July 2021

ಕಾಡಾನೆ ದಾಳಿಗೆ ಮಹಿಳೆ ಬಲಿ

ಕೋಲಾರ: ಕಾಡಾನೆ ದಾಳಿಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗುಲ್ಲಹಳ್ಳಿ ಗ್ರಾಮದ ಕಾಮಸಮುದ್ರ ಬಳಿ ನಡೆದಿದೆ. ಆನೆಯ ಏಕಾಏಕಿ ದಾಳಿಯಿಂದ ತಪ್ಪಿಸಿಕೊಳ್ಳಲಾಗದೆ ಸಿದ್ದಮ್ಮ (50) ಸಾವಿಗೀಡಾದ ದುರ್ದೈವಿ. ಇವರು ಬೆಳಗ್ಗಿನ ಜಾವ ಮೊಮ್ಮಗನನ್ನು ನೋಡಲೆಂದು ಗುಲ್ಲಹಳ್ಳಿ ಗ್ರಾಮದಿಂದ ಗೊಡಗಮಂದೆ ಗ್ರಾಮಕ್ಕೆ ತೆರಳುತ್ತಿದ್ದರು. ಆದರೆ, ಮಾರ್ಗಮಧ್ಯೆ ಅನಿರೀಕ್ಷಿತವಾಗಿ ಕಾಡಾನೆ ಎದುರಾಗಿದೆ. ದಿಢೀರ್ ಎಂದು ಆನೆ ದಾಳಿ ನಡೆಸಿದ ಪರಿಣಾಮ ಸಿದ್ದಮ್ಮರಿಗೆ ಅಲ್ಲಿಂದ ಓಡಿಹೋಗಲು ಅವಕಾಶವೂ ಸಿಕ್ಕಿಲ್ಲ. ಈ ಪರಿಣಾಮ ಆನೆ ದಾಳಿ ನಡೆಸಿದ್ದರಿಂದ ಸಾವನಪ್ಪಿದ್ದಾರೆ.

ಕಾಡಾನೆ ದಾಳಿಗೆ ಮಹಿಳೆ ಬಲಿ Read More »

ಆನ್’ಲಾಕ್ ಆಗುತ್ತಿದ್ದಂತೆ ನಂದಿಬೆಟ್ಟದಲ್ಲಿ ಪ್ರೇಮಿಗಳ ಲಿಪ್’ಲಾಕ್

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪ್ರವಾಸಿ ತಾಣಗಳು ಅನ್‌ಲಾಕ್ ಆಗುತ್ತಿದ್ದಂತೆ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಬೆಟ್ಟದಲ್ಲಿ ಪ್ರೇಮಿಗಳು ಪರಸ್ಪರ ಚುಂಬಿಸಿದ ಫೋಟೋ ಬಾರೀ ವೈರಲ್ ಆಗುತ್ತಿದೆ. ನಂದಿಬೆಟ್ಟ ಆನ್ ಲಾಕ್ ಆದ ಬಳಿಕ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ಜೋಡಿಯೊಂದು ಕೊರೊನಾ ರೂಲ್ಸ್ ಬ್ರೇಕ್ ಮಾಡಿ ಸಾರ್ವಜನಿಕವಾಗಿ ಪರಸ್ಪರ ಚುಂಬಿಸಿದ್ದಾರೆ. ನಂದಿಬೆಟ್ಟದಲ್ಲಿ ಜೋಡಿ ಲಿಪ್ ಲಾಕ್ ಮಾಡಿದ ಕ್ಷಣವನ್ನು ಯಾರೋ ಸೀರೆಹಿಡಿದಿದ್ದಾರೆ. ಕ್ಷಣಮಾತ್ರದಲ್ಲಿ ಬಿಸಿ ಬಿಸಿ ಫೋಟೋ ವೈರಲ್ ಆಗಿದೆ. ಮುಂಜಾನೆ ಮೋಡಗಳ ಮಂಜಿನಾಟದ ಜೊತೆ ಪ್ರವಾಸಿಗರು ನಂದಿ

ಆನ್’ಲಾಕ್ ಆಗುತ್ತಿದ್ದಂತೆ ನಂದಿಬೆಟ್ಟದಲ್ಲಿ ಪ್ರೇಮಿಗಳ ಲಿಪ್’ಲಾಕ್ Read More »

ಸ್ವಪಕ್ಷದ ಕಾರ್ಯಕರ್ತನಿಗೆ ಡಿಕೆಶಿ ಯಿಂದ ಕಾಪಾಳಮೋಕ್ಷ

ಮಂಡ್ಯ: ತನ್ನ ಹೆಗಲ ಮೇಲೆ ಕೈ ಇಟ್ಟರು ಎಂಬ ಕಾರಣಕ್ಕೆ ಸ್ವಪಕ್ಷದ ಕಾರ್ಯಕರ್ತನಿಗೆ ಡಿ.ಕೆ.ಶಿವಕುಮಾರ್ ಕಾಪಾಳಮೋಕ್ಷ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಈ ನಡೆ ಭಾರೀ ವೈರಲ್ ಆಗಿದ್ದು ಇದು ಇದೀಗ ಬಿಜೆಪಿಗರಿಗೆ ಕಾಂಗ್ರೆಸ್ ನ್ನು ಟೀಕಿಸಲು ಬಂಡವಾಳ ಸಿಕ್ಕಿದಂತಾಗಿದೆ. ಡಿಕೆಶಿ, ಅನಾರೋಗ್ಯಕ್ಕೆ ಒಳಗಾಗಿರುವ ಮಾಜಿ ಸಂಸದ ಜಿ.ಮಾದೇಗೌಡ ಅವರ ಆರೋಗ್ಯ ವಿಚಾರಿಸಲು ಶುಕ್ರವಾರ ಸಂಜೆ ಭಾರತೀನಗರಕ್ಕೆ ಬಂದ ಸಂದರ್ಭದಲ್ಲಿ ಘಟನೆ ನಡೆದಿದೆ. ಹಿಂದಿನಿಂದ ಬಂದ ಕಾರ್ಯಕರ್ತ ಅಣ್ಣಾ ಎನ್ನುತ್ತಾ ಡಿಕೆಶಿ ಹೆಗಲ ಮೇಲೆ ಕೈ ಇಟ್ಟಿದ್ದಾರೆ. ಇದರಿಂದ

ಸ್ವಪಕ್ಷದ ಕಾರ್ಯಕರ್ತನಿಗೆ ಡಿಕೆಶಿ ಯಿಂದ ಕಾಪಾಳಮೋಕ್ಷ Read More »

ಕುಕ್ಕೆ ಕ್ಷೇತ್ರದಲ್ಲಿನ್ನು ಬ್ಯಾಂಕ್ ಸೇವಾ ಕೌಂಟರ್ | ರಾಷ್ಟ್ರೀಕೃತ ಬ್ಯಾಂಕ್’ಗಳ ಬದಲು HDFC ಯನ್ನು ಆಯ್ಕೆ ಮಾಡಿದ್ದೇಕೆ….!?

ಸುಬ್ರಹ್ಮಣ್ಯ: ರಾಜ್ಯ ಸರಕಾರಕ್ಕೆ ಬಹುಕೋಟಿ ಆದಾಯ ತಂದುಕೊಡುವ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಸೇವಾ ಕೌಂಟರ್ ತೆರೆಯಲು ನಿರ್ಧರಿಸಲಾಗಿದೆ. ಇನ್ನು ಈ ಕಂಟ್ರಾಕ್ಟ್’ನ್ನು ರಾಷ್ಟ್ರೀಕೃತ ಬ್ಯಾಂಕ್’ಗಳ ಬದಲು ಖಾಸಗಿ HDFC ಬ್ಯಾಂಕ್ ಗೆ ನೀಡಿರುವುದು ಭಕ್ತರಲ್ಲಿ ಅನುಮಾನ ಹುಟ್ಟುಹಾಕಿದೆ. ಧಾರ್ಮಿಕ ಮತ್ತು ದತ್ತಿ ಇಲಾಖೆ ದೇವಾಲಯದ ಸೇವೆಗಳಲ್ಲಿ ಪಾದರ್ಶಕತೆ ಗಟ್ಟಿಗೊಳಿಸಲು ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಈ ಮೂಲಕ ಭಕ್ತರು ಮಾಡಿಸುವ ಸೇವೆಯ ಹಣ ತಕ್ಷಣ ನೇರವಾಗಿ ದೇವಾಲಯದ ಖಾತೆಗೆ ಜಮೆಯಾಗಲಿದೆ. ಕುಕ್ಕೆ ದೇವಾಲಯ ಸೇರಿದಂತೆ, ಘಾಟಿ

ಕುಕ್ಕೆ ಕ್ಷೇತ್ರದಲ್ಲಿನ್ನು ಬ್ಯಾಂಕ್ ಸೇವಾ ಕೌಂಟರ್ | ರಾಷ್ಟ್ರೀಕೃತ ಬ್ಯಾಂಕ್’ಗಳ ಬದಲು HDFC ಯನ್ನು ಆಯ್ಕೆ ಮಾಡಿದ್ದೇಕೆ….!? Read More »

ಕಟಪಾಡಿ: ಬಸ್ ಡಿಕ್ಕಿ – ಬೈಕ್ ಸವಾರ ಸಾವು

ಉಡುಪಿ: ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕಟಪಾಡಿ ಜಂಕ್ಷನ್‌ನಲ್ಲಿ ನಡೆದಿದೆ. ಮೃತರನ್ನು ಕಟಪಾಡಿಯ ಅಚ್ಚಾದ ನಿವಾಸಿ ಯಶೋಧರ ಆಚಾರ್ಯ ಎಂದು ಗುರುತಿಸಲಾಗಿದೆ. ಇವರು ಶುಕ್ರವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ಲ್ಲಿ ತನ್ನ ಬೈಕ್ ನಲ್ಲಿ ತೇರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಯಶೋಧರ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ಈ ಸಂಬಂಧ

ಕಟಪಾಡಿ: ಬಸ್ ಡಿಕ್ಕಿ – ಬೈಕ್ ಸವಾರ ಸಾವು Read More »

ಲಂಚ ಸ್ವೀಕಾರ: ಮಂಗಳೂರು ವಿವಿ ಪ್ರೊಫೆಸರ್ ಗೆ ಜೈಲು

ಮಂಗಳೂರು: ವಿದ್ಯಾರ್ಥಿನಿಯಿಂದ ಲಂಚ ಸ್ವೀಕಾರರಿಸಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅನಿತಾ ರವಿಶಂಕರ್ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 2012ರ ಡಿಸೆಂಬರ್ 4ರಂದು ಡಾ.ಅನಿತಾ ರವಿಶಂಕರ್ ಅವರು ಪಿಎಚ್‌ಡಿ ವಿದ್ಯಾರ್ಥಿನಿ ಪ್ರೇಮಾ ಡಿ’ಸೋಜಾ ಅವರಿಂದ ಪ್ರಬಂಧ ಅಂಗೀಕಾರ ಆಗಬೇಕಾದರೆ ಮೈಸೂರಿನಿಂದ ಬರುವ ಬಾಹ್ಯ ಪರಿವೀಕ್ಷಕರ ಖರ್ಚಿಗೆಂದು 16,800 ರೂ.ಗಳನ್ನು ಲಂಚವಾಗಿ ಬೇಡಿಕೆ ಇಟ್ಟಿದ್ದರು. ಇದರ ಮುಂಗಡ ಹಣ ವಾಗಿ 5000 ರೂ. ಸ್ವೀಕರಿಸುತ್ತಿದ್ದಾಗ ಮಂಗಳೂರು ಲೋಕಾಯುಕ್ತ ನಿರೀಕ್ಷಕರಾದ

ಲಂಚ ಸ್ವೀಕಾರ: ಮಂಗಳೂರು ವಿವಿ ಪ್ರೊಫೆಸರ್ ಗೆ ಜೈಲು Read More »

ಪರಪ್ಪನ ಅಗ್ರಹಾರಕ್ಕೆ ಬೆಳ್ಳಂಬೆಳಗ್ಗೆ ಸಿಸಿಬಿ ದಾಳಿ | ಮಾರಕಾಸ್ತ್ರ, ಡ್ರಗ್ಸ್, ಮೊಬೈಲ್ ವಶ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಗಾಂಜಾ ವಾಸನೆ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು ಗಾಂಜಾ, ಮಾರಕಾಸ್ತ್ರ, ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾದಕ ವಸ್ತು ಜಾಲವನ್ನು ಸಂಪೂರ್ಣವಾಗಿ ಹೆಡೆಮುರಿಕಟ್ಟಲು ಕಳೆದೊಂದು ವರ್ಷಗಳಿಂದ ಪಣತೊಟ್ಟಿರುವ ಪೊಲೀಸರು ನಟ-ನಟಿಯರು ಸೇರಿದಂತೆ ಅನೇಕ ಡ್ರಗ್ ಪೆಡ್ಲರ್ ಗಳನ್ನು ಈಗಾಗಲೇ ಜೈಲಿಗಟ್ಟಿದ್ದಾರೆ. ಇನ್ನು ನಗರದಾದ್ಯಂತವಿರುವ ಪೊಲೀಸರು ಡ್ರಗ್ಸ್ ಜಾಲದ ಬೆನ್ನುಬಿದ್ದಿದ್ದರೆ, ಇತ್ತ ಪರಪ್ಪನ ಅಗ್ರಹಾರದಲ್ಲಿರುವ ಪೊಲೀಸರೇ ಕೈದಿಗಳಿಗೆ ಡ್ರಗ್ಸ್ ಪೂರೈಕೆ

ಪರಪ್ಪನ ಅಗ್ರಹಾರಕ್ಕೆ ಬೆಳ್ಳಂಬೆಳಗ್ಗೆ ಸಿಸಿಬಿ ದಾಳಿ | ಮಾರಕಾಸ್ತ್ರ, ಡ್ರಗ್ಸ್, ಮೊಬೈಲ್ ವಶ Read More »

ಇನ್ನು ಮುಂದೆ ಆನ್ ಲೈನ್ ನಲ್ಲೇ‌ ಪಡೆಯಬಹುದು ಋಣಭಾರ ಪ್ರಮಾಣ ಪತ್ರ

ಬೆಂಗಳೂರು : ಋಣಭಾರ ಪ್ರಮಾಣ ಪತ್ರ ವನ್ನು ಆನ್ ಲೈನ್ ನಲ್ಲೇ‌ ಪಡೆಯಲು ಅವಕಾಶ ಕಲ್ಪಿಸುವ ಮೂಲಕ ಆಸ್ತಿ ತೆರಿಗೆದಾರರಿಗೆ ಸರಕಾರ ಸಿಹಿಸುದ್ದಿ ನೀಡಿದೆ. ಆಸ್ತಿಗಳ ಋಣಭಾರ ಪ್ರಮಾಣ ಪತ್ರ (ಇ.ಸಿ) ಪಡೆಯಲು ಸಬ್ ರಿಜಿಸ್ಟಾರ್ ಕಚೇರಿಗೆ ಹೋಗಿ ಕ್ಯೂ ನಿಲ್ಲಬೇಕಿತ್ತು. ಆದರೆ ಮುಂದಿನ ದಿನಗಳಲ್ಲಿ ಇದಕೆಲ್ಲಾ ಅವಕಾಶ ನೀಡದೆ ತಮ್ಮ ತಮ್ಮ ಮನೆ, ಕಚೇರಿಗಳಲ್ಲೇ ಕುಳಿತು ಆನ್ ಲೈನ್ ಮೂಲಕ ಇ.ಸಿ. ಪಡೆಯಬಹುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕವನ್ನು

ಇನ್ನು ಮುಂದೆ ಆನ್ ಲೈನ್ ನಲ್ಲೇ‌ ಪಡೆಯಬಹುದು ಋಣಭಾರ ಪ್ರಮಾಣ ಪತ್ರ Read More »

ಸುಳ್ಯ: ಜೀತ ಕಾರ್ಮಿಕ ಪದ್ದತಿ ಇನ್ನೂ ಜೀವಂತ, ಮಕ್ಕಳು, ಮಹಿಳೆಯರಿಂದ ಸಂಬಳವಿಲ್ಲದ ದುಡಿಮೆ; ಅಧಿಕಾರಿಗಳಿಂದ ದಾಳಿ | ಸಾಮಾಜಿಕ ಸೇವೆಯೆಂದ ಮನೆ ಯಜಮಾನ!

ಸುಳ್ಯ: ಮನೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಸೇರಿದಂತೆ ಹಲವು ಮಂದಿಗೆ ಸಂಬಳ ನೀಡದೆ ದುಡಿಸುತ್ತಿರುವುದು ಕಂಡುಬಂದು, ಅಧಿಕಾರಿಗಳು ದಾಳಿ ನಡೆಸಿದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ ಗ್ರಾಮದ ಕರಿಕಳದಲ್ಲಿ ನಡೆದಿದೆ. ಪಂಜ ಗ್ರಾಮದ ಕರಿಕಳದ ವಿಶ್ವನಾಥ್ ಭಟ್ ಎಂಬವರ ಮನೆಯಲ್ಲಿ ಈ ಘಟನೆ‌ ನಡೆದಿದ್ದು ಇಲ್ಲಿ ಸುಮಾರು 8-10 ಮಕ್ಕಳು ಹಾಗೂ ಮಹಿಳೆಯರನ್ನು ದುಡಿಯುತ್ತಿದ್ದರು. ಆದರೆ ಇವರ ದುಡಿಮೆಗೆ ಯಾವುದೇ ರೀತಿಯಲ್ಲಿ ಸಂಬಳವನ್ನು ನೀಡಲಾಗುತ್ತಿಲ್ಲ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಪುಟ್ಟ ಪುಟ್ಟ ಮಕ್ಕಳು ದನ

ಸುಳ್ಯ: ಜೀತ ಕಾರ್ಮಿಕ ಪದ್ದತಿ ಇನ್ನೂ ಜೀವಂತ, ಮಕ್ಕಳು, ಮಹಿಳೆಯರಿಂದ ಸಂಬಳವಿಲ್ಲದ ದುಡಿಮೆ; ಅಧಿಕಾರಿಗಳಿಂದ ದಾಳಿ | ಸಾಮಾಜಿಕ ಸೇವೆಯೆಂದ ಮನೆ ಯಜಮಾನ! Read More »

ಕೆ-ಸೆಟ್ ಪರೀಕ್ಷೆಗೆ ಮರುದಿನಾಂಕ ನಿಗದಿ – ಮೈಸೂರು ವಿವಿ ಪ್ರಕಟಣೆ

ಮೈಸೂರು: ಕೊರೋನಾ ಕಾರಣದಿಂದ ಮುಂದೂಡಲಾಗಿದ್ದ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ- ಸೆಟ್)ಯ ದಿನಾಂಕವನ್ನು ಮರು ನಿಗದಿಗೊಳಿಸಲಾಗಿದೆ. ಜುಲೈ 25ರಂದು ಪರೀಕ್ಷೆಯು ನಡೆಯಲಿದೆ ಎಂದು ಪರೀಕ್ಷೆಯನ್ನು ಆಯೋಜಿಸುವ ಮೈಸೂರು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೊದಲು ಏಪ್ರಿಲ್ 11ರಂದು ಕೆ- ಸೆಟ್ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ದೇಶದಲ್ಲಿ ಕರೊನಾ ಸೋಂಕು ಹೆಚ್ಚಾದ ಕಾರಣ ಎರಡನೇ ಹಂತದ ಲಾಕ್​ಡೌನ್​ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಿ ವಿಶ್ವವಿದ್ಯಾಲಯವು ಆದೇಶಹೊರಡಿಸಿತ್ತು. ಈಗ ಮತ್ತೆ ದಿನಾಂಕವನ್ನು ನಿಗದಿ ಮಾಡಿ ಮೈಸೂರು ವಿವಿ

ಕೆ-ಸೆಟ್ ಪರೀಕ್ಷೆಗೆ ಮರುದಿನಾಂಕ ನಿಗದಿ – ಮೈಸೂರು ವಿವಿ ಪ್ರಕಟಣೆ Read More »