June 2021

ಪಾಕಿಸ್ತಾನದಲ್ಲಿ ರೈಲುಗಳ ಮುಖಾಮುಖಿ ಡಿಕ್ಕಿ:30ಕ್ಕೂ ಹೆಚ್ಚು ಸಾವು

ಗೊಡ್ಕಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗೊಡ್ಕಿ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ರೈಲುಗಳೆರಡರ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವತ್ತಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಸಿಂಧ್ ಪ್ರಾಂತ್ಯದ ರೆಟಿ ಮತ್ತು ದಹರ್ಕಿ ರೈಲು ನಿಲ್ಧಾಣದ ಮಧ್ಯೆ, ಸರ್ ಸೈಯದ್ ಎಕ್ಸ್ ಪ್ರೆಸ್ ರೈಲು ಮತ್ತು ಮಿಲ್ಲಟ್ ಎಕ್ಸ್ ಪ್ರೆಸ್ ಮಧ್ಯೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ಸಂಭವಿಸಿದೆ. ಲಾಹೋರ್ ನಿಂದ ಹೊರಟಿದ್ದ ಸರ್ ಸೈಯದ್ ಎಕ್ಸ್ ಪ್ರೆಸ್ ರೈಲು ಅದು ತೆರಳಬೇಕಿದ್ದ ಹಳಿ ತಪ್ಪಿ ತೆರಳಿದ್ದು […]

ಪಾಕಿಸ್ತಾನದಲ್ಲಿ ರೈಲುಗಳ ಮುಖಾಮುಖಿ ಡಿಕ್ಕಿ:30ಕ್ಕೂ ಹೆಚ್ಚು ಸಾವು Read More »

ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಭಾಷಣ

ನವದೆಹಲಿ: ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ. ಕೋವಿಡ್ ಎರಡನೇ ಅಲೆ ಹಿಮ್ಮೆಟ್ಟಲು ಕಳೆದೊಂದು ತಿಂಗಳಿನಿಂದ ರಾಷ್ಟ್ರವ್ಯಾಪಿ ಲಾಕ್ಡೌನ್ ಮಾಡಲಾಗಿತ್ತು. ಇದೀಗ ಹಲವು ರಾಜ್ಯಗಳಲ್ಲಿ ಹಂತಹಂತವಾಗಿ ಲಾಕ್ಡೌನ್ ತೆರವುಗೊಳಿಸಲಾಗುತ್ತಿದೆ. ಅದಲ್ಲದೆ ರಾಷ್ಟ್ರಾದಾದ್ಯಂತ ಕೊರೋನ ವ್ಯಾಕ್ಸಿನ್ ಚುಚ್ಚು ಮದ್ದು ಹಂತಹಂತವಾಗಿ ನೀಡಲಾಗುತ್ತಿದೆ. ಅದರಂತೆ ಕೋವಿಡ್ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಇನ್ನು ಮುಂದಿನ ನಡೆಯ ಬಗ್ಗೆ ದೇಶದ

ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಭಾಷಣ Read More »

ಕೊರೊನಾ ರೋಗದ ಬೆನ್ನಲ್ಲೇ ಮತ್ತೊಂದು ನಿಗೂಢ ರೋಗ ಪತ್ತೆ: ಇಲ್ಲಿದೆ ಸಂಪೂರ್ಣ ಮಾಹಿತಿ

ಕೆನಡಾ: ಕೊರೊನಾ ರೋಗದ ಬೆನ್ನಲ್ಲೇ ಮತ್ತೊಂದು ರೋಗದ ಲಕ್ಷಣದ ೪೮ ಪ್ರಕರಣಗಳು ಪತ್ತೆಯಾಗಿದ್ದು, ಕೆನಡಾದ ಜನತೆಯಲ್ಲಿ ಆತಂಕದ ಹೆಚ್ಚಾಗಿದೆ. ಇದೊಂದು ಮೆದುಳಿನ ಕಾಯಿಲೆಯಾಗಿದ್ದು, ಇದರಲ್ಲಿ ನಿದ್ರಾಹೀನತೆ, ಅಂಗಗಳ ಅಸಾಮಾನ್ಯ ಕ್ರಿಯೆ ಮತ್ತು ಭ್ರಮೆ ಲಕ್ಷಣ ಕಂಡುಬರುತ್ತಿದೆ ಎಂದು ಹೇಳಲಾಗಿದೆ. ಕೆನಡಾದ ನ್ಯೂ ಬ್ರನ್ಸ್ ವಿಕ್‌ನಲ್ಲಿ ೪೮ ರೋಗಿಗಳು: ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಈ ನಿಗೂಢ ಕಾಯಿಲೆಯವರು ಕೆನಡಾ ಪ್ರಾಂತ್ಯದ ಬ್ರನ್ಸ್ ವಿಕ್‌ನಲ್ಲಿ ಅಟ್ಲಾಂಟಿಕ್ ಕರಾವಳಿಯ ಪ್ರದೇಶದಲ್ಲಿ ಕಂಡುಬಂದಿದ್ದಾರೆ. ರೋಗಿಗಳು ತಮ್ಮ ಕನಸಿನಲ್ಲಿ ಮೃತದೇಹಗಳನ್ನು, ಸತ್ತ ಜನರನ್ನು

ಕೊರೊನಾ ರೋಗದ ಬೆನ್ನಲ್ಲೇ ಮತ್ತೊಂದು ನಿಗೂಢ ರೋಗ ಪತ್ತೆ: ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಜೂ.14 ರ ಬಳಿಕ ರಾಜ್ಯ ಅನ್ ಲಾಕ್ ಪ್ಲ್ಯಾನ್ ಮಾಡ್ತಿದಾರೆ ಸಿಎಂ | ಹೇಗಿರುತ್ತೆ ಅನ್ಲಾಕ್ ಗೊತ್ತಾ?

ಬೆಂಗಳೂರು: ಕೊರೊನಾ ಮಹಾಮಾರಿ ಕಟ್ಟಿ ಹಾಕಲು ವಿಧಿಸಲಾಗಿರೋ ಸೆಕೆಂಡ್ ರೌಂಡ್ ಲಾಕ್ಡೌನ್ ಇಂದಿಗೆ ಮುಗಿದಿದ್ದು, ಇವತ್ತಿನಿಂದ ಮೂರನೇ ಭಾಗ ಶುರುವಾಗಿದೆ. ಹಿಂದಿನ ಗೈಡ್ಲೈನ್ಸ್ ಪ್ರಕಾರವೇ ಜೂನ್ 14ರವರೆಗೂ ಜನ ಮನೆಯಲ್ಲೇ ಲಾಕ್ ಆಗಿರಬೇಕಿದೆ. ಆದ್ರೆ ಜೂನ್ 14 ರ ಬಳಿಕ ರಾಜ್ಯ ಅನ್ಲಾಕ್ ಆಗುತ್ತಾ ಅಥವಾ ಮುಂದುವರಿಯುತ್ತಾ ಅನ್ನೋ ಕುತೂಹಲ ಈಗ ಜನರಿಗೆ ಉಳಿದಿದೆ. ಇವತ್ತಿನಿಂದ ಮತ್ತೊಂದು ಸುತ್ತಿನ ಒಂದು ವಾರದ ಲಾಕ್ ಡೌನ್ ‌ಶುರುವಾಗಿದ್ದು, ಜೂನ್ 14 ರವರೆಗೂ ವಿಸ್ತರಣೆಯಾಗಿರೋ ಈ ಲಾಕ್ಡೌನ್ಗೆ ತೆರೆ ಎಳೆಯೋ

ಜೂ.14 ರ ಬಳಿಕ ರಾಜ್ಯ ಅನ್ ಲಾಕ್ ಪ್ಲ್ಯಾನ್ ಮಾಡ್ತಿದಾರೆ ಸಿಎಂ | ಹೇಗಿರುತ್ತೆ ಅನ್ಲಾಕ್ ಗೊತ್ತಾ? Read More »

ಕೆಂಪೇಗೌಡ ವಿಮಾನ ನಿಲ್ದಾಣ ಬಳಿ ಸ್ಫೋಟ : ಕಾರ್ಮಿಕರಿಗೆ ಗಾಯ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಇಂದು ಮದ್ಯಾಹ್ನ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಆರು ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದ ಟರ್ಮಿನಲ್ ಹಾಗೂ ರಸ್ತೆಗೆ ಸಂಚಾರ ಸಂಕೇತಗಳ ಪಟ್ಟಿಗಳನ್ನು ಹಾಕುವ ಕೆಲಸ ಕೆಲ ದಿಗಳಿಂದ ನಡೆಯತ್ತಿತ್ತು. ಸ್ಥಳದಲ್ಲಿ ರಾಸಾಯನಿಕ ಡಬ್ಬಿ ಹಾಗೂ ಇತರೆ ಸಲಕರಣೆಗಳನ್ನು ಇರಿಸಲಾಗಿತ್ತು. ಇಂದು ಕೆಲಸಗಾರರು ಬಣ್ಣವನ್ನು ರಾಸಾಯನಿಕದ ಜೊತೆ ಮಿಶ್ರಣ ಮಾಡಿ ಸಿಲಿಂಡರ್ ಬಳಸಿ ಕಾಯಿಸುತ್ತಿದ್ದರು. ಇದೇ ಸಂದರ್ಭದಲ್ಲೇ ಏಕಾಏಕಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ ಪರಿಣಾಮ 6 ಮಂದಿ

ಕೆಂಪೇಗೌಡ ವಿಮಾನ ನಿಲ್ದಾಣ ಬಳಿ ಸ್ಫೋಟ : ಕಾರ್ಮಿಕರಿಗೆ ಗಾಯ Read More »

ಒಂದೇ ಮಾಸ್ಕನ್ನು ಹೆಚ್ಚಾಗಿ ಬಳಸುತ್ತೀರಾ…? | ಕೊರೋನಾ ಬರಲ್ಲ ಬ್ಲ್ಯಾಕ್ ಫಂಗಸ್ ಅಂಟುತ್ತೆ ಎಚ್ಚರ…!

ಬೆಂಗಳೂರು: ಒಂದೇ ಮಾಸ್ಕ್ ಅನ್ನು ಹೆಚ್ಚಾಗಿ ಬಳಸುವವರಿಗೆ ಎಚ್ಚರಿಕೆಯ ಸಂದೇಶವೊಂದು ರವಾನೆಯಾಗಿದ್ದು,ಇದರಿಂದ ಕೊರೊನಾ ಬದಲು ಬ್ಲಾಕ್ ಫಂಗಸ್ ಬಹುಬೇಗನೆ ಅಂಟಿಕೊಳ್ಳುತ್ತದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ಈ ಸಂಬಂಧ ಏಮ್ಸ್​​​ನ ನ್ಯೂರೋಸರ್ಜನ್​​​ ವೈದ್ಯರೊಬ್ಬರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಸತತ 2ರಿಂದ 3 ವಾರಗಳ ಕಾಲ ಒಂದೇ ಮಾಸ್ಕನ್ನು ಧರಿಸುವುದರಿಂದ ಬ್ಲ್ಯಾಕ್​​ ಫಂಗಸ್​​ ಸೋಂಕು ಬರುವ ಸಂಭವ ಹೆಚ್ಚು ಎಂದಿದ್ದಾರೆ. ಈ ಮೂಲಕ ಸತತವಾಗಿ ಒಂದೇ ಮಾಸ್ಕ್ ಬಳಸುವವರಿಗೆ ವೈದ್ಯ ಡಾ. ಶರತ್ ಚಂದ್ರ ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿನ

ಒಂದೇ ಮಾಸ್ಕನ್ನು ಹೆಚ್ಚಾಗಿ ಬಳಸುತ್ತೀರಾ…? | ಕೊರೋನಾ ಬರಲ್ಲ ಬ್ಲ್ಯಾಕ್ ಫಂಗಸ್ ಅಂಟುತ್ತೆ ಎಚ್ಚರ…! Read More »

ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸೋಣ | ಲಾಕ್ಡೌನ್ ನಿಂದ ಹಿಂದೆ ಸರಿದ ಉದ್ಧವ್ ಠಾಕ್ರೆ

ಮಹಾರಾಷ್ಟ್ರ: ರಾಜ್ಯದಲ್ಲಿ ಸದ್ಯ ಲಾಕ್ಡೌನ್ ಇದ್ದು ಹಂತಹಂತವಾಗಿ ಅನ್ಲಾಕ್ ಮಾಡಲು ರಾಜ್ಯಸರ್ಕಾರ ನಿರ್ಧರಿಸಿದೆ. ಇನ್ನು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯದ ಜನತೆಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕರೆ ನೀಡಿದ್ದಾರೆ. ಸೋಮವಾರದಿಂದ ಮಹಾರಾಷ್ಟ್ರದಲ್ಲಿ ಹಂತಹಂತವಾಗಿ ಅನ್ಲಾಕ್ ಪ್ರಕ್ರಿಯೆ ಆರಂಭವಾಗಲಿದೆ. ಒಂದೇ ಬಾರಿಗೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುತ್ತಿಲ್ಲ. ಸೋಂಕು ದೃಢೀಕರಣ ಪ್ರಮಾಣ ಮತ್ತು ಆಮ್ಲಜನಕ, ಹಾಸಿಗೆಗಳ ಲಭ್ಯತೆ ಆಧಾರದಲ್ಲಿ ರಾಜ್ಯವನ್ನು ಐದು ಹಂತಗಳಲ್ಲಿ ವಿಂಗಡಿಸಿ ಲಾಕ್‌ಡೌನ್ ತೆರವು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.ಯಾವ ರೀತಿಯ ನಿರ್ಬಂಧಗಳ ಅಗತ್ಯವಿದೆಯೆಂದು ಸ್ಥಳಿಯಾಡಳಿತ ನಿರ್ಧರಿಸಲಿದೆ. ಲಾಕ್ಡೌನ್

ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸೋಣ | ಲಾಕ್ಡೌನ್ ನಿಂದ ಹಿಂದೆ ಸರಿದ ಉದ್ಧವ್ ಠಾಕ್ರೆ Read More »

ಕಾರು-ಬೈಕ್ ಡಿಕ್ಕಿ: ಯಮನಪಾಲಾದ ಅಣ್ಣ-ತಂಗಿ ಹಾಗೂ ಮಗು

ರಾಯಚೂರು: ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂರು ವರ್ಷದ ಮಗು ಸಹಿತ ಅಣ್ಣ-ತಂಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಾಗರಾಳ ಕ್ರಾಸ್ ಬಳಿ ಈ ಅಪಘಾತ ನಡೆದಿದೆ. ಲಿಂಗಸುಗೂರು ತಾಲೂಕಿನ ಗುಂತಗೋಳ ಗ್ರಾಮದ ಬಸವರಾಜ (32), ಪಲ್ಲವಿ (23) ಮತ್ತು ಸಂಗಮೇಶ (3) ಮೃತಪಟ್ಟವರು. ಬಸವರಾಜ ಮತ್ತು ಪಲ್ಲವಿ ಸೋದರ ಸಂಬಂಧಿಗಳಾಗಿದ್ದು, ಇವರು ನಾಗರಹಾಳದಲ್ಲಿನ ಸಹೋದರಿಯ ಮನೆಗೆ ಹೋಗಿ ವಾಪಸ್​ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದ

ಕಾರು-ಬೈಕ್ ಡಿಕ್ಕಿ: ಯಮನಪಾಲಾದ ಅಣ್ಣ-ತಂಗಿ ಹಾಗೂ ಮಗು Read More »

ಕಾಸರಗೋಡು: ಸಾವಿನ ಸಂಖ್ಯೆ 500 ದಾಟಿದರೂ ಲೆಕ್ಕ ಮಾತ್ರ 154 ಮೀರಿಲ್ಲ

ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿ ಇದುವರೆಗೆ ಮೃತಪಟ್ಟವರ ಸಂಖ್ಯೆ ಐನೂರು ದಾಟಿದ್ದು ಆರೋಗ್ಯ ಇಲಾಖೆ ದಾಖಲೆಗಳಲ್ಲಿ ಮಾತ್ರ 154 ದಾಟಿಲ್ಲ. ಆಸ್ಪತ್ರೆಗಳು ಕೊರೊನಾದಿಂದ ಸಾವು ಸಂಭವಿಸಿದೆ ಎಂದರು ಆರೋಗ್ಯ ಇಲಾಖೆ ಮಾತ್ರ ಅದನ್ನು ಅಲ್ಲಗಳೆದಿದೆ. ಇನ್ನು ಕೋವಿಡ್ ನಿಂದ ಸಾವು ಸಂಭವಿಸಿದಾಗ ಅದನ್ನು ದಾಖಲೆಗೆ ಸೇರಿಸಿಕೊಳ್ಳಲು ರಾಜ್ಯ ಸರ್ಕಾರದ ಕೆಲವು ನಿಬಂಧನೆಗಳಿವೆ. ಅದಕ್ಕನುಗುಣವಾಗಿ ಸಾವಿನ ಸಂಖ್ಯೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದ್ದು ಇನ್ನು ಸರಕಾರ ಕೈಗೊಂಡ ನಿಬಂಧನೆಗಳಲ್ಲಿರುವ ಕುಂದುಕೊರತೆಗಳಿಂದಾಗಿ ಈ ದಾಖಲೆಗಳಲ್ಲಿ ಕೊರತೆ ಉಂಟಾಗಿದೆ

ಕಾಸರಗೋಡು: ಸಾವಿನ ಸಂಖ್ಯೆ 500 ದಾಟಿದರೂ ಲೆಕ್ಕ ಮಾತ್ರ 154 ಮೀರಿಲ್ಲ Read More »

ಯಡಿಯೂರಪ್ಪನವರೇ ಕಾರ್ಯಕರ್ತರ ಆದರ್ಶ, ಅವರ ಹೇಳಿಕೆಯೇ ಪಕ್ಷದ ವಿಶೇಷತೆ – ನಳಿನ್ ಕುಮಾರ್ ಕಟೀಲ್

ಮಂಗಳೂರು, ಜೂನ್ 06; ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೀಡಿರುವ ರಾಜೀನಾಮೆ ಹೇಳಿಕೆಯ ಕುರಿತು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಯಡಿಯೂರಪ್ಪ ಹೇಳಿಕೆ ಇದು ಭಾರತೀಯ ಜನತಾ ಪಾರ್ಟಿಯ ವಿಶೇಷತೆ, ನಮ್ಮ ಕಾರ್ಯಕರ್ತರಿಗೆ ಯಡಿಯೂರಪ್ಪ ಆದರ್ಶರಾಗಿದ್ದಾರೆ. ರಾಷ್ಟ್ರ ನಾಯಕರು ಮತ್ತು ಪಕ್ಷದ ಸೂಚನೆಯಂತೆ ನಡೆಯುತ್ತೇನೆ ಎಂದು ಹೇಳಿರೋದು ಆದರ್ಶಯುತವಾಗಿದೆ” ಎಂದರು.“ಯಡಿಯೂರಪ್ಪ ಅಧಿಕಾರಕ್ಕೆ ಅಂಟಿ ಕೂತವರಲ್ಲ, ಪಕ್ಷ ಹೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ.ಇದು ಬಿಜೆಪಿಯ

ಯಡಿಯೂರಪ್ಪನವರೇ ಕಾರ್ಯಕರ್ತರ ಆದರ್ಶ, ಅವರ ಹೇಳಿಕೆಯೇ ಪಕ್ಷದ ವಿಶೇಷತೆ – ನಳಿನ್ ಕುಮಾರ್ ಕಟೀಲ್ Read More »