದಲ್ಲಿ ಹೊಸ ಅಡಿಕೆ ಧಾರಣೆ| ಕೃಷಿಕರ ಮೊಗದಲ್ಲಿ ಹೊಸ ಕಳೆ

ಪುತ್ತೂರು: ಮಂಗಳೂರು ಚಾಲಿ ಹೊಸ ಅಡಿಕೆ ಧಾರಣೆ ದಿನೇದಿನೇ ಏರುಗತಿಯತ್ತ ಸಾಗುತ್ತಿದೆ. ಈ ಬೆಳವಣಿಗೆ ಇದೇರೀತಿ ಮುಂದುವರಿದರೆ ಕೆ.ಜಿ. ಅಡಿಕೆ ಬೆಲೆ 500 ದಾಟುವ ನಿರೀಕ್ಷೆಯಿದೆ. ಧಾರಣೆ ಏರಿಕೆಯಿಂದಾಗಿ ಕೃಷಿಕರ ಮೊಗದಲ್ಲಿ ಹೊಸ ಕಳೆ‌ ಮೂಡಿದೆ. ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆಯ ಧಾರಣೆ ಏರಿಕೆ ಕಾಣುತ್ತಿದೆ. ಸೋಮವಾರ ಖಾಸಗಿ ಮಾರುಕಟ್ಟೆಯಲ್ಲಿ ಚಾಲಿ ಹೊಸ ಅಡಿಕೆ ಕೆ.ಜಿ.ಗೆ 485- 487ರಲ್ಲಿ ಖರೀದಿಯಾಗಿದೆ. ಕ್ಯಾಂಪ್ಕೋದಲ್ಲಿ ಹೊಸ ಅಡಿಕೆಯ ಧಾರಣೆ ಕೆ.ಜಿ.ಗೆ ರೂ. 480ಕ್ಕೆ ಇತ್ತು. ಕಳೆದ 1

ನಾಗಾಲೋಟದಲ್ಲಿ ಹೊಸ ಅಡಿಕೆ ಧಾರಣೆ| ಕೃಷಿಕರ ಮೊಗದಲ್ಲಿ ಹೊಸ ಕಳೆ Read More »

ಮಂಗಳೂರು ವಿ.ವಿ. : ಸೆ. 30 ರಿಂದ 6ನೇ ಸೆಮಿಸ್ಟರ್ ಪರೀಕ್ಷೆ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ 6ನೇ ಸೆಮಿಸ್ಟರ್ ಪರೀಕ್ಷೆ ಹಾಗೂ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯನ್ನು ಆಫ್ ಲೈನ್ ಮೂಲಕ ಸೆ. 30 ರಂದು ನಡೆಸಲು ಸೋಮವಾರ ನಡೆದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆ ನಿರ್ಧರಿಸಿದೆ. ಇನ್ನು ಎರಡು ದಿನದೊಳಗೆ ಈ ಕುರಿತ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಲಿದೆ. 1, 3, 5 ನೇ ಸೆಮಿಸ್ಟರ್ ಮೌಲ್ಯಮಾಪನವನ್ನು ಕೂಡಾ ಶೀಘ್ರ ಮುಗಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 6ನೇ ಸೆಮಿಸ್ಟರ್ ಪರೀಕ್ಷೆ ಇನ್ನೂ ನಡೆದಿರುವ ಕಾರಣ ಸುಮಾರು 40 ಸಾವಿರ ವಿದ್ಯಾರ್ಥಿಗಳು

ಮಂಗಳೂರು ವಿ.ವಿ. : ಸೆ. 30 ರಿಂದ 6ನೇ ಸೆಮಿಸ್ಟರ್ ಪರೀಕ್ಷೆ Read More »

ಮೈಸೂರು: ದೇಗುಲಗಳ ತೆರವಿಗೆ ತಾತ್ಕಾಲಿಕ ಬ್ರೇಕ್

ಮೈಸೂರು : ಮೈಸೂರಿನಲ್ಲಿ ದೇಗುಲಗಳ ತೆರವು ಕಾರ್ಯಕ್ಕೆ ಮೈಸೂರು ಜಿಲ್ಲಾಡಳಿತವು ತಾತ್ಕಾಲಿಕ ಬ್ರೇಕ್ ಹಾಕಿದ್ದು, ರಾಜ್ಯ ಸರ್ಕಾರದ ಮುಂದಿನ ಆದೇಶ ಬರೋವರೆಗೆ ಯಾಥಾಸ್ಥಿತಿ ಮುಂದುವರೆಸಲು ಆದೇಶ ನೀಡಿದೆ. ನಂಜನಗೂಡು ದೇಗುಲ ತೆರುವು ಕಾರ್ಯ ವಿಚಾರಕ್ಕೆ ರಾಜ್ಯ ಸರ್ಕಾರ ನೋಟಿಸ್ ಬಂದಿದ್ದು, ಹೀಗಾಗಿ ಸದ್ಯಕ್ಕೆ ಮೈಸೂರಿನಲ್ಲಿ ದೇಗುಲಗಳ ತೆರವು ಕಾರ್ಯಕ್ಕೆ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಸರ್ಕಾರದ ನಿರ್ದೇಶನ ಬರುವವರೆಗೆ ಯಾವುದೇ ದೇಗುಲಗಳ ತೆರವು ಕಾರ್ಯಾಚರಣೆ ಇರುವುದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಗೌತಮ್ ತಿಳಿಸಿದ್ದಾರೆ.

ಮೈಸೂರು: ದೇಗುಲಗಳ ತೆರವಿಗೆ ತಾತ್ಕಾಲಿಕ ಬ್ರೇಕ್ Read More »

ಗತಿ ಇಲ್ಲದವರು ನನ್ನ ಸಾಕಬೇಡಿ – ಕಡಬ ಪೇಟೆಯಲ್ಲಿ ಸಾಕುಪ್ರಾಣಿಗಳ ಕಿರಿಕಿರಿಗೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ

ಪುತ್ತೂರು: ಕಡಬ ಪೇಟೆಯಲ್ಲಿ ಸಾಕುಪ್ರಾಣಿಗಳ ಕಿರಿಕಿರಿಗೆ ವ್ಯಕ್ತಿಯೊಬ್ಬರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕಡಬದ ಪೇಟೆಯಲ್ಲಿ ಇತ್ತೀಚೆಗೆ ಆಡುಗಳ ಉಪಟಳ ಜಾಸ್ತಿಯಾಗಿದ್ದು,ಆಡು ಸಾಕುವ ಮಂದಿ ಆಡುಗಳನ್ನು ಮೇಯಲು ರಸ್ತೆ ಸಮೀಪವೇ ಬಿಟ್ಟಿದ್ದಾರೆ. ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಸಮಸ್ಯೆಯಾಗಿದ್ದು, ಆಡುಗಳಿಂದಾಗಿ ಕೆಲವು ಬೈಕ್ ಗಳ ಅಪಘಾತವೂ ನಡೆದಿದೆ. ಈ ಕುರಿತಂತೆ ಸ್ಥಳೀಯಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳದ ಹಿನ್ನಲೆ ಆಡಿನ ಕತ್ತಿಗೆ ಪ್ಲೇ ಕಾರ್ಡ್ ಅಳವಡಿಸಿ ವಿಶೇಷ ಪ್ರತಿಭಟನೆ ಮಾಡಲಾಗಿದ್ದು, ಪ್ಲೇಕಾರ್ಡ್ ನಲ್ಲಿ ಗತಿ

ಗತಿ ಇಲ್ಲದವರು ನನ್ನ ಸಾಕಬೇಡಿ – ಕಡಬ ಪೇಟೆಯಲ್ಲಿ ಸಾಕುಪ್ರಾಣಿಗಳ ಕಿರಿಕಿರಿಗೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ Read More »

ಚಿಕ್ಕಮಗಳೂರಲ್ಲೊಂದು‌ ಅಮಾನವೀಯ ಕೃತ್ಯ| ಬಟ್ಟೆ ಬದಲಾಯಿಸುತ್ತಿದ್ದ ಬಾಲಕಿಯ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ…!

ಚಿಕ್ಕಮಗಳೂರು: ಬಟ್ಟೆ ಬದಲಾಯಿಸುತ್ತಿದ್ದ ಅಪ್ರಾಪ್ತ ಬಾಲಕಿಯ ವಿಡಿಯೋ ಚಿತ್ರೀಕರಿಸಿಕೊಂಡಿರುವ ಕಾಮುಕರು, ಆಕೆಗೆ ಬ್ಲಾಕ್ ಮೇಲ್ ಮಾಡಿ ಹೆದರಿಸಿ ನಿರಂತರ ಎರಡು ತಿಂಗಳ ಕಾಲ ಅತ್ಯಾಚಾರ ಮಾಡುತ್ತಿದ್ದ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ. ಬಾಲಕಿಯ ವಿಡಿಯೋ ಮಾಡಿಕೊಂಡಿದ್ದ ಕಾಮುಕರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆ ಎಂದು ಹೆದರಿಸುತ್ತಿದ್ದರು. ಕಳೆದ ಎರಡು ತಿಂಗಳಿಂದ ಬಾಲಕಿಯನ್ನು ಹೀಗೆ ಹೆದರಿಸುತ್ತ ಪದೇ ಪದೇ ತಾವು ಕರೆದಾಗ ಆ ಬಾಲಕಿ ಬರಬೇಕು ಎಂದು ಹೇಳುತ್ತಿದ್ದರು ಎನ್ನಲಾಗಿದೆ. ಬಾಲಕಿಯ ಮೇಲೆ

ಚಿಕ್ಕಮಗಳೂರಲ್ಲೊಂದು‌ ಅಮಾನವೀಯ ಕೃತ್ಯ| ಬಟ್ಟೆ ಬದಲಾಯಿಸುತ್ತಿದ್ದ ಬಾಲಕಿಯ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ…! Read More »

ಸಾಕ್ಷ್ಯ ಹೇಳಲು ಗೈರುಹಾಜರಿ – ಡಿಕೆಶಿಗೆ ಸುಳ್ಯ ಕೋರ್ಟ್ ನಿಂದ ವಾರಂಟ್ ಜಾರಿ

ಸುಳ್ಯ: ವಿದ್ಯುತ್‌ ಸಮಸ್ಯೆ ಬಗ್ಗೆ ಬೆಳ್ಳಾರೆಯ ಸಾಯಿ ಗಿರಿಧರ್‌ ಮತ್ತು ಇಂಧನ ಖಾತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ನಡುವಿನ ಫೋನ್‌ ಸಂಭಾಷಣೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಬಾರಿ ಸಮನ್ಸ್‌ ಜಾರಿ ಮಾಡಿದ ಬಳಿಕವೂ ನ್ಯಾಯಾಲಯಕ್ಕೆ ಸಾಕ್ಷ್ಯ ಹೇಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಜರಾಗದಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಸುಳ್ಯ ನ್ಯಾಯಾಲಯ ವಾರಂಟ್‌ ಜಾರಿ ಮಾಡಿದೆ. ನ್ಯಾಯಾಲಯಕ್ಕೆ ಹಾಜರಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶರು ಡಿ.ಕೆ. ಶಿವಕುಮಾರ್‌ ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲು ಐಜಿಪಿ ಮತ್ತು ಡಿಐಜಿಗೆ

ಸಾಕ್ಷ್ಯ ಹೇಳಲು ಗೈರುಹಾಜರಿ – ಡಿಕೆಶಿಗೆ ಸುಳ್ಯ ಕೋರ್ಟ್ ನಿಂದ ವಾರಂಟ್ ಜಾರಿ Read More »

ದಾಖಲೆ ಸೃಷ್ಟಿಸಿದ ಲಸಿಕೆ ವಿತರಣೆ| ಕೊರೊನಾ ‌ಹೋರಾಟದಲ್ಲಿ ಮೈಲಿಗಲ್ಲು ‌ಸಾಧಿಸಿದ ಭಾರತ

ನವದೆಹಲಿ : ಕೊರೊನಾವೈರಸ್ ಕಾಯಿಲೆಯ ವಿರುದ್ಧ ಭಾರತದ ಕೋವಿಡ್ ವ್ಯಾಕ್ಸಿನೇಷನ್‌ ಸೋಮವಾರ 75 ಕೋಟಿ-ಗಡಿ ದಾಟಿದ್ದು , ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕಿ ಡಾ.ಪೂನಂ ಖೇತ್ರಪಾಲ್ ಸಿಂಗ್ ಅವರು ‘ಅಭೂತಪೂರ್ವ ವೇಗದಲ್ಲಿ’ ಸಾಧನೆ ಮಾಡಿದ ಭಾರತವನ್ನು ಅಭಿನಂದಿಸಿದ್ದಾರೆ. ‘ಮೊದಲ 100 ಮಿಲಿಯನ್ (10 ಕೋಟಿ) ಡೋಸ್ ಗಳನ್ನು ನಿರ್ವಹಿಸಲು 85 ದಿನಗಳನ್ನು ತೆಗೆದುಕೊಂಡರೆ, ಭಾರತ ಕೇವಲ 13 ದಿನಗಳಲ್ಲಿ 650 ಮಿಲಿಯನ್ (65 ಕೋಟಿ) ನಿಂದ 750 ಮಿಲಿಯನ್ (75 ಕೋಟಿ)

ದಾಖಲೆ ಸೃಷ್ಟಿಸಿದ ಲಸಿಕೆ ವಿತರಣೆ| ಕೊರೊನಾ ‌ಹೋರಾಟದಲ್ಲಿ ಮೈಲಿಗಲ್ಲು ‌ಸಾಧಿಸಿದ ಭಾರತ Read More »