ಪುತ್ತೂರು: ಎಸ್ಎಸ್ಎಲ್ಸಿ ಪರೀಕ್ಷೆ ನಿಗದಿಯಾದ ದಿನವೇ ಕುಸಿಯಿತು ಮನೆ | ಈ ಪರಿಸ್ಥಿತಿಯಲ್ಲಿ ನಾನು ಹೇಗೆ ಓದಲಿ | ವಿದ್ಯಾರ್ಥಿನಿಯ ಅಳಲು
ಪುತ್ತೂರು: ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಂಡ ದಿನವೇ ಪುತ್ತೂರಿನ ಎಸೆಸೆಲ್ಸಿ ವಿದ್ಯಾರ್ಥಿನಿಯೋರ್ವಳ ಮನೆ ಕುಸಿದಿದ್ದು, ಪರೀಕ್ಷೆ ಸಿದ್ಧತೆ ನಡೆಸಲು ಸಂಕಷ್ಟ ಎದುರಾಗಿದೆ. ತಾಲೂಕಿನ ಚಿಕ್ಕಮುಂಡ್ಲೂರು ಗ್ರಾಮದ ನಿವಾಸಿ ಗೋಪಾಲ ಶೆಟ್ಟಿ ಎಂಬವರ ಮನೆ ಸೋಮವಾರ ಸಂಜೆ ಮಳೆಗೆ ಶಿಥಿಲಗೊಂಡು ಕುಸಿದಿದೆ. ಬಡವರಾದ ಗೋಪಾಲ ಶೆಟ್ಟಿ ಅವರು ಕಾಲು ನೋವಿನಿಂದ ದುಡಿಯಲು ಸಾಧ್ಯವಿಲ್ಲದೆ ಮನೆಯಲ್ಲೇ ಇದ್ದಾರೆ. ಇವರ ಪತ್ನಿ ಬೀಡಿಕಟ್ಟಿ ಕೂಲಿ ಕೆಲಸ ಮಾಡಿ ಸಿಗುವ ಅಲ್ಪ ಸ್ವಲ್ಪ ಸಂಪಾದನೆಯಲ್ಲಿ ಪತಿಯ ಆರೋಗ್ಯವನ್ನು ನೋಡಿಕೊಂಡು ಮಕ್ಕಳನ್ನು ಸಾಕುತ್ತಿದ್ದಾರೆ. ಇಬ್ಬರು ಮಕ್ಕಳಲ್ಲಿ […]